ಕೋಲಾರ:ಶ್ರೀನಿವಾಸಪುರ ಸೇರಿದಂತೆ ಕೋಲಾರ ಜಿಲ್ಲಾದ್ಯಂತ ಇರುವ ಮಾವು ಬೆಳೆಗಾರರು ಇಂದು ಸೋಮವಾರ ಮಾವು ಬೆಂಬಲ ಬೆಲೆ ನೋಂದಣಿಗೆ ಅವಕಾಶ ಕಲ್ಪಿಸಿ ಅವಧಿ ವಿಸ್ತರಿಸುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿ ಜಿಲ್ಲಾಡಳಿತ ಭವನದ ಮೆಟ್ಟಿಲುಗಳ ಕುಳಿತು ಬೆಳಗಿನಿಂದ ಪ್ರತಿಭಟನೆ ನಡೆಸಿದ್ದು ಸರ್ಕಾರದಿಂದ ಸ್ಪಂದನೆ ಸಿಗದ ಹಿನ್ನಲೆಯಲ್ಲಿ ಮಾವು ಬೆಳೆಗಾರರು ಆಹೋರಾತ್ರಿ ಧರಣಿಗೆ ಮುಂದಾಗಿದ್ದಾರೆ. ಸಂಜೆ ಮುಬ್ಬುಗತ್ತಲೆಯಲ್ಲಿ ಜಿಲ್ಲಾಡಳಿತ ಭವನದ ಮೆಟ್ಟಿಲಿನ ಮೇಲೆ ಕುಳಿತ ಮಾವು ರೈತರು ಸರ್ಕಾರದ ನಿಲವು ಹಾಗು ಆಡಳಿತ ರೂಡ ರಾಜಕಾರಣಿಗಳ ನಿರ್ಲಕ್ಷ ವಿರೋಧಿಸಿ ಆಕ್ರೋಶ ವ್ಯಕ್ತಪಡಿಸುತಿದ್ದಾರೆ.
ಈ ಸಂದರ್ಭದಲ್ಲಿ ಕೋಲಾರ ಮಾವು ಬೆಳೆಗಾರರ ಸಂಘದ ಅಧ್ಯಕ್ಷ ನಿಲಟೂರು ಚಿನ್ನಪ್ಪರೆಡ್ದಿ, ಕಾರ್ಯದರ್ಶಿ ಪಾತಕೋಟೆ ನವೀನ್ ಕುಮಾರ್, ರೈತ ಮುಖಂಡ ಫಾರೂಖ್ ನಾಗರಾಜ್, ಅಭಿಲಾಷ್ ರೆಡ್ದಿ ಜಿಲ್ಲಾದ್ಯಂತ ಇರುವ ಮಾವು ಬೆಳೆಗಾರರು ಭಾಗವಹಿಸಿದ್ದಾರೆ.
ಹೆದ್ದಾರಿ ತಡೆಗೆ ಮುಂದಾಗಿದ್ದ ಮಾವು ರೈತರು
ನೊಂದಣೆ ವಿಸ್ತರಣೆಗೆ ಅಗ್ರಹಿಸಿ ಶನಿವಾರ ಕೋಲಾರ ಜಿಲ್ಲಾದ್ಯಂತ ಮಾವು ಬೆಳೆಗಾರರು ಮತ್ತು ರೈತ ಸಂಘಟನೆಗಳು ಹೆದ್ದಾರಿ ತಡೆಗೆ ಮುಂದಾದ ಹಿನ್ನಲೆಯಲ್ಲಿ ಅವರನ್ನು ಪೋಲಿಸರು ವಶಕ್ಕೆ ಪಡೆದಿದ್ದರು.


ಏನಿದು ಮಾವು ಬೆಂಬಲ ಬೆಲೆ?
ಮಾರುಕಟ್ಟೆಯಲ್ಲಿ ಮಾವು ಬೆಲೆ ಕುಸಿತ ಹಾಗೂ ಹವಾಮಾನ ವೈಪರೀತ್ಯದಿಂದಾಗಿ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಸರ್ಕಾರದ ಆರ್ಥಿಕ ನೆರವು ಮತ್ತು ಬೆಂಬಲ ಬೆಲೆ ಸರಿಯಾಗಿ ಸಿಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ ಹಿನ್ನಲೆಯಲ್ಲಿ ಕರ್ನಾಟಕ ಸರ್ಕಾರಕ್ಕೆ ಮಾರ್ಗಸೂಚಿ ಹೊರಡಿಸಿದ ಕೇಂದ್ರ ಸರ್ಕಾರ ಕರ್ನಾಟಕದ ಮಾವು ಬೆಳೆಗಾರರ ಹಿತರಕ್ಷಣೆ ಅಡಿಯಲ್ಲಿ ಮಾರುಕಟ್ಟೆ ಮಧ್ಯಸ್ಥಿಕೆ ಯೋಜನೆ (MIS)ಯಡಿ ಬೆಲೆ ಕೊರತೆ ಪಾವತಿ (PDP) ಅನುಷ್ಠಾನಕ್ಕೆ ಕ್ರಮ ಕೈಗೊಂಡಿತ್ತು MIS ಮಾರ್ಗಸೂಚಿಯಂತೆ 2026-27ರ ಮಾರುಕಟ್ಟೆ ಹಂಗಾಮಿನಲ್ಲಿ ಕರ್ನಾಟಕದಲ್ಲಿ ತೋತಾಪುರಿ ಮಾವಿಗೆ ಬೆಲೆ ಕೊರತೆ ಪಾವತಿಯನ್ನು ಜಾರಿಗೆ ತರಲು ನಿರ್ದೇಶಿಸಿದೆ. MIS ಅಡಿಯಲ್ಲಿ ಕೇಂದ್ರ ಸರ್ಕಾರ ನೆರವು ಘೋಷಣೆ ಮಾಡಿತ್ತು ರಾಜ್ಯ ಸರ್ಕಾರಕ್ಕೆ ಮಾರ್ಗಸೂಚಿ ಹೊರಡಿಸಿದೆ.ಅದರಂತೆ ಮಾವು ಬೆಳೆಗಾರರು ಜಿಲ್ಲಾದ್ಯಾಂತ ನೊಂದಣೆ ಮಾಡಿಸಿಕೊಳ್ಳುತ್ತಿದ್ದರು ಆದರೆ ಸರ್ಕಾರ ತಕ್ಷಣ ನೊಂದಣಿ ನಿಲ್ಲಿಸಿ ಆದೇಶಿಸಿದ ಹಿನ್ನಲೆಯಲ್ಲಿ ಮಾವು ರೈತರ ಆಕ್ರೋಶ ಭುಗಿಲೆದಿದ್ದೆ.




