ನ್ಯೂಜ್ ಡೆಸ್ಕ್:ತೆಲಗು ಚಿತ್ರರಂಗದ ಅತ್ಯಂತ romantic ಜೋಡಿ ಎಂದೆ ಖ್ಯಾತರಾಗಿ ಸುದ್ದಿಯಲ್ಲಿರುವ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ. ಇಬ್ಬರ ನಡುವಿನ ಪ್ರೇಮ ಪ್ರಿತಿ ಬಗ್ಗೆ ಗುಸು ಗುಸು ಸದಾ ಸುದ್ಧಿಯಲ್ಲಿರುತಿತ್ತು,ಅದಕ್ಕೆ ಅವರ ಆಪ್ತರು ಸ್ಪಷ್ಟನೆ ನೀಡಿದ್ದು ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಇಬ್ಬರೂ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಮತ್ತು ಮುಂದಿನ ವರ್ಷ 2026 ಫೆಬ್ರವರಿಯಲ್ಲಿ ಮದುವೆಯಾಗಲಿದ್ದಾರೆ ಎಂಬ ಪ್ರಕಟಣೆ ಹೊರಬಿದ್ದಿದೆ.
ಈ ಸುದ್ದಿಯಿಂದ ಅಭಿಮಾನಿಗಳು ಹೆಚ್ಚಿನ ಸಂತೋಷವನ್ನು ವ್ಯಕ್ತಪಡಿಸುತ್ತಿದ್ದಾರೆ. ಇತ್ತೀಚೆಗೆ, ಈ ಇಬ್ಬರ ನಡುವಿನ ವಯಸ್ಸಿನ ವ್ಯತ್ಯಾಸವನ್ನು ಕಂಡುಹಿಡಿಯಲು ಮುಂದಾಗಿ ಗೂಗಲ್ನ searchನಲ್ಲಿ ಸಿನಿರಸಿಕರಿಗೆ ಸಿಕ್ಕಿದ್ದು ಮೂಲತಃ ಕರುನಾಡಿನ ಕೊಡಗಿನವರಾದ ರಶ್ಮಿಕಾ ಮಂದಣ್ಣ 1996ರ ಏಪ್ರಿಲ್ 5ರಂದು ಕರ್ನಾಟಕದ ಕೊಡಗಿನಲ್ಲಿ ಜನಿಸಿದರು. ಸದ್ಯ ಅವರಿಗೆ 29 ವರ್ಷ. ಟಾಲಿವುಡ್ನಲ್ಲಿ ಗುರುತಿಸಿಕೊಂಡಿರುವ ವಿಜಯ್ ದೇವರಕೊಂಡ 1989ರ ಮೇ 9ರಂದು ಹೈದರಾಬಾದ್ನಲ್ಲಿ ಜನಿಸಿದರು. ಪ್ರಸ್ತುತ ಅವರ ವಯಸ್ಸು 36 ವರ್ಷ. ಈ ಪ್ರೇಮಪಕ್ಷಿಗಳ ನಡುವಿನ ವಯಸ್ಸಿನ ಅಂತರ 7 ವರ್ಷಗಳು.
ಪ್ರೇಮಕಥೆ ಹೇಗೆ ಪ್ರಾರಂಭವಾಗಿದ್ದು ಹೇಗೆ?
2018 ರಲ್ಲಿ ‘ಗೀತ ಗೋವಿಂದಂ’ ತೆಲಗು ಸಿನಿಮಾದ ಮೂಲಕ ವಿಜಯ್-ರಶ್ಮಿಕಾ ರೊಮ್ಯಾಂಟಿಕ್ ಜೋಡಿ ಸಿನಿಮಾ ರಸಿಕರನ್ನು ರಂಜಿಸಿದ್ದರು ಸಿನಿಮಾ ಸೂಪರ್ ಹಿಟ್ ಆಯಿತು. ಬೆಳ್ಳಿ ತೆರೆ ಮೇಲೆ ಇಬ್ಬರ ನಡುವಿನ ಲವ್ ಕೆಮಿಸ್ಟ್ರಿ ವಿಶೇಷವಾಗಿ ಪ್ರೇಕ್ಷಕರನ್ನು ಆಕರ್ಷಿಸಿತು. ಅದಾದ ನಂತರ, 2019 ರಲ್ಲಿ ‘ಡಿಯರ್ ಕಾಮ್ರೇಡ್’ ಚಿತ್ರೀಕರಣದ ಸಮಯದಲ್ಲಿ ಇಬ್ಬರ ನಡುವಿನ ಭಾಂಧವ್ಯ ಮತ್ತಷ್ಟು ಗಟ್ಟಿಯಾಯಿತು ಇದು ಸಿನಿಮಾ ಪ್ರೇಮಿಗಳ ಕೂತುಹಲ ಹೆಚ್ಚಾಗಿ ಊಹಾಪೋಹಗಳು ಪುಂಕಾನು ಪುಂಕವಾಗಿ ಹರಡುತ್ತ ಸಾಗಿತು ಇದಕ್ಕೆ ಪೂರಕ ಎನ್ನುವಂತೆ vacation ಸಮಯದಲ್ಲಿಯೂ ಇಬ್ಬರು ಹಂಚಿಕೊoಡಿದ್ದ ಫೋಟೋಗಳ ಬ್ಯಾಕ್ ಗ್ರೌಂಡ್ ಹಿನ್ನೆಲೆ ಒಂದೇ ಇದ್ದ ಕಾರಣ ಇಬ್ಬರು ಒಟ್ಟಿಗೆ ರಜೆಯ ಮೇಲೆ ಹೋಗಿದ್ದಾರೆ ಎಂಬ ವದಂತಿಗಳು ಗಾಳಿ ವೇಗದಲ್ಲಿ ಹರಡಿತು ನಂತರದಲ್ಲಿ ರಶ್ಮಿಕಾ ಅವರು ವಿಜಯ್ ಅವರ ಕುಟುಂಬದ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿದ್ದು ಸಿನಿಮಾ ಪ್ರಿಯರಿಗೆ ಕ್ಲಾರಿಟ್ ಬಂದಿತ್ತು ಈಗ ಸ್ಪಷ್ಟತೆ ಸಿಕ್ಕಿದೆ.
ಫೆಬ್ರವರಿ 2026 ರಲ್ಲಿ ಮದುವೆ
ಅಭಿಮಾನಿಗಳ ಆಶೀರ್ವಾದದೊಂದಿಗೆ ಫೆಬ್ರವರಿ 2026 ರಲ್ಲಿ ವಿವಾಹವಾಗಲಿದ್ದಾರೆ. ವಿಜಯ್ ಮತ್ತು ರಶ್ಮಿಕಾ ಅವರ ಪ್ರೀತಿ ಮತ್ತು ಸಂಬಂಧ ಟಾಲಿವುಡ್ನಲ್ಲಿ ಹೊಸ love story. ಅಭಿಮಾನಿಗಳು ಜೋಡಿಗೆ ಶುಭ ಹಾರೈಸುತ್ತಿದ್ದಾರೆ.
ಹೊಸ ಚಿತ್ರ vD14 ಅಪ್ಡೇಟ್!
ವಿಜಯ್ ಅವರ ಮುಂದಿನ ಚಿತ್ರದಲ್ಲಿ ರಶ್ಮಿಕಾ ನಾಯಕಿಯಾಗಿ ನಟಿಸುತ್ತಿದ್ದು ಈ ಪ್ರಾಜೆಕ್ಟ್ ಈಗಾಗಲೇ ಅಂತಿಮಗೊAಡಿದೆ. ಚಿತ್ರಕ್ಕೆ ಸಂಬAಧಿಸಿದ ಪೋಸ್ಟರ್ ಬಿಡುಗಡೆಯಾದೆ ಸಿನಿಮಾ 1800 ರ ದಶಕದ ಬ್ರಿಟಿಷ್ ಆಳ್ವಿಕೆಯ ಕಥೆ ಹೊಂದಿದೆ ಎಂದು ಚಲನಚಿತ್ರ ವಲಯದಲ್ಲಿ ಕೇಳಿಬರುತ್ತಿದೆ.ವಿಜಯ್ ರಾಯಲಸೀಮಾದ ಗ್ರಾಮೀಣ ಹಿನ್ನೆಲೆಯಲ್ಲಿ ಕಾಣಿಸಿಕೊಳ್ಳಲಿದ್ದು ವಿಜಯ್ ದೇವರಕೊಂಡ ಇದೇ ಪ್ರಥಮಬಾರಿಗೆ ಇಂತಹ ಚಿತ್ರದಲ್ಲಿ ನಟಿಸುತ್ತಿದ್ದು,ಬಲವಾದ ಚಿತ್ರಕಥೆ ಬರೆಯಲಾಗಿದ್ದು ಭಾವನಾತ್ಮಕ ದೃಶ್ಯಗಳೊಂದಿಗೆ ರಚಿಸಲಾಗಿರುವ ಬಗ್ಗೆ ವರದಿಯಾಗಿದೆ.ಮತ್ತೊಂದೆಡೆ, ಸಿನಿಮಾ ನಿರ್ದೇಶ ಮಾಡುತ್ತಿರುವ ರಾಹುಲ್ ಸಂಕೀರ್ತನ್ ಈಗಾಗಲೇ ವಿಜಯ್ ದೇವರಕೊಂಡ ಅವರೊಂದಿಗೆ ಕೆಲಸ ಮಾಡಿದ ಅನುಭವ ಇದ್ದು 2018 ರಲ್ಲಿ ಬಿಡುಗಡೆಯಾದ ‘ಟ್ಯಾಕ್ಸಿವಾಲಾ’ ಈ ಜೋಡಿಯೊಂದಿಗೆ ಹಿಟ್ ಆಗಿತ್ತು. ತಾಂತ್ರಿಕ ವಿಭಾಗಕ್ಕೆ ಸಂಬAಧಿಸಿದAತೆ, ಅಂತರರಾಷ್ಟ್ರೀಯ ಛಾಯಾಗ್ರಾಹಕ ಎರಿಕ್ ಗೌಟಿಯರ್ ಕ್ಯಾಮೆರಾಮನ್ ಆಗಿ ಕೆಲಸ ಮಾಡಲಿದ್ದಾರೆ. ಅಜಯ್-ಅತುಲ್ ಚಿತ್ರಕ್ಕೆ ಸಂಗೀತ ಸಂಯೋಜಿಸಲಿದ್ದಾರೆ ಎಂದು ವರದಿಯಾಗಿದೆ. ವಿಜಯ್ ಮತ್ತು ರಶ್ಮಿಕಾ ಜೊತೆಗೆ ಹಾಲಿವುಡ್ ಸ್ಟಾರ್ ನಟ ಆರ್ನಾಲ್ಡ್ ವೋಸ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ.
Trending
- ಶ್ರೀನಿವಾಸಪುರ:ಕಸ ಹಾಕುವ ವಿಚಾರಕ್ಕೆ ಜಗಳ ಒಬ್ಬನ ಕೊಲೆ!
- ಶ್ರೀನಿವಾಸಪುರ:ವೇಶ್ಯಾವಾಟಿಕೆ ದಂಧೆ ಪೊಲೀಸ್ ದಾಳಿ, ಕಿಂಗ್ ಪಿನ್ ಮಹಿಳೆ ಬಂಧನ!
- ಶ್ರೀನಿವಾಸಪುರ:ವಾಹನ ಡಿಕ್ಕಿಯಾಗಿ ರಾತ್ರಿ ಗಸ್ತಿನಲ್ಲಿದ್ದ ಪೊಲೀಸ್ ಪೇದೆ ನಿಧನ!
- ಶ್ರೀನಿವಾಸಪುರ:ಕರ್ನಾಟಕ ಬ್ಯಾಂಕ್ ಉದ್ಯೋಗಿ ಅಪಘಾತದಲ್ಲಿ ಸಾವು!
- ಲಂಚ ಪಡೆಯುತ್ತಿದ್ದ ಬಿಜೆಪಿ ಶಾಸಕ ಲೋಕಾಯುಕ್ತ ಬಲೆಗೆ!
- ಯಾವ ಐಟಿ-ಬಿಟಿ ಗೂ ಕಡಿಮೆ ಇಲ್ಲ,Dairy Farm ಆದಾಯ ಲಕ್ಷಗಟ್ಟಲೆ!
- ಬೆಂಗಳೂರಿನಲ್ಲಿ ಕುಬೇರರು ವಾಸಿಸುವ“ಬಿಲಿಯನೇರ್ಸ್ ಸ್ಟ್ರೀಟ್”ಎಲ್ಲಿದೆ?
- ಶ್ರೀನಿವಾಸಪುರ:ನೌಕರರ ಸಂಘದ ಹಾಲಿ-ಮಾಜಿ ಅಧ್ಯಕ್ಷರ ನಡುವೆ ಬಿದಿ ಜಗಳ!
Saturday, March 7



