ಶ್ರೀನಿವಾಸಪುರ: ವಿಧಾನಸಭಾ ಕ್ಷೇತ್ರದಲ್ಲಿ ಸತತ 45 ವರ್ಷಗಳಿಂದ ರಾಜಕಾರಣ ಇಬ್ಬರು ವ್ಯಕ್ತಿಗಳ ನಡುವೆ ನಡೆಯುತ್ತಿದ್ದು ಇದರ ಪರಿಣಾಮ ಕ್ಷೇತ್ರ ಅಭಿವೃದ್ಧಿಯಾಗದೆ ನಿರ್ಲಕ್ಷ್ಯಕ್ಕೆ ಒಳಗಾಗಿದೆ ಈ ಬಾರಿ ಬದಲಾವಣೆ ತರಲು ಇಲ್ಲಿನ ಜನ ಸ್ವಯಂ ಪ್ರೇರಿತರಾಗಿದ್ದಾರೆ ಎಂದು ಬಿಜೆಪಿ ಅಭ್ಯರ್ಥಿ ಗುಂಜೂರು ಆರ್ ಶ್ರೀನಿವಾಸರೆಡ್ಡಿ ಹೇಳಿದರು ಅವರು ತಾಲೂಕಿನ ರಾಯಲ್ಪಾಡು ಹೋಬಳಿಯಲ್ಲಿ ಮನೆಮನೆಗೂ ತೆರಳಿ ಪ್ರಚಾರ ಮಾಡಿ ವಿವಿಧ ಪಕ್ಷಗಳ ಕಾರ್ಯಕರ್ತರನ್ನು ಬಿಜೆಪಿಗೆ ಸೇರ್ಪಡೆಮಾಡಿಕೊಂಡು ಮಾತನಾಡಿದರು.
ಬಿಜೆಪಿಗೆ ಉತ್ತಮ ಸ್ಪಂದನೆ ಇದ್ದು ಗ್ರಾಮಗಳಲ್ಲಿ ಜನತೆ ಆಪ್ಯಾಯತೆಯಿಂದ ನನ್ನನ್ನು ಬರಮಾಡಿಕೊಳ್ಳುತ್ತಿದ್ದಾರೆ ಜೊತೆಗೆ ಯುವ ಸಮುದಾಯ ದೊಡ್ಡಮಟ್ಟದಲ್ಲಿ ಬಿಜೆಪಿಗೆ ಸೇರ್ಪಡೆಯಾಗುತ್ತಿರುವುದು ನನಗೆ ಹುಮ್ಮಸ್ಸು ತಂದಿದೆ ಎಂದರು.
ಡಬಲ್ ಇಂಜಿನ್ ಸರ್ಕಾರದ ಡಬಲ್ ಧಮಾಕ
ರಾಷ್ಟ್ರೀಯವಾದದ ಚಿಂತನೆಯ ಬಿಜೆಪಿಯ ಡಬಲ್ ಇಂಜಿನ್ ಸರ್ಕಾರ ರಾಜ್ಯದ ಅಭಿವೃದ್ಧಿಯನ್ನು ಅತ್ಯತ್ತಮವಾಗಿ ನೇರವೇರಿಸಿದೆ ರಾಜ್ಯದಲ್ಲಿ ವಿಶೇಷವಾಗಿ ಉತ್ತಮ ಗುಣಮಟ್ಟದ ಮೂಲಭೂತ ಸೌಕರ್ಯಗಳನ್ನು ಒದಗಿಸಿದೆ ಇನ್ನೂ ಹಲವಾರು ಯೋಜನೆಗಳ ಅನುಷ್ಠಾನ ರಾಜ್ಯದಲ್ಲಿ ಆಗಬೇಕಿದ್ದು ಅದಕ್ಕಾಗಿ ಜನತೆ ಮತ್ತೊಮ್ಮೆ ಬಿಜೆಪಿಯನ್ನು ಬೆಂಬಲಿಸುವಂತೆ ಕೋರಿದರು.
ಈ ಸಂದರ್ಭದಲ್ಲಿ ತಾಲೂಕು ಬಿಜೆಪಿ ಅಧ್ಯಕ್ಷ ಆಶೋಕರೆಡ್ದಿ,ನಿವೃತ್ತ ಶಿಕ್ಷಕ ಮದರಂಕಪಲ್ಲಿಪಾಪಿರೆಡ್ಡಿ,ತಾಲೂಕುಪಂಚಾಯಿತಿ ಮಾಜಿ ಸದಸ್ಯ ರಾಜಶೇಖರೆಡ್ಡಿ ಮುಂತಾದವರು ಇದ್ದರು.
Breaking News
- ಆಂಧ್ರದ ಕರ್ನೂಲ್ ಕೃಷಿಕಾರ್ಮಿಕನಿಗೆ ವಜ್ರದ ರೂಪದಲ್ಲಿ ಕುಲಾಯಿಸಿದ ಅದೃಷ್ಟ!
- ನಾಗಮಂಗಲ ಗಲಭೆ ಸಂಬಂಧ ಕೇರಳದ ಇಬ್ಬರ ಬಂಧನ!
- J&Kಚುನಾವಣೆ ವೇಳೆ ಎನ್ಕೌಂಟರ್ ಮೂವರು ಉಗ್ರರ ಹತ್ಯೆ ಇಬ್ಬರು ಸೈನಿಕರ ವೀರ ಮರಣ!
- BIGSHOK ಏರಿಕೆಯಾದ ಅಡುಗೆ ಎಣ್ಣೆ ರೇಟು!
- ಶ್ರೀನಿವಾಸಪುರದ KSRTC ಗಣೇಶ ವಿಸರ್ಜನೆ
- ಶ್ರೀನಿವಾಸಪುರದ ಯುವಕ ಗೋಕರ್ಣದಲ್ಲಿ ಸಮುದ್ರದಪಾಲು
- ಮದನಪಲ್ಲಿ-ತಿರುಪತಿ ಘಾಟ್ ರಸ್ತೆಯಲ್ಲಿ ಅಪಘಾತ ಕರ್ನಾಟಕದ ನಾಲ್ವರ ಸಾವು!
- ಕಮ್ಯುನಿಸ್ಟ್ ಧ್ವನಿ ಸೀತಾರಾಂ ಯೆಚೂರಿ ಇನ್ನಿಲ್ಲ!
- ಚಿಂತಾಮಣಿ ನಗರಸಭೆ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ
- ಅಮೇರಿಕಾದಲ್ಲಿ ರಾಹುಲ್-ಶಿವಕುಮಾರ್ ಭೇಟಿ ರಾಜಕೀಯ ಸಂಚಲನ
Tuesday, September 17