ನ್ಯೂಜ್ ಡೆಸ್ಕ್:ಕೋಲಾರ ಜಿಲ್ಲೆಯ ಮುಳಬಾಗಿಲು ಗಡಿಯಂಚಿನ ಆಂಧ್ರದ ಚಿತ್ತೂರು ಜಿಲ್ಲೆಯ ವಿ,ಕೋಟ ಪಟ್ಟಣದಲ್ಲಿ ಬೆಳ್ಳಂ ಬೆಳಿಗ್ಗೆ ಪತ್ರಕರ್ತನನ್ನು ಭೀಕರವಾಗಿ ಹತ್ಯೆ ಮಾಡಲಾಗಿದೆ.ಹತ್ಯೆಗೊಳಗಾದ ವ್ಯಕ್ತಿಯನ್ನು ವಿ.ಕೋಟ ಪಟ್ಟಣದ ಆಂಧ್ರ ಜ್ಯೋತಿ ಪತ್ರಿಕೆಯ ವರದಿಗಾರ ಹಿರಿಯ ಪತ್ರಕರ್ತ ಜಗನ್ಮೋಹನ್ ರೆಡ್ಡಿ(51) ಎಂದು ಗುರುತಿಸಲಾಗಿದೆ.
ಹತ್ಯೆಗೊಳಗಾದ ಜಗನ್ಮೋಹನ್ ರೆಡ್ಡಿ ಮಂಗಳವಾರ ಬೆಳಿಗ್ಗೆ, ಎಂದಿನಂತೆ ವಾಕಿಂಗ್ ಮಾಡುತ್ತಿರುವಾಗ ದುಷ್ಕರ್ಮಿಗಳು ಅವರ ಮೇಲೆ ಹಲ್ಲೆ ನಡೆಸಿ, ಭೀಕರವಾಗಿ ಕೊಚ್ಚಿ ಕೊಂದಿದ್ದು ಅವರೊಂದಿಗೆ ಇದ್ದ ಮತ್ತೊಬ್ಬ ಪತ್ರಕರ್ತ ಮಣಿ ಅವರ ಮೇಲೂ ಹಲ್ಲೆ ನಡೆಸಲಾಗಿದ್ದು ಅವರು ತಪ್ಪಿಸಿಕೊಂಡಿದ್ದಾರೆ ದುಷ್ಕರ್ಮಿಗಳ ಗುಂಪು ಹರಿತವಾದ ಆಯುದಗಳಿಂದ ಮನಬಂದಂತೆ ಹಲ್ಲೆ ನಡೆಸಿದ್ದರಿಂದ ಜಗನ್ಮೋಹನ್ ರೆಡ್ಡಿ ಸ್ಥಳದಲ್ಲಿ ರಕ್ತದ ಮಡುವಿನಲ್ಲಿ ಕುಸಿದು ಬಿದ್ದು ಪ್ರಾಣ ಬಿಟ್ಟಿರುವುದಾಗಿ ಹೇಳಲಾಗಿದೆ. ವಿಷಯ ತಿಳಿದ ಸ್ಥಳೀಯ ಪೊಲೀಸರು ಸ್ಥಳಕ್ಕೆ ಆಗಮಿಸಿ, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಪಲಮನೇರಿಗೆ ಸ್ಥಳಾಂತರಿಸಿದ್ದಾರೆ.
ಹತ್ಯೆ ಘಟನೆ ವಿ.ಕೋಟ ಪಟ್ಟಣದಲ್ಲಿ ಸಂಚಲನ ಮೂಡಿಸಿದೆ. ಸೌಮ್ಯ ಸ್ವಭಾವಕ್ಕೆ ಹೆಸರಾಗಿದ್ದ ಜಗನ್ಮೋಹನ್ ರೆಡ್ಡಿ ಎಲ್ಲರೊಂದಿಗೆ ಆಪ್ಯಾಯಿತೆಯಿಂದ ಬೆರೆಯುತ್ತಿದ್ದರು ಇವರಿಗೆ ಪತ್ನಿ, ಒಬ್ಬ ಪುತ್ರಿ ಮತ್ತು ಒಬ್ಬ ಪುತ್ರ ಇರುವುದಾಗಿ ಹೇಳುತ್ತಾರೆ.
ಸ್ಥಳೀಯ ಜನರ ಪ್ರತಿಭಟನೆ
ಹತ್ಯೆ ಘಟನೆ ತಿಳಿಯುತ್ತಿದ್ದಂತೆ ವಿ.ಕೋಟೆ ಪಟ್ಟಣದ ಅಂಬೇಡ್ಕರ್ ವೃತ್ತಕ್ಕೆ ಜನತೆ ಗುಂಪು ಗುಂಪಾಗಿ ಆಗಮಿಸಿ ಹಲ್ಲೆಕೋರರನ್ನು ಬಂಧಿಸಿ ಕಠಿಣವಾಗಿ ಶಿಕ್ಷೆ ವಿಧಿಸಬೇಕೆಂದು ಸಾಧ್ಯವಾದರೆ ಹಲ್ಲೆಕೊರರನ್ನು ಎನ್ ಕೌಂಟರ್ ಮಾಡುವಂತೆ ಆಕ್ರೋಶಭರಿತರಾಗಿ ಧರಣಿ ನಡೆಸುತ್ತಿದ್ದು,ಸ್ಥಳೀಯ ಪತ್ರಕರ್ತ ಸಂಘಗಳ ಪ್ರತಿನಿಧಿಗಳು ಆರೋಪಿಗಳನ್ನು ತಕ್ಷಣ ಬಂಧಿಸಿ ಎನ್ಕೌಂಟರ್ ನಡೆಸಬೇಕೆಂದು ಒತ್ತಾಯಿಸಿದರು. ವಿ.ಕೋಟ ಪಟ್ಟಣದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.ಕೊಲೆ ಮಾಡಲು ಇಬ್ಬರು ಹಂತಕರು ದ್ವಿಚಕ್ರವಾಹದಲ್ಲಿ ಆಗಮಿಸಿ ಹತ್ಯೆ ಮಾಡಿದ್ದು ಎನ್ನಲಾಗಿದ್ದು ಹಂತಕರಲ್ಲಿ ಒರ್ವ ತಮೀಮ್ ಎಂದು ಹೇಳುತ್ತಾರೆ ಇತ ಮೂಲತಃ ವಿ.ಕೋಟೆಯವನಾಗಿದ್ದು ಸದ್ಯ ಕರ್ನಾಟಕದಲ್ಲಿ ವಾಸಿಸುತ್ತಿದ್ದನಂತೆ, ಕೊಲೆಗೆ ಕಾರಣಗಳು ಏನು ಎಂಬುದು ಪೊಲೀಸ್ ತನಿಖೆಯಲ್ಲಿ ಹೊರಬರಬೇಕಿದೆ ಎನ್ನುತ್ತಾರೆ ಅಧಿಕಾರಿಗಳು.
Trending
- ಟನ್ ಮಾವಿಗೆ ಹತ್ತು ಸಾವಿರ ನೀಡಲು ನಿಲಟೂರು ಚಿನ್ನಪ್ಪರೆಡ್ಡಿ ಒತ್ತಾಯ!
- ಮುಖ್ಯಮಂತ್ರಿಗೆ ಅಭಿನಂದಿಸಿ,ಮಾವು ಬೆಳೆಗೆ ಬೆಂಬಲ ಬೆಲೆ ಕೋರಿದ ವೆಂಕಟಶಿವಾರೆಡ್ಡಿ.
- ದ್ವೇಷ ಬೇಡ,ಎಲ್ಲರಿಗೂ ಬಾಗಿಲು ತೆರೆದಿದೆ.ಜೆಡಿಎಸ್ ಕಾರ್ಯಕರ್ತರಿಗೆ CM ಡಿಕೆಶಿ ಆಹ್ವಾನ!
- ಕರ್ನಾಟಕದಿಂದ ರಾಜ್ಯಸಭೆಗೆ ಆಂಧ್ರದ ಶರ್ಮಿಳಾ ಹೆಸರು ಪರಿಗಣನೆಗೆ!
- ಶ್ರೀನಿವಾಸಪುರ:ಹೈವೇ ರಸ್ತೆಯಲ್ಲಿ ಬಾರಿ ವಾಹನಗಳ ಅಪಾಯಕಾರಿ ಪಾರ್ಕಿಂಗ್!
- ಶ್ರೀನಿವಾಸಪುರ:ಟಾಟಾ ಇಂಡಿಕಾ ಕಾರು ಡಿಕ್ಕಿ ದ್ವಿಚಕ್ರ ವಾಹನ ಸವಾರರ ಸಾವು!
- social media ದಲ್ಲಿ ಫೇಮಸ್ ಆಯಿತು ಯುವಕನ ಗಹಗಹಿಸಿ ನಗು!
- ಮಹಾರಾಷ್ಟ್ರದಂತೆ ಕರ್ನಾಟಕದಲ್ಲೂ”ಬೈಕ್ ಟ್ಯಾಕ್ಸಿ”ವಿರುದ್ದ ಕ್ರಮ ಜರುಗಿಸಿ!
Saturday, June 13



