ನ್ಯೂಜ್ ಡೆಸ್ಕ್:ಗಂಡ IAS ಅಧಿಕಾರಿ ಆದರೆ ಪತ್ನಿ ರೌಡಿ ಜೊತೆ ಓಡಿ ಹೋದ ಕತೆಯಿದು IAS ಅಧಿಕಾರಿಯನ್ನು ಬಿಟ್ಟು ಹೋದ ಪತ್ನಿ ಹೋದದ್ದಾರು ಹೇಗೆ ಎಲ್ಲಿಗೆ ಆಗಿದ್ದಾದರೂ ಏನು ಎಂಬುದೆ ವಿಶೇಷ ಕಥಾನಕ.
ಐಎಎಸ್ ಅಧಿಕಾರಿಯ ಪತ್ನಿ ವಿಲಾಸಮಯವಾದ ಐಷಾರಾಮಿ ಜೀವನ ನಡೆಸಲು ಅಗತ್ಯವಿರುವ ಎಲ್ಲ ಸೌಲಭ್ಯಗಳು ಲಭ್ಯವಿದ್ದರು ಅವಳು ಅಡ್ಡದಾರಿ ಹಿಡಿದಳು. ಗ್ಯಾಂಗ್ ಸ್ಟಾರ್ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡ IAS ಅಧಿಕಾರಿ ಪತ್ನಿ ಕೊನೆಗೆ IAS ಗಂಡನ ತೊರೆದು ರೌಡಿ ಗ್ಯಾಂಗ್ ಲೀಡರ್ ಜೊತೆ ಹೋಗಿಬಿಟ್ಟಳು ಆನಂತರ ಏನಾಯಿತು ಅನ್ನುವುದೆ ಕೌತುಕ.
ಗುಜರಾತ್ ನಲ್ಲಿ ನಡೆದಿರುವಂತ ಹಲವು ಟ್ವಿಸ್ಟ್ ಗಳನ್ನು ಹೊಂದಿರುವ ಕಥಾನದ ಮುಖ್ಯಪಾತ್ರಧಾರಿ ಐಎಎಸ್ ಅಧಿಕಾರಿಯಾಗಿರುವ ರಂಜಿತ್ ಕುಮಾರ್ ಗುಜರಾತ್ ರಾಜ್ಯದ ವಿದ್ಯುತ್ ನಿಯಂತ್ರಣ ಆಯೋಗದಲ್ಲಿ(GERC) ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರಿಗೆ ಸೂರ್ಯ ಜಯ್ (45) ಎಂಬ ಪತ್ನಿ ಇದ್ದು ಇಬ್ಬರ ನಡುವೆ ಆನ್ಯೋನ್ಯತೆ ಇದ್ದು ಇಬ್ಬರು ಗುಜರಾತ್ ನ ಗಾಂಧಿನಗರದಲ್ಲಿ ಸುಖಮಯವಾದ ಜೀವನ ಸಾಗಿಸುತ್ತಿದ್ದರು. ಈ ದಂಪತಿ ನಡುವೆ ಮತ್ತೊಬ್ಬ ಪುರುಷನ ಅಗಮನವಾಯಿತು ಅವನೆ ಗ್ಯಾಂಗ್ ಸ್ಟಾರ್ ಮದುರೈರಾಜ, ಅನ್ಯೋನ್ಯವಾಗಿದ್ದ ದಂಪತಿ ನಡುವೆ ಬಿರುಗಾಳಿ ಎದ್ದಿದೆ ಗ್ಯಾಂಗ್ ಸ್ಟಾರ್ ನೊಂದಿಗೆ ಅಕ್ರಮ ಸಂಬಂದಕ್ಕೆ ದಾರಿಯಾಗಿದೆ ಇದು ಹೊರಜಗತ್ತಿಗೆ ಗೊತ್ತಾಗುವಷ್ಟರಲ್ಲಿ ತಾನು ಮಾಡಿದ ತಪ್ಪಿಗೆ ಹೆದರಿ ಗ್ಯಾಂಗ್ ಸ್ಟಾರ್ ಮದುರೈರಾಜನ ಜೊತೆ IAS ಅಧಿಕಾರಿ ಪತ್ನಿ ಓಡಿ ಹೋಗಿದ್ದಾಳೆ ಇದಾಗಿ ಸುಮಾರು 9 ತಿಂಗಳುಗಳಾಗಿದೆ ಈ ನಡುವೆ ಐಎಎಸ್ ಪತಿ ಓಡಿ ಹೋಗಿರುವ ಹೆಂಡತಿಗೆ ವಿಚ್ಛೇದನ ನೀಡಲು ತಯಾರಿ ನಡೆಸಿದ್ದಾರೆ, ಅತ್ತ ಗ್ಯಾಂಗ್ ಸ್ಟಾರ್ ಜೊತೆ ಓಡಿ ಹೋಗಿದ್ದ ಸೂರ್ಯ ಜಯ್ ರಿಗೆ ಆರ್ಥಿಕ ತೊಂದರೆಗಳು ಉದ್ಭವಿಸಿದ್ದಾವೆ ಇದನ್ನು ನಿವಾರಿಸಿಕೊಳ್ಳಲು ಇಬ್ಬರು ತಮಿಳುನಾಡಿನಲ್ಲಿ ಒಬ್ಬ ಬಾಲಕನನ್ನು ಅಪಹರಿಸಿ ಹಣ ಗಳಿಸಲು ಪ್ಲಾನ್ ರೂಪಿಸಿದ್ದಾರೆ
ಜುಲೈ 11 ರಂದು ತಮಿಳುನಾಡಿನಲ್ಲಿ ಗ್ಯಾಂಗ್ಸ್ಟರ್ ಮದುರೈರಾಜ ಮತ್ತು ಸೂರ್ಯ ಜಯ್ ಸೇರಿ 14 ವರ್ಷದ ಬಾಲಕನನ್ನು ಅಪಹರಿಸಿದ್ದಾರೆ. 2 ಕೋಟಿ ಕೊಟ್ಟರೆ ಮಾತ್ರ ಬಿಡುಗಡೆ ಮಾಡುತ್ತೇವೆ, ಇಲ್ಲವಾದಲ್ಲಿ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಿದ್ದಾರೆ. ಇದನ್ನು ಸಿರಿಯಸ್ಸಾಗಿ ತಗೆದುಕೊಂಡ ತಮಿಳುನಾಡು ಪೊಲೀಸರು ಅಪಹರಣಕಾರರಿಂದ ಬಾಲಕನನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಅಪಹರಣಕಾರರು ಪತ್ತೆಯಾಗಲಿಲ್ಲ. ಅದಕ್ಕಾಗಿ ತಮಿಳುನಾಡು ಪೊಲೀಸರು ಇಬ್ಬರಿಗಾಗಿ ಹುಡುಕಾಟ ಆರಂಭಿಸಿದ್ದಾರೆ ಈ ಸಂಕಷ್ಟದಿಂದ ಪಾರಾಗಲು ಸೂರ್ಯ ಜಯ್ ಜಾಗ್ರತೆಯಿಂದ ಹಳೆ ಗಂಡನ ಪಾದವೆ ಗತಿ ಎಂದು ಪತಿ ರಂಜೀತ್ ಕುಮಾರ್ ಬಳಿಗೆ ಮರಳಿದ್ದಾಳೆ ತನ್ನ ತಪ್ಪನ್ನು ಕ್ಷಮಿಸಿ ಬದುಕಲು ಮತ್ತೊಂದು ಅವಕಾಶ ನೀಡುವಂತೆ ಬೇಡಿಕೆ ಇಟ್ಟಿದ್ದಾಳೆ ವಿಚ್ಛೇದನ ನೀಡಲು ಮುಂದಾಗಿದ್ದ ಐಎಎಸ್ ಗಂಡ ಪತ್ನಿಯ ಬೇಡಿಕೆಯನ್ನು ನೀರಾಕರಿಸಿದ್ದಾರೆ ನನ್ನ ಆದೇಶ ಇಲ್ಲದೆ ಮನೆಗೆ ಯಾರನ್ನು ಸೇರಿಸಬಾರದು ಎಂದು ಮನೆಯ ಸೆಕ್ಯೂರಿಟಿಗೂ ಆದೇಶ ಮಾಡಿದ್ದಾರೆ ಮನೆಗೆ ಬಂದಿದ್ದ ಪತ್ನಿ ಮನೆಗೆ ಮರಳಲು ಅವಕಾಶ ಸಿಗದ ಹಿನ್ನಲೆಯಲ್ಲಿ ವಿಚಲಿತಳಾದ ಆಕೆ ವಿಷ ಸೇವಿಸಿ ಆತ್ಮಹತ್ಯೆ ಪ್ರಯತ್ನಿಸಿದ್ದಾಳೆ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ಆಕೆಯನ್ನು ಸೆಕ್ಯೂರಿಟಿಯೇ 108ಕ್ಕೆ ಫೋನ್ ಮಾಡಿ ಸ್ಥಳೀಯ ಆಸ್ಪತ್ರೆಗೆ ಸಾಗಿಸಿದ್ದಾನೆ ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸೂರ್ಯ ಜಯ್ ಮೃತಪಟ್ಟಿದ್ದಾಳೆ. ಈ ಘಟನೆ ಕುರಿತು ರಂಜೀತ್ ಪರ ವಕೀಲರು, ಹೇಳುದೆನೆಂದರೆ ಕಳೆದ ಒಂದು ವರ್ಷದಿಂದ ರಂಜೀತ್ ಮತ್ತು ಸೂರ್ಯ ಪರಸ್ಪರ ದೂರವಾಗಿದ್ದರು. ದರೋಡೆಕೋರನ ಜೊತೆ ತೆರಳಿದ ಸೂರ್ಯ ಶನಿವಾರ ಮನೆಗೆ ಮರಳಿದರು, ರಂಜೀತ್ ಆಕೆಯನ್ನು ಮನೆಯೊಳಗೆ ಪ್ರವೇಶಿಸಲು ಬಿಡಲಿಲ್ಲ. ವಿಚ್ಛೇದನದ ಕೆಲಸಕ್ಕೆ ಹೊರಡುವ ಮುನ್ನವೇ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಹೇಳುತ್ತಾರೆ.
Breaking News
- ಸಾವನ್ನೇ ಗೆದ್ದ ಮಾರ್ಕಂಡೇಯ ಪುರಾಣ ಗಾಥೆ ವಕ್ಕಲೇರಿಯ ದೇವಾಲಯದಲ್ಲಿ!
- UPSC 2024 Result:ಶ್ರೀನಿವಾಸಪುರ ಮೇಷ್ಟ್ರ ಮಗಳು 446 ರ್ಯಾಂಕ್.
- ದಾಳಿಂಬೆ ಜ್ಯೂಸ್ ಎಷ್ಟು ಆರೋಗ್ಯಕರ?
- ಅವಲಕುಪ್ಪ ರಸ್ತೆಗೆ ಮೇಕಪ್ ತೇಪೆ ಬೇಡ,ಡಾಂಬರ್ ಹಾಕುವುದು ಯಾವಾಗ?!
- ಅಂಬೇಡ್ಕರ್ ಭವನ ನಿರ್ಮಾಣಕ್ಕೆ 2 ಎಕರೆ ಜಾಗ ಮೀಸಲು ಶಾಸಕ ವೆಂಕಟಶಿವಾರೆಡ್ದಿ
- ಶ್ರೀನಿವಾಸಪುರ:ಅರಣ್ಯಾಧಿಕಾರಿಗಳಿಂದ ರೈತರ ಬಂಧನ ಪ್ರತಿಭಟನೆ ಹೆದ್ದಾರಿ ಬಂದ್!
- ಅದ್ದೂರಿಯಾಗಿ ನಡೆದ ಯಲ್ದೂರು ಕೋದಂಡರಾಮ ಕಲ್ಯಾಣೋತ್ಸವ ಹಾಗು ರಥೋತ್ಸವ
- VIP ಕಾಲೇಜಿಗೆ ಪಿಯು ಪರೀಕ್ಷೆಯಲ್ಲಿ 95 ರಷ್ಟು ಫಲಿತಾಂಶ!
- PUC FAIL ನಾಲ್ವರು ವಿದ್ಯಾರ್ಥಿಗಳ ಆತ್ಮಹತ್ಯೆ!
- ಶ್ರೀನಿವಾಸಪುರದಲ್ಲಿ ಎಲ್ಲೆಲ್ಲೂ ಮೊಳಗಿದ ಜೈ ಶ್ರೀ ರಾಮ Vibes!
Monday, April 28