ಶ್ರೀನಿವಾಸಪುರ:ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಶ್ರೀನಿವಾಸಪುರದ ಶಾಸಕ ರಮೇಶ್ ಕುಮಾರ್ ತಂಡ ಕಾರಣ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಆರೋಪಿಸಿದರು ಅವರು ಶ್ರೀನಿವಾಸಪುರ ಪಟ್ಟಣದ ರಾಜಾಜಿ ರಸ್ತೆಯ ಚಿಂತಾಮಣಿ ವೃತ್ತದಲ್ಲಿ ಏರ್ಪಡಿಸಿದ್ದ ಪಂಚರತ್ನ ಯೋಜನೆ ರಥಯಾತ್ರೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಕೋಲಾರದಲ್ಲಿ ಕಾಂಗ್ರೆಸ್ ಪಕ್ಷದ ಹಿರಿಯ ದಲಿತ ಮುಖಂಡ ಮುನಿಯಪ್ಪನವರನ್ನು ಸೋಲಿಸಲು ಕಾಂಗ್ರೆಸ್ ಪಕ್ಷದ ವರಿಷ್ಠರನ್ನು ಧಿಕ್ಕರಿಸಿ ಇಲ್ಲೂ ಬಿಜೆಪಿಯನ್ನು ಗೆಲ್ಲಿಸಿದರು.
ಸಿದ್ದರಾಮಯ್ಯ ರಮೇಶ್ ಕುಮಾರ್ ಚಿತಾವಣೆಯಿಂದ ನಾನು ಆಡಳಿತ ಕಳೆದುಕೊಂಡು ಬಿಜೆಪಿ ಅಧಿಕಾರಕ್ಕೆ ಬಂದಿತು ಇದರ ಪರಿಣಾಮ ಅಲ್ಲೆಲ್ಲೋ ಕರಾವಳಿಯಲ್ಲಿದ್ದಂತ ಹಿಜಾಬ್ ಹೆಸರಿನ ವಸ್ತ್ರ ಸಂವಿತೆ ಕೋಮು ಅಶಾಂತಿ ವಾತವರಣ ಇಡಿ ಕಾರ್ನಾಟಕಕ್ಕೆ ಹಬ್ಬಿತು ಧರ್ಮ ಸಂಘರ್ಷಕ್ಕೆ ಕಾರಣವಾಯಿತು ಸರ್ವ ಧರ್ಮಗಳ ಜನರ ನಡುವೆ ಇದ್ದ ಸೌಹಾರ್ದತೆ ಹಲಾಲ್ ಕಟ್ ಜಟ್ಕಾ ಕಟ್ ಎಂದು ಅಹಾರದ ಹೆಸರಿನಲ್ಲಿ ಧರ್ಮಸಂಘರ್ಷಕ್ಕೆ ಕಾರಣವಾಯಿತು ಇದಕ್ಕೆಲ್ಲ ನಿಮ್ಮೂರಿನ ಮಹಾನುಭಾವನ ಕುತಂತ್ರವೂ ಕಾರಣವಾಗಿದೆ ಎಂದು ದೂರಿದರು.
ಬಿಜೆಪಿ ಅಧಿಕಾರಕ್ಕೆ ಬರಲು ಕಾರಣರಾದವರು ನಮ್ಮ ಪಕ್ಷದ ಮೇಲೆ ಬಿಜೆಪಿ ಬಿ ಟೀಮ್ ಎಂದು ನಮ್ಮ ಮೇಲೆ ಆರೋಪ ಹೊರೆಸುತ್ತಾರೆ,ಇವರ ಕುತಂತ್ರದಿಂದ ರಾಜ್ಯದಲ್ಲಿ ಕೋಮು ಸೌರ್ಹಾದತೆ ಹಾಳಾಗಿದೆ ಧರ್ಮಗಳ ನಡುವಿನ ಸಹೋದರತ್ವ ಭಾವನೆಗೆ ಧಕ್ಕೆಯಾಗಿದೆ,ನೆಹರು ಕುಟುಂಬದ ಹೆಸರಿನಲ್ಲಿ ಮೂರು ತಲೆಮಾರಿಗಾಗುವಷ್ಟು ಮಾಡಿಕೊಂಡಿದ್ದೇವೆ ಎಂದು ಹೇಳುವ ರಮೇಶ್ ಕುಮಾರ್ ತಾಲೂಕಿನಲ್ಲಿ ಅವರ ಅಭಿವೃದ್ದಿ ಶೂನ್ಯ ಎತ್ತಿನ ಹೊಳೆ ನೀರು ಕೊಡುತ್ತೇನೆ ಎಂದವರು ಕೊಟ್ಟಿರುವ ನೀರು ಎಂತಹದು ಎಂದರೆ ಮುಂದಿನ ದಿನಗಳಲ್ಲಿ ಇಲ್ಲಿನ ಜನ ಕ್ಯಾನ್ಸರ್ ಪೀಡಿತರಾಗುತ್ತಾರೆ ಇಂತವರಿಗೆ ಕ್ಷೇತ್ರದಲ್ಲಿ ಓಟು ಕೇಳುವ ನೈತಿಕ ಹಕ್ಕು ಇಲ್ಲ ಎಂದರು.
Breaking News
- ನಾಗಮಂಗಲ ಗಲಭೆ ಸಂಬಂಧ ಕೇರಳದ ಇಬ್ಬರ ಬಂಧನ!
- J&Kಚುನಾವಣೆ ವೇಳೆ ಎನ್ಕೌಂಟರ್ ಮೂವರು ಉಗ್ರರ ಹತ್ಯೆ ಇಬ್ಬರು ಸೈನಿಕರ ವೀರ ಮರಣ!
- BIGSHOK ಏರಿಕೆಯಾದ ಅಡುಗೆ ಎಣ್ಣೆ ರೇಟು!
- ಶ್ರೀನಿವಾಸಪುರದ KSRTC ಗಣೇಶ ವಿಸರ್ಜನೆ
- ಶ್ರೀನಿವಾಸಪುರದ ಯುವಕ ಗೋಕರ್ಣದಲ್ಲಿ ಸಮುದ್ರದಪಾಲು
- ಮದನಪಲ್ಲಿ-ತಿರುಪತಿ ಘಾಟ್ ರಸ್ತೆಯಲ್ಲಿ ಅಪಘಾತ ಕರ್ನಾಟಕದ ನಾಲ್ವರ ಸಾವು!
- ಕಮ್ಯುನಿಸ್ಟ್ ಧ್ವನಿ ಸೀತಾರಾಂ ಯೆಚೂರಿ ಇನ್ನಿಲ್ಲ!
- ಚಿಂತಾಮಣಿ ನಗರಸಭೆ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ
- ಅಮೇರಿಕಾದಲ್ಲಿ ರಾಹುಲ್-ಶಿವಕುಮಾರ್ ಭೇಟಿ ರಾಜಕೀಯ ಸಂಚಲನ
- ಮೃತ ಪತ್ರಕರ್ತನ ಕುಟುಂಬಕ್ಕೆ ಪರಿಹಾರ ಮಂಜೂರು ಮಾಡಿದ ಸಿಎಂ
Tuesday, September 17