ಶ್ರೀನಿವಾಸಪುರ:ರಾಮಲಲ್ಲಾನ ಪ್ರಾಣಪ್ರತಿಷ್ಟೆ ನಡೆಯುವ ಜನವರಿ 22 ಹುಟ್ಟುವುದಕ್ಕೆ ಮುಂಚಿತವಾಗಿಯೇ ಶ್ರೀನಿವಾಸಪುರದಲ್ಲಿ ರಾಮನಾಮ ಜಪ ಶುರುವಾಗಿದೆ ಇಂದು ಭಾನುವಾರ ಅರಕೇರಿ ಶ್ರೀಕೋದಂಡರಾಮ ದೇವರ ಉತ್ಸವವನ್ನು ಇಂದು ಶ್ರೀನಿವಾಸಪುರ ಪಟ್ಟಣದ ರಥಬೀಧಿಗಳಲ್ಲಿ ಮೆರವಣಿಗೆ ಮಾಡಲಾಯಿತು ಅರಕೇರಿ ಶ್ರೀಕೋದಂಡರಾಮ ದೇವಾಲಯದ ಅಧ್ಯಕ್ಷ, ಜಿಲ್ಲಾಪಂಚಾಯಿತಿ ಮಾಜಿ ಸದಸ್ಯ ಇಂದಿರಾಭವನ್ ರಾಜಣ್ಣ ನೇತೃತವದಲ್ಲಿ ನಡೆದಂತ ಕಾರ್ಯಕ್ರಮದಲ್ಲಿ ಸಪ್ತಾಶ್ವ ಬೆಳ್ಳಿಪಲ್ಲಕ್ಕಿಯಲ್ಲಿ ಶ್ರೀಕೋದಂಡರಾಮ ದೇವರನ್ನು ಕೂರಿಸಿ ಶೋಭಾಯಾತ್ರೆ ಮಾಡಲಾಯಿತು ಶೋಭಾಯಾತ್ರೆಯಲ್ಲಿ ಅನ್ನಪೂರ್ಣೇಶ್ವರಿ ಭಜನಾ ಮಂಡಳಿಯ ಮುಖ್ಯಸ್ಥ ಡಾ.ರಮಾನಂದ ಸಾರಥ್ಯದಲ್ಲಿ ಮಹಿಳೆಯರು ಸೇರಿದಂತೆ ರಾಮಭಕ್ತರು ರಾಮನಾಮದ ಹಾಡುಗಳಿಗೆ ರಸ್ತೆಯಲ್ಲೆ ಹೆಜ್ಜೆ ಹಾಕಿದರು.
ಅಯೋಧ್ಯೆಯಲ್ಲಿ ರಾಮಲಲ್ಲಾನ ಪ್ರಾಣಪ್ರತಿಷ್ಟೆ ಅಂಗವಾಗಿ ಅರಿಕೇರಿಯಲ್ಲಿ ನಾಳೆ ನಡೆಯುವ ಶ್ರೀ ರಾಮರ ಪಟ್ಟಾಭಿಷೇಕ ಕಾರ್ಯಕ್ರಮಕ್ಕೆ ರಾಮನ ಭಕ್ತರು ಆಗಮಿಸುವಂತೆ ರಾಜಣ್ಣ ಮನವಿ ಮಾಡಿದರು. ಕಾರ್ಯಕ್ರಮದಲ್ಲಿ ಹಾಲು ಡೈರಿ ಕಾರ್ಯದರ್ಶಿ ಶ್ರೀನಿವಾಸಶೆಟ್ಟಿ,ನಂಬಿಹಳ್ಳಿರಮೇಶ್,ಶ್ರೀ ನಗರೇಶ್ವರ ದೇವಸ್ಥಾನದ ಮುಖ್ಯಸ್ಥರಾದ ಕಪಾಲಿ ಮೋಹನ್,ರಾಜಶೇಖರ್,ಕಪಾಲಿ ಶಿವು,ಹರಿ,ಬಿಜೆಪಿ ಮುಖಂಡ ಲಕ್ಷ್ಮಣಗೌಡ,ಟಿ.ನಾರಯಣಸ್ವಾಮಿ,ಸತ್ಸಂಗ ಬಳಗದ ಲೊಕೇಶ್,ರಘು,ಗುರುಮೂರ್ತಿ,ರಾಘವೇಂದ್ರ ಮುಂತಾದವರು ಇದ್ದರು
Breaking News
- ನಾಗಮಂಗಲ ಗಲಭೆ ಸಂಬಂಧ ಕೇರಳದ ಇಬ್ಬರ ಬಂಧನ!
- J&Kಚುನಾವಣೆ ವೇಳೆ ಎನ್ಕೌಂಟರ್ ಮೂವರು ಉಗ್ರರ ಹತ್ಯೆ ಇಬ್ಬರು ಸೈನಿಕರ ವೀರ ಮರಣ!
- BIGSHOK ಏರಿಕೆಯಾದ ಅಡುಗೆ ಎಣ್ಣೆ ರೇಟು!
- ಶ್ರೀನಿವಾಸಪುರದ KSRTC ಗಣೇಶ ವಿಸರ್ಜನೆ
- ಶ್ರೀನಿವಾಸಪುರದ ಯುವಕ ಗೋಕರ್ಣದಲ್ಲಿ ಸಮುದ್ರದಪಾಲು
- ಮದನಪಲ್ಲಿ-ತಿರುಪತಿ ಘಾಟ್ ರಸ್ತೆಯಲ್ಲಿ ಅಪಘಾತ ಕರ್ನಾಟಕದ ನಾಲ್ವರ ಸಾವು!
- ಕಮ್ಯುನಿಸ್ಟ್ ಧ್ವನಿ ಸೀತಾರಾಂ ಯೆಚೂರಿ ಇನ್ನಿಲ್ಲ!
- ಚಿಂತಾಮಣಿ ನಗರಸಭೆ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ
- ಅಮೇರಿಕಾದಲ್ಲಿ ರಾಹುಲ್-ಶಿವಕುಮಾರ್ ಭೇಟಿ ರಾಜಕೀಯ ಸಂಚಲನ
- ಮೃತ ಪತ್ರಕರ್ತನ ಕುಟುಂಬಕ್ಕೆ ಪರಿಹಾರ ಮಂಜೂರು ಮಾಡಿದ ಸಿಎಂ
Monday, September 16