ಶ್ರೀನಿವಾಸಪುರ:ಶ್ರೀನಿವಾಸಪುರದ ಜೀವನಾಡಿ ಮಾವುಬೆಳೆ ಬುಧವಾರ ಸಂಜೆ ಸುರಿದ ಆರ್ಭಟದ ಗಾಳಿ ಸಹಿತ ಆಲಿಕಲ್ಲು ಮಳೆಗೆ ನೆಲದ ಪಾಲಾಗಿದೆ. ಮಾವು ಬೆಳೆ ಇಲ್ಲಿನ ರೈತರ ಬದುಕಿನ ಬೆಳೆಯಾಗಿದೆ.
ತಾಲೂಕಿನ ಕಸಬಾ ಹೋಬಳಿ ಆಲವಾಟ, ದೊಡಮಲದೊಡ್ಡಿ, ಆರಿಕುಂಟೆ, ಚಕ್ಕಾರ್ಲಾಪಲ್ಲಿ ಬಂಡಪಲ್ಲಿ ತಾಡಿಗೊಳ್ ಪಂಚಾಯಿತಿಯ ಕೆಲ ಗ್ರಾಮಗಳು ನೆಲವಂಕಿ ಹೋಬಳಿಯ ಲಕ್ಷ್ಮೀಪುರ ಸೇರಿದಂತೆ ಹಲವು ಗ್ರಾಮಗಳ ವ್ಯಾಪ್ತಿಯ ಮಾವಿನ ಬೆಳೆ ಇಂದು ಸುರಿದ ಗಾಳಿ ಸಹಿತ ಮಳೆಯಿಂದ ಧರೆಗುರಳಿದೆ.
ತಾಪಮಾನ ಹೆಚ್ಚಳದಿಂದ ಮರದಲ್ಲೇ ಬಾಡುತ್ತ ನಿಧಾನಗತಿಯಲ್ಲಿ ಬೆಳವಣಿಗೆ ಆಗುತ್ತಿದ್ದ ಮಾವಿನಬೆಳೆ ಬಿರುಗಾಳಿ ಮಳೆಗೆ ನೆಲಕ್ಕೆ ಉದುರಿ ತೋಟದ ತುಂಬೆಲ್ಲಾ ಹರಡಿದೆ..ಆಲಿಕಲ್ಲು ಬಿದ್ದಿದ್ದರಿಂದ ಗಿಡದಲ್ಲಿ ಉಳಿಯುವ ಕಾಯಿಗಳೂ ಗಾಯಗೊಂಡು ಕಪ್ಪು ಕಲೆಗಳಿಂದ ಹಾಳಾಗುತ್ತವೆ. ರೈತರು ಬಂಡವಾಳ ಕಳೆದುಕೊಂಡು ತಲೆ ಮೇಲೆ ಕೈ ಹೊತ್ತು ಕುಳಿತುಕೊಳ್ಳುವಂತಾಗಿದೆ.
ಸರ್ಕಾರ ಕೂಡಲೇ ವೈಜ್ಞಾನಿಕ ಸಮೀಕ್ಷೆ ನಡೆಸಿ ಸೂಕ್ತ ಪರಿಹಾರ ನೀಡುವ ಮೂಲಕ ಮಾವು ಬೆಳೆಗಾರರನ್ನು ರಕ್ಷಿಸುವಂತೆ ರೈತರು ಮನವಿ ಮಾಡಿದ್ದಾರೆ.
Trending
- ಶ್ರೀನಿವಾಸಪುರ:ಪ್ರಥಮ ವರ್ಷದ ನರಸಿಂಹಸ್ವಾಮಿ ರಥೋತ್ಸವ
- ಶ್ರೀನಿವಾಸಪುರ:ಆಲಿಕಲ್ಲು ಸಹಿತ ಬಿರುಗಾಳಿ ಮಳೆಗೆ ಮಾವು ನೆಲದ ಪಾಲು!
- ಕೊನೆಯುಸಿರು ಇರೊ ತನಕ ನಿಮ್ಮೊಂದಿಗೆ ಇರುತ್ತೇನೆ ಮಾಜಿ ಸ್ಪೀಕರ್ ಭಾವುಕ ನುಡಿ!
- V.KOTA ಹಾಡುಹಗಲೆ ಪತ್ರಕರ್ತನ ಭೀಕರ ಹತ್ಯೆ!
- ಕೇರಳ ದಾಖಲೆ ತಾಪಮಾನ ಸ್ವಯಂ ಲಾಕ್ಡೌನ್’ಗೆ ಒಳಗಾಗುವಂತೆ ಜನರಿಗೆ ಕರೆ
- ಶ್ರೀನಿವಾಸಪುರ:ವಾಸವಿ ಜಯಂತಿಯಲ್ಲಿ ಪಾಲ್ಗೊಂಡ ದಳಪತಿಗಳು!
- ಕೋಲಾರ:ಸೇವಾ ನ್ಯೂನತೆ ಪರಿಹಾರ ನೀಡಲು ಗ್ರಾಹಕರ ಆಯೋಗ ಆದೇಶ!
- ಶ್ರೀನಿವಾಸಪುರ:ಸೂರ್ಯನ ಪ್ರತಾಪಕ್ಕೆ ತತ್ತರಿಸುತ್ತಿರುವ ಜನ!
Thursday, April 30



