ನ್ಯೂಜ್ ಡೆಸ್ಕ್:ಹಣಕ್ಕಾಗಿ ಸಂಭಂದಗಳನ್ನು ಹಾಳುಮಾಡಿಕೊಳ್ಳುವಂತ ಕಾಲಘಟ್ಟ,ಕೂತಲ್ಲೆ ಬ್ಯಾಂಕ್ ವಂಚನೆ ಡಿಜಿಟಲ್ ಅರೆಸ್ಟ್ ಮೂಲಕ ಹಣ ಕಳೆದುಕೊಳ್ಳುವಂತ ಮೊಸ, ವಂಚನೆ ದೊಡ್ಡ ಮಟ್ಟದಲ್ಲಿ ನಡೆಯುತ್ತಿದೆ ಅಂತಹ ವ್ಯವಸ್ಥೆಯಲ್ಲಿ ನಾವು ನೀವು ಇರುವಾಗ ಪೌರಕಾರ್ಮಿಕ ಮಹಿಳೆ ಕಸದ ರಾಶಿಯಲ್ಲಿ ಸಿಕ್ಕ 10 ಲಕ್ಷ ರೂಪಾಯಿಗಳನ್ನು ಅದನ್ನು ಮಾಲೀಕರಿಗೆ ಮರಳಿ ನೀಡಿರುವ ಮಾನವೀಯ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ.
ಇದೊಂದು ನಿಜಕ್ಕೂ ನಂಬಲು ಅಸಾಧ್ಯವಾದ ವಿಚಾರ ಹಣ ಸಿಕ್ಕರೆ ಸಾಕು ಬಾಚಿ ತಿನ್ನೊಣ ಅನ್ನುವ ಕಾಲಘಟ್ಟ ಇಂತಹ ವ್ಯವಸ್ಥೆಯಲ್ಲಿ ಬೀದಿ ಕಸ ನೈರ್ಮಲ್ಯ ಕಾರ್ಯಕರ್ತೆ ಅಂಜು ಮಾನೆ ಎಂಬವರು ದೊಡ್ಡತನ ಮೆರೆದಿದ್ದಾರೆ. ಹಣ ಕಳೆದುಕೊಂಡು ಪೇಚಾಡುತ್ತಿದ್ದ ವ್ಯಕ್ತಿಗೆ ಹಣದ ಚೀಲವನ್ನು ನೀಡುವ ಮೂಲಕ ಅಪಾರ ಗೌರವಕ್ಕೆ ಪಾತ್ರರಾಗಿದ್ದಾರೆ.
ಕಸದಲ್ಲಿ ಸಿಕ್ಕ ಕಂತೆಗಟ್ಟಲೆ ಹಣ
ಪುಣೆಯ ಸದಾಶಿವ ನಗರದಲ್ಲಿ ನೈರ್ಮಲ್ಯ ಕಾರ್ಯಕರ್ತೆಯಾಗಿ ಕೆಲಸ ಮಾಡುವ ಅಂಜು ಮಾನೆ ಅವರು ಎಂದಿನಂತೆ ಕಸ ಸಂಗ್ರಹಿಸುತ್ತಿದ್ದಾಗ, ಔಷಧಿಯ ಚೀಲವೊಂದು ರಸ್ತೆಯ ಬಳಿ ಬಿದ್ದಿದ್ದು ಕಂಡುಬಂದಿದೆ. ಅದನ್ನು ಕಸವೆಂದು ಅವರು, ಎತ್ತಿಕೊಂಡು ತಮ್ಮ ತಳ್ಳು ಗಾಡಿಯಲ್ಲಿ ಹಾಕಿಕೊಂಡಿದ್ದಾರೆ.
ಬಳಿಕ ಚೀಲವನ್ನು ತೆರೆದು ನೋಡಿದಾಗ, ಅದರಲ್ಲಿ ಔಷಧಿಗಳ ಜೊತೆಗೆ ದೊಡ್ಡ ಮೊತ್ತದ ನಗದು ಕಂಡುಬಂದಿದೆ. ಅಂಜು ಅವರು ಕಳೆದ 20 ವರ್ಷಗಳಿಂದ ಆ ಭಾಗದ ರಸ್ತೆಗಳಲ್ಲಿ ಕೆಲಸ ಮಾಡುತ್ತಿರುವುದರಿಂದ, ಆಕೆಗೆ ಸ್ಥಳೀಯ ಜನರ ಪರಿಚಯವಿದೆ. ತನಗೆ ತಿಳಿದಿರುವ ಜನರ ಸಹಾಯದಿಂದ ಹಣ ಕಳೆದುಕೊಂಡವರನ್ನು ಪತ್ತೆ ಹಚ್ಚುವ ಕಾರ್ಯ ಮಾಡುತ್ತಿದ್ದಾಗ ವ್ಯಕ್ತಿಯೊಬ್ಬ ಹಣ ಕಳೆದುಕೊಂಡ ಹುಡುಕಿಕೊಂಡು ಅದೆ ರಸ್ತೆಯಲ್ಲಿ ಓಡಾಡುತ್ತಿದ್ದ ಬಗ್ಗೆ ತಿಳಿದುಕೊಂಡು ಅವರನ್ನು ಕಂಡು ವಿಚಾರಿಸಿದಾಗ, ತಾನು ಕಸ ಎಂದು ಬಿಸಾಡಿದ್ದ ಕವರ್ ನಲ್ಲಿ ಹಣದ ಕಂತೆ ಇರುವುದನ್ನು ಮರೆತಿದ್ದೆ ಎಂದು ತಡವರಿಸಿಕೊಂಡು ತಾನು ತಪ್ಪು ಮಾಡಿಬಿಟ್ಟೆ ಎಂದು ಅಲವತ್ತುಕೊಳ್ಳುವುದನ್ನು ಕಂಡ ಅಂಜು ಮಾನೆ ಸಿಕ್ಕ ಹಣದ ಚೀಲ ಆತನದ್ದೇ ಎಂದು ದೃಢವಾದ ಬಳಿಕ 10 ಲಕ್ಷ ರೂಪಾಯಿವುಳ್ಳ ಆ ಚೀಲವನ್ನು ಆತನಿಗೆ ಹಿಂದಿರುಗಿಸಿದ್ದಾರೆ.
ಅಂಜು ಪ್ರಾಮಾಣಿಕತೆ ಎಲ್ಲಡೆ ಪ್ರಶಿಂಸೆ.
ನೈರ್ಮಲ್ಯ ಕಾರ್ಯಕರ್ತೆ ಅಂಜು ಮಾನೆ ಅವರ ಪ್ರಾಮಾಣಿಕತೆ ಪುಣೆಯಾದ್ಯಂತ ಮನೆ ಮಾತಾಗಿದೆ. ದೊಡ್ಡ ಮೊತ್ತವನ್ನು ದುರುಪಯೋಗಪಡಿಸಿಕೊಳ್ಳದೆ, ಅದನ್ನು ಕಳೆದುಕೊಂಡವರಿಗೆ ಹಿಂತಿರುಗಿಸಿ ಉದಾರತೆ ಮೆರೆದಿದ್ದಾರೆ. ಕಳೆದುಕೊಂಡ ಹಣ ಮರಳಿ ಪಡೆದ ವ್ಯಕ್ತಿ ಆಕೆಗೆ ಒಂದು ಸೀರೆ ಮತ್ತು ಸ್ವಲ್ಪ ಹಣವನ್ನು ಉಡುಗೊರೆಯಾಗಿ ನೀಡಿ ಸನ್ಮಾನಿಸಿದ್ದಾರೆ.
ಪ್ರಾಮಾಣಿಕತೆ ಅವಶ್ಯ
ಘಟನೆಯ ಬಗ್ಗೆ ಮಾತನಾಡಿರುವ ಅಂಜು ಮಾನೆ ಅವರು, ಈ ಪ್ರದೇಶದ ಜನರೊಂದಿಗೆ ನನಗೆ ಸಾಕಷ್ಟು ಪರಿಚಯವಿದೆ. ಕಸದ ಜೊತೆಗೆ ವಿಶೇಷ ವಸ್ತುಗಳು ಎಸೆಯಲ್ಪಾಟ್ಟಾಗ ಅಂತಹುದನ್ನು ನಾನು ಅವರಿಗೆ ತಿಳಿಸಿ ವಾಪಾಸ್ಸು ಮಾಡುವ ಮೂಲಕ ಪ್ರಾಮಾಣಿಕವಾಗಿ ಕೆಲಸ ಮಾಡಿಕೊಂಡು ಬಂದಿರುತ್ತೇನೆ ಅದು ಧ್ಯೇಯ. ಒಂದು ದಿನ ಬೆಳಗಿನ ಸಮಯದಲ್ಲಿ ಕಸ ಸಂಗ್ರಹಿಸುವಾಗ ರಸ್ತೆಯ ಬದಿ ಒಂದು ಚೀಲ ಸಿಕ್ಕಿತ್ತು. ಅದನ್ನು ಎತ್ತಿಕೊಂಡು ಫೀಡರ್ ಪಾಯಿಂಟ್ನಲ್ಲಿ ಇಟ್ಟುಕೊಂಡೆ. ಔಷಧಿಗಳ ಚೀಲವಾದ್ದರಿಂದ ತೆರೆದು ನೋಡಿದಾಗ ಹಣವಿತ್ತು. ಕಳೆದುಕೊಂಡವರ ಹುಡುಕಾಟ ನಡೆಸಿದಾಗ ವ್ಯಕ್ತಿಯೊಬ್ಬರು ಸಿಕ್ಕರು. ಹಣ ಅವರದ್ದೇ ಎಂದು ದೃಢವಾದ ಬಳಿಕ ಚೀಲವನ್ನು ಹಿಂತಿರುಗಿಸಿದ್ದೇನೆ ಎಂದು ಹೇಳಿದರು.
Trending
- ಶ್ರೀನಿವಾಸಪುರ:ಕಸ ಹಾಕುವ ವಿಚಾರಕ್ಕೆ ಜಗಳ ಒಬ್ಬನ ಕೊಲೆ!
- ಶ್ರೀನಿವಾಸಪುರ:ವೇಶ್ಯಾವಾಟಿಕೆ ದಂಧೆ ಪೊಲೀಸ್ ದಾಳಿ, ಕಿಂಗ್ ಪಿನ್ ಮಹಿಳೆ ಬಂಧನ!
- ಶ್ರೀನಿವಾಸಪುರ:ವಾಹನ ಡಿಕ್ಕಿಯಾಗಿ ರಾತ್ರಿ ಗಸ್ತಿನಲ್ಲಿದ್ದ ಪೊಲೀಸ್ ಪೇದೆ ನಿಧನ!
- ಶ್ರೀನಿವಾಸಪುರ:ಕರ್ನಾಟಕ ಬ್ಯಾಂಕ್ ಉದ್ಯೋಗಿ ಅಪಘಾತದಲ್ಲಿ ಸಾವು!
- ಲಂಚ ಪಡೆಯುತ್ತಿದ್ದ ಬಿಜೆಪಿ ಶಾಸಕ ಲೋಕಾಯುಕ್ತ ಬಲೆಗೆ!
- ಯಾವ ಐಟಿ-ಬಿಟಿ ಗೂ ಕಡಿಮೆ ಇಲ್ಲ,Dairy Farm ಆದಾಯ ಲಕ್ಷಗಟ್ಟಲೆ!
- ಬೆಂಗಳೂರಿನಲ್ಲಿ ಕುಬೇರರು ವಾಸಿಸುವ“ಬಿಲಿಯನೇರ್ಸ್ ಸ್ಟ್ರೀಟ್”ಎಲ್ಲಿದೆ?
- ಶ್ರೀನಿವಾಸಪುರ:ನೌಕರರ ಸಂಘದ ಹಾಲಿ-ಮಾಜಿ ಅಧ್ಯಕ್ಷರ ನಡುವೆ ಬಿದಿ ಜಗಳ!
Saturday, March 7



