ಶ್ರೀನಿವಾಸಪುರ:ಕಾವೇರಿ ನದಿ ನೀರು ಹಂಚಿಕೆ ವಿಚಾರವಾಗಿ ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿ ಕರ್ನಾಟಕದ ವಿವಿಧ ಕನ್ನಡ ಹಾಗು ಇತರೆ ಸಂಘಟನೆಗಳು ಕರೆ ನೀಡಿದ್ದ ಕರ್ನಾಟಕ ರಾಜ್ಯ ಬಂದ್ಗೆ ಶ್ರೀನಿವಾಸಪುರದಲ್ಲಿ ಸ್ಪಂದನೆ ಸಿಗದೆ ಬಂದ್ ನಡೆಯಲೆ ಇಲ್ಲ.ಶ್ರೀನಿವಾಸಪುರ ಪಟ್ಟಣದಲ್ಲಿ ಜನ ಸಂಚಾರ ಕಡಿಮೆ ಇತ್ತಾದರು ಶುಕ್ರವಾರ ಎಲ್ಲವೂ ಎಂದಿನಂತೆ ಮಾಮೂಲಾಗಿತ್ತು,ಸ್ಥಳೀಯವಾಗಿ ಯಾವುದೆ ಕನ್ನಡ ಹಾಗು ಇತರೆ ಸಂಘಟನೆಗಳು ಬಂದ್ ನಿರ್ವಹಣೆಗೆ ಮುಂದಾಗದ ಪರಿಣಾಮ ಮುಂಜಾನೆಯಿಂದಲೆ ಅಂಗಡಿ-ಮುಂಗಟ್ಟುಗಳನ್ನು ತೆರೆದಿದ್ದ ವ್ಯಾಪರಸ್ಥರು ವ್ಯಾಪರ ವಹಿವಾಟನ್ನು ನಡೆಸಿಕೊಂಡಿದ್ದರು,ತಿಂಡಿ ಹೋಟೆಲ್ಗಳು ಟೀ ಅಂಗಡಿಗಳು ತೆರೆದಿದ್ದವು,ರಾಜ್ಯ ರಸ್ತೆ ಸಾರಿಗೆ ಬಸ್ಸುಗಳು ಮಾಮೂಲಿನಂತೆ ಸಂಚಿರಿಸಿತಾದರೂ ಜನ ಸಂಚಾರ ಇಲ್ಲದ ಹಿನ್ನಲೆಯಲ್ಲಿ ಮಧ್ಯಾನದ ಹೊತ್ತಿಗೆ ಬಸ್ಸುಗಳ ಓಡಾಟ ನಿಲ್ಲಿಸಲಾಯಿತು.ಬಹುತೇಕ ಖಾಸಗಿ ಶಾಲೆಗಳು ಬಾಗಿಲು ತೆರೆಯಲಿಲ್ಲ, ಬ್ಯಾಂಕ್ ಸೇರಿದಂತೆ ಖಾಸಗಿ ಹಣಕಾಸು ಸಂಸ್ಥೆಗಳು ಕಾರ್ಯನಿರ್ವಹಿದರೆ, ಸದಾ ಗಿಜಗೂಡುತ್ತಿದ್ದ ತಾಲೂಕು ಕಚೇರಿ ಅವರಣದಲ್ಲಿ ಜನ ಸಂಚಾರ ಕಡಿಮೆ ಇದ್ದು ಸರ್ಕಾರಿ ಕಚೇರಿಗಳಲ್ಲಿ ಹಾಜರಾತಿ ಕಡಿಮೆ ಇತ್ತು.ಪಟ್ಟಣದಲ್ಲಿ ಸರ್ಕಾರಿ ಶಾಲ-ಕಾಲೇಜುಗಳು ಬಾಗಿಲು ತೆಗೆತ್ತಿದ್ದಾರೂ ವಿಧ್ಯಾರ್ಥಿಗಳು ಬಾರದ ಹಿನ್ನಲೆಯಲ್ಲಿ ಮಧ್ಯಾನಃದ ಹೊತ್ತಿಗೆ ಬಾಗಿಲು ಹಾಕಲಾಯಿತು,ಗ್ರಾಮೀಣ ಭಾಗದಲ್ಲಿ ಸರ್ಕಾರಿ ಶಾಲಾ-ಕಾಲೇಜುಗಳು ಎಂದಿನಂತೆ ಇದ್ದು ವಿದ್ಯಾರ್ಥಿಗಳ ಹಾಜರಿ ಇತ್ತಾದರೂ ಶಿಕ್ಷಕರು ಉಪನ್ಯಾಸಕರ ಹಾಜರಾತಿ ಇರಲಿಲ್ಲ. ಇನ್ಸಪೇಕ್ಟರ್ ದಯಾನಂದ್ ನೇತೃತ್ವದಲ್ಲಿ ಪಟ್ಟಣದಲ್ಲಿ ಬೀಗಿ ಪೋಲಿಸ್ ಬಂದೋ ಬಸ್ತ್ ಆಯೋಜಿಸಲಾಗಿತ್ತು.
Trending
- ದ್ವೇಷ ಬೇಡ,ಎಲ್ಲರಿಗೂ ಬಾಗಿಲು ತೆರೆದಿದೆ.ಜೆಡಿಎಸ್ ಕಾರ್ಯಕರ್ತರಿಗೆ CM ಡಿಕೆಶಿ ಆಹ್ವಾನ!
- ಕರ್ನಾಟಕದಿಂದ ರಾಜ್ಯಸಭೆಗೆ ಆಂಧ್ರದ ಶರ್ಮಿಳಾ ಹೆಸರು ಪರಿಗಣನೆಗೆ!
- ಶ್ರೀನಿವಾಸಪುರ:ಹೈವೇ ರಸ್ತೆಯಲ್ಲಿ ಬಾರಿ ವಾಹನಗಳ ಅಪಾಯಕಾರಿ ಪಾರ್ಕಿಂಗ್!
- ಶ್ರೀನಿವಾಸಪುರ:ಟಾಟಾ ಇಂಡಿಕಾ ಕಾರು ಡಿಕ್ಕಿ ದ್ವಿಚಕ್ರ ವಾಹನ ಸವಾರರ ಸಾವು!
- social media ದಲ್ಲಿ ಫೇಮಸ್ ಆಯಿತು ಯುವಕನ ಗಹಗಹಿಸಿ ನಗು!
- ಮಹಾರಾಷ್ಟ್ರದಂತೆ ಕರ್ನಾಟಕದಲ್ಲೂ”ಬೈಕ್ ಟ್ಯಾಕ್ಸಿ”ವಿರುದ್ದ ಕ್ರಮ ಜರುಗಿಸಿ!
- ಶ್ರೀನಿವಾಸಪುರ:ಎಂ.ಜಿ.ರಸ್ತೆ ಅತಿವೇಗದ ಬೈಕ್ ಚಾಲನೆ ಅಪಘಾತ ನಾಲ್ವರಿಗೆ ಗಾಯ!
- ಅಗ್ರಿಗೋಲ್ಡ್ ಸಂತ್ರಸ್ತರಿಗೆ ಆರು ತಿಂಗಳೊಳಗೆ ನ್ಯಾಯ ಒದಗಿಸುವಂತೆ AP ಸಿಎಂ ಸೂಚನೆ!
Monday, June 8



