ನ್ಯೂಜ್ ಡೆಸ್ಕ್:ಗಂಡನಿಗೆ ಹೃದಯಾಘಾತವಾಗಿದೆ ಎಂದು ನೆರೆಮನೆಯವರನ್ನು ನಂಬಿಸಿರುವ ಪತ್ನಿ ಅವನನ್ನು ಆಸ್ಪತ್ರೆಗೆ ಕರೆದೊಯಿದಿರುವದ್ದಾಳೆ. ಅಲ್ಲಿ ವೈದ್ಯರು ಪರಿಕ್ಷೆಗಳು ನಡೆಸಿ ಸಾವನಪ್ಪಿರುವುದಾಗಿ ಘೋಷಿಸಿದ್ದಾರೆ ಗಂಡನ ಸಾವಿನ ವಿಷಯ ಆತನ ಕುಟುಂಬಸ್ಥರಿಗೆ ತಿಳಿದ ನಂತರ, ಮೃತನ ತಾಯಿ ಮಗನ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿ ಪೊಲೀಸರಿಗೆ ದೂರು ನೀಡಿದ್ದಾರೆ. ನಂತರ ಪೊಲೀಸರು ರಂಗ ಪ್ರವೇಶ ಮಾಡಿದಾಗ ಕೊಲೆ ಸತ್ಯ ಬಯಲಾಗಿದೆ.
ಈ ಘಟನೆ ಆಂಧ್ರದ ಗೋದಾವರಿ ಜಿಲ್ಲೆಯ ಪೆದ್ದಪಲ್ಲಿಯಲ್ಲಿ ನಡೆದಿದ್ದು ಮೃತ ವ್ಯಕ್ತಿಯನ್ನು ಪ್ರವೀಣ್ ಎಂದು ಗುರುತಿಸಲಾಗಿದೆ .ಮೃತ ಪ್ರವೀಣ್ ಹೆಂಡತಿ ಲಲಿತಾ ಗಂಡ ಮಲಗಿದ್ದಾಗ ಮುಖಕ್ಕೆ ತಲೆದಿಂಬು ಹಿಡಿದಿಟ್ಟು ಉಸಿರಾಡದಂತೆ ಮಾಡಿ ಸಾಯಿಸಿದ್ದಾಳೆ, ನಂತರ ಆಸಾಮಿ ಎಲ್ಲಿ ಸತ್ತಿಲ್ಲವೋ ಎಂದು ಶಂಕೆಯಿಂದ ಹಾವಿನಿಂದ ಕಚ್ಚಿಸಿದ್ದಾಳೆ.
ಗೋದಾವರಿ ಮಾರ್ಕಂಡೇಯ ಕಾಲೋನಿಯಲ್ಲಿ ಈ ಘಟನೆ ನಡೆದಿದ್ದು ಪತ್ರಕರ್ತನಾಗಿ ವೃತ್ತಿ ಆರಂಭಿಸಿದ ಪ್ರವೀಣ್ ಎಂಬಾತ ಕಾಲಾಂತರದಲ್ಲಿ ರಿಯಲ್ ಎಸ್ಟೇಟ್ ಉದ್ಯಮಿಯಾಗಿ ನಂತರದಲ್ಲಿ ಬಿಲ್ಡರ್ ಆಗಿದ್ದಾನೆ ಜೀವನ ಹೀಗೆ ಸಾಗಿರುವಾಗ ಪ್ರವೀಣ್ ಮಹಿಳೆಯೊಬ್ಬಳ ಸಹವಾಸಕ್ಕೆ ಬಿಳುತ್ತಾನೆ ಅದು ವಿವಾಹೇತರ ಸಂಬಂಧವಾಗಿದ್ದ ಕಾರಣ ಪ್ರವೀಣನ ಹೆಂಡತಿಯನ್ನು ಕೆರಳಿಸಿದೆ ಇದು ಇಬ್ಬರ ನಡುವೆ ದಾಂಪತ್ಯ ಕಲಹಕ್ಕೆ ಕಾರಣವಾಗಿ ಮನಸ್ತಾಪದ ಹಿನ್ನೆಲೆಯಲ್ಲಿ ಪ್ರವೀಣ ಕುಡಿತದ ಚಟಕ್ಕೆ ಬಿದ್ದು ಪ್ರತಿದಿನ ಮನೆಗೆ ಕುಡಿದು ಬರತಿದ್ದ ಹಿನ್ನಲೆಯಲ್ಲಿ ಪತ್ನಿ ಲಲಿತಾ,ತನ್ನ ಗಂಡನ ಜೊತೆ ಸೆಂಟ್ರಿಂಗ್ ಕೆಲಸ ಮಾಡುವ ಸುರೇಶ್ ಎಂಬುವವನ ಮುಂದೆ ತನ್ನ ಸಂಕಟಗಳನ್ನು ತೋಡಿಕೊಂಡಿದ್ದಾಳೆ ಗಂಡನ ಕಾಟದಿಂದ ತನಗೆ ಮುಕ್ತಿಕೊಡಿಸುವಂತೆ ಕಾಡಿದ್ದಾಳೆ ಕೊನೆಗೆ ಇಬ್ಬರೂ ಸೇರಿ ಪ್ರವೀಣನನ್ನು ಕೊಲೆ ಮಾಡಲು ನಿರ್ಧರಿಸಿ ತನ್ನ ಸಂಸಾರಕ್ಕೆ ತೊಂದರೆಯಾಗದ ರೀತಿಯಲ್ಲಿ ಸುರೇಶ ಬೇರೆಯದ್ದೇ ರೀತಿಯಲ್ಲಿ ಸ್ಕೆಚ್ ಹಾಕಿದ್ದಾನೆ ಲಲಿತಾ ಕಡೆಯಿಂದ ದೊಡ್ಡ ಮಟ್ಟದಲ್ಲಿ ಆಫರ್ ಪಡೆದ ಸುರೇಶ್ ಮೃತ ಪ್ರವೀಣ ಒಡೆತನದ ಫ್ಲ್ಯಾಟ್ ಪಡೆಯುವ ಭರವಸೆ ಸಿಕ್ಕಿದ ನಂತರ ಪ್ರವೀಣ್ನನ್ನು ಕೊಲ್ಲಲು ನಿರ್ಧರಿಸಿದ್ದಾನೆ ಪ್ರವೀಣನ ಕೊಲೆಯನ್ನು ಸಹಜ ಸಾವು ಎಂದು ನಂಬಿಸುವ ಸಲುವಾಗಿ ಮೊದಲು ದಿಂಬನ್ನು ಒತ್ತೆಯಿಟ್ಟು ಉಸಿರಾಡದಂತೆ ಮಾಡಿ ಪ್ರತಿರೋಧ ಬಂದರೆ ಹಾವಿನಿಂದ ಕಚ್ಚಿಸಿ, ಕೊಲೆ ಮಾಡಿದ್ದಾರೆ.ನಂತರ ಪ್ರವೀಣ್ಗೆ ಹೃದಯಾಘಾತವಾಗಿದೆ ಎಂದು ಪತ್ನಿ ಲಲಿತಾ, ನೆರೆಮನೆಯವರನ್ನು ನಂಬಿಸಿ ಆಸ್ಪತ್ರೆಗೆ ಕರೆದೊಯ್ದಿದ್ದಾಳೆ.ಕೊಲೆಗೆ ಇನ್ನೂ ಹಲವರ ಸಹಕಾರ ಪಡೆದಿರುವ ಲಲಿತಾ ಖರ್ಚಿಗೆ ತನ್ನ ಮೈಮೇಲಿದ್ದ 34 ಗ್ರಾಂ ಚಿನ್ನದ ಸರವನ್ನು ನೀಡಿದ್ದಾಳೆ.ಕೊಲೆ ಸತ್ಯವನ್ನು ಪೊಲೀಸರ ತನಿಖೆಯಲ್ಲಿ ಪತ್ನಿ ಲಲಿತಾ ವಿವರಿಸಿದ್ದಾಳೆ, ಈ ಅಧಾರದಲ್ಲಿ ಪೊಲೀಸರು ಪತ್ನಿ ಲಲಿತಾ ಸೇರಿದಂತೆ ಆರು ಆರೋಪಿಗಳನ್ನು ಬಂಧಿಸಿ ರಿಮಾಂಡ್ಗೆ ಕಳುಹಿಸಿದ್ದಾರೆ. ಪ್ರವೀಣ್-ಲಲಿತಾ ದಂಪತಿಗೆ ಇಬ್ಬರು ಪುತ್ರಿಯರು ಹಾಗೂ ಒಬ್ಬ ಪುತ್ರ ಇದ್ದಾನೆ.
Breaking News
- ನಾಗಮಂಗಲ ಗಲಭೆ ಸಂಬಂಧ ಕೇರಳದ ಇಬ್ಬರ ಬಂಧನ!
- J&Kಚುನಾವಣೆ ವೇಳೆ ಎನ್ಕೌಂಟರ್ ಮೂವರು ಉಗ್ರರ ಹತ್ಯೆ ಇಬ್ಬರು ಸೈನಿಕರ ವೀರ ಮರಣ!
- BIGSHOK ಏರಿಕೆಯಾದ ಅಡುಗೆ ಎಣ್ಣೆ ರೇಟು!
- ಶ್ರೀನಿವಾಸಪುರದ KSRTC ಗಣೇಶ ವಿಸರ್ಜನೆ
- ಶ್ರೀನಿವಾಸಪುರದ ಯುವಕ ಗೋಕರ್ಣದಲ್ಲಿ ಸಮುದ್ರದಪಾಲು
- ಮದನಪಲ್ಲಿ-ತಿರುಪತಿ ಘಾಟ್ ರಸ್ತೆಯಲ್ಲಿ ಅಪಘಾತ ಕರ್ನಾಟಕದ ನಾಲ್ವರ ಸಾವು!
- ಕಮ್ಯುನಿಸ್ಟ್ ಧ್ವನಿ ಸೀತಾರಾಂ ಯೆಚೂರಿ ಇನ್ನಿಲ್ಲ!
- ಚಿಂತಾಮಣಿ ನಗರಸಭೆ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ
- ಅಮೇರಿಕಾದಲ್ಲಿ ರಾಹುಲ್-ಶಿವಕುಮಾರ್ ಭೇಟಿ ರಾಜಕೀಯ ಸಂಚಲನ
- ಮೃತ ಪತ್ರಕರ್ತನ ಕುಟುಂಬಕ್ಕೆ ಪರಿಹಾರ ಮಂಜೂರು ಮಾಡಿದ ಸಿಎಂ
Monday, September 16