ನ್ಯೂಜ್ ಡೆಸ್ಕ್:ಪ್ರಪಂಚದಾದ್ಯಂತ ಯುವ ಸಮುದಾಯ Feb14 ಪ್ರೇಮಿಗಳ ದಿನದ ಸಂಭ್ರಮದಲ್ಲಿದ್ದರೆ ಇಲ್ಲೊಬ್ಬ ವಿಕೃತ ಯುವಕ ತಾನು ಪ್ರೀತಿಸುತ್ತಿದ್ದ ಯುವತಿಯ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿ, ಆಕೆಯ ಮೇಲೆ ಆಸಿಡ್ ಸುರಿದು ಕ್ರೌರ್ಯ ಮೇರದಿದ್ದಾನೆ.
ಘಟನೆ ನಡೆದಿರುವುದು ಆಂಧ್ರಪ್ರದೇಶದ ಮದನಪಲ್ಲೆ ಸಮೀಪದ ಗುರ್ರಮಕೊಂಡ ಮಂಡಲದ ಪ್ಯಾರಂಪಳ್ಳಿ, ಗ್ರಾಮದ ಜನಾರ್ದನ್ ಮತ್ತು ರೆಡ್ಡೆಮ್ಮ ದಂಪತಿ ಪುತ್ರಿ ಗೌತಮಿ, ಮದನಪಲ್ಲಿಯಲ್ಲಿರುವ ಖಾಸಗಿ ಕಾಲೇಜಿನಲ್ಲಿ ಪದವಿ ಮುಗಿಸಿ, ಮದನಪಲ್ಲಿ ನಗರದ ಕದಿರಿ ರಸ್ತೆಯಲ್ಲಿ ಬ್ಯೂಟಿ ಪಾರ್ಲರ್ ನಡೆಸುತ್ತುತ್ತಿದ್ದಾಳೆ.
ಆಸಿಡ್ ದಾಳಿ ನಡೆಸಿದ ಆರೋಪಿಯನ್ನು ಮದನಪಲ್ಲಿಯ ಅಮ್ಮಚೆರುವು ಮಿಟ್ಟೆಯ ಗಣೇಶ್ ಎಂದು ಗುರತಿಸಲಾಗಿದೆ.
ಇಂದು ಮುಂಜಾನೆ ಗೌತಮಿಯ ಪೋಷಕರು ಹಾಲು ಕರೆಯಲು ಹಸುಮೆನೆಗ್ ಹೋಗಿದ್ದಾರೆ ಈ ಸಂದರ್ಭದಲ್ಲಿ ಗೌತಮಿ ಮನೆಗೆ ಒಬ್ಬಳೆ ಇರುವುದನ್ನು ಬಳಸಿಕೊಂಡು ಮನೆಗೆ ಹೋಗಿ ಮಲಗಿದ್ದ ಗೌತಮಿಯ ತಲೆಯ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿ, ನಂತರ ಆಕೆಯ ಮುಖದ ಮೇಲೆ ಆಸಿಡ್ ಸುರಿದಿದ್ದಾನೆ.ಯುವತಿ ಗಂಭೀರವಾಗಿ ಗಾಯಗೊಂಡಿದ್ದಾಳೆ, ಆಕೆಯ ಕುಟುಂಬ ಸದಸ್ಯರು ತಕ್ಷಣ ಆಕೆಯನ್ನು ಮದನಪಲ್ಲಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ.
ಮದುವೆ ನಿಶ್ಚಯದಿಂದ ಹಲ್ಲೆ
ಯುವಕ ಗಣೇಶ್ ಪ್ರೀತಿಸುವಂತೆ ಗೌತಮಿಯ ಹಿಂದೆ ಬಿದ್ದು ಪಿಡಿಸುತ್ತಿದ್ದ ಈ ಮದ್ಯೆ ಗೌತಮಿಯ ಪೋಷಕರು ಪಿಲೇರಿನ ಶ್ರೀಕಾಂತ್ ಜೋತೆ ಗೌತಮಿಗೆ ಮದುವೆ ನಿಶ್ಚಯಮಾಡಿದ್ದು ಮುಂದಿನ ಏಪ್ರಿಲ್ 29 ರಂದು ಮದುವೆ ದಿನಾಂಕ ನಿಗದಿಪಡಿಸಿದ್ದಾರೆ ಇದನ್ನು ತಿಳಿದುಕೊಂಡ ಗಣೇಶ್ ಆಕೆಯ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ಶಂಕಿಸಲಾಗಿದೆ. ಘಟನೆಯ ಬಗ್ಗೆ ಮಾಹಿತಿ ಪಡೆದ ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ/ಇದನ್ನು ಓದಿ:ಕಿಚಕ ಶಿಕ್ಷಕರಿಂದ ವಿದ್ಯಾರ್ಥಿನಿ ಮೇಲೆ ಸಾಮೂಹಿಕವಾಗಿ ಅತ್ಯಾಚಾರ
Trending
- ಶಾಸಕ ಕೊತ್ತೂರು ಮಂಜುನಾಥ್ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸುಳಿವು ನೀಡಿದ ನಂಜೇಗೌಡ!
- ಮಗಳಾಡಿದ ಮಾತಿನಿಂದ ತಾಯಿಯ ಮಂತ್ರಿ ಸ್ಥಾನಕ್ಕೆ ಧಕ್ಕೆ!
- ಶ್ರೀನಿವಾಸಪುರ:ವಿದ್ಯಾರ್ಥಿನಿಯರೊಂದಿಗೆ ಶಿಕ್ಷಕನ ಅಸಭ್ಯ ವರ್ತನೆ ಆರೋಪ!
- ನೇಪಾಳ ಪ್ರವಾಹ:ಶಿಕ್ಷಕನ ಸಮಯ ಪ್ರಜ್ಞೆ ಬದುಕುಳಿದ ಸಾವಿರಾರು ವಿದ್ಯಾರ್ಥಿಗಳು!
- ಬೆಂಗಳೂರು:ಬಿಜೆಪಿ ಮುಖಂಡನ ಅಪಹರಣ Twest ಆಂಧ್ರ ಪೋಲಿಸರ ವಶದಲ್ಲಿ!
- ಶ್ರೀನಿವಾಸಪುರ:ವರ್ಗಾವಣೆಗೊಂಡ ಬ್ಯಾಂಕ್ ಮೆನೇಜರ್ ಗೆ ಬೀಳ್ಕೊಡುಗೆ!
- ಶ್ರೀನಿವಾಸಪುರ:ಸೋಮಯಾಜಲಹಳ್ಳಿ SRV ಮೇಷ್ಟ್ರು ಇನ್ನಿಲ್ಲ!
- ಶ್ರೀನಿವಾಸಪುರ:ಜಾಗ ಕೊಟ್ಟರೆ ಇಲಾಖೆ ಚರ್ಚಿಸಿ ಉದ್ಯೋಗಾವಕಾಶ ಸಚಿವ!
Sunday, September 6



