ಶ್ರೀನಿವಾಸಪುರ:ಎಲ್ಲಾ ಸಮಾಜಗಳೊಂದಿಗೆ ಉತ್ತಮ ಭಾಂದವ್ಯ ಹೊಂದಿದ್ದ ಕೌನ್ಸಿಲರ್ ಶ್ರೀನಿವಾಸನ್ ಅವರ ಹತ್ಯೆ ಸಮಾಜಕ್ಕೆ ತುಂಬಲಾರದ ನಷ್ಟ ಉಂಟಾಗಿದೆ ಎಂದು ರಿಪಬ್ಲಿಕ್ ಪಾರ್ಟಿ ಆಪ್ ಇಂಡಿಯಾದ ರಾಜ್ಯಾಧ್ಯಕ್ಷ ಎಂ.ವೆಂಕಟಸ್ವಾಮಿ ಹೇಳಿದರು ಅವರು ಇಂದು ಪಟ್ಟಣದ ಕೌನ್ಸಿಲರ್ ಶ್ರೀನಿವಾಸನ್ ಅವರ ಮನೆಯಲ್ಲಿ ಇಂದು ನಡೆದಂತ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು
ಕೌನ್ಸಿಲರ್ ಶ್ರೀನಿವಾಸನ್ ಅವರ ಹತ್ಯೆಯನ್ನು ಸಿಬಿಐ ಗೆ ವಹಿಸಬೇಕು ಎಂದು ಅಗ್ರಹಿಸಿ ಬೆಂಗಳೂರಿನಲ್ಲಿ ಧರಣಿ ನಡೆಸಿದಾಗ ಪ್ರತಿಭಟನೆ ಸ್ಥಳಕ್ಕೆ ಸರ್ಕಾರದ ಪ್ರತಿನಿಧಿಯಾಗಿ ಬಂದಿದ್ದ ಕೋಲಾರ ಜಿಲ್ಲಾ ಉಸ್ತುವಾರಿ ಸಚಿವ ಬೈರತಿಸುರೇಶ್ ಅವರು ಕೌನ್ಸಿಲರ್ ಶ್ರೀನಿವಾಸನ್ ಹತ್ಯೆಯನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ ಹತ್ಯೆಯನ್ನು ಸಿಒಡಿಗೆ ವಹಿಸುವುದಾಗಿ ಹೇಳಿದ್ದರು ಅದರಂತೆ ತನಿಖೆ ನಡೆಯುತ್ತಿದೆ ಆದರೆ ಹತ್ಯೆಯಲ್ಲಿ ಪ್ರಮುಖ ಆರೋಪಿಯಾಗಿರುವ ವ್ಯಕ್ತಿ ಹೇಳಿಕೆ ನಮಗೆ ಹಲವಾರು ಅನುಮಾನಗಳು ಹುಟ್ಟುಹಾಕುತ್ತಿದೆ ಆರೋಪಿಯ ಹಿಂದಿರುವ ಸಂಚುಗಾರ ಯಾರು ಎಂಬ ಸತ್ಯ ಹೊರ ಬರಬೇಕಿದೆ ಇದಕ್ಕಾಗಿ ಸೆರೆ ಸಿಕ್ಕಿರುವ ಆರೋಪಿಗಳನ್ನು ಮಂಪರು ಪರಿಕ್ಷೆಗೆ ಒಳಪಡಿಸುವಂತೆ ಸರ್ಕಾರವನ್ನು ಒತ್ತಾಯಿಸುತ್ತಿರುವುದಾಗಿ ಹೇಳಿದರು.ಈ ಬಗ್ಗೆ ಸರ್ಕಾರದ ಗಮನಕ್ಕೆ ತರುವ ಸಲುವಾಗಿ ಈ ತಿಂಗಳ 13 ರಂದು ಶನಿವಾರ ಕೌನ್ಸಿಲರ್ ಶ್ರೀನಿವಾಸಪ್ಪ ಅವರಿಗೆ ಶ್ರದ್ಧಾಂಜಲಿ ಸಭೆ ನಡೆಸಲಾಗುತ್ತಿದ್ದು ಶ್ರದ್ಧಾಂಜಲಿ ಸಭೆಯಲ್ಲಿ ರಾಜಕೀಯ ನಾಯಕರ್ಯಾರು ವೇದಿಕೆ ಏರುವುದಿಲ್ಲ ಕೇವಲ ಗುರುಶರಣರು ಮಾತ್ರ ವೇದಿಕೆ ಆಲಂಕರಿಸಲಿದ್ದಾರೆ ಇವರಲ್ಲಿ ವಾಲ್ಮೀಕಿ ಗುರುಪೀಠದ ಪ್ರಸನ್ನಾಂದಪುರಿ ಸ್ವಾಮಿಜಿ, ಮಾದರ ಚನ್ನಯ್ಯ ಶರಣರು,ಛಲವಾದಿ ಗುರುಪೀಠದ ಬಸವನಾಗಿದೇವ ಶರಣರು,ಇಮ್ಮಡಿ ಸಿದ್ದರಾಮೇಶ್ವರ ಸ್ವಾಮಿ,ಸಂಗಮಾನಂದ ಗುರುಗಳು,ಚಳ್ಕೆರೆ ತಿಪ್ಪೇರುದ್ರ ಸ್ವಾಮಿಗಳು ಭಾಗವಹಿಸುತ್ತಿದ್ದು ಇವರೊಂದಿಗೆ ನಟ ಪ್ರಗತಿಪರ ಹೋರಾಟಗಾರ ಅಹಿಂಸಾ ಚೇತನ ವಿಶೇಷ ಅಹ್ವಾನಿತರಾಗಿ ಆಗಮಿಸುತ್ತಿದ್ದು ಸಭೆಯ ಅಧ್ಯಕ್ಷತೆಯನ್ನು ಕೌನ್ಸಿಲರ್ ಶ್ರೀನಿವಾಸನ್ ಪತ್ನಿ ಡಾ.ಚಂದ್ರಕಲಾ ವಹಿಸಲಿದ್ದಾರೆ ಎಂದು ಹೇಳಿದರು.
ನನ್ನ ಪತಿಯ ನಡೆತೆಯನ್ನು ಕೊಂದಿದ್ದಾರೆ ಡಾ.ಚಂದ್ರಕಲಾ
ಕೌನ್ಸಿಲರ್ ಶ್ರೀನಿವಾಸನ್ ರವರ ಪತ್ನಿ ಖ್ಯಾತ ವೈದ್ಯೆ ಚಂದ್ರಕಲಾ ಮಾತನಾಡಿ ಶ್ರೀನಿವಾಸನ್ ಇಲ್ಲದ ನಮ್ಮ ಬದುಕು ದುರದುಷ್ಟಕರವಾಗಿದೆ,ಅವರನ್ನು ಕೊಲೆ ಮಾಡುತ್ತಾರೆ ಎಂಬ ಸುಳಿವು ನಮ್ಮ ಕುಟುಂಬಕ್ಕೆ ಇರಲಿಲ್ಲ ಅವರನ್ನು ಭೌತಿಕವಾಗಿ ಹತ್ಯೆ ಮಾಡಿದ್ದು ಅಲ್ಲದೆ ಅವರ ಹೆಸರಿಗೆ ಕಳಂಕ ತಂದು,ನಡತೆಯನ್ನು ಸಹ ಕೊಂದಿದ್ದಾರೆ ಎಂದು ಭಾವುಕರಾಗಿ ನುಡಿದರು. ಶ್ರೀನಿವಾಸನ್ ಅವರ ಕೊಲೆಯ ಆರೋಪಿಗಳಲ್ಲಿ ಒಂದನೇಯ ಆರೋಪಿಯಾಗಿರುವ ವ್ಯಕ್ತಿ ನನ್ನ ಪತಿ ಶ್ರೀನಿವಾಸನ್ ಅವರಿಂದ ಅತನಿಗೆ ಯಾವುದೆ ರೀತಿಯ ತೊಂದರೆ ಆಗಿಲ್ಲ,ಒಂದನೇಯ ಆರೋಪಿಯ ಸಂಬಂದಿ ಮೃತ ಪಟ್ಟಿರುವುದು ಮೃತ ವ್ಯಕ್ತಿಗೆ ಇದ್ದಂತ ಖಾಯಿಲೆಯಿಂದ ಮೃತಪಟ್ಟಿದ್ದಾನೆ ಹೊರತು ಹತ್ಯೆಯಾಗಿಲ್ಲ ಇದನ್ನು ಅಸ್ಪತ್ರೆ ದಾಖಲೆಗಳು ದೃಡಪಡಿಸಿವೆ ಎಂದು ಸರ್ಕಾರಿ ಆಸ್ಪತ್ರೆ ದಾಖಲೆಗಳನ್ನು ಪ್ರದರ್ಶಿಸಿದರು.ಖಾಯಿಲೆ ಇಂದ ಮೃತ ವ್ಯಕ್ತಿಯ ಸಾವನ್ನು ಕೊಲೆ ಎಂದು ನನ್ನ ಪತಿ ಹೆಸರಿಗೆ ಕಳಂಕ ತರಲು ಯೋಜಿತವಾಗಿ ಹುನ್ನಾರ ನಡೆಸಿರುವುದು ಅನ್ಯಾಯ ಈ ಬಗ್ಗೆ ಪೋಲಿಸರು ಪ್ರಾಮಾಣಿಕವಾದ ತನಿಖೆ ನಡೆಸಿದರೆ ಸತ್ಯ ಹೊರಬರುತ್ತದೆ ಎಂದರು.
ಕೇಂಪೇಗೌಡ ವಕ್ಕಲಿಗರ ಸಂಘದ ಅಧ್ಯಕ್ಷ ಹಾಗು ಪಿಎಲ್.ಡಿ ಅಧ್ಯಕ್ಷ ದಿಂಬಾಲ ಆಶೋಕ್ ಮಾತನಾಡಿ ಶ್ರದ್ಧಾಂಜಲಿ ಸಭೆಗೆ ನಮ್ಮ ಸಮುದಾಯದ ಸಂಪೂರ್ಣ ಬೆಂಬಲ ಇದೆ ಎಂದರು. ಸುದ್ಧಿಗೋಷ್ಟಿಯಲ್ಲಿ ವಾಲ್ಮೀಕಿ ಸಮಾಜದ ಮುಖಂಡ ಹೊಗಳಗೆರೆ ಅಂಜಪ್ಪ,ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಕೆ.ಕೆ.ಮಂಜು,ಪುರಸಭೆ ಸದಸ್ಯ ಭಾಸ್ಕರ್,ಮಾಜಿ ಸದಸ್ಯ ಶಂಕರ್,ದಲಿತ ಮುಖಂಡರಾದ ವರ್ತನಹಳ್ಳಿ ವೆಂಕಟೇಶ್,ಚಲ್ದಿಗಾನಹಳ್ಳಿ ಮುನಿವೆಂಕಟಪ್ಪ,ಈರಪ್ಪ,ರಾಮಾಂಜಮ್ಮ,ತಿಮ್ಮಯ್ಯ ಮುಂತಾದವರು ಇದ್ದರು.
Breaking News
- ನಾಗಮಂಗಲ ಗಲಭೆ ಸಂಬಂಧ ಕೇರಳದ ಇಬ್ಬರ ಬಂಧನ!
- J&Kಚುನಾವಣೆ ವೇಳೆ ಎನ್ಕೌಂಟರ್ ಮೂವರು ಉಗ್ರರ ಹತ್ಯೆ ಇಬ್ಬರು ಸೈನಿಕರ ವೀರ ಮರಣ!
- BIGSHOK ಏರಿಕೆಯಾದ ಅಡುಗೆ ಎಣ್ಣೆ ರೇಟು!
- ಶ್ರೀನಿವಾಸಪುರದ KSRTC ಗಣೇಶ ವಿಸರ್ಜನೆ
- ಶ್ರೀನಿವಾಸಪುರದ ಯುವಕ ಗೋಕರ್ಣದಲ್ಲಿ ಸಮುದ್ರದಪಾಲು
- ಮದನಪಲ್ಲಿ-ತಿರುಪತಿ ಘಾಟ್ ರಸ್ತೆಯಲ್ಲಿ ಅಪಘಾತ ಕರ್ನಾಟಕದ ನಾಲ್ವರ ಸಾವು!
- ಕಮ್ಯುನಿಸ್ಟ್ ಧ್ವನಿ ಸೀತಾರಾಂ ಯೆಚೂರಿ ಇನ್ನಿಲ್ಲ!
- ಚಿಂತಾಮಣಿ ನಗರಸಭೆ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ
- ಅಮೇರಿಕಾದಲ್ಲಿ ರಾಹುಲ್-ಶಿವಕುಮಾರ್ ಭೇಟಿ ರಾಜಕೀಯ ಸಂಚಲನ
- ಮೃತ ಪತ್ರಕರ್ತನ ಕುಟುಂಬಕ್ಕೆ ಪರಿಹಾರ ಮಂಜೂರು ಮಾಡಿದ ಸಿಎಂ
Monday, September 16