ಶ್ರೀನಿವಾಸಪುರ:ಅರಣ್ಯ ಇಲಾಖೆ ದೌರ್ಜನ್ಯದಿಂದ ಸಣ್ಣಪುಟ್ಟ ರೈತರು ಜಮೀನು ಕಳೆದುಕೊಂಡು ಬಿದಿಪಾಲಾಗಿದ್ದೀವಿ ಜನಪ್ರತಿನಿಧಿಗಳು ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿ ತಾಲೂಕಿನ ದಳಸನೂರು ಗ್ರಾಮಸ್ಥರು ಚುನಾವಣೆ ಬಹಿಷ್ಕಾರಕ್ಕೆ ಮುಂದಾಗಿ ಪ್ರತಿಭಟನೆ ನಡೆಸಿ ಹೇಳಿಕೆ ನೀಡಿದ್ದರು.
ಶ್ರೀನಿವಾಸಪುರ ಮತಕ್ಷೇತ್ರವಾದ ಕಸಬಾ ಹೋಬಳಿಯ ಕೆಲ ಗ್ರಾಮಗಳ ರೈತರು ನಾಲ್ಕೈದು ದಶಕಗಳಿಂದ ಸಾಗುವಳಿ ಮಾಡಿಕೊಂಡಿದ್ದು ಅಂತವರನ್ನು ಅರಣ್ಯ ಇಲಾಕೆ ಅಧಿಕಾರಿಗಳು ಜಮೀನು ತಮ್ಮದು ಎಂದು ಬೆಳೆದಿದ್ದ ಬೆಳೆ ನಾಶಮಾಡಿ ರೈತರನ್ನು ಜಮೀನಿಂದ ಕಾಲಿ ಮಾಡಿಸಿದ್ದಾರೆ ಎಂದು ಆರೋಪಿಸಿ ಕಸಬಾ ಹೋಬಳಿಯ ಕೆಲ ಗ್ರಾಮಗಳ ರೈತರು ದಳಸನೂರು ಗ್ರಾಮದಲ್ಲಿ ಪ್ರತಿಭಟನೆ ನಡೆಸಿ ಸರಕಾರ, ಜನಪ್ರತಿನಿಧಿಗಳು ನಮಗೆ ಸ್ಪಂದನೆ ನೀಡುತ್ತಿಲ್ಲ ನಮ್ಮ ಕಷ್ಟಕ್ಕೆ ಆಗುತ್ತಿಲ್ಲ ನಮಗೆ ಅನಕೂಲ ಆಗದ ಮೇಲೆ ಮತ ಹಾಕಿ ಎನು ಪ್ರಯೋಜನ ಎಂದು ಅರಣ್ಯ ಇಲಾಖೆ ವಿರುದ್ದ ಆಕ್ರೋಶ ವ್ಯಕ್ತಪಡಿಸಿ ಲೋಕಸಭೆ ಚುನಾವಣೆಯಲ್ಲಿ ಮತ ಬಹಿಷ್ಕಾರ ಅನಿವಾರ್ಯ ಎಂದದು ಮತ ಬಹಿಷ್ಕಾರ ನಿರ್ಧಾರ ಪ್ರಕಟಿಸಿದ್ದರು.
ಶ್ರೀನಿವಾಸಪುರ ಕ್ಷೇತ್ರದಲ್ಲಿ ಗ್ರಾಮಸ್ಥರ ಮತ ಬಹಿಷ್ಕಾರ ತೀರ್ಮಾನ ಸಾರ್ವಜನಿಕವಾಗಿ ಕುತೂಹಲಕ್ಕೂ ಕಾರಣವಾಗಿತ್ತಲ್ಲದೆ ಜಿಲ್ಲಾಡಳಿತಕ್ಕೆ ತಲೆ ನೋವಾಗಿ ಪರಿಣಮಿಸಿತ್ತು ಇದಕ್ಕಾಗಿ ಜಿಲ್ಲಾಧಿಕಾರಿ ಸೂಚನೆಯಂತೆ ಸಹಾಯಕ ಕಮೀಷನರ್ ತಾಲೂಕು ತಹಶೀಲ್ದಾರ್ ಗ್ರಾಮಕ್ಕೆ ಭೇಟಿ ನೀಡಿ ಗ್ರಾಮಸ್ಥರನ್ನು ಮನವೊಲಿಸುವ ಪ್ರಯತ್ನ ಮಾಡಿದ ಮೊದಲನೆ ಹಂತ ವಿಫಲವಾಗಿತ್ತು ನಂತರದಲ್ಲಿ ಜಿಲ್ಲಾ ಸಹಾಯಕ ಅರಣ್ಯಾಧಿಕಾರಿ,ತಾಲೂಕು ತಹಶೀಲ್ದಾರ್ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ನೂರಕ್ಕೂ ಹೆಚ್ಚು ಗ್ರಾಮಸ್ಥರೊಂದಿಗೆ ಕೂತು ಸಭೆ ನಡೆಸಿಮಾತನಾಡಿದ ಅಧಿಕಾರಿಗಳು ರೈತರು ಹಾಗು ಅರಣ್ಯ ಇಲಾಖೆ ನಡುವಿನ ಗೊಂದಲ ನಿವಾರಿಸಲು ಕಂದಾಯ ಹಾಗೂ ಅರಣ್ಯ ಇಲಾಖೆ ಮಂತ್ರಿಗಳು ಹೇಳಿರುವಂತೆ ಎರಡು ಇಲಾಖೆ ವತಿಯಿಂದ ಜಂಟಿ ಸರ್ವೆ ನಡೆಸುವವರಿಗೂ ಯಾವುದೆ ರೀತಿಯಲ್ಲೂ ಅರಣ್ಯ ಅಧಿಕಾರಿಗಳು ಅರಣ್ಯ ತೆರವು ಕಾರ್ಯವರಣೆ ಮಾಡುವುದಿಲ್ಲ ಎಂಬ ಭರವಸೆಗೆ ರೈತರು ಗ್ರಾಮಸ್ಥರು ಒಪ್ಪಿಗೆ ನೀಡಿದ್ದಾರೆ.ಈ ಸಂದರ್ಭದಲ್ಲಿ ಕೋಲಾರ ಜಿಲ್ಲಾ ರೈತ ಮುಖಂಡ ವೀರಬದ್ರಸ್ವಾಮಿ ಪಾತಪಲ್ಲಿಚೌಡರೆಡ್ಡಿ ವೀರಬದ್ರರೆಡ್ಡಿ ಸೇರಿದಂತೆ ಹಲವಾರು ರೈತರು ರೈತ ಮುಖಂಡರು ಇದ್ದರು.
Breaking News
- ಮದನಪಲ್ಲಿ-ತಿರುಪತಿ ಘಾಟ್ ರಸ್ತೆಯಲ್ಲಿ ಅಪಘಾತ ಕರ್ನಾಟಕದ ನಾಲ್ವರ ಸಾವು!
- ಕಮ್ಯುನಿಸ್ಟ್ ಧ್ವನಿ ಸೀತಾರಾಂ ಯೆಚೂರಿ ಇನ್ನಿಲ್ಲ!
- ಚಿಂತಾಮಣಿ ನಗರಸಭೆ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ
- ಅಮೇರಿಕಾದಲ್ಲಿ ರಾಹುಲ್-ಶಿವಕುಮಾರ್ ಭೇಟಿ ರಾಜಕೀಯ ಸಂಚಲನ
- ಮೃತ ಪತ್ರಕರ್ತನ ಕುಟುಂಬಕ್ಕೆ ಪರಿಹಾರ ಮಂಜೂರು ಮಾಡಿದ ಸಿಎಂ
- ಚಿಂತಾಮಣಿ ಎಪಿಎಂಸಿ ಅಂಗಡಿಯಲ್ಲಿ ಲಕ್ಷಾಂತರ ಹಣ ಎಗರಿಸಿದ ಖದೀಮರು
- ಹಳೆ ವಸ್ತುಗಳ ಗುಜರಿ ವ್ಯಾಪಾರಿಗೆ ಲಾಟರಿಯಲ್ಲಿ ಕೋಟಿಗಟ್ಟಲೆ ದುಡ್ಡು!
- ಪತ್ರಕರ್ತರ ರೈಲ್ವೆ ಪಾಸ್ ಸೌಲಭ್ಯ ಆರಂಭಿಸಲು ಮನವಿ
- ದೇಶದ ಮೊದಲ MPAX ಪ್ರಕರಣ ಪತ್ತೆ!
- ನಂದಮೂರಿ ಬಾಲಕೃಷ್ಣ ಮಗ ಮೊಕ್ಷಜ್ಞ ಸಿನಿಮಾ ರಂಗಕ್ಕೆ ಎಂಟ್ರಿ
Friday, September 13