ಶ್ರೀನಿವಾಸಪುರ: ಊರು ಅಭಿವೃದ್ಧಿಯಾಗಬೇಕು ಎನ್ನುವುದಾದರೆ ಊರಿಗೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸಿದಾಗ ಮಾತ್ರ ಊರಿನ ಅಭಿವೃದ್ಧಿಗೆ ಪೂರಕವಾತವರಣ ನಿರ್ಮಾಣವಾಗಿ ವಸತಿ ಮಾಡಬಹುದು,ಸುರಕ್ಷಿತವಾಗಿ ವ್ಯಾಪಾರ ವ್ಯವಹಾರ ನಡೆಸಬಹುದು ಎಂಬ ನಂಬಿಕೆ ಬಂಡವಾಳ ಹೂಡಿಕೆದಾರರಿಗೆ ಬರುತ್ತದೆ.
ಬೆಂಗಳೂರು ಮಹಾ ನಗರಕ್ಕೆ ನೂರು ಕೀ.ಮಿ ದೂರದ ಊರಾದ ಶ್ರೀನಿವಾಸಪುರ ವೈಷಮ್ಯ ರಾಜಕಾರಣಕ್ಕೆ ಕರ್ನಾಟಕದಲ್ಲೆ ಫೇಮಸ್ಸು, ಇಲ್ಲಿ ಬೆಳೆಯುವ ಮಾವಿಕಾಯಿ ಪ್ರಪಂಚಕ್ಕೆ ಪ್ರಸಿದ್ಧಿ ಇಂತಹ ಊರಿನಲ್ಲಿ ಸರಿಯಾದ ರಸ್ತೆ ಇಲ್ಲ ರಾಜಧಾನಿ ಬೆಂಗಳೂರಿನಿಂದ ಇಲ್ಲಿಗೆ ಬರಲು ಸಮರ್ಪಕವಾದ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಇಲ್ಲ, ಇನ್ನು ಊರು ಉದ್ಧಾರದ ಬಗ್ಗೆ ಉದ್ದುದ್ದ ಭಾಷಣ ಬಿಗಿದರೆ ಕೇಳೋರು ಯಾರು ಇಂತಹ ಪರಿಸ್ಥಿತಿ ಶ್ರೀನಿವಾಸಪುರ ಪಟ್ಟಣವನ್ನು ಕಾಡುತ್ತಿದೆ.
ಅಂತರರಾಜ್ಯಗಳ ಸಂಪರ್ಕದ ಶ್ರೀನಿವಾಸಪುರ
ಶ್ರೀನಿವಾಸಪುರ ಪಟ್ಟಣ ಅತ್ತ ದೂರದ ತಮಿಳುನಾಡು ಇತ್ತ ಆಂಧ್ರದ ಊರುಗಳನ್ನು ಸಂಪರ್ಕಿಸುವ ಕೇಂದ್ರವಾಗಿದೆ ಮುಳಬಾಗಿಲು-ಚಿಂತಾಮಣಿ,ಆಂಧ್ರದ ಚಿತ್ತೂರು-ಹಿಂದೂಪುರ,ಹೊಸೂರು-ಮದನಪಲ್ಲೆ ಗಳಿಗೆ ಹೋಗಿಬರುವರು ಶ್ರೀನಿವಾಸಪುರ ಪಟ್ಟಣದಲ್ಲಿ ಹಾದುಹೋಗಬೇಕು ಇಲ್ಲಿರುವ ರಸ್ತೆಗಳು ಹಾಗು ರಾಷ್ಟ್ರೀಯ ಹೆದ್ದಾರಿಯ ರಸ್ತೆಯಲ್ಲೆ ಸಂಚರಿಸಬೇಕು ಇಲ್ಲಿ ಪ್ರತಿ ದಿನವೂ ದೊಡ್ದ ಮಟ್ಟದ ಟ್ರಾಫಿಕ್ ಇರುತ್ತದೆ. ಅದರಲ್ಲೂ ತಮಿಳುನಾಡಿನಿಂದ ಬರುವಂತ ಬಾರಿಗಾತ್ರದ ಟ್ರಕ್ ಗಳು ವಾಹನಗಳು ಹಳ್ಳಬಿದ್ದ ರಸ್ತೆಯಲ್ಲಿ ವಾಲಾಡುತ್ತ ಬರುವುದನ್ನು ನೋಡಿದರೆ ಏನು ಅನಾಹುತವಾಗಲಿದೆಯೋ ಅನ್ನೋ ಭಯ ಮಾತ್ರ ಎಲ್ಲರಲ್ಲೂ ಇದೇ.
ಪ್ರಜಾಪ್ರಭುತ್ವ ವ್ಯವಸ್ಥೆ ಇರುವುದು ಜನರಿಂದ, ಜನರಿಗಾಗಿ, ಜನರಿಗೋಸ್ಕರ ಆದರೆ ಅದೆಲ್ಲವೂ ಇಲ್ಲಿ ಬರೇ ಬಾಯಿ ಮಾತಿಗಷ್ಟೇ ಸೀಮಿತವಾಗಿದ್ದು.ಅದು ಆಚರಣೆಗೆ ಬರಲು ಇಲ್ಲಿ ಸಾಧ್ಯವಿಲ್ಲ ಎನ್ನುವ ವಾತವರಣ ಇದೆ,ಊರಿನಲ್ಲಿ ಇರಬೇಕಾದ ವಸತಿ ಬಡಾವಣೆ, ವ್ಯಾಪರ ಮುಂಗಟ್ಟುಗಳು ಇವೆ, ಗಡಿದಾಟಿದರೆ ಆಂಧ್ರಪ್ರದೇಶದ ಊರುಗಳು ಸಿಗುತ್ತವೆ ಆಂಧ್ರದ ಮದನಪಲ್ಲೆ,ಬಿ.ಕೊತ್ತಕೋಟ ಊರಿನವರು ಕೋಲಾರ ಕೆ.ಜಿ.ಎಫ್ ಬೆಂಗಳೂರು ಕಡೆಗೆ ಹೋಗಲು ಶ್ರೀನಿವಾಸಪುರ ಪಟ್ಟಣದ ಮೇಲೆ ಹಾದು ಹೋಗಬೇಕು ಹೀಗೆ ಹತ್ತಾರು ಅನಕೂಲಗಳಿಗೆ ಅವಶ್ಯಕತೆ ಇರುವಂತ ಶ್ರೀನಿವಾಸಪುರ ಪಟ್ಟಣದಲ್ಲಿ ರಸ್ತೆ ಸೇರಿದಂತೆ ಸಮರ್ಪಕವಾದ ಮೂಲಭೂತ ಸೌಕರ್ಯಗಳನ್ನು ಒದಗಿಸದೆ ನಿರ್ಲಕ್ಷ್ಯಕ್ಕೆ ಒಳಪಡಿಸಿರುವ ಬಗ್ಗೆ ಜನರು ತೀವ್ರ ಬೇಸರ ವ್ಯಕ್ತಪಡಿಸುತ್ತಾರೆ.
ಐದು ಹೋಬಳಿ ಕೇಂದ್ರಗಳನ್ನು ಹೊಂದಿರುವ ಶ್ರೀನಿವಾಸಪುರಕ್ಕೆ ಸಂಪರ್ಕ ರಸ್ತೆಗಳ ಸ್ಥಿತಿಯೂ ಉತ್ತಮವಾಗಿಲ್ಲ. ಬಹುಪಾಲು ರಸ್ತೆಗಳು ಗುಂಡಿಗಳಿಂದ ಆವರಿಸಿವೆ. ಮಳೆಗಾಲದಲ್ಲಿ ಈ ಗುಂಡಿಗಳಲ್ಲಿ ನೀರು ತುಂಬಿಕೊಳ್ಳುತ್ತಿದ್ದು, ಇತರೆ ಕಾಲದಲ್ಲಿ ಧೂಳಿನ ನೇವೇದ್ಯ ತಪ್ಪಿದ್ದಲ್ಲ. ಈ ರಸ್ತೆಗಳು ನಮ್ಮ ಜನಪ್ರತಿನಿಧಿಗಳಿಗೆ ಕಾಣಿಸುತ್ತಿಲ್ಲವೇ ಎನ್ನುವ ಪ್ರಶ್ನೆ ಸಹಜವಾಗಿಯೇ ಜನರನ್ನು ಕಾಡುತ್ತಿದೆ. ಅಭಿವೃದ್ಧಿ ವಿಷಯದಲ್ಲಿ ಬೊಗಳೆ ಬಿಡುವ ಇಲ್ಲಿನ ಆಡಳಿತ ವ್ಯವಸ್ಥೆ ನಾಗರಿಕರಿಗೆ ಮೂಲ ಸೌಕರ್ಯವಾದ ರಸ್ತೆ ಅಭಿವೃದ್ಧಿ ಬಗ್ಗೆ ಚಿಂತನೆ ನಡೆಸದಿರುವುದು ನಾಚಿಗೇಡಿನ ಸಂಗತಿಯಾಗಿದೆ. ರಸ್ತೆಗಳಿಗೆ ಕಾಯಕಲ್ಪದ ಭಾಗ್ಯ ಯಾವಾಗ ಎನ್ನುವುದನ್ನು ಕಾದು ನೋಡಬೇಕಿದೆ.
ಶ್ರೀನಿವಾಸಪುರದಲ್ಲಿ ಸಾರಿಗೆ ಸಂಸ್ಥೆ ಎರಡು ಬಸ್ ನಿಲ್ದಾಣಗಳು ಇವೆ
ಶ್ರೀನಿವಾಸಪುರ ಪಟ್ಟಣದಲ್ಲಿ ರಾಜ್ಯ ಸಾರಿಗೆ ಸಂಸ್ಥೆಗೆ ಸೇರಿದ ಎರಡು ಬಸ್ ನಿಲ್ದಾಣಗಳು ಇವೆ ಅದರೆ ಏನು ಪ್ರಯೋಜನ ಸಮರ್ಪಕ ಸಾರಿಗೆ ವ್ಯವಸ್ಥೆ ಇಲ್ಲ,ಜಿದ್ದಿಗೆ ಬಿದ್ದ ಇಲ್ಲಿನ ರಾಜಕೀಯ ಷರತ್ತಿಗೆ ಎರಡು ಬಸ್ ನಿಲ್ದಾಣಗಳು ನಿರ್ಮಾಣ ಆಗಿದೆ ಹಳೆಯ ಬಸ್ ನಿಲ್ದಾಣ ಉಪಯೋಗವಾಗುತ್ತಿದ್ದರೆ,ನೂತನ ಬೃಹತ್ ಬಸ್ ನಿಲ್ದಾಣ ಬಳಕೆಯಾಗದೆ ಹಳೆಯದಾಗುತ್ತಿರುವುದು ವಿಪರ್ಯಾಸ.ಹಳೆ ಬಸ್ ನಿಲ್ದಾಣದ ಬಳಿ ಖಾಸಗಿ ಬಸ್ಸುಗಳು ನಿಲ್ಲಿಸಲು ನಿಲ್ದಾಣ ಮಾಡಿಕೊಡಲು ತಾಲೂಕು ಅಡಳಿತಕ್ಕೆ ಸಾಧ್ಯವಾಗಿಲ್ಲ! ರಸ್ತೆಯಲ್ಲೆ ಖಾಸಗಿ ಬಸ್ಸು ನಿಲ್ಲಿಸುತ್ತಿರುವುದರಿಂದ ಸಂಚಾರಕ್ಕೆ ತೊಂದರೆಯಾಗುತ್ತಿದೆ.

error: Content is protected !!