ಶ್ರೀನಿವಾಸಪುರ: ಕಾಂಗ್ರೆಸ್ ಮುಖಂಡ ದಲಿತ ನಾಯಕ ಶ್ರೀನಿವಾಸನ್ ಕೊಲೆ ಆರೋಪದಲ್ಲಿ ಬಂದಿತರಾಗಿರುವಂತ ವ್ಯಕ್ತಿಗಳ ಸಂಬಂಧಿಕರು ಜಗಜೀವನ ಪಾಳ್ಯದಲ್ಲಿ ನಮ್ಮೊಂದಿಗೆ ವಾಸಿಸುವುದು ಬೇಡ ಎಂದು ಜಗಜೀವನ ಪಾಳ್ಯ ಮತ್ತು ದಯಾನಂದ ರಸ್ತೆ ನಿವಾಸಿಗರು ಪೋಲಿಸರಿಗೆ ಮನವಿ ಪತ್ರ ನೀಡಿ ಒತ್ತಾಯಿಸಿರುತ್ತಾರೆ.
ಶ್ರೀನಿವಾಸನ್ ಅವರ ಕೊಲೆ ಆರೋಪದಲ್ಲಿ ಬಂದಿತರಾಗಿರುವ ವ್ಯಕ್ತಿಗಳ ಕುಟುಂಬಗಳ ಸದಸ್ಯರು ಹಾಗು ಬಂಧುಗಳು ಕೊಲೆಯಾದ ನಂತರದಲ್ಲಿ ಪರಾರಿಯಾಗಿದ್ದರು ದಿನಗಳದಂತೆ ಇತ್ತಿಚಿಗೆ ಕೆಲವರು ಒಬ್ಬೊಬ್ಬರಾಗಿ ಬರುತ್ತಿದ್ದು ಅವರಿಂದ ವಾರ್ಡ್ ನಂ 20 ರ ಜಗಜೀವನ ಪಾಳ್ಯ ಮತ್ತು ದಯಾನಂದ ರಸ್ತೆಯ ಜನರ ನಡುವೆ ಸೌಹಾರ್ದತೆ ಕದಡುತ್ತದೆ ಮತ್ತು ಕೊಲೆ ಕುರಿತಂತೆ ಪ್ರತ್ಯಕ್ಷ ಸಾಕ್ಷಿ ಗಳಿಗೆ ಮತ್ತು ಅವರ ಸಂಬಂಧಿಕರಿಗೆ ಅಪಾಯ ಆಗುವಂತ ಆತಂಕದ ಪರಿಸ್ಥಿತಿ ಏರ್ಪಡುತ್ತಿದ್ದು ಕೊಲೆ ಆರೋಪಿಯ ಸಂಬಂದಿಕರು ಜಗಜೀವನ ಪಾಳ್ಯ ಹಾಗೂ ದಯಾನಂದ ಭಾಗದಲ್ಲಿ ಬರುವುದು ಒಡಾಡುವುದು ಬೇಡ ಮತ್ತು ಅವರು ಇಲ್ಲಿ ಇರಲು ಅವಕಾಶ ಮಾಡಿಕೊಡಬಾರದು ಈ ಬಗ್ಗೆ ಪೋಲಿಸರು ಮದ್ಯಸ್ಥಿಕೆ ವಹಿಸಿ ಅವರಿಗೆ ತಿಳುವಳಿಕೆ ಮೂಡಿಸಬೇಕು ಎಂದು ಒತ್ತಾಯಿಸಿ ಶ್ರೀನಿವಾಸಪುರ ಪಟ್ಟಣದ ಪೊಲೀಸ್ ಠಾಣೆಯ ಮುಂದೆ ವಾರ್ಡ್ ನಂ 20 ಭಾಗದ ನಿವಾಸಿಗಳು ಮನವಿ ಪತ್ರವನ್ನು ಸಲ್ಲಿಸಿದರು.ಈ ಸಂದರ್ಭದಲ್ಲಿ ವಾರ್ಡ್ ನಿವಾಸಿಗಳಾದ ಅಮರ್, ರಾಜೇಶ್, ಸುಬ್ರಮಣಿ, ಚೆನ್ನಪ್ಪ, ಮುಳಿಯಗಳಪ್ಪ, ತಿಪ್ಪಣ್ಣ, ನಾಗರಾಜ, ನಾಗೇಶ್, ಅಂಬರೀಶ್, ಪದ್ಮ, ರೂಪಶ್ರೀ,ಮಣಿಮಾಲ,ಸೀತಮ್ಮ ಸೇರಿದಂತೆ ಹಲವರು ಉಪಸ್ಥಿತರಿದ್ದರು.
Trending
- ಶಾಸಕ ಕೊತ್ತೂರು ಮಂಜುನಾಥ್ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸುಳಿವು ನೀಡಿದ ನಂಜೇಗೌಡ!
- ಮಗಳಾಡಿದ ಮಾತಿನಿಂದ ತಾಯಿಯ ಮಂತ್ರಿ ಸ್ಥಾನಕ್ಕೆ ಧಕ್ಕೆ!
- ಶ್ರೀನಿವಾಸಪುರ:ವಿದ್ಯಾರ್ಥಿನಿಯರೊಂದಿಗೆ ಶಿಕ್ಷಕನ ಅಸಭ್ಯ ವರ್ತನೆ ಆರೋಪ!
- ನೇಪಾಳ ಪ್ರವಾಹ:ಶಿಕ್ಷಕನ ಸಮಯ ಪ್ರಜ್ಞೆ ಬದುಕುಳಿದ ಸಾವಿರಾರು ವಿದ್ಯಾರ್ಥಿಗಳು!
- ಬೆಂಗಳೂರು:ಬಿಜೆಪಿ ಮುಖಂಡನ ಅಪಹರಣ Twest ಆಂಧ್ರ ಪೋಲಿಸರ ವಶದಲ್ಲಿ!
- ಶ್ರೀನಿವಾಸಪುರ:ವರ್ಗಾವಣೆಗೊಂಡ ಬ್ಯಾಂಕ್ ಮೆನೇಜರ್ ಗೆ ಬೀಳ್ಕೊಡುಗೆ!
- ಶ್ರೀನಿವಾಸಪುರ:ಸೋಮಯಾಜಲಹಳ್ಳಿ SRV ಮೇಷ್ಟ್ರು ಇನ್ನಿಲ್ಲ!
- ಶ್ರೀನಿವಾಸಪುರ:ಜಾಗ ಕೊಟ್ಟರೆ ಇಲಾಖೆ ಚರ್ಚಿಸಿ ಉದ್ಯೋಗಾವಕಾಶ ಸಚಿವ!
Sunday, September 6



