ನ್ಯೂಜ್ ಡೆಸ್ಕ್:ಕೆನಡಾ ದೇಶದಲ್ಲಿ ಕೆಲಸ ಮಾಡುತ್ತಿದ್ದ ನೆಲಮಂಗಲ ತಾಲ್ಲೂಕು, ತ್ಯಾಮಗೊಂಡ್ಲು ಪಟ್ಟಣದ ನಿವಾಸಿ ಚಂದನ್ ಕುಮಾರ್ (37) ಪ್ರಯಾಣಿಸುತ್ತಿದ್ದ ಕಾರಿನ ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಲಾಗಿದೆ. ಮೃತ ಚಂದನ್ ಕುಮಾರ್ ಕಳೆದ ಆರು ವರ್ಷಗಳಿಂದ ಕೆನಡಾದಲ್ಲಿ ನೆಲೆಸಿ, ಎಲ್ ಅಂಡ್ ಟಿ (L&T) ಕಂಪನಿಯಲ್ಲಿ ಉದ್ಯೋಗ ಮಾಡುತ್ತಿದ್ದರು ಎನ್ನಲಾಗಿದೆ. ಫೆಬ್ರವರಿ 8 ರಂದು ಚಂದನ್ ಕೆನಡಾದ ವುಡ್ಬೈನ್ ಮಾಲ್ ಬಳಿ ಕಾರಿನಲ್ಲಿ ತೆರಳುತ್ತಿದ್ದ ಸಂದರ್ಭದಲ್ಲಿ ಏಕಾಏಕಿ ದುಷ್ಕರ್ಮಿಗಳು ಗುಂಡಿನ ಸುರಿಮಳೆ ಸುರಿಸಿದ್ದಾರೆ ಈ ಸಂದರ್ಭದಲ್ಲಿ, ತೀವ್ರವಾಗಿ ಗಾಯಗೊಂಡಿದ್ದ ಚಂದನ್ ಅವರನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ ಅಲ್ಲಿ ಕೊನೆಯುಸಿರು ಎಳೆದಿದ್ದಾರೆ ಎಂದು ತಿಳಿದುಬಂದಿದೆ! ಏಕಾಏಕಿ ನಡೆದಿರುವ ಗುಂಡಿನ ದಾಳಿಗೆ ನಿಖರವಾದ ಕಾರಣ ಏನು ಎತ್ತ ಎಂದು ಸದ್ಯಕ್ಕೆ ತಿಳಿದು ಬಂದಿಲ್ಲ.
ಗುಂಡಿನ ದಾಳಿ ನೋಡಿದ ಸ್ಥಳೀಯರು ಹೇಳುವಂತೆ ಶೂಟೌಟ್ ನಡೆದ ಸಂದರ್ಭದಲ್ಲಿ ಅದನ್ನು ಕಣ್ಣಾರೆ ನೋಡಿದ ಸ್ಥಳೀಯರು ಗಾಬರಿಗೊಂಡಿದ್ದು, ಮಾಲ್ ಹೊರಗೆ ತಮ್ಮ ಕಾರಿನಲ್ಲಿ ಕುಳಿತು ಮೊಬೈಲ್ನಲ್ಲಿ ಮಾತನಾಡುತ್ತಿದ್ದ ಓರ್ವ ವ್ಯಕ್ತಿಗೆ 5-6 ಬಾರಿ ಗುಂಡು ಹಾರಿಸಿದ ಶಬ್ಧ ಕೇಳಿತ್ತಂತೆ ಭೀಕರ ಶೂಟೌಟ್ ವೇಳೆ ಕಾರಿನ ಕನ್ನಡಿಯ ಮೂಲಕ ನೋಡಿದಾಗ ವ್ಯಕ್ತಿಯೊಬ್ಬ ಗನ್ ಹಿಡಿದು ನಿಂತಿದ್ದೂ ಕಾಣಿಸಿತೆಂದು ಕೆನಡಾದ ಮಾಧ್ಯಮದ ಮುಂದೆ ಹೇಳಿಕೊಂಡಿರುವುದು ವರದಿಯಾಗಿದೆ.
ಚಂದನ್ ಕುಮಾರ್ ಸಾವಿನಿಂದ ತ್ಯಾಮಗೊಂಡ್ಲುವಿನಲ್ಲಿ ನೆಲೆಸಿರುವ ಆತನ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಚಂದನ್ ಕುಮಾರ್ ತಂದೆ ನಂದಕುಮಾರ್ ಅವರು ನಿವೃತ್ತ ಶಿಕ್ಷಕರಾಗಿದ್ದು, ಕುಟುಂಬದವರ ಜೊತೆ ತ್ಯಾಮಗೊಂಡ್ಲುವಿನಲ್ಲೇ ವಾಸಿಸುತ್ತಿದ್ದಾರೆ. ಕೆನಡಾದಲ್ಲಿ ಘಟನೆ ನಡೆದ ತಕ್ಷಣ ಅಲ್ಲಿನ ಪೊಲೀಸರು ಚಂದನ್ ಕುಮಾರ್ ಅವರ ತಂದೆಯನ್ನು ಸಂಪರ್ಕಿಸಿದ್ದರು. ಆದರೆ ಭಾಷೆಯ ವಿಷಯವಾಗಿ ಸಮಸ್ಯೆ ಉಂಟಾಗಿದ್ದು, ಭಾರತೀಯರೊಬ್ಬರ ಮೂಲಕ ಮೃತರ ತಂದೆ-ತಾಯಿಗೆ ವಿಷಯ ರವಾನಿಸಲಾಗಿತ್ತು ಎಂದು ಸಂಬಂಧಿಯೊಬ್ಬರು ತಿಳಿಸಿದ್ದಾರೆ.
ಚಂದನ್ ತನ್ನ ಕೆಲಸದ ಜೊತೆಗೆ ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಕುರಿತು ವಿದೇಶದಲ್ಲಿ ಸೇವೆ ಸಲ್ಲಿಸುತ್ತಿದ್ದರು ಎನ್ನುವ ಬಗ್ಗೆ ಪ್ರಸ್ತಾಪಿಸಲಾಗಿದೆ.
ಬದುಕು ಆರಿಸಿ ಕೆನಡಾಗೆ ಹೋದ ಭಾರತೀಯರಿಗೆ, ಅದರಲ್ಲಿ ವಿಶೇಷವಾಗಿ ಕನ್ನಡಿಗರಿಗೆ ತಮ್ಮ ಕೈಲಾದಷ್ಟು ಸಹಕಾರ ಸಹಾಯ ಮಾಡುತ್ತಿದ್ದ ಚಂದನ್. ಕನ್ನಡಿಗರಿಗಾಗಿ ಸಂಘಟನೆಗಳ ಮುಖಾಂತರ ಅಗತ್ಯ ಸೇವೆಗಳನ್ನೂ ಒದಗಿಸುತ್ತಿದ್ದರೆಂದು ಮೃತರ ಸಂಬಂಧಿಕರು ಹೇಳಿಕೊಂಡಿದ್ದಾರೆ.
Trending
- ಶ್ರೀನಿವಾಸಪುರ:ಕಸ ಹಾಕುವ ವಿಚಾರಕ್ಕೆ ಜಗಳ ಒಬ್ಬನ ಕೊಲೆ!
- ಶ್ರೀನಿವಾಸಪುರ:ವೇಶ್ಯಾವಾಟಿಕೆ ದಂಧೆ ಪೊಲೀಸ್ ದಾಳಿ, ಕಿಂಗ್ ಪಿನ್ ಮಹಿಳೆ ಬಂಧನ!
- ಶ್ರೀನಿವಾಸಪುರ:ವಾಹನ ಡಿಕ್ಕಿಯಾಗಿ ರಾತ್ರಿ ಗಸ್ತಿನಲ್ಲಿದ್ದ ಪೊಲೀಸ್ ಪೇದೆ ನಿಧನ!
- ಶ್ರೀನಿವಾಸಪುರ:ಕರ್ನಾಟಕ ಬ್ಯಾಂಕ್ ಉದ್ಯೋಗಿ ಅಪಘಾತದಲ್ಲಿ ಸಾವು!
- ಲಂಚ ಪಡೆಯುತ್ತಿದ್ದ ಬಿಜೆಪಿ ಶಾಸಕ ಲೋಕಾಯುಕ್ತ ಬಲೆಗೆ!
- ಯಾವ ಐಟಿ-ಬಿಟಿ ಗೂ ಕಡಿಮೆ ಇಲ್ಲ,Dairy Farm ಆದಾಯ ಲಕ್ಷಗಟ್ಟಲೆ!
- ಬೆಂಗಳೂರಿನಲ್ಲಿ ಕುಬೇರರು ವಾಸಿಸುವ“ಬಿಲಿಯನೇರ್ಸ್ ಸ್ಟ್ರೀಟ್”ಎಲ್ಲಿದೆ?
- ಶ್ರೀನಿವಾಸಪುರ:ನೌಕರರ ಸಂಘದ ಹಾಲಿ-ಮಾಜಿ ಅಧ್ಯಕ್ಷರ ನಡುವೆ ಬಿದಿ ಜಗಳ!
Saturday, March 7



