ಹೊಸಕೋಟೆ: ಉದ್ಯೋಗಿ ಮತ್ತು ಮಾಲೀಕನ ನಡುವಿನ ಸಂಬಂಧ ಕೇವಲ ಕೆಲಸ ಕಾರ್ಯಕ್ಕೆ ಸೀಮಿತವಾಗದೆ, ಮಾನವೀಯ ಸಂಬಂಧಕ್ಕೂ ಸಾಕ್ಷಿಯಾಗಬಹುದು ಎಂಬುದನ್ನು ರಿಯಲ್ ಎಸ್ಟೇಟ್ ಉದ್ಯಮಿ ಸುಬ್ಬರಾಜು ಅವರ ನಡೆ ನೆನಪಿಸುವಂತಿದೆ.
ಹೊಸಕೋಟೆ ತಾಲೂಕಿನ ಬೆಂಡಿಗಾನಹಳ್ಳಿ ಗ್ರಾಮದ ನಿವಾಸಿ ಹರೀಶ್ ಅವರು ಹೊಸಕೋಟೆಯ ಪ್ರಭಾವಿ ಮುಖಂಡ ಹಾಗೂ ರಿಯಲ್ ಎಸ್ಟೇಟ್ ಉದ್ಯಮಿ ಸುಬ್ಬರಾಜು ಅವರ ಬಳಿ ಕಚೇರಿ ಸಹಾಯಕರಾಗಿ ಕಾರ್ಯನಿರ್ವಹಿಸುತ್ತಿದ್ದು, ಕೆಲ ದಿನಗಳಿಂದ ಮಾರಣಾಂತಿಕ ಖಾಯಿಲೆಗೆ ಒಳಗಾಗಿದ್ದ ಕಚೇರಿ ಸಹಾಯಕ ಯುವಕ ಹರೀಶ್ ನಿಧನಾರದರು, ಸಾವಿನ ಸುದ್ಧಿ ತಿಳಿದ ಮಾಲಿಕ ಸುಬ್ಬರಾಜು ಭಾರವಾದ ಮನಸ್ಸಿನಿಂದ ಹರೀಶ್ ಮನೆ ಬಳಿ ಬರುತ್ತಾರೆ ಪ್ರೀತಿಯ ನೌಕರನ ಸಾವಿಗೆ ಕಣ್ಣಿರು ಮೀಡಿಯುತ್ತಾರೆ. ನಂತರ ಅವರು ಹರೀಶ್ ಅವರ ಪಾರ್ಥಿವ ಶರೀರಕ್ಕೆ ಹೆಗಲು ಕೊಟ್ಟು ನೌಕರನ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿ, ಅಂತಿಮ ನಮನ ಸಲ್ಲಿಸಿದರು.

ಸಾಮಾನ್ಯವಾಗಿ ಉದ್ಯೋಗದಾತ ಮತ್ತು ಉದ್ಯೋಗಿಯ ಸಂಬಂಧ ಕೆಲಸದ ಅವಧಿಗೆ ಮಾತ್ರ ಸೀಮಿತವಾಗಿರುವ ಇಂದಿನ ದಿನಗಳಲ್ಲಿ, ತಮ್ಮ ಬಳಿ ಕೆಲಸ ಮಾಡುತ್ತಿದ್ದ ನೌಕರನ ಅಂತಿಮ ಪ್ರಯಾಣದಲ್ಲೂ ಹೆಗಲು ಕೊಟ್ಟು ನಿಂತ ಸುಬ್ಬರಾಜು ಅವರ ಮಾನವೀಯ ನಡೆ ಸಂಬಂಧಗಳ ಮಹತ್ವವನ್ನು ಸಾರುವಂತಿತ್ತು, ಎಂದು ಬೆಂಡಿಗಾನಹಳ್ಳಿ ಗ್ರಾಮಸ್ಥರು ಹೇಳುತ್ತಾರೆ.
ಹರೀಶ್ ಅವರ ಅಗಲಿಕೆ ಕುಟುಂಬಕ್ಕೆ ತುಂಬಲಾರದ ನಷ್ಟವಾಗಿದ್ದು, ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಹಾಗೂ ಕುಟುಂಬಸ್ಥರಿಗೆ ದುಃಖ ಭರಿಸುವ ಶಕ್ತಿ ದೊರೆಯಲಿ ಎಂದು ಹಾರೈಸೋಣ.

ಮಾನವೀಯತೆ ಎಂಬುದು ಮಾತಿನಲ್ಲಲ್ಲ, ಕಷ್ಟದ ಸಮಯದಲ್ಲಿ ತೋರುವ ನಡೆಗಳಲ್ಲಿ ವ್ಯಕ್ತವಾಗುತ್ತದೆ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ. ಮೃತ ಹರೀಶ್ ತಂದೆ ಪತ್ನಿ ಒರ್ವ ಮಗ ಹಾಗು ಅಪಾರ ಬಂಧುಬಳಗ ಹಾಗು ಸ್ನೇಹಿತರನ್ನು ಅಗಲಿದ್ದಾರೆ.




