ಸಿನಿಮಾ ಟೆಂಟ್ ಅಂದರೆ ಬಿದಿರಿನ ಕಂಬಗಳು, ತಗಡಿನ ಶೀಟುಗಳು ಅಥವಾ ಪ್ಲಾಸ್ಟಿಕ್ ತಾರ್ಪಲ್ (ನಾರಂಚು) ತಗಡುಗಳನ್ನು ಬಳಸಿ ಟೆಂಟ್ಗಳನ್ನು ನಿರ್ಮಿಸಲಾಗುತ್ತಿತ್ತು, ಪರದೆಗಾಗಿ ದೊಡ್ಡದಾಗಿ ಬಿಳಿ ಬಟ್ಟೆ ಕಟ್ಟಲಾಗುತಿತ್ತು ಪರದೆಯ ಮೇಲೆ ಪ್ರೊಜೆಕ್ಟರ್ ಮೂಲಕ ಸಿನಿಮಾ ಪ್ರದರ್ಶಿಸಲಾಗುತ್ತಿತ್ತು.ಇದು ಅಂದಿನ ಸಿನಿಮಾ ಟೆಂಟ್ ಕಲ್ಪನೆ. ಚಿತ್ರಮಂದಿರದಲ್ಲಿ ಕುಳಿತುಕೊಳ್ಳಲು ಎರಡು ವಿಧದ ವ್ಯವಸ್ಥೆ ಇರುತ್ತಿತ್ತು ಗಾಂಧಿ ಕ್ಲಾಸ್ (ನೆಲ) ಅತ್ಯಂತ ಕಡಿಮೆ ಬೆಲೆಯ ಟಿಕೆಟ್ ಇದು ನೆಲದ ಮೇಲೆ ಹಾಸಿದ ಮರಳಿನ ಮೇಲೆ ಕುಳಿತು ಸಿನಿಮಾ ನೋಡುವ ವ್ಯವಸ್ಥೆ ಇದು ಅಂದಿನ ಚಿತ್ರ ರಸಿಕರಿಗೆ ಆನಂದ. ಬೆಂಚ್ ಕ್ಲಾಸ್/ಚೇರ್ ಕ್ಲಾಸ್: ಅನಕೂಲವಂತರು ಹಾಗು ಪ್ರತಿಷ್ಟಿತರು ಕಬ್ಬಿಣದ ಅಥವಾ ಮರದ ಕುರ್ಚಿಗಳ ವ್ಯವಸ್ಥೆ ಇರುತಿತ್ತು.ಇದನ್ನು ಚೇರ್ ಗ್ಯಾಲರಿ ಅನ್ನುತ್ತಿದ್ದರು.
ಶ್ರೀನಿವಾಸಪುರ:ಶ್ರೀನಿವಾಸಪುರ ಪಟ್ಟಣದ ಸಿನೆಮಾ ಸಂಸ್ಕೃತಿಯ ಜೀವನಾಡಿಯಾಗಿ ಹಳೇ ಊರಿನ ಅಚ್ಚಳಿಯದೆ ಉಳಿಯುವ ನೆನಪು ಸಿನಿಮಾ ಟೆಂಟ್, ಇಂದಿರಾ ಚಿತ್ರಮಂದಿರ ಅಥಾವ ಇಂದಿರಾ ಟೆಂಟ್. ಎಪ್ಪತ್ತು-ಎಂಬತ್ತರ ದಶಕದಲ್ಲಿ ಶ್ರೀನಿವಾಸಪುರ ಪಟ್ಟಣ 7-8 ಸಾವಿರ ಜನಸಂಖ್ಯೆಯ ಸಣ್ಣ ಊರಾಗಿತ್ತು. ಊರಿಗೆ ಮನೊರಂಜನೆ ಅಂದರೆ ಶ್ರೀನಿವಾಸಪುರ ಪಟ್ಟಣದಲ್ಲಿನ ಇಂದಿರಾ ಟೆಂಟ್ ಅಲ್ಲಿ ಸಿನಿಮಾ ನೋಡೋದೆ ಅಂದಿನ ಯುವಕರಿಗೆ ದೊಡ್ಡ ಹೆಮ್ಮೆ ಅದರಲ್ಲೂ ಸೆಕೆಂಡ್ ಶೋ ನೋಡಲು ಪಟ್ಟಣದ ಸುತ್ತಮುತ್ತಲಿನ ಗ್ರಾಮಸ್ಥರು ಬರುತ್ತಿದ್ದರು
ಪಟ್ಟಣದ ಮದ್ಯಮ ತರಗತಿ ಕುಟುಂಬದ ಸದಸ್ಯರು ಅಪರೂಪಕ್ಕೆ ಸಿನಿಮಾಗೆ ಹೋಗಲು ಮನೆಯ ಯಜಮಾನನಿಗೆ ದಂಬಾಲು ಬಿದ್ದು 1 ಕಾಲು ಅಂದರೆ ಒಂದು ರೂ ಇಪ್ಪತ್ತೈದು ಪೈಸೆಗೆ ನಾವು ಮನೆಯವರಿಗೆಲ್ಲಾ ಟಿಕೆಟ್. ಕುಟುಂಬದ ದೊಡ್ಡ ಮಕ್ಕಳು ಸಣ್ಣ ಮಕ್ಕಳನ್ನು ಸೊಂಟದಲ್ಲಿ ಎತ್ಕೊಂಡು ಚಿಕ್ಕವರೆಂದು ತೋರಿಸುತ್ತಾ ಒಳ ಹೋಗುತ್ತಿದ್ದರು.
ಸಿನಿಮಾ ನೋಡಲು ಮರಳು ನೆಲದ ಮೇಲೆ ಕೂರಲು ಚಿಕ್ಕವರಿಗೆ ಎಂಟಾಣೆ(ಐವತ್ತು ಪೈಸೆ) ದೊಡ್ಡವರಿಗೆ ಒಂದು ರೂಪಾಯಿ, ಚಿಕ್ಕವರು ಕುರ್ಚಿಯಲ್ಲಿ ಕೂರಲು ಹನ್ನೆರಡಾಣೆ(ಎಪ್ಪತೈದು ಪೈಸೆ) ದೊಡ್ಡವರಿಗೆ ಎರಡು ರೂಪಾಯಿ, ನೆಲದಲ್ಲಿ ಕೂರುವವ ಮಹಿಳೆಯರು ಮನೆಯಿಂದಲೆ ಚಾಪೆ ಅಥಾವ ಗೋಣಿ ಚಿಲ ತಗಂಡು ಹೊಗುತ್ತಿದ್ದರು. ಮಡಿ-ಗಿಡಿ ಅನ್ನುವಂತ ಕುಟುಂಬಗಳವರು ಮನೆಯಲ್ಲಿಯೇ ಹುರಿದುಕೊಂಡ ಕಡಲೇಕಾಯಿ, ಮಸಾಲೆ ಹಚ್ಚಿದ ಮಂಡಕ್ಕಿ (ಕಳ್ಳೆಪುರಿ) ತಗಂಡು ಹೋಗುತ್ತಿದ್ದರು.
ಧೂಮಪಾನ ಮತ್ತು ಮದ್ಯಪಾನ ಆರೋಗ್ಯಕ್ಕೆ ಹಾನಿಕರ ಹಾಗೂ ಇವು ಕ್ಯಾನ್ಸರ್ಗೆ ಕಾರಣವಾಗುತ್ತವೆ ಎಂಬುದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಜಾಹೀರಾತು ಮುಗಿದ ನಂತರ ಮಬ್ಬು ಗತ್ತಲು ಆವರಿಸಿದಾಗ ಶುರುವಾಗುವ ಹಾಡು “ಕಲ್ಯಾಣಾದ್ಭುತ ಗಾತ್ರಾಯ ಕಾಮಿತಾರ್ಥ ಪ್ರದಾಯಿನೇ ಶ್ರೀಮದ್ ವೆಂಕಟನಾಥಾಯ ಶ್ರಿನಿವಾಸಾಯ ತೇ ನಮಃ ತಿರುಪತಿ ಗಿರಿವಾಸ ಶ್ರೀ ವೆಂಕಟೇಶ ತಿರುಪತಿ ಗಿರಿವಾಸ ಶ್ರೀ ವೆಂಕಟೇಶ ನೀನೋಲಿದ ಮನೆ ಮನೆಯು ಲಕ್ಷ್ಮೀ ನಿವಾಸ” ಪೋರ್ಣವಾಗುವ ಮೊದಲೆ ಮಬ್ಬುಗತ್ತಲು ಹೋಗಿ ಲೈಟ್ ಆಫ್ ಆಗಿರುತಿತ್ತು, ಸಿನಿಮಾದ ಹೀರೊ ಎಂಟ್ರಿ ಹಾಗು ಹೆಸರು ತೊರಿಸುವ ಹೊತ್ತಿಗೆ ಗಾಂಧಿ ಕ್ಲಾಸ್ ನೆಲದಲ್ಲಿ ಮರಳಿನ ಮೇಲೆ ಕುಳಿತು ಸಿನಿಮಾ ನೋಡುತ್ತಿದ್ದ ಅಭಿಮಾನಿಗಳು ಶಿಲ್ಲೆ ಹೋಡೆಯುತ್ತ ಕೂಗಾಡುತ್ತ ಅಭಿಮಾನದಿಂದ ಹಾರಾಡುತ್ತಾ ಇರುತ್ತಿದ್ದರು. ಪಕ್ಕದಲ್ಲಿ ನೆಲದಲ್ಲಿ ಮಹಿಳೆಯರು ಸಿನೆಮಾ ಶುರುವಾದಾಗುತ್ತಲೆ ಸಿನಿಮಾ ನೋಡುತ್ತ ಮನೆಯಿಂದ ತಂದ ತಿಂಡಿಗಳನ್ನು ಮೆಲ್ಲುತ್ತಾ ಆಗಾಗ ಸೊಳ್ಳೆ ಹೊಡೆಯುತ್ತಾ, ಅಹ್ಲಾದಕರವಾಗಿ ಅನಂದಮಯವಾಗಿ ಸಿನಿಮಾ ನೋಡುತ್ತ enjoy ಮಾಡುತ್ತಿದ್ದರು.
ಮಳೆಗಾಲದಲ್ಲಿ ಮಳೆ ಶುರುವಾಯಿತಿ ಎಂದರೆ ಟೆಂಟ್ ಒಳಗೆ ಮಳೆ ನೀರು ತೊಟ್ಟಿಕ್ಕುತ್ತಿದ್ದರೆ ಸ್ಥಳ ಬದಲಾಯಿಸಿ ಒಟ್ಟಿನಲ್ಲಿ ಸಿನಿಮಾ ನೋಡುತ್ತಿದ್ದರು. Sr.NTR ನಟನೆಯ ಧಾರ್ಮಿಕ ಅಥಾವ ಪೌರಾಣಿಕ ಸಿನಿಮಾ ಬಂದರೆ ಸುಮುತ್ತಲಿನ ಹಳ್ಳಿಗಳ ಜನ ಮಹಿಳೆಯರು ಸೇರಿದಂತೆ ಜಾತ್ರೆಗೆ ಬರುವರಂತೆ ಬಂದು ಸಿನಿಮಾ ನೋಡುತಿದ್ದರು.
ಆಗೆಲ್ಲಾ state wide relese ಸಿನಿಮಾಗಳು ಬರುತ್ತ ಇರಲಿಲ್ಲ, ಸಿನಿಮಾ ಬಿಡುಗಡೆ ಆಗಿ ಒಂದೇರಡು ವಾರ ಆದ ನಂತರ ಬರುತಿತ್ತು. ಒಂದು ವೇಳೆ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಹಿಟ್ ಆದರೆ, ಸಿನಿಮಾ ಬರಲು ಕನಿಷ್ಟ 1-2 ತಿಂಗಳಾದರೂ ಆಗುತಿತ್ತು. ಸಿನಿಮಾ ಆವರೇಜ್ ಅಂತ ಕಡಿಮೆ ಬಾಡಿಗೆಗೆ ಸಿಕ್ಕರೆ ಮಾತ್ರ ಸಿನಿಮಾ ಬಾಕ್ಸ್ ಬೇಗ ಬರೋದು. ದೊಡ್ಡ ಹಿರೋಗಳ ಹೋಸ ಸಿನಿಮಾ ಬಂದಾಗ ದೊಡ್ದ ಸಂಖ್ಯೆಯಲ್ಲಿ ಜನ ಸಿನಿಮಾ ನೋಡಲು ಬರ್ತಿದ್ದರು. ಆಗ ಟೆಂಟ್ ಹೊರಗೆ ಜನಸಂದಣಿ ಭರ್ಜರಿ ಕಲೆಕ್ಷನ್ ಯಶಸ್ವಿ ಪ್ರದರ್ಶನ ಕಾಣುತ್ತಿದ್ದವು. ಚಿಕ್ಕ ಊರು ಅಷ್ಟು ಜನ ಒಂದಡೆ ಸೇರುತ್ತಿದ್ದಂತೆ ಊರಿನಲ್ಲಿ ದೊಡ್ದ ಸುದ್ಧಿ. ಸಿನಿಮಾ full rush ಅಂತೆ ಟಿಕೆಟ್ ಕೊಡವುದಕ್ಕೂ ಸಮಸ್ಯೆ ಅಂತೆ ಹೀಗೆ ಅಂತೆ ಕಂತೆ ಬಾಯಿಂದ ಬಾಯಿಗೆ ಸುದ್ಧಿ ಹರಡುತ್ತ ಇನ್ನಷ್ಟು ಮಸಾಲೆ ಸೇರಿಸಿ ಮಾತನಾಡಿಕೊಳ್ಳುತ್ತಿದ್ದರು. ಇತ್ತ ಟೆಂಟ್ ಒಳಗೆ ನೆಲ ತುಂಬಿ, ಕಬ್ಬಿಣದ ಅಥವಾ ಮರದ ಚೆರ್ ತುಂಬಿ ಹಿಂದಗಡೆ ಜನ ತುಂಬಿದಾಗ ಫ್ರೀ ಸಿನಿಮಾ ನೋಡಲು ಬರುವ ಹಿನ್ನಲೆಯಲ್ಲಿ ಹೆಚ್ಚುವರಿ ಬೆಂಚ್ ಹಾಕಿ ಕೂರಿಸುತ್ತಿದ್ದರು. ಪ್ರೋಜೆಕ್ಟರ್ ರೂಮ್ ವರಿಗೂ ಜನ ನಿಂತು ಸಿನಿಮಾ ನೋಡುತ್ತಿದ್ದರು. ಟಿಕೆಟ್ ಹರಿಯುವ ಗೇಟ್ ಕೀಪರ್ ಟಿಕೆಟ್ ಹರಿಯುವುದೆ ನನ್ನ ಕೆಲಸ ಎಂಬಂತೆ ಕಟ್ಟ ಕದಲದೆ ಟಿಕೆಟ್ ಹರಿಯುತ್ತ ಇರುತ್ತಿದ್ದ.

ಮಣ್ಣಿನ ವಾಸನೆಯಲ್ಲಿ ಸಿನಿಮಾ ಅನುಭವ
ಸಿನಿಮಾ ಶುರುವಾಗುತ್ತಿದ್ದಂತೆ ಮಣ್ಣಿನ ವಾಸನೆ ಸಿಗರೇಟ್ ಬೀಡಿ ಸೇದಿ ಬಿಡುವಂತವರ ಹೋಗೆ ಪ್ರೋಜೆಕ್ಟರ್ ರೂಮ್ ನಿಂದ ಬರುವಂತ ಬೆಳಕಲ್ಲಿ ಅಲೆ ಅಲೆಯಾಗಿ ಸುತ್ತುತ್ತ ಇರುತಿತ್ತು. ಹೀರೋ ಫೈಟ್ ಬಂದಾಗ ಹತ್ತಾರು ಶಿಲ್ಲೆ ಹಾಗು ಸೀಟಿಗಳು ಒಮ್ಮೆಲೆ ಕೇಳಿಬರುತಿತ್ತು. ಅಂದಿನ ಮಟ್ಟಿಗೆ ಇವೆಲ್ಲ ಹೊಸ ಅನುಭವಗಳು.
ಕರ್ಕಶವಾಗಿ ತಿರುಗುವ ಫ್ಯಾನ್ ಪ್ರೋಜೆಕ್ಟರ್ ಸದ್ದು ಅದರಲ್ಲೂ ಫ್ಯಾಮಿಲಿ ಬ್ಯಾಕ್ ಗ್ರೌಂಡ್ ಸಿನಿಮಾಗಳಲ್ಲಿ ಭಾವನಾತ್ಮಕ ಸನ್ನಿವೇಶಗಳಿಗೆ ಬ್ಯಾಕ್ ಗ್ರೌಂಡ್ ಸಂಗೀತ ಇರುತ್ತ ಇರಲಿಲ್ಲ ಆಗ ಪ್ರೊಜೆಕ್ಟರ್ ಸೌಂಡ್ ನಡುವೆ ಸನ್ನಿವೇಶದ ಸಂಭಾಷಣೆಯನ್ನು ಪ್ರೇಕ್ಷಕರು ತಲ್ಲೀನರಾಗಿ ಕೇಳಿಸಿಕೊಳ್ಳುತ್ತಿದ್ದರು, ಆಗಾಗ ಆಗುತ್ತಿದ್ದ ವಿದ್ಯುತ್ ಕಡಿತ. ಜನರೇಟರ್ ಇಲ್ಲದ ಕಾರಣ ವಿದ್ಯುತ್ ಗಾಗಿ ಕಾಯಬೇಕಾಗಿತ್ತು. ಅದು ಬರದಿದ್ದರೆ, ಪಾಸ್ಗಳನ್ನು ಕೊಟ್ಟು ಕಳುಹಿಸಲಾಗುತಿತ್ತು ಮರುದಿನ ಬಂದು ನೋಡುವ ಅವಕಾಶ ಕಲ್ಪಿಸುತ್ತಿದ್ದರು. ಆದರೂ ಜನ ಶಿಳ್ಳೆ ಹೊಡೆಯುತ್ತ ಕೂಗಾಡುತ್ತ ತಮ್ಮ ಆಕ್ರೋಶ ಹೋರಹಾಕುತ್ತಿದ್ದರು.ಇಂತಹ ಸಿನಿಮಾ ನೋಡುವ ಅನುಭವ ಅಂದಿನವರು ಅನುಭವಿಸದಷ್ಟು ಸಂಭ್ರಮ, ಖುಷಿ ಬಹುಶಃ ಯಾವ ಮಲ್ಟಿಫ್ಲೇಕ್ಸ್ ನಲ್ಲೂ ಸಿಗಲಾರದು ಎನ್ನುತ್ತಾರೆ.
ಸಿನಿಮಾ ಪ್ರಚಾರಕ್ಕೆ ಜಟಕಾ ಗಾಡಿ ಬಳಕೆ
ಆಗೆಲ್ಲಾ social media platforms ಜಗತ್ತು ಇರಲಿಲ್ಲ ಹಾಗಾಗಿ ಹೊಸ ಸಿನಿಮಾ ರಿಲೀಸ್ ಆದಾಗ ಮೊದಲು ಕುದುರೆ ಜಟಕಾ ಗಾಡಿ, ನಂತರದಲ್ಲಿ ಆಟೋ ರಿಕ್ಷಾಗೆ ಮೈಕ್ ಕಟ್ಟಿ ಸಿನಿಮಾ ಬ್ಯಾನರ್ ಕಟ್ಟಿ, ಮೈಕ್ನಲ್ಲಿ ಇಂದಿನಿಂದ ನಿಮ್ಮ ಇಂದಿರಾ ಚಿತ್ರಮಂದಿರದಲ್ಲಿ ಹೊಸ ಸಿನಿಮಾ ಬಿಡುಗಡೆ ಆಗಿದೆ ಇಂತಹ ನಾಯಕ ನಟ ನಟಿಯಾಗಿ ಇಂತವರು ನಟಿಸಿದ್ದಾರೆ ಪೌರಾಣಿಕ ಅಥಾವ ಸಾಮಜಿಕ ಎಂದು ಕಥಾ ಹಂದರವನ್ನು ಜೋರಾಗಿ ಪ್ರಚಾರ announce ಮಾಡುತ್ತಿದ್ದರು. ಅಂದಿಗೆ ಮನೆಯ ಹೊಸಿಲು ದಾಟಿಬಾರದವರಿಗೂ ಹೊಸ ಸಿನಿಮಾ ರೀಲಿಸ್ ವಿಚಾರ ತಲುಪುತಿತ್ತು.
ಮಾಲಿಕ ಅಪ್ಪಟ ಕನ್ನಡಿಗ
ಇಂದಿರಾ ಚಿತ್ರಮಂದಿರ ಮಾಲಿಕ ರಹಮತುಲ್ಲಾ ಅವರು ಉರ್ದು ಭಾಷಿಕರಾದರೂ ಅಪ್ಪಟ ಕನ್ನಡ ಪ್ರೇಮಿ ಕನ್ನಡ ವೃತ್ತ ಪತ್ರಿಕೆ ಮ್ಯಾಗಜೈನ್ ಗಳನ್ನು ಕೊಂಡು ಓದುವ ಹವ್ಯಾಸ ಇಟ್ಟುಕೊಂಡಿದ್ದರು. ಮನೆಯಲ್ಲಿ ಉರ್ದು ಭಾಷೆ ಮಾತನಾಡುತ್ತಿದ್ದರು ಅವರ ಮಕ್ಕಳನ್ನು ಕನ್ನಡ ಶಾಲೆಗೆ ಸೇರಿಸುವ ಮೂಲಕ ನೆಲದ ಋಣ ತೀರಿಸುವ ಕಾರ್ಯಮಾಡಿದರು. ಅವರ ಮಕ್ಕಳು ಇಂದಿಗೂ ಸಮಾಜದಲ್ಲಿ ಕನ್ನಡ ಭಾಷಿಕರಾಗಿದ್ದಾರೆ.
ಚಾಟ್ಸ್ ಅಂಗಡಿಗಳು
ಸಿನಿಮಾ ಮಧ್ಯಂತರ ಬಿಟ್ಟಾಗ ಹೋರಗೆ ಬರುತ್ತಿದ್ದ ಜನ ಟೆಂಟ್ ಹೋರಭಾಗದಲ್ಲಿ ಚಕ್ಕಲಿ ನಿಪ್ಪಟ್ಟು ಬೋಂಡಾ ಅಂಗಡಿ ಇಡುತಿದ್ದ ಮೀಸಾಲುಕಿಟ್ಟಣ ಅಂಗಡಿ ಬಳಿ ಕುರುಕುಲು ತಿಂಡಿಗೆ ಜನ ಮುಗಿ ಬಿಳುತಿದ್ದರು, ಅಂದಿನ ಜನಕ್ಕೆ ಪುಲ್ ಫೇಮಸ್ ಅಂಗಡಿ, ಆತ ಅಂಗಡಿಯನ್ನು ತಡಿಕೆಯ ತಟ್ಟೆ ನೇಕೆ ಜೋಡಿಸಿಕೊಂಡು ತಲೆ ಮೇಲೆ ಹೋತ್ತುಕೊಂಡು ಬಂದು ತನ್ನ ಅಂಗಡಿ ಜೋಡಿಸುವುದೆ ಒಂದು ರೀತಿಯಲ್ಲಿ ವಿಶೇಷ.
ಇಂದಿರಾ ಟೆಂಟ್ ಸಿನಿಮಾ ಸೆಕೆಂಡ್ ಶೋ ನೋಡಿಕೊಂಡು ಬರುವಂತವರಿಗೆ ಎಂ.ಜಿ.ರಸ್ತೆಯಲ್ಲಿ ತರಕಾರಿ ಅಂಗಡಿಗಳ ಬಳಿ ಗುಗ್ಗಿಳ್ಳು ಸುಬ್ಬಣ್ಣ ಅಂಗಡಿ ತರೆದಿರುತ್ತಿತ್ತು, ಅಲ್ಲಿ ಮಸಾಲೆ ಚಾಟ್ ಸಿಗುತಿತ್ತು. ಕಡಲೆಕಾಳು ಗುಗ್ಗಿಲು ಮತ್ತು ಸೌತೆಕಾಯಿ ಮಸಾಲ ಖಾರ ಆರೋಗ್ಯಕರ ಮತ್ತು ರುಚಿಕರವಾದ ತಿಂಡಿಗಳು ಇವಕ್ಕೆ ಈರುಳ್ಳಿ ಬೆರೆಸಿ ಕೊಟ್ಟರೆ, ತಿಂದವರೆ ರುಚಿ ಹೇಳಬೇಕು.
ಬದಲಾದ ಕಾಲಗಟ್ಟದಂತೆ ಶ್ರೀನಿವಾಸಪುರದಲ್ಲೂ ಥೀಯೆಟರ್ ಬಂದಿತು ಟಿವಿ ಮಾಧ್ಯಮ ಬಲವಾಯಿತು ಮುಂದೆ ಟೆಂಟ್ ಸಂಸ್ಕೃತಿಗೆ ಸಂಕಷ್ಟ ಎದುರಾಯಿತು, ಕಾಲದ ಅಣತಿಯಂತೆ ಅನಿವಾರ್ಯವಾಗಿ ಇಂದಿರಾ ಚಿತ್ರ ಮಂದಿರ ಬಾಗಿಲು ಮುಚ್ಚಿತು. ಹಳೇ ಊರಿನ ಹಿರಿಯರ ಮನಸ್ಸಿನಲ್ಲಿ ಇಂದಿಗೂ ಸಿನಿಮಾ ಟೆಂಟ್ನ ನೆನಪುಗಳು ಹಸಿರಾಗಿಯೇ ಇವೆ.



