ಚಿಂತಾಮಣಿ: ಬಹುಕಾಲದಿಂದ ಸಾರ್ವಜನಿಕರ ನಿರೀಕ್ಷೆಯಾಗಿದ್ದ ಚಿಂತಾಮಣಿ–ಹೊಸಕೋಟೆ ರಸ್ತೆ ಅಗಲೀಕರಣ ಹಾಗೂ ಕೋಲಾರ–ವಿಜಯಪುರ ರಾಜ್ಯ ಹೆದ್ದಾರಿಯ ಹೆಚ್.ಕ್ರಾಸ್ ನಲ್ಲಿ ಫ್ಲೈಓವರ್ ನಿರ್ಮಾಣ ಕಾಮಗಾರಿಗಳಿಗೆ ಸರ್ಕಾರದಿಂದ ಅನುಮೋದನೆ ದೊರೆತಿರುವ ಹಿನ್ನೆಲೆಯಲ್ಲಿ ಶೀಘ್ರದಲ್ಲೇ ಕಾಮಗಾರಿ ಆರಂಭವಾಗುವ ನಿರೀಕ್ಷೆ ವ್ಯಕ್ತವಾಗಿದೆ. ಇತ್ತೀಚೆಗೆ ಹೆಚ್.ಕ್ರಾಸ್ ಜಂಕ್ಷನ್ ನಲ್ಲಿ ಸುಗಮ ಸಂಚಾರಕ್ಕೆ ಸಮಸ್ಯೆ ಆಗಿತ್ತು. ಚಿಂತಾಮಣಿ ಕಡೆಯಿಂದ ಬರುವ ಕರ್ನಾಟಕ ಆಂಧ್ರ ವಾಹನಗಳು ಜಂಕ್ಷನ್ ಟ್ರಾಫಿಕ್ ನಲ್ಲಿ ಗಂಟೆಗಟ್ಟಲೇ ಸಿಲುಕಿ ಒದ್ದಾಡುವ ಪರಿಸ್ಥಿತಿ ಇತ್ತು. ರಸ್ತೆ ಅಗಲೀಕರಣ ಆಗಿದೆ ಚಿಂತಾಮಣಿ–ಹೊಸಕೋಟೆ ರಸ್ತೆಯಲ್ಲಿ ಏರುತ್ತಿರುವ ವಾಹನ ದಟ್ಟಣೆ ವಾಹನ ಸವಾರಿಗೆ ಆತಂಕ ಸೃಷ್ಟಿಸಿದ್ದು ಈ ಮಾರ್ಗದಲ್ಲಿ ಪ್ರತಿದಿನ ಸಾವಿರಾರು ವಾಹನಗಳು ಸಂಚರಿಸುವುದರಿಂದ ರಸ್ತೆ ವಿಸ್ತರಣೆಗೆ ಸಾರ್ವಜನಿಕರು ಹಾಗೂ ವ್ಯಾಪಾರಿಗಳು ಹಲವು ವರ್ಷಗಳಿಂದ ಒತ್ತಾಯಿಸುತ್ತಿದ್ದರು. ಆಗಲೀಕರಣದಿಂದ ವಾಹನ ಸಂಚಾರ ಸುಗಮವಾಗಲಿದ್ದು, ಬೆಂಗಳೂರು ಸಂಚಾರದಲ್ಲಿ ಸಮಯ ಉಳಿತಾಯವಾಗುತ್ತದೆ.
ಕೋಲಾರ–ವಿಜಯಪುರ ರಸ್ತೆಯ ಹೆಚ್.ಕ್ರಾಸ್ ನಲ್ಲಿ ಫ್ಲೈಓವರ್ ನಿರ್ಮಾಣವಾದರೆ ಈ ಪ್ರದೇಶದಲ್ಲಿನ ಸಂಚಾರ ದಟ್ಟಣೆ ಕಡಿಮೆಯಾಗಲಿದ್ದು, ಅಪಘಾತಗಳ ಸಂಖ್ಯೆಯೂ ಇಳಿಕೆಯಾಗುವ ನಿರೀಕ್ಷೆಯಿದೆ. ಪ್ರಮುಖ ಹೆಚ್ ಕ್ರಾಸ್ ಜಂಕ್ಷನಲ್ಲಿ ವಾಹನಗಳು ಹೆಚ್ಚು ಸಮಯ ಕಾಯುವ ಸಮಸ್ಯೆಗೆ ಇದರಿಂದ ಪರಿಹಾರ ಸಿಗಲಿದೆ ಎಂದು ಸ್ಥಳೀಯರ ಅಭಿಪ್ರಾಯ.
ಈ ಎರಡೂ ಅಭಿವೃದ್ಧಿ ಯೋಜನೆಗಳು ಪೂರ್ಣಗೊಂಡ ನಂತರ ಅವಿಭಜಿತ ಕೋಲಾರ ಜಿಲ್ಲೆಯ ರಸ್ತೆ ಸಂಪರ್ಕ ವ್ಯವಸ್ಥೆ ಉತ್ತಮ ಗೊಳ್ಳಲಿದೆ. ಇದು ವ್ಯಾಪಾರ, ಕೃಷಿ ಉತ್ಪನ್ನಗಳ ಸಾಗಣೆ, ಕೈಗಾರಿಕೆ ಹಾಗೂ ಪ್ರವಾಸೋದ್ಯಮಕ್ಕೂ ಉತ್ತೇಜನ ಸಿಗಲಿದೆ ಎಂದು ಸಾರ್ವಜನಿಕರು ಆಶಾಭಾವನೆ ವ್ಯಕ್ತಪಡಿಸಿದ್ದಾರೆ.
ಕೋಲಾರ ಜಿಲ್ಲೆ ರಸ್ತೆ ಸಂಪರ್ಕ ಸುಧಾರಿಸಲಿದೆ. ದೇವನಹಳ್ಳಿ–ವಿಜಯಪುರ–ಎಚ್.ಕ್ರಾಸ್–ವೇಮಗಲ್–ಕೋಲಾರ ಮಾರ್ಗವನ್ನು ಅಭಿವೃದ್ಧಿಪಡಿಸುವ ಮಹತ್ವದ ಯೋಜನೆ ಜಾರಿಯಲ್ಲಿದೆ. ಈ ಯೋಜನೆಯು ಹೈಬ್ರಿಡ್ ಅನ್ಯುಟಿ ಮಾದರಿ (HAM) ಅಡಿಯಲ್ಲಿ ಕೈಗೊಳ್ಳಲಾಗುತ್ತಿದೆ. ಯೋಜನೆಗಳ ಕಾಮಗಾರಿ ಗುಣಮಟ್ಟದಿಂದ ಹಾಗೂ ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಬೇಕೆಂದು ಸಾರ್ವಜನಿಕರು ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.
Trending
- ವಿಧಾನ ಪರಿಷತ್ ಸಭಾಪತಿ ಸ್ಥಾನಕ್ಕೆ ಹೊರಟ್ಟಿ ರಾಜೀನಾಮೆ ಸಲ್ಲಿಕೆ!
- ಕೋಲಾರ-ದೇವನಹಳ್ಳಿ ನಡುವೆ Hಕ್ರಾಸ್ ಬಳಿ ಫ್ಲೈಓವರ್ ನಿರ್ಮಾಣ!
- ಗ್ರಹ ದೋಷ ನಿವಾರಣೆಗೆ ಭೈರವಾರಾಧನೆ:ಕಾಲ ಭೈರವಾಷ್ಟಮಿ ಪೂಜೆ ಮಹತ್ವ!
- ಶ್ರೀನಿವಾಸಪುರ: ಚೌಡೇಶ್ವರಿ ದೇಗುಲದಲ್ಲಿ ಚಾಮುಂಡೇಶ್ವರಿ ಜಯಂತ್ಯುತ್ಸವ
- ಶಿವಕುಮಾರ್ ಸಂಪುಟ ವಿಸ್ತರಣೆ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗೆ ಸಿಗದ ಮಂತ್ರಿ ಸ್ಥಾನ!
- ಶ್ರೀನಿವಾಸಪುರ:ಅಪಘಾತಕ್ಕೆ ಆಹ್ವಾನ ನೀಡುತ್ತಿದೆ ಪಟ್ಟಣದ ರಸ್ತೆ ವೃತ್ತಗಳು!
- history created:ವಂದೇ ಭಾರತ್ ರೈಲಿನಲ್ಲಿ ಜೀವಂತ ಹೃದಯ ರವಾನೆ!
- ತಿರುಮಲ ನಡಿಗೆ ಮಾರ್ಗದಲ್ಲಿ ಅಂಜನೇಯ ವಿಗ್ರಹ ಕದ್ದು ಸಿಕ್ಕಿಬಿದ್ದ ಖದೀಮ!
Friday, August 7



