ಶ್ರೀನಿವಾಸಪುರ : KSRTC ಬಸ್ಸುಗಳನ್ನು ಮದುವೆ ರಾಜಕೀಯ ಸಮಾವವೇಶಗಳಿಗೆ ಒಪ್ಪಂದದ ಮೇರೆಗೆ
ದೊಡ್ದ ಸಂಖ್ಯೆಯಲ್ಲಿ ಬಸ್ಸುಗಳನ್ನು ಕಳೆಸುತ್ತಿರುವುದರಿಂದ, ಮಾರ್ಗದಲ್ಲಿ ರೆಗ್ಯೂಲರ್ ಆಗಿ ಒಡಾಡುತ್ತಿದ್ದ ಬಸ್ಸುಗಳಿಲ್ಲದೆ ಹಳ್ಳಿಗಾಡಿನ ವಿದ್ಯಾರ್ಥಿಗಳು ಕಾಲೇಜುಗಳಿಗೆ ತೆರಳಲು ಹಾಗು ಸಾರ್ವಜನಿಕರು ಪಟ್ಟಣ ಪ್ರದೇಶಗಳಿಗೆ ಒಡಾಡಲು ಪ್ರಯಾಸ ಪಡುವಂತಾಗಿದೆ ಎಂದು ಆರೋಪಿಸಿ ಕೂರಿಗೇಪಲ್ಲಿ ಮುದಿಮಡಗು ಭಾಗದ ವಿದ್ಯಾರ್ಥಿಗಳು ಹಾಗು ಸಾರ್ವಜನಿಕರು ತಮ್ಮ ಗ್ರಾಮಕ್ಕೆ ಬಂದಂತ ಬಸ್ ಅನ್ನು ತಡೆದು ಆಕ್ರೋಶ ವ್ಯಕ್ತಪಡಿಸಿದರು.
ಶ್ರೀನಿವಾಸಪುರ ತಾಲೂಕಿನ ಬಹುತೇಕ ಗಡಿಯಂಚಿನ ಗ್ರಾಮಗಳಿಗೆ ಶ್ರೀನಿವಾಸಪುರ ಹಾಗು ಚಿಂತಾಮಣಿಯಿಂದ ಶಾಲಾ ಕಾಲೇಜು ಸಮಯಕ್ಕೆ ಬಸ್ ಗಳನ್ನು ಕೆ ಎಸ್ ಆರ್ ಟಿ ಸಿ ಒದಗಿಸಿದೆ. ಇತ್ತಿಚಿಗೆ ರಾಜಕೀಯ ಸಮಾವೇಶಗಳು ಇತರೆ ಖಾಸಗಿ ಕಾರ್ಯಕ್ರಮಗಳು ಸಬೆ ಸಮಾರಂಬಗಳಿಗೆ ತೆರಳಲು KSRTC ಸಂಸ್ಥೆ ಬಸ್ಸುಗಳನ್ನು ಒಪ್ಪಂದದ ಮೇರೆಗೆ ಕಳಿಸುತ್ತಿರುವ ಹಿನ್ನಲೆಯಲ್ಲಿ ರೆಗ್ಯೂಲರ್ ಆಗಿ ಒಡಾಡುವ ಮಾರ್ಗದಲ್ಲಿ ಬಸ್ ಇಲ್ಲದಂತಾಗುತ್ತದೆ ಇದರಿಂದ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗುತ್ತದೆ ಜೊತೆಗೆ ಬಡ ವಿದ್ಯಾರ್ಥಿಗಳು ಪಾಸ್ ಇದ್ದರು ಇಂತಹ ಸಂದರ್ಬದಲ್ಲಿ ದುಬಾರಿ ಹಣ ತೆತ್ತು ಒಡಾಡಲು ಕಷ್ಟವಾಗುತ್ತದೆ ಎಂದು ದೂರಿದರು.
ಬಸ್ ತಡೆದ ಆಕ್ರೋಶಿತರು ಈ ಬಗ್ಗೆ ಶ್ರೀನಿವಾಸಪುರ ಘಟಕದ ವ್ಯವಸಾಪಕರಿಗೆ ಹೇಳಿದರೆ ನಿಮ್ಮಿಂದ ಬರುವಂತ ದೂರು ನಾನು ಸ್ವೀಕರಿಸಿದರೆ ನಿಮಗೆ ನನ್ನಿಂದ ಯಾವುದೇ ಉಪಯೋಗವಾಗುದಿಲ್ಲ ಎಂದು ತಲೆ ಜಾರಿಕೊಳ್ಳುತ್ತಾರೆ ಎಂಬುದು ಗ್ರಾಮಸ್ಥರ ಆರೋಪ.
Breaking News
- ನಾಗಮಂಗಲ ಗಲಭೆ ಸಂಬಂಧ ಕೇರಳದ ಇಬ್ಬರ ಬಂಧನ!
- J&Kಚುನಾವಣೆ ವೇಳೆ ಎನ್ಕೌಂಟರ್ ಮೂವರು ಉಗ್ರರ ಹತ್ಯೆ ಇಬ್ಬರು ಸೈನಿಕರ ವೀರ ಮರಣ!
- BIGSHOK ಏರಿಕೆಯಾದ ಅಡುಗೆ ಎಣ್ಣೆ ರೇಟು!
- ಶ್ರೀನಿವಾಸಪುರದ KSRTC ಗಣೇಶ ವಿಸರ್ಜನೆ
- ಶ್ರೀನಿವಾಸಪುರದ ಯುವಕ ಗೋಕರ್ಣದಲ್ಲಿ ಸಮುದ್ರದಪಾಲು
- ಮದನಪಲ್ಲಿ-ತಿರುಪತಿ ಘಾಟ್ ರಸ್ತೆಯಲ್ಲಿ ಅಪಘಾತ ಕರ್ನಾಟಕದ ನಾಲ್ವರ ಸಾವು!
- ಕಮ್ಯುನಿಸ್ಟ್ ಧ್ವನಿ ಸೀತಾರಾಂ ಯೆಚೂರಿ ಇನ್ನಿಲ್ಲ!
- ಚಿಂತಾಮಣಿ ನಗರಸಭೆ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ
- ಅಮೇರಿಕಾದಲ್ಲಿ ರಾಹುಲ್-ಶಿವಕುಮಾರ್ ಭೇಟಿ ರಾಜಕೀಯ ಸಂಚಲನ
- ಮೃತ ಪತ್ರಕರ್ತನ ಕುಟುಂಬಕ್ಕೆ ಪರಿಹಾರ ಮಂಜೂರು ಮಾಡಿದ ಸಿಎಂ
Monday, September 16