ನ್ಯೂಜ್ ಡೆಸ್ಕ್:ಲ್ಯಾಬ್ ಟೆಕ್ ನಿಷಿಯನ್ ಅರ್ಥಾತ್ ಶಿಕ್ಷಕಿ ತನ್ನ ಕಾಲೇಜಿನ ವಿದ್ಯಾರ್ಥಿಗೆ ಪ್ರೇಮ ಪಾಠ ಹೇಳಿ ಕೊಟ್ಟು ಅವನೊಂದಿಗೆ ಊರು ಬಿಟ್ಟು ಬೆಂಗಳೂರು ಸೇರಿದ್ದರು, ಪೊಲೀಸರ ಕಾರ್ಯಚರಣೆಯಲ್ಲಿ ಸಿಕ್ಕಿಬಿದ್ದ ಇಬ್ಬರು ಪೋಲಿಸರಿಂದ ಪಾಠ ಹೇಳಿಸಿಕೊಂಡು ಕುಟುಂಬಸ್ಥರೊಂದಿಗೆ ತಮ್ಮ ತಮ್ಮ ಮನೆ ಸೇರಿದ್ದಾರೆ.ಇದು ಆಂಧ್ರದ ಚಿತ್ತೂರಿನಲ್ಲಿ Chittoor ನಡೆದಿದ್ದು ಚಿತ್ತೂರಿನ ದುರ್ಗಾನಗರ ಕಾಲೋನಿಯ 20 ವರ್ಷದ ಯುವಕ ಚಿತ್ತೂರು ಬಳಿ ಪುತ್ಥಲಪಟ್ಟು ಹತ್ತಿರ ಇರುವಂತ ಎಂಜಿನಿಯರಿಂಗ್ ಕಾಲೇಜಿನ ಬಿ.ಟೆಕ್ ವಿದ್ಯಾರ್ಥಿ ಅದೆ ಕಾಲಿಜಿನಲ್ಲಿ ಲ್ಯಾಬ್ನಲ್ಲಿ ಕೆಲಸ ಮಾಡುತ್ತಿದ್ದ ಸುಮಾರು 40 ವರ್ಷದ ಮಹಿಳಾ ಉದ್ಯೋಗಿಯೊಂದಿಗೆ ಮೋಹದ ಬಲೆಗೆ ಬಿದ್ದು ಆಕರ್ಷಿತನಾಗಿದ್ದಾನೆ, ಅದು ವಿವಾಹಿತ ಪತಿಯಿಂದ ಬೇರ್ಪಟ್ಟು ಒಂಟಿ ಜೀವನ ಮಾಡುತ್ತಿರುವ ಮಹಿಳೆಯೊಂದಿಗೆ. ಇಬ್ಬರ ನಡುವೆ ವಯಸ್ಸಿನ ಅಂತರ ಲೆಕ್ಕಿಸದೆ ಪ್ರೇಮ ದೂರ ಸಂಬಂಧಕ್ಕೆ ಸಾಗಿದೆ ಸಮಾಜ ನಮ್ಮ ಮದುವೆಯನ್ನು ಒಪ್ಪಿಕೊಳ್ಳುವುದಿಲ್ಲ ಎಂದು ಭಾವಿಸಿದ ಇಬ್ಬರೂ,ತಾವಿರುವ ಊರು ಸಮಾಜದಿಂದ ದೂರ ಸಾಗಲು ನಿರ್ಧರಿಸಿ ಬೆಂಗಳೂರು ಬಸ್ ಹತ್ತಿದ್ದಾರೆ ಇತ್ತ ಕಾಲೇಜಿಗೆ ಹೋಗಿದ್ದ ಮಗ ಮೂರು ದಿನಗಳಾದರು ಮನೆಗೆ ಹಿಂತಿರುಗದ ಕಾರಣ ಆತಂಕಗೊಂಡ ವಿದ್ಯಾರ್ಥಿಯ ಪೋಷಕರು, ಚಿತ್ತೂರು ಪೋಲಿಸರನ್ನು ಆಶ್ರಯಿಸಿದ್ದಾರೆ ನಾಪತ್ತೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದಾಗ, ವಿದ್ಯಾರ್ಥಿ-ಮಹಿಳೆ ಓಡಿ ಹೋಗಿರುವ ಕಥೆ ಬೆಳಕಿಗೆ ಬಂದಿದೆ ಪೊಲೀಸರು ಅವರ ಇರುವಿಕೆಯನ್ನು ಪತ್ತೆ ಹಚ್ಚಿ ಬೆಂಗಳೂರಿಗೆ ಬಂದಿದ್ದ ಚಿತ್ತೂರು ಪೊಲೀಸರು ಇಬ್ಬರನ್ನು ಆಂಧ್ರಕ್ಕೆ ಕರೆದುಕೊಂಡು ಹೋಗಿದ್ದಾರೆ ತಹಶೀಲ್ದಾರ್ ಮುಂದೆ ಹಾಜರು ಪಡಿಸಿದ್ದಾರೆ ನಂತರ 20 ವರ್ಷದ ವಿದ್ಯಾರ್ಥಿ ಹಾಗು ಪೋಷಕರು ಮತ್ತು 40 ವರ್ಷದ ಮಹಿಳೆ ಹಾಗು ಆಕೆಯ ಕುಟುಂಬ ಸದಸ್ಯರನ್ನು ಕರೆಸಿ ಕೌನ್ಸೆಲಿಂಗ್ ನೀಡಿದ್ದಾರೆ ವಿದ್ಯಾರ್ಥಿಯನ್ನು ಪೋಷಕರಿಗೆ ಒಪ್ಪಿಸಿ ಮಹಿಳೆಯನ್ನು ಆಕೆಯ ಕುಟುಂಬದ ಸದಸ್ಯರೊಂದಿಗೆ ಮನೆಗೆ ಕಳುಹಿಸಿದ್ದಾರೆ.
ಕಾಲೇಜಿನಲ್ಲಿ ನಡೆದ ಘಟನೆ ಬೆಳಕಿಗೆ ಬಂದಾಗ ವಿದ್ಯಾರ್ಥಿಗಳು ಮತ್ತು ಕಾಲೇಜು ಸಿಬ್ಬಂದಿ ಆಘಾತಕ್ಕೊಳಗಾಗಿದ್ದ ಬಗ್ಗೆ ಹೇಳುತ್ತಾರೆ.
Trending
- ಶಾಸಕ ಕೊತ್ತೂರು ಮಂಜುನಾಥ್ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸುಳಿವು ನೀಡಿದ ನಂಜೇಗೌಡ!
- ಮಗಳಾಡಿದ ಮಾತಿನಿಂದ ತಾಯಿಯ ಮಂತ್ರಿ ಸ್ಥಾನಕ್ಕೆ ಧಕ್ಕೆ!
- ಶ್ರೀನಿವಾಸಪುರ:ವಿದ್ಯಾರ್ಥಿನಿಯರೊಂದಿಗೆ ಶಿಕ್ಷಕನ ಅಸಭ್ಯ ವರ್ತನೆ ಆರೋಪ!
- ನೇಪಾಳ ಪ್ರವಾಹ:ಶಿಕ್ಷಕನ ಸಮಯ ಪ್ರಜ್ಞೆ ಬದುಕುಳಿದ ಸಾವಿರಾರು ವಿದ್ಯಾರ್ಥಿಗಳು!
- ಬೆಂಗಳೂರು:ಬಿಜೆಪಿ ಮುಖಂಡನ ಅಪಹರಣ Twest ಆಂಧ್ರ ಪೋಲಿಸರ ವಶದಲ್ಲಿ!
- ಶ್ರೀನಿವಾಸಪುರ:ವರ್ಗಾವಣೆಗೊಂಡ ಬ್ಯಾಂಕ್ ಮೆನೇಜರ್ ಗೆ ಬೀಳ್ಕೊಡುಗೆ!
- ಶ್ರೀನಿವಾಸಪುರ:ಸೋಮಯಾಜಲಹಳ್ಳಿ SRV ಮೇಷ್ಟ್ರು ಇನ್ನಿಲ್ಲ!
- ಶ್ರೀನಿವಾಸಪುರ:ಜಾಗ ಕೊಟ್ಟರೆ ಇಲಾಖೆ ಚರ್ಚಿಸಿ ಉದ್ಯೋಗಾವಕಾಶ ಸಚಿವ!
Sunday, September 6



