ನ್ಯೂಜ್ ಡೆಸ್ಕ್:ತಿರುಮಲ-ತಿರುಪತಿ ದೇವಾಲಯದ ಪ್ರಸಾದ ಲಡ್ಡು ತಯಾರಿಕೆಯಲ್ಲಿ ಕಲಬೆರಕೆ ತುಪ್ಪ ಬಳಸಿದ್ದಾರೆ ಎಂಬ ಸುದ್ದಿ ದೇಶಾದ್ಯಂತ ಸಂಚಲನ ಮೂಡಿಸಿದ್ದು ಇದರ ಅನ್ವಯ ಆಂಧ್ರಪ್ರದೇಶದ ಡೆಪ್ಯೂಟಿ ಸಿಎಂ ಪವನ್ ಕಲ್ಯಾಣ್ ಅವರು ಗುಂಟೂರು ಜಿಲ್ಲೆಯ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ 11 ದಿನಗಳ ಪ್ರಾಯಶ್ಚಿತ್ತ ದೀಕ್ಷೆ ತಗೆದುಕೊಂಡಿದ್ದರು.
ವೆಂಕಟೇಶ್ವರನ ಸನ್ನಿಧಾನದಲ್ಲಿ ದೀಕ್ಷೆ ತರೆಯಲಿದ್ದಾರೆ.
ಪವನ್ ಕಲ್ಯಾಣ್ ಅಕ್ಟೋಬರ್ 2 ರಂದು ಸಂಜೆ 4 ಗಂಟೆಗೆ ತಿರುಪತಿ ರೇಣಿಗುಂಟಾ ವಿಮಾನ ನಿಲ್ದಾಣವನ್ನು ತಲುಪಿ ಅಲ್ಲಿಂದ ಸಂಜೆ 5 ಗಂಟೆಗೆ ರಸ್ತೆ ಮೂಲಕ ಅಲಿಪಿರಿಗೆ ತೆರಳಿ ಅಲ್ಲಿಂದ ಮೆಟ್ಟಿಲು ಮಾರ್ಗವಾಗಿ ತಿರುಮಲಕ್ಕೆ ನಡೆದುಕೊಂಡು ರಾತ್ರಿ 9 ಗಂಟೆಗೆ ತಿರುಮಲ ತಲುಪಿ ಅಂದು ರಾತ್ರಿ ತಿರುಮಲ ಬೆಟ್ಟದಲ್ಲಿ ತಂಗಲಿದ್ದಾರೆ. ಮರುದಿನ ಅಂದರೆ ಅಕ್ಟೋಬರ್ 3 ರಂದು ಬೆಳಿಗ್ಗೆ ಶ್ರೀವಾರಿ ದರ್ಶನದ ನಂತರ ದೀಕ್ಷೆಯನ್ನು ತೆರೆಯಲಿದ್ದಾರೆ.ನಂತರ ಸಂಜೆ ತಿರುಪತಿ ಮಹಾನಗರದಲ್ಲಿ ನಡೆಯುವ ವಾರಾಹಿ ಸಭೆಯಲ್ಲಿ ಪವನ್ ಭಾಗವಹಿಸಲಿದ್ದಾರೆ. ಈ ಸಭೆಯಲ್ಲಿ ತಿರುಮಲ ಲಡ್ಡು ಕಲಬೆರಕೆ ಕುರಿತ ಟೀಕೆಗಳ ಬಗ್ಗೆ ಮಾತನಾಡ ಬಹುದು ಎನ್ನಲಾಗಿದೆ.
ಜನಸಂದಣಿ ನಿರ್ವಹಣೆ ಸಮಸ್ಯೆ
ಪವನ್ ಕಲ್ಯಾಣ್ ತಿರುಮಲಕ್ಕೆ ನಡೆದುಕೊಂಡು ಹೋಗುವ ಸಂದರ್ಭದಲ್ಲಿ ಅವರ ಅಭಿಮಾನಿಗಳನ್ನು ಮತ್ತು ರಾಜಕೀಯ ಕಾರ್ಯಕರ್ತರನ್ನು ನಿಯಂತ್ರಿಸುವ ಕೆಲಸ ಜಿಲ್ಲಾಡಳಿತಕ್ಕೆ ಕಷ್ಟ ಆಗಬಹುದು ಎನ್ನುವ ಮಾತು ಕೇಳಿ ಬರುತ್ತಿದೆ.
Trending
- ಶ್ರೀನಿವಾಸಪುರ-ಮುಳಬಾಗಿಲು ಹೆದ್ದಾರಿಯಲ್ಲಿ ರಸ್ತೆ ಅಪಘಾತ ಇಬ್ಬರ ಸಾವು!
- ಮಾವು ಬೆಳೆಗಾರರಿಂದ ಜಿಲ್ಲಾಧಿಕಾರಿ ಕಚೇರಿ ಮುತ್ತಿಗೆ,ಅಹೋರಾತ್ರಿ ಧರಣಿ!
- Sorry,Papa:ನಿಮ್ಮ ಕನಸು ಈಡೇರಿಸಲಾಗಲಿಲ್ಲ,ಸೋತು ಹೋದೆ ಎಂದ BTech ಪದವೀಧರ!
- ಅಣ್ಣನ LOVE ನಿರಾಕರಿಸಿದ ವಿದ್ಯಾರ್ಥಿನಿಯ ಹತ್ಯೆ ಮಾಡಿದ ತಮ್ಮ!
- ಆಂಧ್ರದ ಮಾವು ಚಿಂತಾಮಣಿ ಪ್ಯಾಕ್ ಹೌಸ್ ಸಹಕಾರದೊಂದಿಗೆ ಸಿಂಗಾಪುರಕ್ಕೆ!
- “ಏನ್ ಹುಡ್ಗಿರೋ” ಕೆಲಸ ಹಣಕ್ಕಾಗಿ ಹೆತ್ತ ಅಪ್ಪ-ಅಮ್ಮನನ್ನು ಕೊಂದ ಪಾಪಿ ಮಗಳು!
- ಶ್ರೀನಿವಾಸಪುರ ಅರಣ್ಯ ತೆರವು ಜಾಗದಲ್ಲಿ ಅರಣ್ಯ ಇಲಾಖೆ ವನಮಹೋತ್ಸವ
- ಅಮ್ಮ,ಅಜ್ಜಿ ಮಾವನನ್ನು ಕೊಲೆಗೈದು ಆತ್ಮಹತ್ಯೆ ಮಾಡಿಕೊಂಡ ಯುವಕ!
Thursday, July 23



