ಸಿನಿ ನ್ಯೂಜ್:ತೆಲುಗು ಚಲನಚಿತ್ರರಂಗದ ಅಪ್ರತಿಮ ಪ್ರತಿಭೆಯ ವಿಲಕ್ಷಣ ನಟ ಕೋಟ ಶ್ರೀನಿವಾಸ ರಾವ್ ಇನ್ನಿಲ್ಲ. 83 ನೇ ವಯಸ್ಸಿನಲ್ಲಿ, ಅವರು ಜುಲೈ 13, 2025 ರ ಮುಂಜಾನೆ ಹೈದರಾಬಾದ್ನಲ್ಲಿರುವ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ. ಅವರು ಇತ್ತಿಚಿಗೆ ಕೆಲ ದಿನಗಳಿಂದ ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದರು. ಅವರ ಸಾವಿನ ಸುದ್ದಿ ತೆಲುಗು ಚಿತ್ರಪರಿಶ್ರಮ ಹಾಗು ಸಿನಿಮಾ ಪ್ರೇಕ್ಷಕರನ್ನು ತೀವ್ರ ದುಃಖದಲ್ಲಿ ಮುಳುಗಿಸಿದೆ. ಚಲನಚಿತ್ರ ಪ್ರಯಾಣ
ಕನ್ನಡ ಸೇರಿದಂತೆ ವಿವಿಧ ಭಾಷೆಯ ಚಿತ್ರಗಳಲ್ಲಿ ನಟಿಸಿರುವ ಕೋಟ ಶ್ರೀನಿವಾಸರಾವ್ ತೆಲುಗು,ತಮಿಳು ಮತ್ತು ಹಿಂದಿ ಸೇರಿದಂತೆ ಭಾರತೀಯ ಭಾಷೆಯ 750 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿ ತಮ್ಮ ವಿಶಿಷ್ಟ ನಟನೆಯೊಂದಿಗೆ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. 1997 ರಲ್ಲಿ ಮಾಲಾಶ್ರಿ ಅಭಿನಯದ ‘ಲೇಡಿ ಕಮಿಷನರ್’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದು 2023 ರಲ್ಲಿ ಬಿಡುಗಡೆಯಾದ ‘ಕಬ್ಬಾ’ ಅವರ ಕೊನೆಯ ಕನ್ನಡ ಚಿತ್ರವಾಗಿದೆ.2003 ರಲ್ಲಿ ‘ಸಾಮಿ’ ಚಿತ್ರದ ಮೂಲಕ ತಮಿಳು ಸಿನಿಮಾ ರಂಗ ಪ್ರವೇಶಿಸಿ ಅಲ್ಲಿಯೂ ಉತ್ತಮ ಮನ್ನಣೆ ಗಳಿಸಿದರು. ಅವರ ಕೊನೆಯ ತಮಿಳು ಚಿತ್ರ ‘ಕಥಾಡಿ’, ಇದು 2018 ರಲ್ಲಿ ಬಿಡುಗಡೆಯಾಯಿತು.1987 ರಲ್ಲಿ ‘ಪ್ರತಿಘಟ್’ ಚಿತ್ರದ ಮೂಲಕ ಬಾಲಿವುಡ್ಗೆ ಪಾದಾರ್ಪಣೆ ಮಾಡಿದ ಅವರು ರಾಮ್ ಗೋಪಾಲ್ ವರ್ಮಾ ಅವರ ಸರ್ಕಾರ್ ಹಿಂದಿ ಸಿನಿಮಾದಲ್ಲಿ ಕೋಟ ಅಭಿನಯ ಬಾಲಿವುಡ್ ರಂಗದಲ್ಲಿ ಸಂಚಲನ ಮೂಡಿಸಿತ್ತು. ತೆಲುಗಿನಲ್ಲಿ ಅವರ ಕೊನೆಯ ಚಿತ್ರ ‘ಸುವರ್ಣ ಸುಂದರಿ’. ಪ್ರಶಸ್ತಿ-ಪುರಸ್ಕಾರಗಳು
ಕೋಟ ಶ್ರೀನಿವಾಸ ರಾವ್ ಅವರ ನಟನಾ ವೃತ್ತಿಜೀವನದಲ್ಲಿ ಅನೇಕ ಪ್ರಶಸ್ತಿಗಳು ಮತ್ತು ಪುರಸ್ಕಾರಗಳನ್ನು ತಮ್ಮದಾಗಿಸಿಕೊಂಡಿದ್ದಾರೆ 2015 ರಲ್ಲಿ, ಭಾರತ ಸರ್ಕಾರ ಅವರಿಗೆ ‘ಪದ್ಮಶ್ರೀ’ ನೀಡಿ ಗೌರವಿಸಿದ್ದರೆ ಆಂಧ್ರಪ್ರದೇಶ ರಾಜ್ಯ ಸರ್ಕಾರದ ಪ್ರತಿಷ್ಟಿತ 9 “ನಂದಿ” ಪ್ರಶಸ್ತಿಗಳನ್ನು ಪಡೆದಿದ್ದಾರೆ. ರಂಗಭೂಮಿ ಹಿನ್ನಲೆ ನಟ. ಕೋಟ ಶ್ರೀನಿವಾಸ ರಾವ್ ಜುಲೈ 10, 1942 ರಂದು ಆಂಧ್ರಪ್ರದೇಶದ ಕೃಷ್ಣ ಜಿಲ್ಲೆಯ ಕಂಕಿಪಾಡುವಿನಲ್ಲಿ ಜನಿಸಿದ್ದು ಅವರು ಬಾಲ್ಯದಿಂದಲೂ ರಂಗಭೂಮಿಯೊಂದಿಗೆ ನಂಟು ಹೊಂದಿದ್ದರು,1978 ರಲ್ಲಿ “ಪ್ರಾಣಮ್ ಖರೀಧು” ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಅವರು ತೆಲಗು ಚಿತ್ರರಂಗದ ಖಳನಾಯಕ ಮತ್ತು ಹಾಸ್ಯ ಪಾತ್ರಗಳಲ್ಲಿ ಅಷ್ಟೆ ಅಲ್ಲದೆ ಕ್ಯಾರೆಕ್ಟರ್ ನಟನಾಗಿ ಮಹಿಳಾ ಪ್ರೇಕ್ಷಕರನ್ನು ಅಳಸಿದ್ದಾರೆ ತಮ್ಮ ವಿಶಿಷ್ಟ ಅಭಿನಯದಿಂದ ಪ್ರೇಕ್ಷಕರನ್ನು ಮೆಚ್ಚಿಸಿದ್ದ ಅವರ ವೃತ್ತಿ ಜೀವನದಲ್ಲಿ “ಆಹಾ ನಾ ಪೆಳ್ಳಂಟ” “ಪ್ರತಿಘಟನಾ” “ಗಾಯಂ” “ತೀರ್ಪು” “ಲಿಟಲ್ ಸೋಲ್ಜರ್ಸ್” “ಗಣೇಶ್” “ಚಿನ್ನ” “ಆ ನಲಗರು” “ಪ್ರವರ” ಮತ್ತು ಪೆಳ್ಳೆಯನ ಕೊತ್ತಲೋ ಚಿತ್ರಗಳು ಪ್ರೇಕ್ಷಕರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದೆ. ಈ ಸಿನಿಮಾಗಳ ನಟನೆಗೆ ಪ್ರತಿಷ್ಟಿತ ನಂದಿ ಪ್ರಶಸ್ತಿಗಳನ್ನು ಪಡೆದಿದ್ದಾರೆ.
ಸಿನಿಮಾ ರಂಗಕ್ಕೆ ಬರುವ ಮೊದಲು ಕೋಟ ಶ್ರೀನಿವಾಸ ರಾವ್ ಸ್ಟೇಟ್ ಬ್ಯಾಂಕ್ನಲ್ಲಿ ಉದ್ಯೋಗಿಯಾಗಿ ಕೆಲಸ ಮಾಡುತ್ತಿದ್ದರು.
ಕುಟುಂಬ
ಕೋಟ ಶ್ರೀನಿವಾಸರಾವ್ ಅವರ ಪತ್ನಿ ರುಕ್ಮಿಣಿ ಮತ್ತು ಹೆಣ್ಣುಮಕ್ಕಳನ್ನು ಅಗಲಿದ್ದಾರೆ. ಅವರ ಮಗ ಕೋಟ ವೆಂಕಟ ಆಂಜನೇಯ ಪ್ರಸಾದ್ 2010 ರಲ್ಲಿ ರಸ್ತೆ ಅಪಘಾತದಲ್ಲಿ ನಿಧನರಾಗಿದ್ದರು. ರಾಜಕೀಯಕ್ಕೂ ಸೈ
ಸಿನಿಮಾ ರಂಗದಲ್ಲೆ ಅಲ್ಲ ರಾಜಕೀಯ ಕ್ಷೇತ್ರದಲ್ಲೂ ಸಕ್ರಿಯ ಪಾತ್ರ ವಹಿಸಿದ್ದ ಕೋಟ ಶ್ರೀನಿವಾಸರಾವ್ ರಾಜಕೀಯದಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ 1990 ರಲ್ಲಿ ಅವರು ಭಾರತೀಯ ಜನತಾ ಪಕ್ಷ (ಬಿಜೆಪಿ) ಸೇರಿ 1999 ರಲ್ಲಿ ವಿಜಯವಾಡ ಪೂರ್ವ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾದ್ದರು ಇದೆ ಸಮಯದಲ್ಲಿ ಅವರ ಅತ್ಮೀಯ ನಟ ಹಲವಾರು ತೆಲಗು ಸಿನಿಮಾಗಳಲ್ಲಿ ಇವರಿಬ್ಬರು ಹಾಸ್ಯನಟನಾ ಜೋಡಿ ಪ್ರಖ್ಯಾತಿ ಪಡೆದಿತ್ತು ಹಾಸ್ಯ ನಟ ಬಾಬು ಮೋಹನ್ ಅದೇ ಸಮಯದಲ್ಲಿ ತೆಲಗುದೆಶಂ ಪಕ್ಷದಿಂದ ವಿಧಾನಸಭೆಗೆ ಆಯ್ಕೆಯಾಗುದ್ದು ವಿಶೇಷ ಅವಿಭಜಿತ ಆಂಧ್ರಪ್ರದೇಶ ವಿಧಾನಸಭೆಯಲ್ಲಿ ಇವರಿಬ್ಬರು ಅಕ್ಕಪಕ್ಕದಲ್ಲಿ ಕುಳಿತುಕೊಳ್ಳುತ್ತಿದ್ದು ಮತ್ತೊಂದು ವಿಶೇಷ.
Trending
- ಶ್ರೀನಿವಾಸಪುರ:ಕಸ ಹಾಕುವ ವಿಚಾರಕ್ಕೆ ಜಗಳ ಒಬ್ಬನ ಕೊಲೆ!
- ಶ್ರೀನಿವಾಸಪುರ:ವೇಶ್ಯಾವಾಟಿಕೆ ದಂಧೆ ಪೊಲೀಸ್ ದಾಳಿ, ಕಿಂಗ್ ಪಿನ್ ಮಹಿಳೆ ಬಂಧನ!
- ಶ್ರೀನಿವಾಸಪುರ:ವಾಹನ ಡಿಕ್ಕಿಯಾಗಿ ರಾತ್ರಿ ಗಸ್ತಿನಲ್ಲಿದ್ದ ಪೊಲೀಸ್ ಪೇದೆ ನಿಧನ!
- ಶ್ರೀನಿವಾಸಪುರ:ಕರ್ನಾಟಕ ಬ್ಯಾಂಕ್ ಉದ್ಯೋಗಿ ಅಪಘಾತದಲ್ಲಿ ಸಾವು!
- ಲಂಚ ಪಡೆಯುತ್ತಿದ್ದ ಬಿಜೆಪಿ ಶಾಸಕ ಲೋಕಾಯುಕ್ತ ಬಲೆಗೆ!
- ಯಾವ ಐಟಿ-ಬಿಟಿ ಗೂ ಕಡಿಮೆ ಇಲ್ಲ,Dairy Farm ಆದಾಯ ಲಕ್ಷಗಟ್ಟಲೆ!
- ಬೆಂಗಳೂರಿನಲ್ಲಿ ಕುಬೇರರು ವಾಸಿಸುವ“ಬಿಲಿಯನೇರ್ಸ್ ಸ್ಟ್ರೀಟ್”ಎಲ್ಲಿದೆ?
- ಶ್ರೀನಿವಾಸಪುರ:ನೌಕರರ ಸಂಘದ ಹಾಲಿ-ಮಾಜಿ ಅಧ್ಯಕ್ಷರ ನಡುವೆ ಬಿದಿ ಜಗಳ!
Saturday, March 7



