ಭೈರನದೊಡ್ಡಿ(ಮಾಲೂರು):ನಾಮಧಾರಿ ನಗರ್ತ ಸಮುದಾಯ ರಾಜಕೀಯವಾಗಿ ಆರ್ಥಿಕವಾಗಿ ಸಾಮಾಜಿಕವಾಗಿ ಅಭಿವೃದ್ಧಿಯಾಗಿಲ್ಲ ಹಿಂದುಳಿದ ವರ್ಗ ಎಂಬುದಾಗಿ ಗುರುತಿಸುವಲ್ಲಿ ಸರ್ಕಾರ ಎಡವುತ್ತಿದೆ ಎಂದು ರಾಜ್ಯ ನಗರ್ತ ಸಂಘದ ಅಧ್ಯಕ್ಷ ಸಾಯಿರಾಮ್ ಪ್ರಸಾದ್ ಹೇಳಿದರು. ಅವರು ಮಾಲೂರಿನ ಭೈರನದೊಡ್ಡಿಯ ನಗರೇಶ್ವರ ಸ್ವಾಮಿ ದೇವಾಲಯದ ಆವರಣದಲ್ಲಿ ಆಯೋಜಿಸಿದ್ದ ನಾಮಧಾರಿ ನಗರ್ತ ಸಮುದಾಯದ ಸಮಾವೇಶ ಉದ್ಘಾಟಿಸಿ ಮಾತನಾಡಿದರು.
ಇವತ್ತಿನ ವ್ಯವಸ್ಥೆಯಲ್ಲಿ ರಾಜಕೀಯ ಇಚ್ಛಾಶಕ್ತಿಯ ಕೊರತೆಯಿಂದ ಸಾಮಾಜಿಕ ನ್ಯಾಯ ಪಡೆಯಲು ನಮ್ಮ ಸಮುದಾಯಕ್ಕೆ ಹಿನ್ನಡೆಯಾಗಿದೆ. ಇದರಿಂದಾಗಿ ಕೆಲವು ತಾಲೂಕುಗಳಲ್ಲಿ ಸಮುದಾಯದ ಬಂಧುಗಳು ಸಾಮಾಜಿಕ ಹಾಗು ಶೈಕ್ಷಣಿಕ ತಾರತಮ್ಯಕ್ಕೆ ಒಳಗಾಗಿದ್ದಾರೆ ಬಗ್ಗೆ ಸರ್ಕಾರ ಗಮನ ಹರಿಸಬೇಕಿದೆ ಎಂದರು.
ಕೋಲಾರ ಜಿಲ್ಲಾ ನಾಮಧಾರಿ ಫೌಂಡೇಶನ್ ಕಾರ್ಯಧ್ಯಕ್ಷ ಹಾಗು ನಿವೃತ್ತ ಪೌರಾಯುಕ್ತ ರಾಮಪ್ರಕಾಶ್ ಮಾತನಾಡಿ ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ಪ್ರಾತಿನಿಧ್ಯತೆ ಪಡೆಯಲು ನಮ್ಮ ಸಮುದಾಯಕ್ಕೆ ಸಾಧ್ಯವಾಗಿಲ್ಲ ಇದಕ್ಕಾಗಿ ಜನಾಂಗದ ಭವಿಷ್ಯದ ದೃಷ್ಠಿಯಿಂದ ತಜ್ಞರ ಸಲಹೆ ಸೂಚನೆ ಪಡೆದು ಮುಂದಿನ ಹೋರಾಟ ರೂಪಿಸುವ ಅಗತ್ಯತೆ ಇದೆ ಎಂದರು.
ರಾಜ್ಯದಲ್ಲಿನ ನಾಮಧಾರಿ ನಗರ್ತ ಸಮಾಜದ ಎಲ್ಲಾ ಸಂಘಟನೆಗಳು ಭವಿಷ್ಯದ ದೃಷ್ಟಿಯಲ್ಲಿ ಒಗ್ಗೂಡಿ ಸಾಗಬೇಕಾದ ಅನಿವಾರ್ಯತೆ ಇದೆ ಇದಕ್ಕಾಗಿ ನಮ್ಮ-ನಮ್ಮಲ್ಲಿ ಇರುವಂತ ಮುನಿಸು ಮರೆತು ಒಂದಾಗಲು ಗ್ರಾಮೀಣ ಪ್ರದೇಶದ ಸಮುಧಾಯದ ಬಂಧುಗಳು ಒಂದೇ ಧ್ವನಿ ಗುರಿಯೊಂದಿಗೆ ಮುಂದೆ ಸಾಗಲು ಒಮ್ಮತದ ನಿರ್ಧಾರದಲ್ಲಿ ಪರಸ್ಪರ ಸಹಕಾರ ನೀಡುವಂತೆ ಯುವ ಮುಖಂಡ ವಕೀಲ ವೆಂಕಟೇಶ್ ಹೇಳಿದರು.


ಸಮಾವೇಶದಲ್ಲಿ ರಾಜ್ಯ ನಗರ್ತ ಸಂಘದ ಕಾರ್ಯದರ್ಶಿ ಶಾಮಣ್ಣ,ಕೋಲಾರ ಜಿಲ್ಲಾ ನಾಮಧಾರಿ ಫೌಂಡೇಶನ್ ಅಧ್ಯಕ್ಷ ಅನಂದಪ್ಪ, ಶ್ರೀನಿವಾಸ್, ನಾಮಧಾರಿ ನಗರ್ತ ಸಮುದಾಯದ ಮುಖಂಡರಾದ ಭೈರನದೊಡ್ಡಿಬಾಲರಾಜ್ ಶೆಟ್ಟಿ ,ಗೌತಮ್,ನಾಗನಾಯಕನಹಳ್ಳಿ ಮಂಜುನಾಥಶೆಟ್ಟಿ,ವಕೀಲ ಮಧುಸೂದನ್, ಉದ್ಯಮಿ ಲಕ್ಷ್ಮೀನಾರಯಣ್,ಶಿಕ್ಷಕ ಅರುಣ್ ಕುಮಾರ್, ಪಾಳ್ಯಶ್ರೀನಿವಾಸಶೆಟ್ಟಿ,ರಾಮಪುರ ಸುರೇಶ್,ಅಶೋಕ್ ಬಾಬು,ಸೋಮುಸುಂದರ್ ಮುಂತಾದವರು ಇದ್ದರು.ಕೋಲಾರ ಹಾಗು ಬೆಂಗಳೂರು ಗ್ರಾಮಾಂತರ ಭಾಗದ ಪ್ರತಿನಿಧಿಗಳು ಭಾಗವಹಿಸಿದ್ದರು



