ಶ್ರೀನಿವಾಸಪುರ:ಸತ್ಸಂಗ ಬಳಗ ಮತ್ತು ಶಂಕರ ಸೇವಾ ಸಮಿತಿ ಸಂಯುಕ್ತವಾಗಿ ಶ್ರೀನಿವಾಸಪುರದ ಶಂಕರಮಠದಲ್ಲಿ ಲೋಕ ಕಲ್ಯಾಣರ್ಥವಾಗಿ ಶ್ರೀ ದುರ್ಗಾ ಹೋಮ ನಡೆಸಲಾಯಿತು.
ಶಂಕರ ಮಠದ ಆವರಣದಲ್ಲಿ ಆಯೋಜಿಸಿದ್ದ ಹೋಮ ಕುಂಡಕ್ಕೆ ಸತ್ಸಂಗ ಬಳಗದ ಮುಖ್ಯಸ್ಥರಾದ ಸತ್ಯಮೂರ್ತಿ-ಮಂಗಳಾ ದಂಪತಿ ಪೂಜೆ ಸಲ್ಲಿಸಿದ ನಂತರ ಅರ್ಚಕರಾದ ವೇದಬ್ರಹ್ಮ ಕುರುಮಾಕಲಹಳ್ಳಿ ಪ್ರಕಾಶ್ ರವರು ಪೂಜಾ ವಿಧಿವಿಧಾನಗಳನ್ನು ನಡೆಸಿ ಹೋಮ ನಡೆಸಿಕೊಟ್ಟರು.
ಸತ್ಸಂಗ ಬಳಗದ ಮುಖ್ಯಸ್ಥ ಸತ್ಯಮೂರ್ತಿ ಮಾತನಾಡಿ ದುರ್ಗಾದೇವಿಯು ಶಕ್ತಿ ಸ್ವರೂಪಿಣಿಯಾಗಿದ್ದು ದುಷ್ಟ ಶಿಕ್ಷಕಿ ಶಿಷ್ಠ ರಕ್ಷಕಿಯಾದ ಮಾತೆಯನ್ನು ನವರಾತ್ರಿಗಳಂದು 9 ರೂಪಗಳಾಗಿ ಪೂಜಿಸುವುದು ವಿಶೇಷ ಹಾಗೆ ದುರ್ಗಾ ಮಂತ್ರಗಳನ್ನು ಪಠಿಸುವುದರಿಂದ ಮತ್ತು ಹೋಮ ಹವನಾದಿಗಳನ್ನು ನಡೆಸುವುದರಿಂದ ಪ್ರತಿಯೊಬ್ಬರ ಜೀವನದಲ್ಲೂ ಸಂಕಷ್ಟಗಳು ದೂರವಾಗುತ್ತದೆ ಭಯ ಮತ್ತು ಅಡೆತಡೆಗಳು ನಿವಾರಣೆಯಾಗುತ್ತದೆ ಅದರಂತೆ ವಿಜಯದಶಮಿಯಂದು ಸಮಸ್ತ ಜನರ ಶ್ರೆಯಸ್ಸಿಗಾಗಿ ಲೋಕಕಲ್ಯಾಣಾರ್ಥವಾಗಿ ಶ್ರೀ ದುರ್ಗಾಹೋಮ ನಡೆಸಲಾಯಿತು ಎಂದರು.
ಇದೆ ಸಂದರ್ಭದಲ್ಲಿ ಕನ್ಯಕಾ ಪೂಜೆಯನ್ನು ನೇರವೇರಿಸಲಾಯಿತು.
ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯಿತಿ ಮಾಜಿ ಸದಸ್ಯೆ ನಾಗವೇಣಿರೆಡ್ಡಿ,ಶಂಕರ ಸೇವಾ ಸಮಿತಿಯ ಜೆ.ಕೆ.ಮಂಜುನಾಥ್, ಪುರಸಭೆ ಸದಸ್ಯೆ ಶಾಂತಮ್ಮ, ಶಿಕ್ಷಕಿ ಸುಧಾಮಣಿ, ಸತ್ಸಂಗ ಬಳಗದ ಸದಸ್ಯರು ಹಾಗು ಮುಂತಾದವರು ಇದ್ದರು.
Trending
- ಶಾಸಕ ಕೊತ್ತೂರು ಮಂಜುನಾಥ್ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸುಳಿವು ನೀಡಿದ ನಂಜೇಗೌಡ!
- ಮಗಳಾಡಿದ ಮಾತಿನಿಂದ ತಾಯಿಯ ಮಂತ್ರಿ ಸ್ಥಾನಕ್ಕೆ ಧಕ್ಕೆ!
- ಶ್ರೀನಿವಾಸಪುರ:ವಿದ್ಯಾರ್ಥಿನಿಯರೊಂದಿಗೆ ಶಿಕ್ಷಕನ ಅಸಭ್ಯ ವರ್ತನೆ ಆರೋಪ!
- ನೇಪಾಳ ಪ್ರವಾಹ:ಶಿಕ್ಷಕನ ಸಮಯ ಪ್ರಜ್ಞೆ ಬದುಕುಳಿದ ಸಾವಿರಾರು ವಿದ್ಯಾರ್ಥಿಗಳು!
- ಬೆಂಗಳೂರು:ಬಿಜೆಪಿ ಮುಖಂಡನ ಅಪಹರಣ Twest ಆಂಧ್ರ ಪೋಲಿಸರ ವಶದಲ್ಲಿ!
- ಶ್ರೀನಿವಾಸಪುರ:ವರ್ಗಾವಣೆಗೊಂಡ ಬ್ಯಾಂಕ್ ಮೆನೇಜರ್ ಗೆ ಬೀಳ್ಕೊಡುಗೆ!
- ಶ್ರೀನಿವಾಸಪುರ:ಸೋಮಯಾಜಲಹಳ್ಳಿ SRV ಮೇಷ್ಟ್ರು ಇನ್ನಿಲ್ಲ!
- ಶ್ರೀನಿವಾಸಪುರ:ಜಾಗ ಕೊಟ್ಟರೆ ಇಲಾಖೆ ಚರ್ಚಿಸಿ ಉದ್ಯೋಗಾವಕಾಶ ಸಚಿವ!
Sunday, September 6



