ಶ್ರೀನಿವಾಸಪುರ:ಸ್ವಾತಂತ್ರ್ಯ ಹೋರಾಟಗಾರರ ಕುಟುಂಬದಿಂದ ಬಂದಿರುವ ನಾನು ಕಳೆದ ನಲವತ್ತು ವರ್ಷಗಳಿಂದ ಈ ಕ್ಷೇತ್ರದಲ್ಲಿ ಪ್ರಮಾಣಿಕವಾಗಿ ಕಾಂಗ್ರೆಸ್ ಪಕ್ಷದ ಸಿದ್ದಾಂತದಲ್ಲಿ ಪಕ್ಷಕ್ಕೆ ನಿಷ್ಠಾವಂತನಾಗಿ ಕೆಲಸ ಮಾಡುತ್ತ ಬಂದಿರುವೆ ನಾನು ಈ ಬಾರಿಗೆ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸ್ಥಾನದ ಆಕಾಂಕ್ಷಿಯಾಗಿ ಟಿಕೆಟ್ ಬಯಸಿ ಅರ್ಜಿಸಲ್ಲಿಸುತ್ತಿದ್ದು ಇದಕ್ಕೆ ಪಕ್ಷದ ಕಾರ್ಯಕರ್ತರ ಬೆಂಬಲ ಕೇಳುತ್ತಿರುವೆ ಎಂದು ತಾಲೂಕಿನ ಪ್ರಭಾವಿ ಕಾಂಗ್ರೆಸ್ ಮುಖಂಡ ದಳಸನೂರು ಗೋಪಾಲಕೃಷ್ಣ ಹೇಳಿದರು ಅವರು ಇಂದು ಪಟ್ಟಣದ ಶ್ರೀ ವೆಂಕಟೇಶಗೌಡ ಕಲ್ಯಾಣಮಂಟಪದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆ ಉದ್ದೇಶಿಸಿ ಮಾತನಾಡಿದರು.
ಪಕ್ಷದಲ್ಲಿ ವಿವಿಧ ಹುದ್ದೆಗಳನ್ನು ನಿಭಾಯಿಸಿರುವೆ ಈಗ ಟಿಕೆಟ್ ಕೇಳುವುದರಲ್ಲಿ ತಪ್ಪೇನು ಎಂದ ಅವರು ಹಿಂದೆ ನರಸಿಂಹರಾಯರು ಪ್ರಧಾನಮಂತ್ರಿಗಳಾಗಿದ್ದಾಗ ನನಗೆ ಟಿಕೆಟ್ ನೀಡುವ ವಿಚಾರದಲ್ಲಿ ಪಕ್ಷದ ಹೈಕಮಾಂಡ್ ಸ್ರ್ಕೀನಿಂಗ್ ಕಮಿಟಿಯವರಿಗೂ ಹೋಗಿತ್ತು ಅವತ್ತು ಟಿಕೆಟ್ ಕೈ ತಪ್ಪಿತು ನಂತರ ತೀವ್ರವಾಗಿ ಪ್ರಯತ್ನ ನಡೆಸಿರಲಿಲ್ಲ ಟಿಕೆಟ್ ಸಿಗಲಿಲ್ಲ ಎಂದು ನಾನು ಯಾವುದೆ ಕಾರಣಕ್ಕೂ ಪಕ್ಷ ನಿಷ್ಠೆ ಬದಲಿಸಲಿಲ್ಲ ಪಕ್ಷಕ್ಕೆ ದ್ರೋಹ ಬಗೆಯುವಂತ ಕೆಲಸ ಮಾಡಲಿಲ್ಲ ಇತರೆ ಪಕ್ಷಗಳೊಂದಿಗೆ ಒಳ ಒಪ್ಪಂದ ಮಾಡಿಕೊಂಡು ಪಕ್ಷದ ಅಭ್ಯರ್ಥಿಗೆ ದ್ರೋಹ ಬಗೆದವನಲ್ಲ ಮಾಜಿ ಶಾಸಕರೊಂದಿಗೆ ಐದು ಚುನಾವಣೆ ನಡೆಸಿದ್ದೇನೆ,ಮಾಜಿ ಸಂಸದ ಕೆ.ಎಚ್.ಮುನಿಯಪ್ಪ ಅವರೊಂದಿಗೆ ಎಂಟು ಚುನಾವಣೆ ನಡೆಸಿದ್ದೇನೆ ಹಾಲಿ ಶಾಸಕರೊಂದಿಗೆ ನಾಲ್ಕು ಚುನಾವಣೆ ನಡೆಸಿದ್ದೇನೆ ಎಂದ ಅವರು ಎಸ್.ಎಂ.ಕೃಷ್ಣ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಜನತಾಪರಿವಾರದಲ್ಲಿದ್ದ ರಮೇಶ್ ಕುಮಾರ್ ಒಮ್ಮೆ ಫೋನ್ ಮಾಡಿ ಜನತಾದಳದಲ್ಲಿ ಅಯೋಮಯ ಪರಿಸ್ಥಿತಿ ಇದೆ ನನಗೆ ರಾಜಕೀಯ ಅಬದ್ರತೆ ಕಾಡುತ್ತಿದೆ ನೀವು ಸಹಕರಿಸಿದರೆ ನಾನು ಕಾಂಗ್ರೆಸ್ ಗೆ ಬರುತ್ತೇನೆ ಎಂದರು ಇದಕ್ಕೆ ನಾನು ಒಪ್ಪಿಗೆ ನೀಡಿ ಅವರೊಂದಿಗೆ ಕೋಲಾರದ ಶ್ರೀನಿವಾಸಗೌಡ ಸೇರಿದಂತೆ ಜನತಾಪರಿವಾರದಿಂದ ಬಂದಂತ ಹಲವಾರು ಅಂದಿನ ಹಾಲಿ ಮಾಜಿ ಶಾಸಕರನ್ನು ಕಾಂಗ್ರೆಸ್ ಹೈಕಮಾಂಡ್ ಸೆರ್ಪಡೆ ಮಾಡಿಕೊಳ್ಳಲಾಯಿತು ಆ ನಂತರದಲ್ಲಿ ಚುನಾವಣೆಗೆ ಎಲ್ಲರಿಗೂ ಟಿಕೆಟ್ ಖಾತ್ರಿಯಾಯಿತು ಆದರೆ ರಮೇಶ್ ಕುಮಾರ್ ಅವರಿಗೆ ಟಿಕೆಟ್ ಅಂದುಕೊಂಡಷ್ಟು ಸುಲಭವಾಗಿ ಸಿಗಲಿಲ್ಲ ಎರಡು ಮೂರು ದಿನಗಳ ಕಾಲ ನಾನು ಕೆ.ಹೆಚ್.ಮುನಿಯಪ್ಪನರು ಸಾಕಷ್ಟು ಪ್ರಯಾಸ ಪಟ್ಟು ಊಟ ತಿಂಡಿ ನಿದ್ದೆ ಬಿಟ್ಟು ಹೈಕಮಾಂಡ್ ಬಳಿ ಮನವರಿಕೆ ಮಾಡಿ ಗೋಗೇರಿದು ನಾಮ ಪತ್ರ ಸಲ್ಲಿಸುವ ದಿನದಂದು ಟಿಕೆಟ್ ಕೊಡಿಸಿದ್ದಾಗಿ, ನಾಮ ಪತ್ರ ಬಂತಾದರೂ ಶ್ರೀನಿವಾಸಪುರಕ್ಕೆ ಬರಲು ಸಾಧ್ಯವಾಗದಂತ ಪ್ರಕ್ಷುಬ್ದ ಪರಿಸ್ಥಿತಿಯನ್ನು ತಾಲೂಕಿನಲ್ಲಿ ವೆಂಕಟಶಿವಾರೆಡ್ಡಿ ಹಿಂಬಾಲಕರು ನಿರ್ಮಿಸಿದ್ದರು.ಇಂತಹ ಸಂದರ್ಭದಲ್ಲೂ ಪೋಲಿಸರ ಸಹಕಾರದೊಂದಿಗೆ ಅವರ ಬೆನ್ನುಲುಬಾಗಿ ನಿಂತು ನಾಮಪತ್ರ ಸಲ್ಲಿಸಿ ಅವರನ್ನು ಗೆಲ್ಲಿಸಲಾಯಿತು ನಂತರದಲ್ಲಿ ಅವರು ನಿವೃತ್ತಿಯ ಮಾತು ಸಹ ಆಡಿದ್ದರು ನಂತರ ಅವರು ರಾಜಕೀಯವಾಗಿ ಮುಂದುವರೆಯುತ್ತಿದ್ದಾರೆ ಅವರೇ ಹೇಳಿದಂತೆ ನಿವೃತ್ತಿಯಾಗಿ ನಮಗೆ ಅವಕಾಶ ಕಲ್ಪಿಸಬಹುದಲ್ವಾ ಹಿಂದೆ ಕೋಲಾರ ಕ್ಷೇತ್ರದ ವಿಚಾರದಲ್ಲೂ ನನಗೆ ಅನ್ಯಾಯಮಾಡಲಾಯಿತು ಎಂದರು.
ಯಾರಿಗೆ ಟಿಕೆಟ್ ನೀಡಿದರು ಅವರೊಂದಿಗೆ ಪಕ್ಷ ನಿಷ್ಠನಾಗಿ ಚುನಾವಣೆ ಮಾಡಿಕೊಂಡು ಬಂದಿರುವ ನಾನು ಈಗ ಕಾಲಕೂಡಿ ಬಂದಿದೆ ಅಕಾಂಕ್ಷಿಯಾಗಿ ಟಿಕೆಟ್ ಬಯಸಿ ಅರ್ಜಿ ಸಲಿಸುತ್ತೇನೆ ಸಾರ್ವಜನಿಕ ಜೀವನದಲ್ಲಿ ಯಾವುದೇ ಆರೋಪ ನನ್ನ ಮೆಲಿಲ್ಲ ಆ ಮಟ್ಟದ ರಾಜಕೀಯ ಮಾಡಲು ಬಯಸುವುದಿಲ್ಲ ಎಂದರು.
ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಶೇಷಾಪುರಗೋಪಾಲ್ ಮಾತನಾಡಿ ಇಷ್ಟುವರ್ಷಗಳ ಕಾಲ ನಿಮಗೆ ನಿಷ್ಟೆಯಾಗಿ ದುಡಿದ ದಳಸನೂರು ಗೋಪಾಲಕೃಷ್ಣ ಅವರಿಗೆ 2023 ಚುನಾವಣೆಯಲ್ಲಿ ಅವಕಾಶ ಮಾಡಿಕೊಡುವಂತೆ ಪರೋಕ್ಷವಾಗಿ ಶಾಸಕ ರಮೇಶ್ ಕುಮಾರ್ ಅವರಿಗೆ ಹೇಳಿದರು. ಕೋಲಾರ ಹಾಲು ಒಕ್ಕೋಟದ ಮಾಜಿ ಅಧ್ಯಕ್ಷ ಬೇಟಪ್ಪ ಮಾತನಾಡಿ ಕ್ಷೇತ್ರದಲ್ಲಿ ದಳಸನೂರು ಗೋಪಾಲಕೃಷ್ಣ ಹಾಗು ಶಾಸಕ ರಮೇಶ್ ಕುಮಾರ್ ಜೋಡಿತ್ತಿನಂತೆ ದುಡಿದು ಪಕ್ಷ ಕಟ್ಟಿದ್ದಾರೆ ಈಗ ಇಬ್ಬರ ನಡುವೆ ವ್ಯತ್ಯಾಸ ಬಂದಿದೆ ಇಬ್ಬರ ನಡುವೆ ಏನಾಗಿದೆ ಎಂಬುದು ಇಬ್ಬರು ನನ್ನ ಬಳಿ ಎನೂ ವಿಚಾರ ಪ್ರಸ್ತಾಪಿಸಿಲ್ಲ ಎಂದ ಅವರು ಇಬ್ಬರ ನಡುವಿನ ವೈಮನಸ್ಯ ಪಕ್ಷದ ಗೆಲುವಿಗೆ ತೊಂದರೆಯಾಗಲಿದೆ ಈ ಬಗ್ಗೆ ಕುಳಿತು ಮಾತನಾಡಿ ಮುಂದುವರಿಯುವ ಅಗತ್ಯ ಇದೆ ಎಂದರು.ಇದಕ್ಕೆ ಪ್ರತಿಕ್ರಿಯಿಸಿದ ದಳಸನೂರು ಗೋಪಾಲಕೃಷ್ಣ ನಾನು ಮನುಷ್ಯತ್ವ ಇರುವರೊಂದಿಗೆ ಮಾತ್ರ ರಾಜಿಯಾಗಲು ಬಯಸುತ್ತೇನೆ ಎಂದರು.
ಪಾಳ್ಯಗೋಪಾಲರೆಡ್ಡಿ ಮಾತನಾಡಿ ಸಾರ್ವಜನಿಕ ಜೀವನದಲ್ಲಿ ಕಾರ್ಯಕರ್ತರ ರಕ್ಷಕನಾಗಿ ಕಾರ್ಯನಿರ್ವಹಿಸುವ ದಳಸನೂರು ಗೋಪಾಲಕೃಷ್ಣ ಅವರಿಗೆ ಕಾಂಗ್ರೆಸ್ ಟಿಕೆಟ್ ಸಿಗಬೇಕು ಖಂಡಿತವಾಗಿ ಅವರ ಗೆಲುವಿಗೆ ಶ್ರಮಿಸುತ್ತೇನೆ ಎಂದರು.
ಕಾರ್ಯಕ್ರಮದಲ್ಲಿ ಮಾಸ್ತೇನಹಳ್ಳಿ ಪಂಚಾಯಿತಿ ಅಧ್ಯಕ್ಷ ರವಿ,ಗಾಂಡ್ಲಹಳ್ಳಿ ಶಶಿಕುಮಾರ್,ಚಲ್ದಿಗಾನಹಳ್ಳಿಪ್ರಭಾಕರಗೌಡ,ಅಂಗಡಿ ಮುರಳಿ,ಅದಿನಾರಯಣಶೆಟ್ಟಿ, ದೊಡಮಲದೊಡ್ಡಿ ಶ್ರೀನಿವಾಸ್, ಕಲ್ವಮಂಜಲಿ ಶ್ರೀನಿವಾಸಗೌಡ,ಚಿಂತಪಲ್ಲಿರೆಡ್ಡಪ್ಪ, ಹೂವಳ್ಳಿಬಾಬು,ಚಿರುವುನಹಳ್ಳಿಚಂದ್ರೇಗೌಡ,ಶ್ರೀರಾಮರೆಡ್ಡಿ,ಉದ್ಯಮಿಕೃಷ್ಣೇಗೌಡ,ಹರಳಕುಂಟೆ ಶಶಿಕುಮಾರ್ ಮುಂತಾದವರು ಇದ್ದರು.
Breaking News
- ಮದನಪಲ್ಲಿ-ತಿರುಪತಿ ಘಾಟ್ ರಸ್ತೆಯಲ್ಲಿ ಅಪಘಾತ ಕರ್ನಾಟಕದ ನಾಲ್ವರ ಸಾವು!
- ಕಮ್ಯುನಿಸ್ಟ್ ಧ್ವನಿ ಸೀತಾರಾಂ ಯೆಚೂರಿ ಇನ್ನಿಲ್ಲ!
- ಚಿಂತಾಮಣಿ ನಗರಸಭೆ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ
- ಅಮೇರಿಕಾದಲ್ಲಿ ರಾಹುಲ್-ಶಿವಕುಮಾರ್ ಭೇಟಿ ರಾಜಕೀಯ ಸಂಚಲನ
- ಮೃತ ಪತ್ರಕರ್ತನ ಕುಟುಂಬಕ್ಕೆ ಪರಿಹಾರ ಮಂಜೂರು ಮಾಡಿದ ಸಿಎಂ
- ಚಿಂತಾಮಣಿ ಎಪಿಎಂಸಿ ಅಂಗಡಿಯಲ್ಲಿ ಲಕ್ಷಾಂತರ ಹಣ ಎಗರಿಸಿದ ಖದೀಮರು
- ಹಳೆ ವಸ್ತುಗಳ ಗುಜರಿ ವ್ಯಾಪಾರಿಗೆ ಲಾಟರಿಯಲ್ಲಿ ಕೋಟಿಗಟ್ಟಲೆ ದುಡ್ಡು!
- ಪತ್ರಕರ್ತರ ರೈಲ್ವೆ ಪಾಸ್ ಸೌಲಭ್ಯ ಆರಂಭಿಸಲು ಮನವಿ
- ದೇಶದ ಮೊದಲ MPAX ಪ್ರಕರಣ ಪತ್ತೆ!
- ನಂದಮೂರಿ ಬಾಲಕೃಷ್ಣ ಮಗ ಮೊಕ್ಷಜ್ಞ ಸಿನಿಮಾ ರಂಗಕ್ಕೆ ಎಂಟ್ರಿ
Friday, September 13