ಶ್ರೀನಿವಾಸಪುರ:ಆಂಧ್ರದಿಂದ ಬೆಂಗಳೂರಿಗೆ ಹೋರಟಿದ್ದ ಸ್ಲೀಪರ್ ಕೋಚ್ ಬಸ್ ರಸ್ತೆ ವಿಭಜಕ್ಕೆ ಡಿಕ್ಕಿ ಹೋಡೆದು ರಸ್ತೆ ಬದಿಯಲ್ಲಿ ಮಗುಚಿ ಬಿದ್ದು ಬಸ್ಸಿನಲ್ಲಿದ್ದ ಮಹಿಳೆ ಮೃತ ಪಟ್ಟಿದ್ದು ಬಸ್ಸಿನಲ್ಲಿದ್ದ ಬಹುತೇಕರು ಗಾಯಗೊಂಡಿರುವ ಘಟನೆ ಕಡಪಾ-ಬೆಂಗಳೂರು ಹೆದ್ದಾರಿಯಲ್ಲಿ ಮಂಗಳವಾರ ಮುಂಜಾನೆ ನಸುಕಿನಲ್ಲಿ ನಡೆದಿದೆ.
ಮೃತ ಮಹಿಳೆಯನ್ನು ಬೆಂಗಳೂರಿನ ನಿವಾಸಿ ಅನಿತಾ(58) ಎಂದು ಗುರುತಿಸಲಾಗಿದ್ದು ಈಕೆ ಆಂಧ್ರದ ಪ್ರೊದ್ದಟೂರಿಗೆ ಪತಿಯ ಜೊತೆಗೆ ಮದುವೆ ಕಾರ್ಯಕ್ರಮಕ್ಕೆ ಹೋಗಿ ರಾತ್ರಿ ವಾಪಸ್ಸು ಬರುತ್ತಿರುವಾಗ ದುರ್ಘಟನೆ ನಡೆದು ಮೃತಪಟ್ಟಿರುತ್ತಾರೆ.ಪ್ರೊದ್ದಟೂರು ಮೂಲದ ಹರಿತಾ ಟ್ರಾವಲ್ಸ್ ಬಸ್ಸು ಪ್ರೊದ್ದಟೂರಿನಿಂದ ಬೆಂಗಳೂರಿಗೆ ಹೋರಟಿದ್ದು ಕಡಪಾ-ಬೆಂಗಳೂರು ಹೆದ್ದಾರಿಯಲ್ಲಿ ಮುಂಜಾನೆ ನಸುಕಿನಲ್ಲಿ ಮಂಚಿನಿಳ್ಲಕೋಟೆ ಬಳಿ ಡಿವೈಡರ್ ಗೆ ಡಿಕ್ಕಿ ಹೋಡೆದಿದೆ ಡಿಕ್ಕಿ ಹೋಡೆದ ರಭಸಕ್ಕೆ ಬಸ್ಸಿನ ಮುಂಬಾಗದ ಆಕ್ಸಿಲ್ ಸಮೇತ ಎರಡು ಚಕ್ರಗಳು ಕಳಚಿ ಬಿದಿದೆ,ಬಸ್ ರಸ್ತೆಯ ಮತ್ತೊಂದು ಬದಿಯಲ್ಲಿ ಬಸ್ ಮಗಚಿ ಬಿದ್ದಿದೆ. ಬಸ್ ಬಿದ್ದ ರಭಸಕ್ಕೆ ಮೃತ ಮಹಿಳೆ ತಲೆಗೆ ತೀವ್ರ ಪೆಟ್ಟಾಗಿ ಸ್ಥಳದಲ್ಲೆ ಸಾವನಪ್ಪಿದ್ದಾಳೆ ಎನ್ನುತ್ತಾರೆ.



ಹೆದ್ದಾರಿ ನಿರ್ಮಾಣ ವಿಳಂಬ ನಿರ್ಲಕ್ಷ್ಯ ಆರೋಪ
ಕರ್ನಾಟಕದ ಗಡಿಯಿಂದ ಚಿಂತಾಮಣಿಯ ಮಾಡಿಕೆರೆ ಕ್ರಾಸ್ ವರಿಗೂ ನಿರ್ಮಾಣ ಆಗುತ್ತಿರುವ ಕೆ.ಶಿಪ್ ರಾಜ್ಯ ಹೆದ್ದಾರಿ ಕಾಮಗಾರಿ ವರ್ಷಗಳು ಕಳೆದರೂ ಮುಗಿಯುತ್ತಿಲ್ಲ ಕೆಲವೊಂದು ಕಡೆ ಕಾಮಗಾರಿ ಪೂರ್ಣಗೊಂಡಿದ್ದು ಸಾರ್ವಜನಿಕರಿಗೆ ಅನಕೂಲ ಆಗುವಂತೆ ರಸ್ತೆ ತಿರುವು ಊರು ಸೂಚಿಸುವ ರಸ್ತೆ ಸುರಕ್ಷತಾ ಕ್ರಮಗಳನ್ನು ಕೈಗೊಂಡಿಲ್ಲ ರೆಡಿಯಮ್ ಸ್ಟಿಕರ್ ಅಂಟಿಸಿಲ್ಲ ಎನ್ನುತ್ತಾರೆ ಇದರಿಂದ ರಾತ್ರಿ ವೇಳೆ ವಾಹನಗಳ ಒಡಾಟಕ್ಕೆ ರಸ್ತೆ ಸುರಕ್ಷಿತವಲ್ಲ ಎನ್ನುತ್ತಾರೆ.ಅಪಘಾತ ಆದ ಸ್ಥಳದಲ್ಲಿ ರಸ್ತೆ ಬದಿ ಬೀದಿ ದೀಪಗಳು ಇಲ್ಲದೆ ದಿಸೆಂಬರ್ ಕೊರೆಯುವ ಚಳಿಯ ಕಾರ್ಗತ್ತಲಲ್ಲಿ ಅಪಘಾತ ದುರಂತ.



