ಶ್ರೀನಿವಾಸಪುರ:ಇದೊಂದು ಸುಸಜ್ಜಿತ ರಾಜ್ಯ ಸಾರಿಗೆ ಸಂಸ್ಥೆ ಬಸ್ ನಿಲ್ದಾಣ ದಶಕದ ಹಿಂದೆ ನಿರ್ಮಾಣ ಮಾಡಲಾಗಿದೆ ಆದರೆ ಇದು ಬಳಕೆ ಆಗದೆ ಹಳೆಯದಾಗುತ್ತಿದೆ ಎನ್ನುವುದು ಜನರ ಮಾತು!
ಶ್ರೀನಿವಾಸಪುರ ಪಟ್ಟಣದಿಂದ ಕೋಲಾರಕ್ಕೆ ಹೋಗುವ ದಾರಿಯಲ್ಲಿ ಸಾರಿಗೆ ಸಂಸ್ಥೆ ಘಟಕದ ಪಕ್ಕದಲ್ಲೆ,ನ್ಯಾಯಲಯದ ಮುಂಬಾಗದಲ್ಲಿ ನಿರ್ಮಾಣ ಮಾಡಿರುವ ಬಸ್ ನಿಲ್ದಾಣದಲ್ಲಿ ಏಕಕಾಲಕ್ಕೆ ಒಂಬತ್ತು ಬಸ್ಸುಗಳನ್ನು ನಿಲ್ಲಿಸಬಹುದಾದ ಬೃಹತ್ ಬಸ್ ಬೇ ಇರುವ ನಿಲ್ದಾಣವನ್ನು ನಿರ್ಮಿಸಿದ್ದಾರೆ.
ಹಿಂದೆ ಸಿದ್ದರಾಮಯ್ಯ ಸರ್ಕಾರ ಇದ್ದ ಸಂದರ್ಭದಲ್ಲಿ ಸಾರಿಗೆ ಮಂತ್ರಿಗಳಾಗಿದ್ದ ರಾಮಲಿಂಗಾರೆಡ್ಡಿ ಅವರಿಂದ ಅಂದಿನ ಆರೋಗ್ಯ ಸಚಿವ ರಮೇಶ್ ಕುಮಾರ ಮಂಜೂರು ಮಾಡಿಸಿದ್ದ ಬಸ್ ನಿಲ್ದಾಣಕ್ಕೆ ಅವರೆ ಗುದ್ದಲಿ ಪೂಜೆ ಅವರ ಅವಧಿಯಲ್ಲೆ ಲೋಕಾರ್ಪಾಣೆ ಮಾಡಲಾಯಿತು.
ಲೋಕಾರ್ಪಣೆಯಾದಗಿನಿಂದಲೂ ನೂತನ ಬಸ್ ನಿಲ್ದಾಣ ಸಾರ್ವಜನಿಕವಾಗಿ ಬಳಕೆ ಆಗುತ್ತಿಲ್ಲ ಅಧಿಕಾರಿಗಳ ಹಾಗು ವ್ಯವಸ್ಥೆಯ ತೀವ್ರ ನಿರ್ಲಕ್ಷ್ಯಕ್ಕೆ ಒಳಗಾಗಿದೆ ಎನ್ನುವ ಮಾತು ಕೇಳಿಬರುತ್ತಿದೆ.
ಬಸ್ಟಾಂಡ್ ಇತ್ತು ಆದರೂ ನಿರ್ಮಿಸಿದರು
ಶ್ರೀನಿವಾಸಪುರದಲ್ಲಿ ತಹಶೀಲ್ದಾರ್ ಕಚೇರಿಗೆ ಹೊಂದಿಕೊಂಡಂತೆ ಇದ್ದ ಬಯಲು ರಂಗ ಮಂದಿರ ನೆಲಸಮ ಮಾಡಿ ಎರಡುವರೆ ದಶಗಳ ಹಿಂದೆ ರಾಜ್ಯ ಸಾರಿಗೆ ಸಂಸ್ಥೆ ಬಸ್ ನಿಲ್ದಾಣವನ್ನು ನಿರ್ಮಿಸಲಾಗಿತ್ತು.ಬಸ್ ನಿಲ್ದಾಣವನ್ನು ಕೇಂದ್ರವಾಗಿಟ್ಟುಕೊಂಡು ಒಂದಡೆ ರಾಮಕೃಷ್ಣ ಬಡಾವಣೆ ಇನ್ನೊಂದು ಬಗ್ಗಲಲ್ಲಿ ವೆಂಕಟೇಶ್ವರ ಬಡಾವಣೆ ರೂಪಗೊಂಡಿತು ಹಳೆ ಊರಲ್ಲಿ ಇದ್ದ ಅನಕೂಲವಂತರ ಅದಿಯಾಗಿ ಸರ್ಕಾರಿ ನೌಕರರು ಬಡಾವಣೆಗಳಲ್ಲಿ ಮನೆ ಕಟ್ಟಿಕೊಂಡರು ಊರು ಬೆಳೆಯಿತು ಮದನಪಲ್ಲಿ ರಸ್ತೆಯಲ್ಲಿನ ಭೂಮಿ ಆರ್ಥಿಕವಾಗಿ ಅಭಿವೃದ್ಧಿಯಾಗತೊಡಗಿತು ಸಾವಿರಗಳಲ್ಲಿದ್ದ ಸೈಟುಗಳು ದುಬಾರಿಯಾಯಿತು ಇದರ ಪರಿಣಾಮ ಶ್ರೀನಿವಾಸಪುರ ಪಟ್ಟಣದ ಹಳೇಪೇಟೆ ಮುಳಬಾಗಿಲು ರಸ್ತೆ ಕೊಂಚ ಮಟ್ಟಿಗೆ ಹಿಂದುಳಿಯಲು ಕಾರಣವಾಯಿತು ಕೋಲಾರದ ಹಳೆ ರಸ್ತೆಯಲ್ಲಿದ್ದ ಈಛಲುಕುಂಟೆ ಕೆರೆಕಟ್ಟೆ ಮೇಲೆ ಜನರ ಒಡಾಟವೆ ಇಲ್ಲದಂತಾಗಿತ್ತು ಈ ಭಾಗದಲ್ಲಿ ಜಮೀನುಗಳು ಇದ್ದ ಮಾಲಿಕರ ಒತ್ತಡಕ್ಕೆ ಮಣಿದ ಅಂದಿನ ಆಡಳಿತರೂಡ ಪಕ್ಷದ ಅಭಿವೃದ್ಧಿಯ ಹಿಂದೆ ಸಾಗಿದ್ದ ಶಾಸಕರು ಈ ಜಾಗದಲ್ಲಿ ಬಸ್ ನಿಲ್ದಾಣ ಮಾಡಿದರೆ ಕೂಗಳತೆ ದೂರದಲ್ಲಿ ರೈಲ್ವೇ ನಿಲ್ದಾಣ ಇದ್ದು ಈ ಪ್ರದೇಶ ವಾಣಿಜ್ಯವಾಗಿ ಅಭಿವೃದ್ಧಿಯಾಗುತ್ತದೆ ಈ ಭಾಗದ ಜನರು ಅವರ ವ್ಯವಹಾರ ಅಭಿವೃದ್ಧಿಯಾಗುತ್ತದೆ ಒಂದಷ್ಟು ರಾಜಕೀಯ ಲಾಭ ಸಹ ಸಿಗಬಹುದು ಎಂಬ ನೀರಿಕ್ಷೆಯಲ್ಲಿ ಬಸ್ ನಿಲ್ದಾಣ ಇದ್ದರೂ ತಮ್ಮ ಪ್ರಭಾವ ಬೀರಿ ಇನ್ನೊಂದು ಬಸ್ ನಿಲ್ದಾಣ ಮಾಡಿಸಿದರು.
ಹೊಸ ಬಸ್ ನಿಲ್ದಾಣಕ್ಕೆ ಬಾರದ ಬಸ್ಸುಗಳು
ಹೊಸ ಬಸ್ ನಿಲ್ದಾಣ ವಾಯಿತು ಆರಂಭದಲ್ಲಿ ಹಳೆ ಬಸ್ ನಿಲ್ದಾಣದಿಂದ ಹೊಸ ಬಸ್ ನಿಲ್ದಾಣದಕ್ಕೆ ಒಡಾಡುತ್ತಿದ್ದ ಬಸ್ಸುಗಳು ಕ್ರಮೇಣ ನಿಂತುಹೋದವು ಕೋಲಾರ ರಸ್ತೆ ಮೂಲಕ ಹಾಗು ಮುಳಬಾಗಿಲು ರಸ್ತೆ ಬಳಸಿಹೋಗುವಂತ ಬಸ್ಸುಗಳು ಮಾತ್ರ ಹೊಸ ಬಸ್ ನಿಲ್ದಾಣಕ್ಕೆ ಬರುತ್ತವೆ.ಊಲಿದಂತೆ ಚಿಂತಾಮಣಿ,ಮದನಪಲ್ಲೆ ಪುಂಗನೂರು ಭಾಗಗಳಿಗೆ ಹೋಗುವ ಬಸ್ಸುಗಳು ನೂತನ ಬಸ್ ನಿಲ್ದಾಣ ನೋಡುವುದೆ ಇಲ್ಲ ಎನ್ನುವುದು ನರಸಿಂಹಪಾಳ್ಯ ರೈಲ್ವೆ ಕಾಲೋನಿ ಜನರ ಅಳಲು.


ಹೊಸ ಬಸ್ ನಿಲ್ದಾಣ ಒಪ್ಪಿಕೊಳ್ಳದ ಜನ!
ಬಸ್ ನಿಲ್ದಾಣ ಹೊಸ ಬಸ್ ನಿಲ್ದಾಣಕ್ಕೆ ಸ್ಥಳಾಂತರವಾದರೆ ಹಳೆ ಬಸ್ ನಿಲ್ದಾಣವನ್ನು ಕೇಂದ್ರವಾಗಿಟ್ಟುಕೊಂಡು ಮೂವತ್ತು ನಲವತ್ತು ವರ್ಷಗಳಿಂದ ವ್ಯಾಪಾರ ಮಾಡಿಕೊಂಡು ಬದುಕು ಕಟ್ಟಿಕೊಂಡು ಆರ್ಥಿಕವಾಗಿ ಬಲಿಷ್ಠರಾದವರು ಸಾಲಸೋಲಾ ಮಾಡಿ ವ್ಯಾಪಾರ ಮಾಡುತ್ತಿರುವವರು ಏಕಾಏಕಿ ಎಲ್ಲಾ ಕಳೆದುಕೊಂಡು ನಾವು ಬಿದಿ ಪಾಲಾಗಬೇಕಾಗುತ್ತದೆ ಎಂದು ವ್ಯಾಪರಸ್ಥರು ಶಾಸಕರ ಬಳಿ ಗೊಗೇರುದುಕೊಂಡ ಹಿನ್ನಲೆಯಲ್ಲಿ ಶಾಸಕರು ಗೊಂದಲಕ್ಕೆ ಸಿಲುಕಿದರು. ಹೊಸ ಬಸ್ ನಿಲ್ದಾಣದವಾದರೆ ಆ ಭಾಗದ ಜನರ ಬೆಂಬಲ ದೊಡ್ದಮಟ್ಟದಲ್ಲಿ ಸಿಗಬಹುದು ಎಂಬ ಲೆಕ್ಕಾಚಾರ ಉಲ್ಟಾ ಹೋಡೆಯಿತು ಈ ಆ ಭಾಗದ ಜನರ ಬೆಂಬಲ ದೊಡ್ದಮಟ್ಟದಲ್ಲಿ ಸಿಗಬಹುದು ಎಂಬ ಲೆಕ್ಕಾಚಾರ ಉಲ್ಟಾ ಹೋಡೆದ ಹಿನ್ನಲೆಯಲ್ಲಿ ಅಂದಿನ ಶಾಸಕ ತಟಸ್ಥ ನಿಲವು ತಳೆದು ಹಿಂದೆ ಸರಿದರು ಎನ್ನುತ್ತಾರೆ.
ಎರಡು ಬಸ್ ನಿಲ್ದಾಣ ಬಳಕೆ ಒಳ್ಳೆಯದೆ ವೆಂಕಟಶಿವಾರೆಡ್ಡಿ
ಬಸ್ ಘಟಕ, ರೇಷ್ಮೇ ಗೂಡು ಮಾರುಕಟ್ಟೆ ಶಾಲ ಕಟ್ಟಡ ನಿರ್ಮಾಣ ಮಾಡಿರುವುದಕ್ಕೂ ಮುಂಚಿತವಾಗಿ ಆ ಜಾಗದಲ್ಲಿ ಸಣ್ಣ ಕೆರೆಯಂಗಳ ಇತ್ತು ಅದು ಒತ್ತುವರಿಯಾಗುತ್ತಿದ್ದನ್ನು ತಡೆಯುವ ಸಲುವಾಗಿ ಸರ್ಕಾರಿ ಕಚೇರಿಗಳ ನಿರ್ಮಾಣ ಮಾಡಿಸಿದ್ದೆ ನಾನು ಶಾಸಕನಾಗಿದ್ದ ಸಂದರ್ಭದಲ್ಲಿ ಎಂದು ಶಾಸಕ ವೆಂಕಟಶಿವಾರೆಡ್ಡಿ ಹೇಳುತ್ತಾರೆ.
ವಿಶಾಲವಾಗಿದ್ದ ಜಾಗಬಳಸಿಕೊಂಡು ನೂತನ ರಸ್ತೆ ನಿರ್ಮಾಣ ನ್ಯಾಯಲಯಗಳ ಸಮುಚ್ಚ,ಸಾರಿಗೆ ಸಂಸ್ಥೆ ಬಸ್ ಘಟಕ,ಬಸ್ ನಿಲ್ದಾಣ ಸೇರಿದಂತೆ ವಿವಿಧ ಸರ್ಕಾರಿ ಕಟ್ಟಡಗಳ ನಿರ್ಮಾಣ ಮಾಡಲು ಮುಂದಾಗಿ ಅಂದಿನ ಮುಖ್ಯಮಂತ್ರಿಗಳಾಗಿದ್ದ ವೀರಪ್ಪಮೊಯಿಲಿ ಕೈಯಲ್ಲಿ ವಿವಿಧ ಕಛೇರಿಗಳ ನಿರ್ಮಿಸಲು ಶಂಕುಸ್ಥಾಪನೆ ನೇರವೇರಿಸಲಾಯಿತು ನಾನು ಅಧಿಕಾರ ಕಳೆದುಕೊಂಡ ನಂತರ ಈಛಲು ಕುಂಟೆ ಭಾಗದಲ್ಲಿ ಬಸ್ ನಿಲ್ದಾಣವನ್ನು ಕೈ ಬಿಟ್ತು ತಹಶೀಲ್ದಾರ್ ಕಚೇರಿ ಬಳಿ ನಿರ್ಮಿಸಲಾಯಿತು. ಮತ್ತೆ ಎರಡು ದಶಕಗಳ ನಂತರ ಈಛಲುಕುಂಟೆ ಕೆರೆಯಂಗಳದಲ್ಲಿ ಮತ್ತೊಂದು ಬಸ್ ನಿಲ್ದಾಣ ಕಟ್ಟಿಸಿದ್ದಾರೆ ಇದಕ್ಕೆ ನನ್ನ ವಿರೋಧ ಇಲ್ಲ ಎರಡು ಬಸ್ ನಿಲ್ದಾಣ ಬಳಕೆಯಾದರೆ ಜನರಿಗೆ ಒಳ್ಳೆಯದೆ ಎಂದು ಹೇಳಿದರು.

ಎಲ್ಲದಕ್ಕೂ ರಾಜಕೀಯವೇ
ಶ್ರೀನಿವಾಸಪುರದಲ್ಲಿ ಎಲ್ಲವನ್ನೂ ರಾಜಕೀಯ ದೃಷ್ಟಿ ಕೋನದಿಂದ ನೋಡುವುದು ಇಲ್ಲಿ ಸಾಮಾನ್ಯ ಹಾಗಾಗಿ ಇಲ್ಲಿ ಅಭಿವೃದ್ಧಿಯನ್ನು ರಾಜಕೀಯ ಲಾಭದ ದೃಷ್ಟಿಯಲ್ಲಿ ನೋಡುತ್ತಾರೆ ವೈಯುಕ್ತಿಕ ಲಾಭ ಆಗುವ ಹಾಗಿದ್ದರೆ ಯಾವುದೆ ತಕರಾರು ಇರುವುದಿಲ್ಲ ಇಲ್ಲವಾದರೆ ರಾಜಕೀಯ ತಂತಿಗೆ ಸಿಲುಕಿಸಿ ಎಳೆದಾಡುತ್ತಾರೆ ಇದು ನಿನ್ನೆಯದಲ್ಲ ಮೊದಲಿನಿಂದಲೂ ಮೊದಲಿನಿಂದಲೂ ಇಲ್ಲಿ ಸಂಪ್ರದಾಯ ಎನ್ನುತ್ತಾರೆ.
ಹೊಸ ಬಸ್ ನಿಲ್ದಾಣದ ಪರಿಸ್ಥಿತಿ ಹೇಗಿದೆ
ರಾಜ್ಯ ಸಾರಿಗೆ ಸಂಸ್ಥೆ ಬಸ್ ನಿಲ್ದಾಣ ಹಗಲು-ರಾತ್ರಿ ಕಾಲಿಯಾಗಿರುತ್ತದೆ ಹಗಲು ಒಂದಷ್ಟು ಜನರ ಹರಟೆ ಮಾತುಕತೆ ಎಂದು ಕೂತು ಎದ್ದೇಳುತ್ತಾರೆ,ಮಬ್ಬು ಆವರಿಸಿಕೊಳ್ಳುತ್ತಿದ್ದಂತೆ ಮದ್ಯವೆಸನಿಗಳು ಸರಕು ತಂದಿಟ್ಟುಕೊಂಡು ಕೂರುತ್ತಾರೆ, ಪಾನ್ ಪರಾಗ್ ಪ್ರಿಯರು ಬರುತ್ತಾರೆ ಎಲ್ಲಂದರಲ್ಲಿ ಊಗಿದು ಚಿತ್ತಾರ ಮೂಡಿಸುತ್ತಾರೆ ನಶೆ ಏರಿದವರು ಅಲ್ಲಿದ್ದ ಪರಿಕರಗಳನ್ನು ಎತ್ತಿ ಎಸಿಯುತ್ತಾರೆ ಇನ್ಯಾರೊ ಯುವಕರ ತಂಡ ಬರುತ್ತದೆ ಬರ್ತಡೇ ಸೆಲೆಬ್ರೇಷನ್ ಎಂದು ಕೆಕ್ ಕಟ್ಟಿಂಗ್ ಮಾಡುತ್ತಾರೆ ಕೂಗಾಡುತ್ತಾರೆ ಗಾಡ ಕತ್ತಲು ಆವರಿಸಿಕೊಂಡಾಗ ನಡೆಯುವ ಚಟುವಟಿಕೆಗಳು ಇನ್ನೂ ಏನೇನೊ ಎನ್ನುವುದು ಈ ಭಾಗದ ಜನರ ಮಾತು.