ಶ್ರೀನಿವಾಸಪುರ: ಬೋರ್ ವೆಲ್ ಕೇಬಲ್ ಕಳುವು ಮಾಡುತ್ತಿದ್ದ ಕಳ್ಳರನ್ನು ಗ್ರಾಮಸ್ಥರು ಹಿಡಿದು ಧರ್ಮದೇಟು ನೀಡಿದ ಘಟನೆ ಶ್ರೀನಿವಾಸಪುರ ಪೊಲೀಸ್ ಠಾಣಾ ವ್ಯಾಪ್ತಿಯ ರೋಣೂರು ಗ್ರಾಮದಲ್ಲಿ ನಡೆದಿದೆ
ರೈತ ಅನಿಲ್ ಎನ್ನುವರ ತೋಟದಲ್ಲಿ ಕಳ್ಳರು ಕೇಬಲ್ ಕದಿಯುತ್ತಿದ್ದಾಗ ರೆಡ್ ಹ್ಯಾಂಡಾಗಿ ಗ್ರಾಮಸ್ತರು ಕಳ್ಳರನ್ನು ಹಿಡದಿದ್ದು ಕಳ್ಳರನ್ನು ಶ್ರೀನಿವಾಸಪುರ ಪಟ್ಟಣದ ಇಂದಿರಾನಗರದ ಮುಜಾಹಿದ್,ಇಂತಿಯಾಜ್ ಎಂದು ಹೇಳಲಾಗಿದ್ದು,ಕಳ್ಳರನ್ನು ಹಿಡಿದ ಗ್ರಾಮಸ್ಥರು ಅವರನ್ನು ಗ್ರಾಮದ ಬಸ್ ನಿಲ್ದಾಣದಲ್ಲಿ ಕಂಬಕ್ಕೆ ಕಟ್ಟಿಹಾಕಿ ಧರ್ಮದೇಟು ನೀಡುತ್ತಿದ್ದಾಗ ಗ್ರಾಮಕ್ಕೆ ಪೊಲೀಸರು ಆಗಮಿಸಿ ಕಳ್ಳರನ್ನು ಕಾನುನಾತ್ಮಕವಾಗಿ ತಮಗೆ ಒಪ್ಪಿಸುವಂತೆ ಹೇಳಿರುತ್ತಾರೆ ಇದಕ್ಕೆ ಒಪ್ಪದ ಗ್ರಾಮಸ್ಥರು ಈ ಹಿಂದೆ ಕೆಬಲ್ ಕದ್ದಿರುವ ಕಳ್ಳರ ವಿರುದ್ದ ಯಾವುದೇ ಕ್ರಮ ಕೈಗೊಳ್ಳದೆ ಬಿಟ್ಟಿರುವ ಆರೋಪ ಮಾಡಿ ಪೊಲೀಸರನ್ನು ಗ್ರಾಮಸ್ತರು ತರಾಟೆಗೆ ತೆಗೆದುಕೊಂಡಿರುತ್ತಾರೆ ಈ ಸಂದರ್ಭದಲ್ಲಿ ಪೋಲಿಸರು ಮತ್ತು ಗ್ರಾಮಸ್ಥರ ನಡುವೆ ಮಾತಿನ ಚಕಮುಕಿ ನಡೆಯುತ್ತದೆ ಹೆಚ್ಚುಸಂಖ್ಯೆಯಲ್ಲಿದ್ದ ಆಕ್ರೋಶಭರಿತ ಗ್ರಾಮಸ್ಥರು ಪೋಲಿಸರ ಜೀಪನ್ನು ಬಡಿದು ಸದ್ದುಮಾಡಿದಾಗ ಪೋಲಿಸರು ಗ್ರಾಮಸ್ಥರನ್ನು ಚದರಿಸುವ ಪ್ರಯತ್ನ ಮಾಡಿರುತ್ತಾರೆ ಈ ಸಂದರ್ಭದಲ್ಲಿ ಜನರ ಕೂಗಾಟದಿಂದ ಪರಿಸ್ಥಿತಿ ಉದ್ವಿಙ್ಞಗೊಂಡಿದ ಹಿನ್ನಲೆಯಲ್ಲಿ ಸ್ಥಳದಲ್ಲಿದ್ದ ಇನ್ಸಪೇಕ್ಟರ್ ನಾರಯಣಸ್ವಾಮಿ ಲಾಠಿ ಬೀಸಿ ಜನರನ್ನು ಚದುರಿಸಿ ಪರಿಸ್ಥಿತಿ ಹತೋಟಿಗೆ ತಂದು ಕೆಬಲ್ ಕಳ್ಳರನ್ನು ಪೋಲಿಸರು ವಶಕ್ಕೆ ಪಡೆದಿರುತ್ತಾರೆ.
ಗ್ರಾಮಸ್ಥರ ವಿರುದ್ಧ ಪ್ರಕರಣ ದಾಖಲು ಕೋರ್ಟಿಗೆ ಹಾಜರು!
ಕೆಬಲ್ ಕಳ್ಳರ ಮೇಲೆ ಹಲ್ಲೆ ಮಾಡುತ್ತಿದ್ದ ಗ್ರಾಮಸ್ಥರಿಂದ ಕಳ್ಳರನ್ನು ಬಿಡಿಸಲು ಸ್ಥಳಕ್ಕೆ ಬಂದ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಹಿನ್ನಲೆಯಲ್ಲಿ ಗ್ರಾಮದ ಸುಮಾರು 11 ಕ್ಕು ಹೆಚ್ಚು ಜನರ ವಿರುದ್ಧ ಕರ್ತವ್ಯಕ್ಕೆ ಅಡ್ಡಿಪಡಿಸಿದ ಹಾಗೂ ಇಬ್ಬರ ಕಳ್ಳರ ಮೇಲೆ ಮಾರಾಣಾoತಿಕ ಹಲ್ಲೆ ನಡೆಸಿದ ಪ್ರಕರಣ ದಾಖಲಿಸಿದ ಪೋಲಿಸರು ಇಂದು ಸೋಮವಾರ ಸುಮಾರು ಆರು ಜನರನ್ನು ಬಂಧಿಸಿ ಶ್ರೀನಿವಾಸಪುರ ಜೆ ಎಂ ಎಫ್ ಸಿ ನ್ಯಾಯಾಲಯದಲ್ಲಿ ಬೆಳಗಿನ ಅಧಿವೇಶನದಲ್ಲಿ ಹಾಜರು ಪಡಿಸಿದ್ದರಾದರು ನ್ಯಾಯಲಯ ಆರು ಜನಕ್ಕೂ ನ್ಯಾಯಂಗ ಬಂಧನ ವಿದಿಸಿತ್ತಾದರು ಮಧ್ಯಾನ್ಹದ ಅಧಿವೇಶನದಲ್ಲಿ ಆರೋಪಿಗಳ ಪರ ವಕೀಲರು ಮಂಡಿಸಿದ ವಾದ ಪ್ರತಿವಾದ ಆಲಿಸಿ ನ್ಯಾಯಲಯ ಶರತ್ತು ಬದ್ದ ಜಾಮೀನು ಮಂಜೂರು ಮಾಡಿದೆ.
Breaking News
- ಮದನಪಲ್ಲಿ-ತಿರುಪತಿ ಘಾಟ್ ರಸ್ತೆಯಲ್ಲಿ ಅಪಘಾತ ಕರ್ನಾಟಕದ ನಾಲ್ವರ ಸಾವು!
- ಕಮ್ಯುನಿಸ್ಟ್ ಧ್ವನಿ ಸೀತಾರಾಂ ಯೆಚೂರಿ ಇನ್ನಿಲ್ಲ!
- ಚಿಂತಾಮಣಿ ನಗರಸಭೆ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ
- ಅಮೇರಿಕಾದಲ್ಲಿ ರಾಹುಲ್-ಶಿವಕುಮಾರ್ ಭೇಟಿ ರಾಜಕೀಯ ಸಂಚಲನ
- ಮೃತ ಪತ್ರಕರ್ತನ ಕುಟುಂಬಕ್ಕೆ ಪರಿಹಾರ ಮಂಜೂರು ಮಾಡಿದ ಸಿಎಂ
- ಚಿಂತಾಮಣಿ ಎಪಿಎಂಸಿ ಅಂಗಡಿಯಲ್ಲಿ ಲಕ್ಷಾಂತರ ಹಣ ಎಗರಿಸಿದ ಖದೀಮರು
- ಹಳೆ ವಸ್ತುಗಳ ಗುಜರಿ ವ್ಯಾಪಾರಿಗೆ ಲಾಟರಿಯಲ್ಲಿ ಕೋಟಿಗಟ್ಟಲೆ ದುಡ್ಡು!
- ಪತ್ರಕರ್ತರ ರೈಲ್ವೆ ಪಾಸ್ ಸೌಲಭ್ಯ ಆರಂಭಿಸಲು ಮನವಿ
- ದೇಶದ ಮೊದಲ MPAX ಪ್ರಕರಣ ಪತ್ತೆ!
- ನಂದಮೂರಿ ಬಾಲಕೃಷ್ಣ ಮಗ ಮೊಕ್ಷಜ್ಞ ಸಿನಿಮಾ ರಂಗಕ್ಕೆ ಎಂಟ್ರಿ
Friday, September 13