ಶ್ರೀನಿವಾಸಪುರ:ಆರೋಗ್ಯ ಜಾಗೃತಿ ಮೂಡಿಸುವ ಸಲುವಾಗಿ ಭಾರತೀಯ ವೈದ್ಯಕೀಯ ಸಂಘ (ಐಎಂಎ), ಶ್ರೀನಿವಾಸಪುರ ಶಾಖೆಯ ವತಿಯಿಂದ ಹಮ್ಮಿಕೊಂಡಿದ್ದ 5ಕೆ ನಡಿಗೆ ಜಾಥಾ/ವಾಕಥಾನ್ 2026 ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ದೊಡ್ಡ ಸಂಖ್ಯೆಯಲ್ಲಿ ಸಾರ್ವಜನಿಕರು ಪಾಲ್ಗೋಂಡಿದ್ದರು. ಪಟ್ಟಣದ ಕ್ರೀಡಾಂಗಣದಲ್ಲಿ ವಾಕಥಾನ್/ಮ್ಯಾರಥಾನ್ ಗೆ ಚಾಲನೆ ನೀಡಿದ ವೈದ್ಯಕೀಯ ಸಂಘದ ಅಧ್ಯಕ್ಷ ಡಾ. ವೈ.ವಿ. ವೆಂಕಟಾಚಲ ಮಾತನಾಡಿ ಆರೋಗ್ಯಕರ ಜೀವನಶೈಲಿ, ದೈಹಿಕ ಸದೃಢತೆ ಕುರಿತಾಗಿ ಸಮಾಜದಲ್ಲಿ ಜಾಗ್ರತೆ ಮೂಡಿಸುವ ಉದ್ದೇಶದಿಂದ ನಮ್ಮ ನಡೆ… ಆರೋಗ್ಯದ ಕಡೆ ಎಂದು ನಡಿಗೆ ಮತ್ತು ಮ್ಯಾರಥಾನ್ ಆಯೋಜಿಸಿದ್ದು ಇಂದಿನ ಒತ್ತಡದ ಜೀವನಶೈಲಿಯಲ್ಲಿ ಪ್ರತಿಯೊಬ್ಬರೂ ಉತ್ತಮ ಆರೋಗ್ಯ ಕಾಪಾಡಿಕೊಳ್ಳುವುದು ಪ್ರಮುಖವಾದ ವಿಚಾರವಾಗಿದೆ. ಪ್ರತಿನಿತ್ಯ ನಿಯಮಿತವಾಗಿ ನಡಿಗೆ, ಓಟ ಹಾಗೂ ದೈಹಿಕ ವ್ಯಾಯಾಮ ಮಾಡುವುದರಿಂದ ಹೃದಯ ಸಂಬಂಧಿ ಕಾಯಿಲೆಗಳು, ಮಧುಮೇಹ ಮತ್ತು ರಕ್ತದೊತ್ತಡದಂತಹ ಸಮಸ್ಯೆಗಳಿಂದ ಅಂತರ ಕಾಪಾಡಬಹುದಾಗಿದೆ. ಪ್ರತಿಯೊಬ್ಬ ನಾಗರಿಕರು ತಮ್ಮ ದಿನಚರಿಯಲ್ಲಿ ವ್ಯಾಯಾಮವನ್ನು ಅಳವಡಿಸಿಕೊಳ್ಳುವಂತೆ ಸಲಹೆ ಇತ್ತರು.
ಭಾಗವಹಿಸಿದವರು ಬಸ್ ನಿಲ್ದಾಣ ವೃತ್ತ, ವಿವೇಕಾನಂದ ವೃತ್ತ, ತರಕಾರಿಮಾರುಕಟ್ಟೆ ವೃತ್ತ,ಮುಳಬಾಗಿಲು ವೃತ್ತ ವೇಣು ಶಾಲೆ ವೃತ್ತ, ನ್ಯೂ ಕೋಲಾರ ವೃತ್ತ,ಚಿಂತಾಮಣಿ ವೃತ್ತ, ಪವನ್ ಹಾಸ್ಪಟಿಲ್ ವೃತ್ತ ಮೂಲಕ ಸಾಗಿ ಬಾಲಕೀಯರ ಕಾಲೇಜು ಬಳಿ ಮುಕ್ತಾಯವಾಯಿತು.
ಹಿರಿಯ ನಾಗರಿಕರು ಸೇರಿದಂತೆ ಮಹಿಳೆಯರು, ಯುವಕರು, ವಿದ್ಯಾರ್ಥಿಗಳು ಉತ್ಸಾಹದಿಂದ ವಾಕಥಾನ್ನಲ್ಲಿ ಪಾಲ್ಗೊಂಡು ಆನಂದಿಸಿದರು. ಬಹುಮಾನ ವಿತರಣೆ: ಪುರುಷರು ಮತ್ತು ಮಹಿಳೆಯರ ವಿಭಾಗದಲ್ಲಿ ಪ್ರತ್ಯೇಕವಾಗಿ ಸ್ಪರ್ಧೆಗಳನ್ನು ನಡೆಸಿದ್ದು ವಿಜೇತರಿಗೆ ನಗದು ಬಹುಮಾನ ಪ್ರಥಮ ಬಹುಮಾನ ₹5,000, ಪದಕ ಮತ್ತು ಪ್ರಮಾಣ ಪತ್ರಗಳನ್ನು ನೀಡಿ ಗೌರವಿಸಲಾಯಿತು
ಭಾರತೀಯ ವೈದ್ಯಕೀಯ ಸಂಘದ ಕಾರ್ಯದರ್ಶಿ ಡಾ. ನಂದೀಶ್, ವೈದ್ಯರಾದ ಕೆ.ಎನ್.ವೇಣು ಗೋಪಾಲ್, ಶ್ರೀನಿವಾಸ್, ಚಂದನ್, ಕಿರಣ್, ವಿಜಯ್, ರಮೇಶ್, ಕಾರ್ತಿಕ್, ಹರೀಶ್, ಚಂದ್ರಶೇಖರ್, ಸುಬ್ರಹ್ಮಣ್ಯಂ, ಸಂದೀಪ್, ಶ್ರೀನಿವಾಸ್, ಕವಿತ, ಮಂಜು ನಾಥ್, ವಿನಯ್, ದೇವಕುಮಾರ್, ಸೋಮಶೇಖರ್ ರೆಡ್ಡಿ ಇದ್ದರು.
ಶ್ರೀನಿವಾಸಪುರ ಶಾಖೆಯ ಪದಾಧಿಕಾರಿಗಳು, ಸದಸ್ಯರು, ವೈದ್ಯಕೀಯ ಸಿಬ್ಬಂದಿ ಹಾಗೂ ಪುರಸಭೆ ಮುಖ್ಯ ಅಧಿಕಾರಿ ವಿ. ನಾಗರಾಜ್, ಪೊಲೀಸ್ ಸಬ್ ಇನ್ಸ್ಪೆಕ್ಟರ್ ಜಯರಾಮ್ ಸ್ಕೌಟ್ಸ್ ಆ್ಯಂಡ್ ಗೈಡ್ಸ್ನ ರಾಮಕೃಷ್ಣಗೌಡ ಮುಂತಾದವರು ಇದ್ದರು.



