ಶ್ರೀನಿವಾಸಪುರ:ರಾಷ್ಟ್ರೀಯ ಮಟ್ಟದ ಮಾಸ್ಟರ್ ಗೇಮ್ಸ್ ವಾಲಿಬಾಲ್ ಪಂದ್ಯಾವಳಿಯಲ್ಲಿ ವಿಜೇತರಾಗಿ ಅಂತರಾಷ್ಟ್ರೀಯ ಮಟ್ಟದಲ್ಲಿ ಆಡಲು ಆಯ್ಕೆಯಾಗಿರುವ ತಂಡದಲ್ಲಿ ಶ್ರೀನಿವಾಸಪುರ ತಾಲೂಕಿನ ಯುವಕರು ಪ್ರತಿನಿಧಿಸಿದ್ದು ಆ ಯುವಕರಿಂದ ತಾಲೂಕಿಗೆ ಗೌರವ ಹೆಮ್ಮೆ ತರುವಂತ ವಿಚಾರವಾಗಿದೆ ಎಂದು ಮಾಜಿ ಶಾಸಕ ವೆಂಕಟಶಿವಾರೆಡ್ಡಿ ಹೇಳಿದರು ತಾಲೂಕಿನ ಯುವಕರು ಪ್ರತಿನಿಧಿಸಿದ್ದ ವಾಲಿಬಾಲ್ ತಂಡ ಉತ್ತರ ಪ್ರದೇಶದ ವಾರಣಾಸಿಯಲ್ಲಿ 5 ನೇಯ ರಾಷ್ಟ್ರೀಯ ಮಟ್ಟದ ವಾಲಿಬಾಲ್ ಪಂದ್ಯಾವಳಿಯಯಲ್ಲಿ ವಿಜೇತರಾಗಿದ್ದು ಅದರಲ್ಲಿ ಅಟಗಾರರಾಗಿದ್ದ ಶ್ರೀನಿವಾಸಪುರ ತಾಲೂಕಿನ ಕಸಬಾ ಹೋಬಳಿಯ ಗುಮ್ಮರೆಡ್ಡಿಪುರದ ಶ್ರೀನಾಥ್ ಮತ್ತು ಲಕ್ಷ್ಮಣ್ ರೆಡ್ಡಿ ರವರನ್ನು ಅಭಿನಂದಿಸಿ ಮಾತನಾಡಿದರು.
ಕ್ರೀಡಾಚಟುವಟಿಕೆಗಳಲ್ಲಿ ತೊಡಗಿಸಿಕೊಂಡರೆ ಆರೋಗ್ಯಕ್ಕೂ ಒಳ್ಳೆಯದು ಜೊತೆಗೆ ಅದನ್ನೆ ಸಾಧನೆಯಂದು ಮಾಡಲು ಹೊರಟರೆ ವಿಶ್ವ ಚಾಂಪಿಯನ್ ಆಗಬಹುದಾಗಿದೆ ಎಂದು ಯುವಕರ ಸಾಧನೆಯನ್ನು ಕೊಂಡಾಡಿದರು.ವಾರಣಾಸಿಯಲ್ಲಿ ವಿಜೇತರಾದ ಕ್ರೀಡಾಪಟುಗಳು ಮುಂದಿನ ಏಪ್ರಿಲ್ ನಲ್ಲಿ ದಕ್ಷಿಣ ಕೊರಿಯಾದಲ್ಲಿ ನಡೆಯಲಿರುವ ಅಂತರಾಷ್ಟ್ರೀಯ ಮಾಸ್ಟರ್ ವಾಲಿಬಾಲ್ ಪಂದ್ಯಾವಳಿಯಲ್ಲಿ ಭಾರತ ದೇಶದ ಪ್ರತಿನಿಧಿಗಳಾಗಿ ಆಡುತ್ತಿರುವ ತಂಡದಲ್ಲಿ ನಮ್ಮೂರಿನ ಕ್ರೀಡಾಪಟುಗಳು ಇರುವುದು ತಾಲೂಕಿಗೆ ಅತ್ಯಂತ ಗೌರವದ ವಿಚಾರ ಎಂದರು.ಈ ಸಂದರ್ಭದಲ್ಲಿ ಜೆ.ಡಿ.ಎಸ್.ಯುವ ಮುಖಂಡರಾದ ಗಾಯತ್ರಿ ಮುತ್ತಪ್ಪ.ಗಣೇಶ,ಗುಮ್ಮರೆಡ್ಡಿಪುರ ಮಂಜುನಾಥ್, ದಳಸನೂರು ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷರಾದ ಶ್ರೀನಾಥ್,ಕಾರ್ತಿಕ್,ಮಹೇಶ್ ಮುಂತಾದವರು ಇದ್ದರು.
Breaking News
- ಕೋಲಾರದಲ್ಲಿ ವಿಜಯದಶಮಿಯಂದು RSS ಬೃಹತ್ ಶಕ್ತಿ ಪ್ರದರ್ಶನ
- ಫೋಟೋಗೆ ಅಡ್ಡ ಬಂದಿದ್ದಕ್ಕೆ ಉತ್ತರ ಭಾರತೀಯನ ದೌರ್ಜನ್ಯ ರಕ್ತ ಬರುವಂತೆ ಹಲ್ಲೆ
- ವಿಶ್ವದ ಗಗನಚುಂಬಿ ಕಟ್ಟಡದ ಎತ್ತರ 1 ಕೀ.ಮಿ!
- ಚಾಮುಂಡೇಶ್ವರಿ ಆಶಿರ್ವಾದ ನನ್ನ ಮೇಲೆ ಇದೆ ಸಿದ್ದರಾಮಯ್ಯ
- ಮದನಪಲ್ಲಿ ಜಿಲ್ಲೆ ರಚನೆ ಸದ್ಯಕ್ಕಿಲ್ಲ ಚಂದ್ರಬಾಬು
- ಶ್ರೀನಿವಾಸಪುರ ನೌಕರರ ಸಂಘದ ಮತದಾರ ಪಟ್ಟಿಯಲ್ಲಿ ಅಕ್ರಮ ಅರೋಪ!
- lover Boy ಕಳ್ಳಾಟಕ್ಕೆ ಬೆಸೆತ್ತು ಕಳ್ಳಿ ಹಾಲು ಕುಡಿದ ಯುವತಿ ಆತ್ಮಹತ್ಯೆಗೆ ಯತ್ನ!
- ಶ್ರೀನಿವಾಸಪುರ ಅಪರಿಚಿತ ವಾಹನ ಬಡಿದು ಬೈಕನಲ್ಲಿದ್ದ ತಾಯಿ-ಮಗ ಸಾವು
- ಹರಿಯಾಣದಲ್ಲಿ 200 Days ಮುಖ್ಯಮಂತ್ರಿಯಿಂದ ಬಿಜೆಪಿಗೆ ಹ್ಯಾಟ್ರಿಕ್ ಗೆಲವು!
- ಶ್ರೀನಿವಾಸಪುರ ತಾಡಿಗೋಳ್ RTO ಚೆಕ್ ಪೋಸ್ಟ್ ಲೋಕಾಯುಕ್ತ ದಾಳಿ.
Sunday, October 13