ಶ್ರೀನಿವಾಸಪುರ:ಬಂಗಾರಪೇಟೆ ಮಾರ್ಗವಾಗಿ ಬೆಂಗಳೂರು ತಲುಪುತ್ತಿದ್ದ ಚನೈ-ಮೈಸೂರು ಮಾರ್ಗದ ಸುಮಾರು ಹದಿನೈದು ರೈಲುಗಳು ಒಂದೇ ರಾತ್ರಿ ಕೋಲಾರ-ಶ್ರೀನಿವಾಸಪುರ-ಚಿಂತಾಮಣಿ-ಚಿಕ್ಕಬಳ್ಳಾಪುರ ಮಾರ್ಗವಾಗಿ ಬೆಂಗಳೂರು ತಲುಪಿವೆ.
ಕೃಷ್ಣರಾಜಪುರಂ ಮತ್ತು ವೈಟ್ಫೀಲ್ಡ್ ಪ್ಯಾನಲ್ ಕ್ಯಾಬಿನ್ ನಡುವಿನ ರೈಲ್ವೆ ಮೂಲಸೌಕರ್ಯ ನವೀಕರಣಗಳಿಂದಾಗಿ, ನೈಋತ್ಯ ರೈಲ್ವೆ ಜೂನ್ 6 ಮತ್ತು ಜೂನ್ 8 ರ ನಡುವೆ ಹಲವಾರು ರೈಲು ಸೇವೆಗಳ ಕಾರ್ಯಾಚರಣೆಯನ್ನು ಪರಿಷ್ಕರಿಸಿದ ಪರಿಣಾಮ ರೈಲು ಸೇವೆಗಳ ಮಾರ್ಗ ಬದಲಾವಣೆ ಮಾಡಿದ್ದರಿಂದ ಹಿನ್ನಲೆಯಲ್ಲಿ ಕೆಲವು ರೈಲುಗಳನ್ನು ಅವುಗಳಲ್ಲಿ ಪ್ರಮುಖವಾದ ಚನೈ-ಮೈಸೂರು ಶತಾಬ್ದಿ ಎಕ್ಸಪ್ರೆಸ್, ವಂದೇಭಾರತ್, ಪುದುಚೆರಿ-ದಾದರ್ ಚಾಲುಕ್ಯ ಎಕ್ಸಪ್ರೆಸ್, ಧಾನಪುರ,ತಿರುಪತಿ-ಮೈಸೂರು, ಕನ್ಯಾಕುಮಾರಿ ಎಕ್ಸ್ಪ್ರೆಸ್, ತಿರುಪತಿ ಎಕ್ಸ್ಪ್ರೆಸ್, ವಂದೇ ಭಾರತ್, ಚೆನ್ನೈ-ಬೆಂಗಳೂರು ರೈಲುಗಳು, ಹುಬ್ಬಳ್ಳಿ ಎಕ್ಸ್ಪ್ರೆಸ್ ಮತ್ತು ಎರ್ನಾಕುಲಂ-ಬೆಂಗಳೂರು ರೈಲುಗಳಂತಹ ಸೇವೆಗಳ ರೈಲುಗಳನ್ನು ಬಂಗಾರಪೇಟೆಯಿಂದ ಕೋಲಾರ ಶ್ರೀನಿವಾಸಪುರ ಚಿಂತಾಮಣಿ ಚಿಕ್ಕಬಳ್ಳಾಪುರ ಮಾರ್ಗವಾಗಿ ಬೆಂಗಳೂರು ತಲುಪಿವೆ ಎನ್ನಲಾಗಿದ್ದು ಇಡಿ ರಾತ್ರಿ ವೇಗದ ರೈಲುಗಳ ಒಡಾಟ ಅದರ ಕೂಗು ರೈಲ್ವೆ ನೀಲ್ದಾಣದ ಸುಮುತ್ತಲಿನ ಜನರನ್ನು ಒಂದಡೆ ಭಯಬ್ರಾಂತರನ್ನಾಗಿಸಿದೆ. ಮತ್ತೊಂದಡೆ ಆಶ್ಚರ್ಯ ಚಕಿತರನ್ನಾಗಿಸಿದೆ.
Trending
- ಶ್ರೀನಿವಾಸಪುರ:ಯಲ್ದೂರು ಇತಿಹಾಸದ ಕುಂಟೆಗೆ ಚರಂಡಿ ನೀರು: ಗಬ್ಬು ನಾರುತ್ತಿದೆ ಊರು!
- ಶ್ರೀನಿವಾಸಪುರ: ಸರ್ಕಾರಿ ಕಚೇರಿಗಳ ಆವರಣವೇ ಕಾರ್ಗತ್ತಲು: ಸರ್ಕಾರಿ ವ್ಯವಸ್ಥೆ ಇದೇನಾ?
- ನಾಯಿ ಕಾಟ ತಡೆಯಿರಿ:ಕಮಿಷನರ್ ಟೇಬಲ್ ಮೇಲೆ ನಾಯಿ ಬಿಟ್ಟು ಆಕ್ರೋಶ!
- ಶ್ರೀನಿವಾಸಪುರ:ಶಬರಿಮಲೆ ಅಲಂಕಾರದಲ್ಲಿ ಗಣೇಶೋತ್ಸವ:18 ಮೆಟ್ಟಿಲುಗಳೇ ಆಕರ್ಷಣೆ!
- ಬಿಜೆಪಿ ಶಾಸಕನ ಹೊತ್ತು ಮೆರೆದ ಪೊಲೀಸರು; ವಿಡಿಯೋ ವೈರಲ್,ಸಿಬ್ಬಂದಿ ವರ್ಗಾವಣೆ!
- ಅದ್ದೂರಿಯಾಗಿ ನಡೆದ ಕುರುಡುಮಲೆ ಶ್ರೀ ವಿನಾಯಕನ ಬ್ರಹ್ಮೋತ್ಸವ!
- ಯೂನಿವರ್ಸಿಟಿ ಎಡವಟ್ಟು: ಬಿಕಾಂ ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳು ನಾಪತ್ತೆ!
- ಶ್ರೀನಿವಾಸಪುರ ಸೇರಿ 108 ಪಟ್ಟಣಗಳಿಗೆ ರಿಂಗ್ Road ಭಾಗ್ಯ,ಸಂಪುಟ ಒಪ್ಪಿಗೆ.
Sunday, September 20



