ನ್ಯೂಜ್ ಡೆಸ್ಕ್:ಮೊನ್ನೆಯಷ್ಟೆ ಬೆಂಗಳೂರಿನ ಯಲಹಂಕದ ಸೋಲದೇವನಹಳ್ಳಿಯ ಲೇಡಿಸ್ ಪಿಜಿಯಲ್ಲಿನ ಪ್ರತಿಷ್ಠಿತ ಕಾಲೇಜಿನ ವಿದ್ಯಾರ್ಥಿನಿ ಮೇಲೆ ಪಿಜಿ ಮಾಲೀಕನೆ ಅತ್ಯಾಚಾರ ಎಸಗಿದ ಘಟನೆ ಮಾಸುವ ಮುನ್ನವೆ ಯಲಹಂಕ ಪೋಲಿಸ್ ಠಾಣೆ ವ್ಯಾಪ್ತಿಯ PG ಯಲ್ಲಿದ್ದ ಮಹಿಳಾ ಅಧಿಕಾರಿ ಕುತ್ತಿಗೆಗೆ ಚಾಕು ಇಟ್ಟು ಹೆದರಿಸಿ ಲೈಂಗಿಕ ದೌರ್ಜನ್ಯ ಎಸಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಘಟನೆ ಆಗಸ್ಟ್ 11ರಂದು ಬೆಂಗಳೂರಿನ ಉತ್ತರ ಭಾಗದ ಪ್ರತಿಷ್ಠಿತ ಜುಡಿಷಿಯಲ್ ಲೇಔಟ್ನಲ್ಲಿರುವ ಲೇಡಿಸ್ ಪಿಜಿಯೊಂದರಲ್ಲಿ (Ladies paying guest) ನಡೆದಿದ್ದು,ಘಟನೆ ಸಂಬಂಧ ಯಲಹಂಕ ಠಾಣೆಗೆ ಮಹಿಳಾ ಅಧಿಕಾರಿ ದೂರು ನೀಡಿದ್ದಾರೆ ದೂರು ದಾಖಲಿಸಿಕೊಂಡು ಆರೋಪಿ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ.
ಬೆಸ್ಕಾಂನಲ್ಲಿ ಅಸಿಸ್ಟೆಂಟ್ ಇಂಜಿನಿಯರ್ ಆಗಿರುವ ಮಹಿಳೆ ಜುಡಿಷಿಯಲ್ ಲೇಔಟ್ನ ಶಿವಾಸ್ ಲೇಡಿಸ್ ಪಿಜಿ Siva Luxury Pg For Ladies ಗೆ 15 ದಿನಗಳ ಹಿಂದಷ್ಟೇ ದಾಖಲಾಗಿದ್ದು ಆಗಸ್ಟ್ 11ರಂದು ಮಧ್ಯಾಹ್ನ ಕೆಲಸ ಮುಗಿಸಿ ಪಿಜಿಯಲ್ಲಿನ 3ನೇ ಮಹಡಿಯಲ್ಲಿರುವ ತನ್ನ ರೂಮಿಗೆ ಬಂದಿದ್ದಾರೆ.ಮಹಿಳೆಯ ರೂಮ್ ಡೋರ್ ತಟ್ಟಿದ್ದಾರೆ ಪಿಜಿಯವರು ಇರಬಹುದೆಂದು ಮಹಿಳೆ ಡೋರ್ ಓಪನ್ ಮಾಡಿದ್ದಾರೆ.ತಕ್ಷಣ ಚಾಕು ಹಿಡಿದ ವ್ಯಕ್ತಿಯೊಬ್ಬ ಏಕಾಏಕಿ ರೂಮಿಗೆ ನುಗ್ಗಿದ್ದಾನೆ ಮಹಿಳೆಯ ಕುತ್ತಿಗೆಗೆ ಚಾಕು ಇಟ್ಟು ಬೆದರಿಸಿದ ಖದೀಮ, ಅಧಿಕಾರಿ ಖಾಸಗಿ ಅಂಗಾಂಗಗಳನ್ನು ಮುಟ್ಟಿ ದೌರ್ಜನ್ಯವೆಸಗಿ ಮೈಮೇಲಿದ್ದ ಚಿನ್ನಾಭರಣ ಕಿತ್ತುಕೊಳ್ಳಲು ಯತ್ನಿಸಿದ್ದಾನೆ. ಬಳಿಕ ಬೆಡ್ ಮೇಲಿದ್ದ 2 ಮೊಬೈಲ್ಗಳು ತೆಗೆದುಕೊಂಡು ಪರಾರಿ ಆಗಿದ್ದಾನೆ. ಹಾಡಹಗಲೇ ಲೇಡಿಸ್ ಪಿಜಿಯಲ್ಲಿ ದರೋಡೆಕೋರ ಕೃತ್ಯ ಎಸಗಿರುವುದು ಭಾರೀ ಆತಂಕಕ್ಕೆ ಕಾರಣವಾಗಿದೆ. ಸದ್ಯ ಪ್ರಕರಣ ದಾಖಲಿಸಿಕೊಂಡು ಆರೋಪಿ ಪತ್ತೆಗೆ ಪೊಲೀಸರು ಬಲೆ ಬಿಸಿದ್ದಾರೆ.
Trending
- ಶಾಸಕ ಕೊತ್ತೂರು ಮಂಜುನಾಥ್ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸುಳಿವು ನೀಡಿದ ನಂಜೇಗೌಡ!
- ಮಗಳಾಡಿದ ಮಾತಿನಿಂದ ತಾಯಿಯ ಮಂತ್ರಿ ಸ್ಥಾನಕ್ಕೆ ಧಕ್ಕೆ!
- ಶ್ರೀನಿವಾಸಪುರ:ವಿದ್ಯಾರ್ಥಿನಿಯರೊಂದಿಗೆ ಶಿಕ್ಷಕನ ಅಸಭ್ಯ ವರ್ತನೆ ಆರೋಪ!
- ನೇಪಾಳ ಪ್ರವಾಹ:ಶಿಕ್ಷಕನ ಸಮಯ ಪ್ರಜ್ಞೆ ಬದುಕುಳಿದ ಸಾವಿರಾರು ವಿದ್ಯಾರ್ಥಿಗಳು!
- ಬೆಂಗಳೂರು:ಬಿಜೆಪಿ ಮುಖಂಡನ ಅಪಹರಣ Twest ಆಂಧ್ರ ಪೋಲಿಸರ ವಶದಲ್ಲಿ!
- ಶ್ರೀನಿವಾಸಪುರ:ವರ್ಗಾವಣೆಗೊಂಡ ಬ್ಯಾಂಕ್ ಮೆನೇಜರ್ ಗೆ ಬೀಳ್ಕೊಡುಗೆ!
- ಶ್ರೀನಿವಾಸಪುರ:ಸೋಮಯಾಜಲಹಳ್ಳಿ SRV ಮೇಷ್ಟ್ರು ಇನ್ನಿಲ್ಲ!
- ಶ್ರೀನಿವಾಸಪುರ:ಜಾಗ ಕೊಟ್ಟರೆ ಇಲಾಖೆ ಚರ್ಚಿಸಿ ಉದ್ಯೋಗಾವಕಾಶ ಸಚಿವ!
Sunday, September 6



