- ಆಧಾರ್ ಕಾರ್ಡ್ಗೆ ಪರ್ಯಾಯವಾಗಿ ವೋಟರ್ ಐಡಿ!
- ಸರ್ಕಾರಿ ಯೋಜನೆ ಫಲಾನುಭವಿಗಳಿಗೆ ಗುರುತಿಗೆ ಚಿಂತನೆ
- ಬಯೋಮೆಟ್ರಿಕ್ ದೃಢೀಕರಣಕ್ಕೆ ಒತ್ತು: ಕೇಂದ್ರ ಸಚಿವ ಹೇಳಿಕೆ.
ನ್ಯೂಜ್ ಡೆಸ್ಕ್: ಕೇಂದ್ರ ಸರ್ಕಾರದ ಕಲ್ಯಾಣ ಯೋಜನೆಗಳ ಫಲಾನುಭವಿಗಳನ್ನು ಗುರುತಿಸುವ ಹಾಗೂ ಹಣ ಪಾವತಿಸುವ ಪ್ರಕ್ರಿಯೆಯಲ್ಲಿ ಆಧಾರ್ ಕಾರ್ಡ್ ಬದಲಿಗೆ ವೋಟರ್ ಐಡಿ (EPIC) ಸಂಖ್ಯೆ ಮತ್ತು ಬಯೋಮೆಟ್ರಿಕ್ ದೃಢೀಕರಣ ಬಳಸುವ ಪ್ರಸ್ತಾವನೆ ಕುರಿತು ಚರ್ಚೆ ಆರಂಭವಾಗಿದೆ. ಸರ್ಕಾರಿ ಕಲ್ಯಾಣ ಯೋಜನೆಗಳ ಫಲಾನುಭವಿಗಳನ್ನು ಇನ್ನೂ ಮುಂದೆ ಆಧಾರ ಬದಲಾಗಿ ಮತದಾರರ ಗುರುತಿನ ಚೀಟಿ ಮತ್ತು ಬಯೋಮೆಟ್ರಿಕ್ ದೃಢೀಕರಣವನ್ನು ಕಡ್ಡಾಯಗೊಳಿಸುವ ಹೊಸ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರ ಮುಂದಿಟ್ಟಿದೆ. ಹಣ ವರ್ಗಾವಣೆ ಮಾಡುವ ಪ್ರಕ್ರಿಯೆಯಲ್ಲಿ ಆಧಾರ್ ಕಾರ್ಡ್ ಬದಲಾಗಿ ಇತ್ತೀಚೆಗೆ ನಡೆದ ಸಮಾವೇಶವೊಂದರಲ್ಲಿ ಕೇಂದ್ರ ಪಂಚಾಯತ್ ರಾಜ್ ಸಚಿವ ರಾಜೀವ್ ರಂಜನ್ ಸಿಂಗ್ ಅವರು ಈ ವಿಷಯವನ್ನು ಅಧಿಕೃತವಾಗಿ ಪ್ರಸ್ತಾಪಿಸಿದ್ದಾರೆ. :
ಕೇಂದ್ರ ಸರ್ಕಾರದ ಚಿಂತನೆ ಏನು?
ಆಧಾರ್ ಸುರಕ್ಷತೆಯ ಬಗ್ಗೆ ಪ್ರಶ್ನೆಯಾಗಿದ್ದು ಆಧಾರ್ ಕಾರ್ಡ್ಗಳು ಈಗ ಅತ್ಯಂತ ಸುಲಭವಾಗಿ ಲಭ್ಯವಾಗುತ್ತಿದ್ದು ಯಾರೇ ಆದರೂ 5 ನಿಮಿಷಗಳ ಅವಧಿಯಲ್ಲಿ ಬೀದಿ ಬದಿಯ ನೋಂದಣಿ ಕೇಂದ್ರಗಳಲ್ಲಿ ಆಧಾರ್ ಕಾರ್ಡ್ ಪಡೆದುಕೊಳ್ಳಬಹುದಾಗಿದೆ ಎಂದು ಸಚಿವರು ಹೇಳಿದ್ದಾರೆ. ಇದರಿಂದಾಗಿ ನಕಲಿ ಫಲಾನುಭವಿಗಳು ಸೃಷ್ಟಿಯಾಗುವ ಸಾಧ್ಯತೆ ಇರುತ್ತದೆ.
ಅರ್ಹ ಫಲಾನುಭವಿಗಳ ಗುರುತಿಸುವಿಕೆ
ಆಧಾರ್ ಬದಲಿಗೆ ಮತದಾರರ ಗುರುತಿನ ಚೀಟಿ (EPIC ಸಂಖ್ಯೆ) ಮತ್ತು ಬಯೋಮೆಟ್ರಿಕ್ ದೃಢೀಕರಣವನ್ನು ಬಳಸುವುದರಿಂದ ಕೇವಲ ಅರ್ಹ ಫಲಾನುಭವಿಗಳಿಗೆ ಮಾತ್ರ ಯೋಜನೆಗಳು ತಲುಪುತ್ತದೆ ಇದನ್ನು ಖಚಿತಪಡಿಸಿಕೊಳ್ಳಬಹುದು ಹಾಗೂ ಅಕ್ರಮಗಳನ್ನು ತಡೆಯಬಹುದು ಎಂಬುದು ಸರ್ಕಾರದ ವಾದವಾಗಿದೆ.
ಆತಂಕ!
ಕೇಂದ್ರದ ಈ ಹೊಸ ಆಲೋಚನೆಗೆ ತೀವ್ರ ವಿರೋಧ ವ್ಯಕ್ತವಾಗುತಿದ್ದು, ಅದರಂತೆ, ತಂತ್ರಜ್ಞಾನದ ಕೊರತೆ ಇರುವ ಗ್ರಾಮೀಣ ಭಾಗದ ಜನರಿಗೆ ಇ-ಕೆವೈಸಿ ಪ್ರಕ್ರಿಯೆಗಳು ಈಗಾಗಲೇ ಹೊರೆಯಾಗುತ್ತಿವೆ. ಈಗ ವೋಟರ್ ಐಡಿ ಕಡ್ಡಾಯಗೊಳಿಸಿದರೆ ಕೋಟ್ಯಂತರ ಬಡವರು, ಅದರಲ್ಲೂ ಮುಖ್ಯವಾಗಿ ಮಹಿಳೆಯರು ಮತ್ತು ಕಾರ್ಮಿಕರು ಕಲ್ಯಾಣ ಯೋಜನೆಗಳಿಂದ ವಂಚಿತರಾಗಲಿದ್ದಾರೆ ಎನ್ನುತ್ತಾರೆ.
ಹಾಲಿ ಯೋಜನೆಗಳ ಮೇಲಾಗುವ ಪರಿಣಾಮಗಳೇನು?
ಸದ್ಯಕ್ಕೆ ಪಿಎಂ-ಕಿಸಾನ್, ಪ್ರಧಾನ ಮಂತ್ರಿ ಆವಾಸ್ ಯೋಜನೆ-ಗ್ರಾಮೀಣ ಮತ್ತು ವಿವಿಧ ಸಾಮಾಜಿಕ ಭದ್ರತಾ ಪಿಂಚಣಿ ಯೋಜನೆಗಳ ಹಣ ಪಾವತಿಗೆ ಆಧಾರ್ ಜೋಡಿತ ಬ್ಯಾಂಕ್ ಖಾತೆಗಳನ್ನು ಕಡ್ಡಾಯಗೊಳಿಸಲಾಗಿದ್ದು, ಹೊಸ ನಿಯಮ ಮತದಾರರ ಗುರುತಿನ ಚೀಟಿ (EPIC ಸಂಖ್ಯೆ) ಜಾರಿಗೆ ಬಂದರೆ ಈ ವ್ಯವಸ್ಥೆಯಲ್ಲಿ ಬದಲಾವಣೆ ಆಗಲಿದೆ ಎನ್ನಲಾಗುತ್ತಿದೆ ಆದರೆ, ಸದ್ಯಕ್ಕೆ ಪ್ರಸ್ತಾವನೆಗೆ ಸಂಬಂಧ ಪಟ್ಟಂತೆ ಅಧಿಕೃತವಾಗಿ ಯಾವುದೇ ಸರ್ಕಾರಿ ಆದೇಶಗಳು ಹೊರಬಂದಿಲ್ಲ.




