ಶ್ರೀನಿವಾಸಪುರ: ಬಿಜೆಪಿ ಮುಖಂಡ ಕ್ಷೇತ್ರದ ಟಿಕೆಟ್ ಅಕಾಂಕ್ಷಿಯಾಗಿರುವ SLN ಮಂಜುನಾಥ್ ನಿಧಾನವಾಗಿ ಕ್ಷೇತ್ರದಲ್ಲಿ ನೆಲೆ ಉರುವ ನಿಟ್ಟಿನಲ್ಲಿ ಹೆಜ್ಜೆ ಹಾಕುತ್ತಿದ್ದಾರೆ ಕಾರ್ಯಕರ್ತರ ಸಮಾರಂಭಗಳಲ್ಲಿ ಪಾಲ್ಗೋಳ್ಳುವ ಮೂಲಕ ಭಾನುವಾರ ವಿಕೇಂಡ್ ಟ್ರಿಪ್ ಎನ್ನುವಂತೆ ಕ್ಷೇತ್ರಾದ್ಯಂತ ಆಕ್ಟಿವ್ ಆಗಿ ಒಡಾಡಿದ್ದಾರೆ.
ತಾಲೂಕಿನಲ್ಲಿ ಇಂದು ನಡೆದ ಬಿಜೆಪಿ ಪಕ್ಷದ ಕಾರ್ಯಕ್ರಮಗಳಲ್ಲಿ ಮತ್ತು ಖಾಸಗಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ ಬೆಳ್ಳಂಬೆಳಿಗ್ಗೆ ಬಿಜೆಪಿ ಜಿಲ್ಲಾಧ್ಯಕ್ಷ ಡಾ.ವೇಣುಗೋಪಾಲ್ ಹಾಗು ತಾಲೂಕು ಅಧ್ಯಕ್ಷ ಅಶೋಕ್ ರೆಡ್ದಿ ಅವರೊಂದಿಗೆ ಪಕ್ಷದ ಸಂಘಟನೆ ಕುರಿತಂತೆ ನಡೆದ ಸಭೆಯಲ್ಲಿ ಪಾಲ್ಗೋಂಡಿದ್ದ ಮಂಜು ಅಲ್ಲಿಂದ ರೋಣೂರಿನ ಆಪ್ತರ ಮನೆ ಗೃಹಪ್ರವೇಶದಲ್ಲಿ ಪಾಲ್ಗೋಂಡಿದ್ದರು ನಂತರ ಲಕ್ಷ್ಮೀಪುರದಲ್ಲಿ ಪ್ರಭಾವಿ ಮುಖಂಡರೊಬ್ಬರನ್ನು ಭೇಟಿಯಾಗಿ ಬಿಜೆಪಿ ಸೇರುವಂತೆ ಅಹ್ವಾನ ನೀಡಿರುತ್ತಾರೆ, ಅಲ್ಲಿಂದ ನೇರವಾಗಿ ಚಿಂತಾಮಣಿಯ VPಪ್ಯಾಲೆಸ್ ನಲ್ಲಿ ನಡೆದ ಪುರಸಭೆ ಸದಸ್ಯ ಭಾಸ್ಕರ್ ಮಗನ ನಾಮಕರಣ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶ್ರೀನಿವಾಸಪುರಕ್ಕೆ ಆಗಮಿಸಿ ಪಟ್ಟಣದ ಮೋತಿಲಾಲ್ ರಸ್ತೆಯಲ್ಲಿ ತಮ್ಮ ಆಪ್ತ ಕಾರ್ಯಕರ್ತನ ಹುಟ್ಟಿದಬ್ಬದ ಕಾರ್ಯಕ್ರಮದಲ್ಲಿ ಭಾಗವಹಿಸಿ ನಂತರ ಚಲ್ದಾಗನಹಳ್ಳಿ ಬಳಿ ಯುವ ಕಾರ್ಯಕರ್ತರೊಂದಿಗೆ ಸಭೆ ನಡೆಸಿದ ಅವರು ಬೆಂಗಳೂರಿಗೆ ಹೋಗಿರುತ್ತಾರೆ.
ಈ ಸಂದರ್ಭದಲ್ಲಿ ಇವರೊಂದಿಗೆ ಪುರಸಭೆ ನಾಮ ನಿರ್ದೇಶಕ ಸದಸ್ಯ ರಾಮಾಂಜಿ,ಮನೋಜ್ ಮುಂತಾದವರು ಇದ್ದರು.