ಶ್ರೀನಿವಾಸಪುರ:ಚಾಲಕನ ನಿಯಂತ್ರಣ ತಪ್ಪಿದ ಸ್ಲೀಪರ್ ಕೋಚ್ ಖಾಸಗಿ ಬಸ್ ಪಕ್ಕದ ಹಳ್ಳಕ್ಕೆ ಉರಳಿ ಬಿದ್ದು ಒಬ್ಬರು ಮೃತ ಪಟ್ಟಿರುವ ಘಟನೆ ಶ್ರೀನಿವಾಸಪುರ ತಾಲ್ಲೂಕಿನ ರಾಯಲ್ಪಾಡು ಬಳಿ ನಡೆದಿದೆ.
ಮೃತ ವ್ಯಕ್ತಿಯನ್ನು ಆಂಧ್ರದ ಪ್ರಕಾಶಂ ಜಿಲ್ಲೆಯ ಪುನಗೋಡು ಗ್ರಾಮದ ಅನಿಲ್ (22) ಎಂದು ಗುರತಿಸಲಾಗಿದೆ. ಖಾಸಗಿ ಬಸ್ ಶ್ರೀ ಶ್ರೀನಿವಾಸ ಬಸ್ ಟ್ರಾವಲ್ಸ್ ಬೆಂಗಳೂರಿನಿಂದ ಆಂಧ್ರದ ಒಂಗೋಲ್ ನಗರಕ್ಕೆ ಮದನಪಲ್ಲಿ ಮಾರ್ಗವಾಗಿ ಹೋಗಲು ರಾಯಲ್ಪಾಡು ಬಳಿ ಚಲಿಸುತ್ತಿದ್ದಾಗ ಭಾನುವಾರ ಮದ್ಯರಾತ್ರಿ ಚಾಲಕನ ನಿಯಂತ್ರಣ ತಪ್ಪಿದ ಬಸ್ ರಾಯಲ್ಪಾಡು ತಿರುವಿನಲ್ಲಿ ಹಳ್ಳಕ್ಕೆ ಉರಳಿ ಬಿದ್ದಿದೆ ಬಸ್ಸಿನಲ್ಲಿದ್ದ ಸುಮಾರು 17 ಮಂದಿ ಪ್ರಯಾಣಿಕರಲ್ಲಿ ಮೃತ ಯುವಕನ ತಲೆಗೆ ತೀವ್ರ ಪೆಟ್ಟಾಗಿ ಸ್ಥಳದಲ್ಲೆ ಮೃತ ಪಟ್ಟಿರುವುದಾಗಿ ಹೇಳಲಾಗಿದೆ.
ಅಪರಿಚಿತ ವಾಹನ ಡಿಕ್ಕಿ ವ್ಯಕ್ತಿ ದೇಹ ಚಿದ್ರಚಿದ್ರ
ಬೆಂಗಳೂರು-ಮದನಪಲ್ಲಿ ಹೆದ್ದಾರಿಯಲ್ಲಿ ಬೆಳಗಿನ ಸಮಯದಲ್ಲಿ ವಾಕಿಂಗ್ ಮಾಡಿಕೊಂಡು ಹೋಗುತ್ತಿದ್ದ ವ್ಯಕ್ತಿಗೆ ಅಪರಿಚಿತ ವಾಹನ ಗುದ್ದಿಕೊಂಡು ಹೋಗಿದೆ ವಾಹನ ಡಿಕ್ಕಿಯಾದ ರಭಸಕ್ಕೆ ವ್ಯಕ್ತಿ ದೇಹ ಚಿದ್ರಚಿದ್ರವಾಗಿದ್ದು ಇದೊಂದು ಭಿಕರ ಅಂಪಘಾತ ಎನ್ನುತ್ತಾರೆ ಸ್ಥಳೀಯರು ಈ ಅಪಘಾತ ಶ್ರೀನಿವಾಸಪುರ ತಾಲ್ಲೂಕಿನ ಆಂಧ್ರ-ಕರ್ನಾಟಕದ ಗಡಿಯಂಚಿನಲ್ಲಿ ಹಕ್ಕಿ ಪಿಕ್ಕಿ ಕಾಲೋನಿ ಗೇಟ್ ಬಳಿ ನಡೆದಿದ್ದು,ಮೃತ ವ್ಯಕ್ತಿಯ ದೇಹದ ಭಾಗಗಳು ರಸ್ತೆಯಲ್ಲಾ ಚಲ್ಲಾಪಿಲ್ಲಿಯಾಗಿ ಬಿದಿರುವುದಾಗಿ ಮೃತನನ್ನು ಗಡಿಯಾಚಗಿನ ಆಂಧ್ರದ ಬಾರ್ಲಪಲ್ಲಿ ಗ್ರಾಮದ ವಸಂತ ಕುಮಾರ್ (30) ಎಂದು ಗುರುತಿಸಲಾಗಿದೆ ಎರಡು ಪ್ರತ್ಯಕ ಅಪಘಾತಗಳ ಪ್ರಕರಣಗಳು ರಾಯಲ್ಪಾಡು ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಮಾರ್ಗದಲ್ಲಿ ಹೆಚ್ಚಿದ ಆಂಧ್ರ ಖಾಸಗಿ ಬಸ್ಸುಗಳ ಒಡಾಟ
ಬೆಂಗಳೂರು-ಮದನಪಲ್ಲಿ ಹೆದ್ದಾರಿ ಮಾರ್ಗವಾಗಿ ಆಂಧ್ರದ ರಾಜಧಾನಿ ಅಮರಾವತಿಗೆ(ವಿಜಯವಾಡ) ತೆರಳಲು ಈ ಮಾರ್ಗ ಹತ್ತಿರದ ದಾರಿಯಾಗಿದ್ದು ಇದರಿಂದಾಗಿ ಇತ್ತಿಚಿಗೆ ಆಂಧ್ರ ಮೂಲದ ಖಾಸಗಿ ಬಸ್ಸುಗಳ ಒಡಾಟ ಹೆಚ್ಚಾಗಿದ್ದು ಈ ಬಸ್ಸುಗಳಿಗೆ ಸರಿಯಾದ ದಾಖಲೆಗಳು ಇದಿಯಾ ಇಲ್ಲವಾ ಎಂಬ ಅನುಮಾನವನ್ನು ಸಾರ್ವಜನಿಕರು ವ್ಯಕ್ತಿಪಡಿಸುತ್ತಾರೆ.
Trending
- ಶ್ರೀನಿವಾಸಪುರ:ಕಸ ಹಾಕುವ ವಿಚಾರಕ್ಕೆ ಜಗಳ ಒಬ್ಬನ ಕೊಲೆ!
- ಶ್ರೀನಿವಾಸಪುರ:ವೇಶ್ಯಾವಾಟಿಕೆ ದಂಧೆ ಪೊಲೀಸ್ ದಾಳಿ, ಕಿಂಗ್ ಪಿನ್ ಮಹಿಳೆ ಬಂಧನ!
- ಶ್ರೀನಿವಾಸಪುರ:ವಾಹನ ಡಿಕ್ಕಿಯಾಗಿ ರಾತ್ರಿ ಗಸ್ತಿನಲ್ಲಿದ್ದ ಪೊಲೀಸ್ ಪೇದೆ ನಿಧನ!
- ಶ್ರೀನಿವಾಸಪುರ:ಕರ್ನಾಟಕ ಬ್ಯಾಂಕ್ ಉದ್ಯೋಗಿ ಅಪಘಾತದಲ್ಲಿ ಸಾವು!
- ಲಂಚ ಪಡೆಯುತ್ತಿದ್ದ ಬಿಜೆಪಿ ಶಾಸಕ ಲೋಕಾಯುಕ್ತ ಬಲೆಗೆ!
- ಯಾವ ಐಟಿ-ಬಿಟಿ ಗೂ ಕಡಿಮೆ ಇಲ್ಲ,Dairy Farm ಆದಾಯ ಲಕ್ಷಗಟ್ಟಲೆ!
- ಬೆಂಗಳೂರಿನಲ್ಲಿ ಕುಬೇರರು ವಾಸಿಸುವ“ಬಿಲಿಯನೇರ್ಸ್ ಸ್ಟ್ರೀಟ್”ಎಲ್ಲಿದೆ?
- ಶ್ರೀನಿವಾಸಪುರ:ನೌಕರರ ಸಂಘದ ಹಾಲಿ-ಮಾಜಿ ಅಧ್ಯಕ್ಷರ ನಡುವೆ ಬಿದಿ ಜಗಳ!
Saturday, March 7



