ಎಲ್ಲಾ ಪ್ರೇಮಿಗಳು ಮದುವೆಯಾಗಲು ಸಾಧ್ಯವಾಗುವುದಿಲ್ಲ ಹಲವಾರು ಕಾರಣಗಳಿಂದ, ಪ್ರೇಮ ಪ್ರೀತಿ ಮಧ್ಯದಲ್ಲಿ ನಿಂತುಹೊಗುತ್ತದೆ ಆದರೂ first love best love ಎಂದು ನೋವಿನಲ್ಲೂ ಭಗ್ನ ಪ್ರೇಮಿಗಳಾಗಿ ಬದುಕು ಸಾಗಿಸಲು ಮುಂದೆ ಸಾಗುತ್ತಾರೆ.ಇದೊಂದು ಅಂದ ಕಾಲತ್ತಿಲೈ ನಲವತ್ತು ವರ್ಷಗಳ ಹಿಂದಿನ love store. ಕುಟುಂಬದ ಹಿರಿಯರನ್ನು ಎದರು ಹಾಕಿಕೊಂಡು ಪ್ರೀತಿ ಗೆಲ್ಲಲು ಸಾಧ್ಯವಿಲ್ಲದ ಕಾಲದಲ್ಲಿ ಕದ್ದು ಮುಚ್ಚಿ ಪ್ರೀತಿ ಮಾಡುವಂತಹ ಕಾಲವದು ಇಂತಹ ಪ್ರೇಮ ಕಹಾನಿಗೆ ಈಗ 40 ವರ್ಷಗಳ ನಂತರ ಜೀವ ಬಂದಿದೆ.


ನ್ಯೂಜ್ ಡೆಸ್ಕ್:ಕೇರಳದ ವಿಂಟೇಜ್ ಪ್ರೇಮಕಥೆ ಬಗ್ಗೆ ಕೇಳಿದವರಿಗೆ ಹೌದ ಇದೂ ಸಾಧ್ಯನಾ ಎಂದು ಆಶ್ಚರ್ಯ ಪಡಬಹುದಾದ ಕಥೆಯಿದು. ಎಲ್ಲಾ ಪ್ರೇಮಿಗಳು ಮದುವೆಯಾಗಲು ಸಾಧ್ಯವಾಗದು ಜಾತಿ ಧರ್ಮ ಇನ್ನೊಂದು ಮತ್ತೊಂದು ಎಂದೆಲ್ಲ ಅಡ್ಡಿ ಆತಂಕಗಳು ಎದುರಾಗುತ್ತವೆ ಈವುಗಳನೆಲ್ಲಾ ಮೆಟ್ಟಿ ನಿಲ್ಲುವ ಇಂದಿನ ಪ್ರೇಮಿಗಳಷ್ಟು ಧೈರ್ಯವಂತರಲ್ಲ ಅಂದಿನ ಪ್ರೇಮಿಗಳು ಯೌವನದಲ್ಲಿ ಬೇರ್ಪಟ್ಟ ಪ್ರೇಮಿಗಳು ತಮ್ಮ ಮಕ್ಕಳ ಸಹಾಯ ಸಹಕಾರದಿಂದ 65 ನೇ ವಯಸ್ಸಿನಲ್ಲಿ ವಿವಾಹವಾಗಿದ್ದಾರೆ. ವಿಂಟೇಜ್ ಪ್ರೇಮಕಥೆಯ ಹಿರೋ ಕೇರಳದ ಮುಂಡಕ್ಕಲ್ನ ಜಯಪ್ರಕಾಶ್ ಮತ್ತು ಹೀರೋಯಿನ್ ರಶ್ಮಿ ಯುವಕರಾಗಿದ್ದಾಗ ಪರಸ್ಪರ ಪ್ರೀತಿಸುತ್ತಿದ್ದರು. ಇಬ್ಬರೂ ಒಬ್ಬರನ್ನೊಬ್ಬರು ಇಷ್ಟಪಟ್ಟಿದ್ದರು. ಆದರೆ, ತಮ್ಮ ಪ್ರೀತಿಯ ಬಗ್ಗೆ ತಮ್ಮ ಹಿರಿಯರ ಮುಂದೆ ಹೇಳಲು ಧೈರ್ಯ ಇಲ್ಲದೆ ಹೆದರಿದ ಪರಿಣಾಮ ರಶ್ಮಿಯ ಪೋಷಕರು ಆಕೆಯನ್ನು ಬೇರೊಬ್ಬರೊಂದಿಗೆ ಮದುವೆ ಮಾಡಿಕೊಟ್ಟರು. ಜಯಪ್ರಕಾಶ್ ಉದ್ಯೋಗಕ್ಕಾಗಿ ವಿದೇಶಕ್ಕೆ ಹೋರಟು ಹೋದರು. ನಂತರದಲ್ಲಿ ಮದುವೆಯಾಗಿ ಜೀವನದಲ್ಲಿ ಸೆಟಲ್ ಆದರೂ ನಾನೊಂದು ತೀರಾ ನಿನೊಂದು ತೀರಾ, ಪ್ರೇಮಾನು ಇಲ್ಲ ಪ್ರೀತಿನೂ ಇಲ್ಲಾ ಅವ್ಯಾವುದು ನಮಗೆ ಗೊತ್ತಿಲ್ಲಾ ಯಾರು ಎಲ್ಲಿದ್ದಾರೆ ಎಂಬುದು ಗೊತ್ತಿಲ್ಲದೆ ಹಳೆಯ ಪ್ರೇಮ ಕಹಾನಿ ಮರೆತು ಇಬ್ಬರು ಜೀವನದಲಿ ನೆಲೆ ನಿಂತು ಮಕ್ಕಳ ಮಾಡಿಕೊಂಡು ಆರಾಮಾಗಿದ್ದರು.
ಕಾಲ ಹೀಗೆ ಇರುವುದಿಲ್ಲ ರಶ್ಮಿಯ ಪತಿ ಹತ್ತು ವರ್ಷಗಳ ಹಿಂದೆ ನಿಧನರಾಗಿದ್ದಾರೆ. ಇತ್ತ ಜಯಪ್ರಕಾಶ್ ಪತ್ನಿ ಐದು ವರ್ಷಗಳ ಹಿಂದೆ ತಿರಿಕೊಂಡಿದ್ದಾರೆ. ಪತಿಯನ್ನು ಕಳೆದುಕೊಂಡ ನಂತರ,ರಶ್ಮಿ ಒಂಟಿ ತನ ಕಳೆಯಲು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಆಗಾಗ ಕಿರುಚಿತ್ರಗಳಲ್ಲಿ ನಟಿಸುತ್ತ ಇದ್ದಾಗ ಒಂದು fine day ಕಿರುಚಿತ್ರದಲ್ಲಿ ರಶ್ಮಿಯನ್ನು ನೋಡಿದ ಜಯಪ್ರಕಾಶ್ ತಮ್ಮ ಹಳೇಯ ಜ್ಞಾಪಕಗಳೊಂದಿಗೆ ಅವರನ್ನು ಸಂಪರ್ಕಿಸಿದ್ದಾರೆ. ಅವರ ತಮ್ಮ ಹಳೆಯ ನೆನಪುಗಳನ್ನು ಬಿಚ್ಚಿಟ್ಟಿದ್ದಾರೆ. ಇದು ಮಕ್ಕಳ ವರಿಗೂ ತಲುಪಿದೆ ಮಕ್ಕಳು ತಮ್ಮ ಹಿರಿಯರ ಪ್ರೇಮ ಕಹಾನಿ ಕುರಿತು ಅರಿತು ದೊಡ್ಡ ಮನಸ್ಸಿನಿಂದ ಆಲೋಚಿಸಿ ಅವರನ್ನು ಒಂದಾಗಿಸಿದ್ದಾರೆ ಮಕ್ಕಳ ಸಮ್ಮುಖದಲ್ಲಿ,ಜಯಪ್ರಕಾಶ್ ಮತ್ತು ರಶ್ಮಿ ಕೊಚ್ಚಿಯಲ್ಲಿ ವಿವಾಹವಾಗುವ ಮೂಲಕ ಹಳೇಯ ಪ್ರೇಮಕ್ಕೆ ಜೀವ ನೀಡಿದ್ದಾರೆ.ನಮ್ಮದು ಪರಿಶುದ್ದವಾದ ಪ್ರೀತಿ ಹಾಗಾಗಿ ತಡವಾದರೂ ತನ್ನ ಗಮ್ಯಸ್ಥಾನ ತಲುಪಿದೆ ಎಂದು ಜಯಪ್ರಕಾಶ್ ಮತ್ತು ರಶ್ಮಿ ಸಾಬೀತುಪಡಿಸಿದ್ದಾರೆ.



