ಶ್ರೀನಿವಾಸಪುರ:ಚುನಾವಣೆ ನಿನ್ನೆ ನಡೆದಿದ್ದು ಚುನಾವಣೆ ನಡೆಯುವ ಸಂದರ್ಬದಲ್ಲಿ ಹೈದರಾಲಿ ಮೊಹಲ್ಲಾದ ಉರ್ದು ಶಾಲೆ ಮತಗಟ್ಟೆ 147 ಬಳಿ ಎರಡು ರಾಜಕೀಯ ಪಕ್ಷಗಳ ಕಾರ್ಯಕರ್ತರ ನಡುವೆ ಕೈ ಕೈ ಮೀಲಾಯಿಸಿದ್ದು ಕಾಂಗ್ರೆಸ್ ಪುರಸಭೆ ಸದಸ್ಯ ಎ.ಟಿ.ಎಸ್. ತಜಮಲ್ ಹಾಗು ಜೆ.ಡಿ.ಎಸ್. ಮುಖಂಡ ಸಾಧಿಕ್ ನಡುವೆ ತೀವ್ರ ಹೊಡೆದಾಟಗಳಾಗಿತ್ತು ಈ ಸಮಯದಲ್ಲಿ ಪೋಲಿಸರು ಲಾಠಿ ಚಾರ್ಜ್ ಮಾಡಿ ಕಾರ್ಯಕರ್ತರನ್ನು ಚದುರಿಸಿದ್ದರು ಆದರೆ ನಿನ್ನೆಯ ಗಲಾಟೆ ಇಂದು ಸಹ ಮುಂದುವರೆದಿದ್ದು ಇಂದು ಗುರುವಾರ ಸಂಜೆ ಉರ್ದು ಸ್ಕೂಲ್ ಬಳಿ ಕುಳತಿದ್ದ ಎ.ಟಿ.ಎಸ್. ತಜಮಲ್ ಅವರನ್ನು ಸಾಧಿಕ್ ಕಡೆಯವರು ಎನ್ನಲಾದ ಯುವಕರು ಹಲ್ಲೆ ನಡೆಸಿ ಚಾಕುವಿನಿಂದ ಇರಿದಿದ್ದಾರೆ ಎಂದು ಆರೋಪಿಸಲಾಗಿದೆ,ಹಲ್ಲೆಗೊಳಗಾದ ವ್ಯಕ್ತಿಯನ್ನು ಶ್ರೀನಿವಾಸಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ನಂತರ ಹೆಚ್ಚಿನ ಚಿಕಿಸ್ಥೆಗಾಗಿ ಕೋಲಾರಕ್ಕೆ ಸಾಗಿಸಲಾಗಿದೆ.
ಪಟ್ಟಣದ ಚಿಂತಾಮಣಿ ವೃತ್ತ ಸುತ್ತ ಮುತ್ತ ತ್ವೇಷಮಯ ವಾತಾವರಣ ನಿರ್ಮಾಣವಾಗಿ ಜನ ಅತಂಕ ಗೊಂಡಿದ್ದಾರೆ.ಮುನ್ನೆಚರಿಕೆ ಕ್ರಮವಾಗಿ ಸ್ಥಳದಲ್ಲಿ ರಾಜ್ಯ ಸಶಸ್ತ್ರ ಮೀಸಲು ಪಡೆ ಪೋಲಿಸರನ್ನು ನಿಯೋಜಿಸಿ ಬಿಗಿ ಬದ್ರತೆ ಎರ್ಪಡಿಸಿದೆ,ಘಟನಾ ಸ್ಥಳಕ್ಕೆ ಕೋಲಾರ ಜಿಲ್ಲಾ ಎಸ್.ಪಿ ನಾರಯಣ್ ಡಿ.ವೈ.ಎಸ್.ಪಿ ಜೈಶಂಕರ್ ಭೇಟಿ ನೀಡಿದ್ದಾರೆ, ಪಟ್ಟಣದಲ್ಲಿ ಸೇಕ್ಷನ್ 144 ಜಾರಿ ಮಾಡಲಾಗಿದೆ.
Trending
- ಹಿಂದುಳಿದ ಜಾತಿಗಳ ಜನಜಾಗೃತಿ ಸಮಾವೇಶಕ್ಕೆ ಶ್ರೀನಿವಾಸಪುರದಿಂದ ಜನ!
- ಶಾಸಕ ಕೊತ್ತೂರು ಮಂಜುನಾಥ್ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸುಳಿವು ನೀಡಿದ ನಂಜೇಗೌಡ!
- ಮಗಳಾಡಿದ ಮಾತಿನಿಂದ ತಾಯಿಯ ಮಂತ್ರಿ ಸ್ಥಾನಕ್ಕೆ ಧಕ್ಕೆ!
- ಶ್ರೀನಿವಾಸಪುರ:ವಿದ್ಯಾರ್ಥಿನಿಯರೊಂದಿಗೆ ಶಿಕ್ಷಕನ ಅಸಭ್ಯ ವರ್ತನೆ ಆರೋಪ!
- ನೇಪಾಳ ಪ್ರವಾಹ:ಶಿಕ್ಷಕನ ಸಮಯ ಪ್ರಜ್ಞೆ ಬದುಕುಳಿದ ಸಾವಿರಾರು ವಿದ್ಯಾರ್ಥಿಗಳು!
- ಬೆಂಗಳೂರು:ಬಿಜೆಪಿ ಮುಖಂಡನ ಅಪಹರಣ Twest ಆಂಧ್ರ ಪೋಲಿಸರ ವಶದಲ್ಲಿ!
- ಶ್ರೀನಿವಾಸಪುರ:ವರ್ಗಾವಣೆಗೊಂಡ ಬ್ಯಾಂಕ್ ಮೆನೇಜರ್ ಗೆ ಬೀಳ್ಕೊಡುಗೆ!
- ಶ್ರೀನಿವಾಸಪುರ:ಸೋಮಯಾಜಲಹಳ್ಳಿ SRV ಮೇಷ್ಟ್ರು ಇನ್ನಿಲ್ಲ!
Sunday, September 6



