ಶ್ರೀನಿವಾಸಪುರ:ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿಯಿಂದ ಬಂದಿರುವ ಪವಿತ್ರ ಮಂತ್ರಾಕ್ಷತೆಯನ್ನು ಶ್ರೀನಿವಾಸಪುರ ತಾಲೂಕಿನ ಗ್ರಾಮಗ್ರಾಮಗಳಲ್ಲಿ ಕುಂಭ ಕಳಸದೊಂದಿಗೆ ಭಕ್ತಿಯಿಂದ ಸ್ವಾಗತಿಸಿ ಅದ್ದೂರಿಯಾಗಿ ಬರ ಮಾಡಿಕೊಳ್ಳಲಾಯಿತು.
ಶ್ರೀನಿವಾಸಪುರದ ಶ್ರೀವರದ ಬಾಲಾಂಜನೇಯ ದೇವಾಲಯದಲ್ಲಿ ಪೂಜೆ ಸಲ್ಲಿಸಿ ತಗೆದುಕೊಂಡು ಹೋಗಿದ್ದ ಅಯೋಧ್ಯ ಶ್ರೀ ರಾಮ ಜನ್ಮಭೂಮಿಯಿಂದ ಬಂದಿರುವ ಪವಿತ್ರ ಮಂತ್ರಾಕ್ಷತೆಯನ್ನು ರಾಯಲ್ಪಾಡು ಹೋಬಳಿ ಕೇಂದ್ರದಲ್ಲಿ ಪೂಜೆ ಸಲ್ಲಿಸಿ ನಂತರ ಹೋಬಳಿ ವ್ಯಾಪ್ತಿಯ ಗ್ರಾಮಗಳಿಗೆ ತಗೆದುಕೊಂಡು ಹೋಗಿದ್ದರು.
ಜನವರಿ 22 ರಂದು ಅಯೋಧ್ಯೆಯಲ್ಲಿ ಮಂದಿರದ ಉದ್ಘಾಟನೆಯಾಗಲಿರುವ ಹಿನ್ನೆಲೆಯಲ್ಲಿ ದೇಶಾದ್ಯಂತ ಪ್ರತಿ ಗ್ರಾಮಕ್ಕೂ ಅಯೋಧ್ಯೆಯ ಮಂತ್ರಾಕ್ಷತೆಯನ್ನು ತಲುಪಿಸಿ ಪ್ರತಿಯೊಬ್ಬ ಹಿಂದೂವು ಅಯೋಧ್ಯ ರಾಮಮಂದಿರದ ಉದ್ಘಾಟನೆಯ ಸಂಕಲ್ಪದ ಶಕ್ತಿಗಾಗಿ ಹಮ್ಮಿಕೊಂಡಿದ್ದು ತಾಲ್ಲೂಕಿನ ಪ್ರತಿ ಪಂಚಾಯ್ತಿ ವ್ಯಾಪ್ತಿಗಳಲ್ಲಿ ಬರುವ ಪ್ರತಿ ಗ್ರಾಮದ ಮನೆಗಳಿಗೂ ಮಂತ್ರಾಕ್ಷತೆಯನ್ನು ತಲುಪಿಸುಲಾಗುತ್ತದೆ ಎಂದು ರಾಷ್ಟ್ರೀಯ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಬೌದ್ಧಿಕ ಪ್ರಮುಖ ರಾಮಾಂಜನೇಯ ತಿಳಿಸಿದರು.
ಶ್ರೀ ರಾಮ ಜನ್ಮಭೂಮಿ ಅಯೋಧ್ಯೆಯಿಂದ ಬಂದಿರುವ ಪವಿತ್ರ ಮಂತ್ರಾಕ್ಷತೆಯನ್ನು ರಾಯಲ್ಪಾಡು ಹೋಬಳಿಯ ಆಂಧ್ರದ ಗಡಿಯಂಚಿನ ಗ್ರಾಮಗಳಾದ ಮುದಿಮಡಗು,ಕೂರಿಗೇಪಲ್ಲಿ,ಯರ್ರಂವಾರಿಪಲ್ಲಿ,ಅಡ್ಡಗಲ್,ಭೈರಗಾನಪಲ್ಲಿ,ಕೋಡಿಪಲ್ಲಿ ಮರಸನಪಲ್ಲಿ ಸೇರಿದಂತೆ ಪ್ರಮುಖ ಪಂಚಾಯಿತಿ ಕೇಂದ್ರವಾದ ಗೌವನಪಲ್ಲಿಯಲ್ಲಿ ಇಂದು ಶ್ರೀರಾಮ ಭಕ್ತರು ತಾಳ ಮೇಳಗಳೊಂದಿಗೆ ಸಂಭ್ರಮ ಹಾಗು ಸಡಗರರಿಂದ ಸ್ವಾಗತಿಸಿದರು ಸುಹಾಸಿನಿಯರು ಕಳಸಗಳನ್ನು ಹೊತ್ತು ಬಂದಿದ್ದರೆ,ಶ್ರೀವಾಸವಿ ಮಹಿಳಾ ಮಂಡಳಿ,ಪಂಡರಿ ಭಜನಾ ಮಂಡಳಿ ತಂಡಗಳು ರಾಮಭಜನೆಯೊಂದಿಗೆ ಮೆರವಣಿಗೆಯಲ್ಲಿ ಪಾಲ್ಗೋಂಡು ಬರಮಾಡಿಕೊಂಡರು.
ರಾಮಮಂತ್ರಾಕ್ಷತೆ ತಾಲೂಕು ವಿತರಣ ಪ್ರಮುಖ ಭರತ್ ಮಾತನಾಡಿ ಇದೊಂದು ಪವಿತ್ರವಾದ ಕೆಲಸ. ಜಗತ್ತಿನಾದ್ಯಂತ ಇರುವ ಕೋಟ್ಯಂತರ ಹಿಂದೂಗಳ ನಂಬಿಕೆಯಾದ ರಾಮ ಮಂದಿರವು ಉದ್ಘಾಟನೆಯಾಗುತ್ತಿರುವುದಕ್ಕೆ ತಾಲೂಕಿನಾದ್ಯಂತ ಜನತೆ ಸರ್ವತಾ ಹರ್ಷ ವ್ಯಕ್ತಪಡಿಸಿ ಶುಭಕೋರುತ್ತಿದ್ದಾರೆ ಎಂದರು.
Breaking News
- ನಾಗಮಂಗಲ ಗಲಭೆ ಸಂಬಂಧ ಕೇರಳದ ಇಬ್ಬರ ಬಂಧನ!
- J&Kಚುನಾವಣೆ ವೇಳೆ ಎನ್ಕೌಂಟರ್ ಮೂವರು ಉಗ್ರರ ಹತ್ಯೆ ಇಬ್ಬರು ಸೈನಿಕರ ವೀರ ಮರಣ!
- BIGSHOK ಏರಿಕೆಯಾದ ಅಡುಗೆ ಎಣ್ಣೆ ರೇಟು!
- ಶ್ರೀನಿವಾಸಪುರದ KSRTC ಗಣೇಶ ವಿಸರ್ಜನೆ
- ಶ್ರೀನಿವಾಸಪುರದ ಯುವಕ ಗೋಕರ್ಣದಲ್ಲಿ ಸಮುದ್ರದಪಾಲು
- ಮದನಪಲ್ಲಿ-ತಿರುಪತಿ ಘಾಟ್ ರಸ್ತೆಯಲ್ಲಿ ಅಪಘಾತ ಕರ್ನಾಟಕದ ನಾಲ್ವರ ಸಾವು!
- ಕಮ್ಯುನಿಸ್ಟ್ ಧ್ವನಿ ಸೀತಾರಾಂ ಯೆಚೂರಿ ಇನ್ನಿಲ್ಲ!
- ಚಿಂತಾಮಣಿ ನಗರಸಭೆ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ
- ಅಮೇರಿಕಾದಲ್ಲಿ ರಾಹುಲ್-ಶಿವಕುಮಾರ್ ಭೇಟಿ ರಾಜಕೀಯ ಸಂಚಲನ
- ಮೃತ ಪತ್ರಕರ್ತನ ಕುಟುಂಬಕ್ಕೆ ಪರಿಹಾರ ಮಂಜೂರು ಮಾಡಿದ ಸಿಎಂ
Monday, September 16