ಶ್ರೀನಿವಾಸಪುರ:ಶ್ರೀನಿವಾಸಪುರ ಪಟ್ಟಣದ ಪಾಲಿಟೆಕ್ನಿಕ್ ಹಿಂಭಾಗದ ಒಂಟಿ ಮನೆಯಲ್ಲಿ ಈಗ್ಗೆ ಇಪ್ಪತ್ತು ದಿನಗಳ ಹಿಂದೆ ಒಂಟಿಯಾಗಿದ್ದ ಮಹಿಳೆಯನ್ನು ಬೆದರಿಸಿ ಮನೆಯಲ್ಲಿದ್ದ ಹಾಗು ಆಕೆ ಧರಿಸಿದ್ದ ಚಿನ್ನದ ಆಭರಣಗಳು, ಮೊಬೈಲ್ ಫೋನ್ ದೋಚಿಕೊಂಡು ಮನೆಯ ಮುಂದೆ ನಿಲ್ಲಿಸಿದ್ದ ಮಾರುತಿ ಓಮ್ನಿ ಕಾರು ಸಮೇತ ಖದೀಮರು ಪರಾರಿಯಾಗಿದ್ದರು.
ಈ ಬಗ್ಗೆ ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು. ದೂರು ದಾಖಲಿಸಿಕೊಂಡ ಶ್ರೀನಿವಾಸಪುರ ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಆರೋಪಿಗಳನ್ನು ಬಂಧಿಸಿ ಕಳುವಾದ ಆಭರಣ, ಮೊಬೈಲ್ ಫೋನ್ ಹಾಗೂ ವಾಹನವನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಕನಿಕಾ ಸಿಕ್ರಿವಾಲ್, ಹಾಗು ಹೆಚ್ಚುವರಿ ಪೊಲೀಸ್ ಅಧೀಕ್ಷಕ ರವಿಶಂಕರ್ ಮಾರ್ಗದರ್ಶನದಲ್ಲಿ ಶ್ರೀನಿವಾಸಪುರ ವೃತ್ತ ನಿರೀಕ್ಷಕ ಶಂಕರಾಚಾರ್ಯ ಕಾರ್ಯಚರಣೆಯಲ್ಲಿ ಸಿಸಿಟಿವಿ ದೃಶ್ಯಾವಳಿಗಳ ಸಹಕಾರ ಪಡೆದು ಆರೋಪಿಗಳ ಸುಳಿವು ಪತ್ತೆಹಚ್ಚಿ ಬಂಧಿಸಲಾಗಿದ್ದು ಬಂಧಿತರಿಂದ ಕಳುವಾಗಿದ್ದ ಚಿನ್ನಾಭರಣ,ಮೊಬೈಲ್ ಫೋನ್ ಹಾಗೂ ಸುಮಾರು ಎರಡು ಲಕ್ಷ ರೂ. ಮೌಲ್ಯದ ಓಮ್ನಿ ಕಾರನ್ನು ವಶಪಡಿಸಿಕೊಳ್ಳಲಾಗಿದೆ.
ಆರೋಪಿಗಳು ಕಳವು ಮಾಡಿದ್ದ ಆಭರಣಗಳನ್ನು ಕೋಲಾರದ ಕುಂಬಾರಪೇಟೆಯಲ್ಲಿರುವ ಚಿನ್ನಾಭರಣ ವ್ಯಾಪಾರಿಗೆ ಮಾರಾಟ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. ವ್ಯಾಪಾರಿಯಿಂದ ಆಭರಣಗಳನ್ನು ಪಂಚರ ಸಮಕ್ಷಮದಲ್ಲಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಬಂಧಿತ ಆರೋಪಿಗಳ ಪೈಕಿ ಒಬ್ಬ ಶ್ರೀನಿವಾಸಪುರ ಪಟ್ಟಣದ ಇಂದಿರಾನಗರದ ನಿವಾಸಿಯಾಗಿದ್ದು ಮತ್ತೊಬ್ಬ ಮುಳಬಾಗಿಲು ನಿವಾಸಿ, ಇನ್ನೊಬ್ಬ ಬೆಂಗಳೂರು ಗ್ರಾಮಾಂತರ ಹೋಸಕೋಟೆಯವನಾಗಿದ್ದು ಮೂವರಲ್ಲಿ ಒರ್ವ ಅಪ್ರಪ್ತ ಬಾಲಾಪರಾಧಿಯಾದ ಹಿನ್ನಲೆಯಲ್ಲಿ ಅವನನ್ನು ಕೆಜಿಎಫ್ ರಿಮ್ಯಾಂಡ್ ಹೋಂಗೆ ಸೇರಿಸಿದ್ದು ಉಳಿದ ಇಬ್ಬರನ್ನು ಜೈಲಿಗೆ ಕಳಿಸಿದ್ದಾರೆ.ಬಂದಿತರ ವಿರುದ್ಧ ಈಗಾಗಲೇ ಹಲವು ಕಳ್ಳತನ ಪ್ರಕರಣಗಳು ದಾಖಲಾಗಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ,ಆಂಧ್ರದ ಪುಂಗನೂರು ಭಾಗದ ಪೋಲಿಸ್ ಠಾಣೆಗಳಲ್ಲಿ ಇವರ ವಿರುದ್ಧ ಅಪರಾಧ ಪ್ರಕರಣಗಳಿರುವುದಾಗಿ ಮಾಹಿತಿ.
ಅಪರಾಧಿಗಳನ್ನು ಪತ್ತೆ ಹಚ್ಚುವಲ್ಲಿ ನಿರಂತರವಾಗಿ ತನಿಖೆ ನಡೆಸಿ ಪ್ರಕರಣವನ್ನು ಭೇದಿಸಿದ ಪೊಲೀಸ್ ಅಧಿಕಾರಿಗಳ ಮತ್ತು ಸಿಬ್ಬಂದಿ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಪ್ರಶಂಸೆ ವ್ಯಕ್ತವಾಗುತ್ತಿದೆ
Trending
- ಶ್ರೀನಿವಾಸಪುರ:ಹಣ ಒಡವೆ ದೋಚಿ,ಕಾರು ಸಮೇತ ಪರಾರಿಯಾಗಿದ್ದ ಖದೀಮರ ಬಂಧನ!
- ಬೆಂಗಳೂರು:ಹೆಬ್ಬಾಳ-ಸರ್ಜಾಪುರ Red Line ಮೆಟ್ರೋ ಮಾರ್ಗ!
- ಭೈರನದೊಡ್ಡಿ:ನಾಮಧಾರಿ ನಗರ್ತ ಸಮುದಾಯ ಸಮಾವೇಶ
- ಶ್ರೀಶೈಲ ಪುಣ್ಯಕ್ಷೇತ್ರ ಇಷ್ಟಕಾಮೇಶ್ವರಿ ಇಷ್ಟಾರ್ಥ ನೆರವೇರಿಸುವ ದೇವರು!
- ಟನ್ ಮಾವಿಗೆ ಹತ್ತು ಸಾವಿರ ನೀಡಲು ನಿಲಟೂರು ಚಿನ್ನಪ್ಪರೆಡ್ಡಿ ಒತ್ತಾಯ!
- ಮುಖ್ಯಮಂತ್ರಿಗೆ ಅಭಿನಂದಿಸಿ,ಮಾವು ಬೆಳೆಗೆ ಬೆಂಬಲ ಬೆಲೆ ಕೋರಿದ ವೆಂಕಟಶಿವಾರೆಡ್ಡಿ.
- ದ್ವೇಷ ಬೇಡ,ಎಲ್ಲರಿಗೂ ಬಾಗಿಲು ತೆರೆದಿದೆ.ಜೆಡಿಎಸ್ ಕಾರ್ಯಕರ್ತರಿಗೆ CM ಡಿಕೆಶಿ ಆಹ್ವಾನ!
- ಕರ್ನಾಟಕದಿಂದ ರಾಜ್ಯಸಭೆಗೆ ಆಂಧ್ರದ ಶರ್ಮಿಳಾ ಹೆಸರು ಪರಿಗಣನೆಗೆ!
Monday, June 15



