ನ್ಯೂಜ್ ಡೆಸ್ಕ್: ಇಡಿ ವಿಶ್ವ ಅಯೋಧ್ಯೆ ರಾಮಂದಿರ ಉದ್ಘಾಟನೆಗೆ ಎದರು ನೊಡುತ್ತಿದೆ ಅದಕ್ಕೂ ಮುಂಚಿತವಾಗಿ ಅಯೋಧ್ಯೆಯಲ್ಲಿ ಮೂಲ ಭೂತ ಸೌಕರ್ಯಗಳ ಅಭಿವೃದ್ಧಿಗೆ ಭಾರತದ ಪ್ರಧಾನಿ ನರೇಂದ್ರ ಮೋದಿ ಡಿಸೆಂಬರ್ 30 ರಂದು ಶನಿವಾರ ಅಯೋಧ್ಯೆಗೆ ಭೇಟಿ ನೀಡಿ ಅಯೋಧ್ಯೆ ನಗರದ ವಾಲ್ಮೀಕಿ ಮಹರ್ಷಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಉದ್ಘಾಟನೆ, ವಂದೇ ಭಾರತ್ ಹಾಗು ಅಮೃತ ಭಾರತ ರೈಲುಗಳಿಗೆ ಚಾಲನೆ ನೀಡಿದ್ದಾರೆ ರಸ್ತೆಗಳ ಅಗಲೀಕರಣ,ಸೇರಿದಂತೆ ಹಲವಾರು ಅಭಿವೃದ್ಧಿ ಯೋಜನೆಗಳನ್ನು ಮೋದಿ ಉದ್ಘಾಟಿದ್ದಾರೆ ಇದರ ಮಧ್ಯೆ ನರೇಂದ್ರ ಮೋದಿ ಅವರು ಮೀರಾ ಮಾಂಝಿ ಎಂಬ ಸಾಮನ್ಯ ಮಹಿಳೆಯೊಬ್ಬರ ಮನೆಗೆ ದಿಢೀರ್ ಭೇಟಿ ನೀಡಿ ಅವರ ಮನೆಯ ಸದಸ್ಯರೊಂದಿಗೆ ಚಹಾ ಕೂಡ ಸವಿದಿರುತ್ತಾರೆ.
ಯಾರು ಮೀರಾ ಮಾಂಝಿ?
ಮೀರಾ ಮಾಂಝಿ ಅಯೋಧ್ಯೆ ನಗರದ ಸಾಮನ್ಯ ಕುಟುಂಬದ ಗೃಹಿಣಿ ಅಕೆ ಅಯೋಧ್ಯೆಯಲ್ಲಿ ಪತಿ, ಅತ್ತೆ-ಮಾವ ಹಾಗೂ ಮಕ್ಕಳ ಜತೆ ವಾಸಿಸುತ್ತಿದ್ದಾರೆ. ಇವರು ಬಡತನ ರೇಖೆಗಿಂತ ಕೆಳಗಿರುವವರಿಗೆ BPL ಕಾರ್ಡು ನವರಿಗೆ ಉಚಿತವಾಗಿ ಅಡುಗೆ ಅನಿಲ ಸಂಪರ್ಕ ಕಲ್ಪಿಸುವ ಉಜ್ವಲ ಯೋಜನೆಯ ಲಾಭ ಪಡೆದ 10 ಕೋಟಿ ಫಲಾನುಭವಿಗಳಲ್ಲಿ ಮಾಂಝಿ ಸಹ ಒಬ್ಬರು ಹಾಗಾಗಿ, ಪ್ರಧಾನಿ ಮೋದಿಯವರು ಮೀರಾ ಮಾಂಝಿ ಅವರ ಮನೆಗೆ ದಿಢೀರನೆ ಭೇಟಿ ನೀಡಿ, ಅವರ ಕುಟುಂಬಸ್ಥರೊಂದಿಗೆ ಸಮಾಲೋಚನೆ ನಡೆಸಿದ್ದಾರೆ ಗ್ಯಾಸ್ ಬಳಕೆ ಕುರಿತಾಗಿ ಮಾಂಝಿ ಅವರಿಗೆ ಇರುವ ಅನುಭವ ಯೋಜನೆಯ ಲಾಭದ ಕುರಿತಾಗಿ ಚರ್ಚಿಸಿದ್ದಾರೆ
ಹಾಗೆಯೇ ಅಡುಗೆ ಏನು ಮಾಡಿದ್ದೀರಿ ಎಂದ ಕೇಳಿದ ಮೋದಿ ಒಂದು ಕಪ್ ಟೀ ಕೊಡಿ ಎಂದು ಕೇಳಿ ಮಾಡಿಸಿಕೊಂಡು ಕುಟುಂಬದ ಸದಸ್ಯರ ಪರಿಚಯ ಮಾಡಿಕೊಂಡು ಚಹ ಸವಿದಿದ್ದಾರೆ.
ಮೋದಿ ಬರುವ ಬಗ್ಗೆ ಮೀರಾ ಮಾಂಝಿಗೆ ಮಾಹಿತಿ ಇಲ್ಲವಂತೆ
ನರೇಂದ್ರ ಮೋದಿ ಅವರು ಮೀರಾ ಮಾಂಝಿ ಮನೆಗೆ ಭೇಟಿ ನೀಡುವ ವಿಷಯ ಅಕೆಗೆ ಗೊತ್ತೇ ಇರಲಿಲ್ಲ ಎನ್ನಲಾಗಿದ್ದು ಪ್ರಧಾನಿ ತಿಳಿಸಿದೆಯೇ ಸರ್ಪ್ರೈಸ್ ವಿಸಿಟ್ ಮಾಡಿದ್ದಾರೆ ಎನ್ನಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ನಮ್ಮ ಮನೆಗೆ ಬರುತ್ತಾರೆ ಎಂಬ ವಿಷಯವೇ ನನಗೆ ಗೊತ್ತಿರಲಿಲ್ಲ ಎಂದಿನಂತೆ ನನ್ನ ಪಾಡಿಗೆ ನಾನು ಮನೆಯಲ್ಲಿ ಅಡುಗೆ ಮಾಡುತ್ತಿದ್ದೆ, ಇನ್ನೇನು ಅಡುಗೆ ಮುಗಿಯಬೇಕು ಎನ್ನುವಷ್ಟರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ನಮ್ಮ ಮನೆಯತ್ತ ಬರುವುದನ್ನು ನೋಡಿದೆ. ಇದು ಕನಸೋ ನನಸೋ ಅನ್ನುವಷ್ಟರಲ್ಲಿ ಅವರು ನಮ್ಮ ಮನೆಗೆ ಬಂದೆ ಬಿಟ್ಟರು ನಾನೇ ಖುದ್ಧಾಗಿ ನಿಂತು ಅವರನ್ನು ಸ್ವಾಗತಿಸಿದೆ ಎಂದು ಮೋದಿ ಭೇಟಿ ಬಳಿಕ ಮೀರಾ ಮಾಂಝಿ ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಚಹಾ ಚೆನ್ನಾಗಿದೆ ಎಂದು ಹೊಗಳಿದರು
ನರೇಂದ್ರ ಮೋದಿ ಅವರು ನಮ್ಮ ಮನೆಗೆ ಆಗಮಿಸಿ ಸುಮಾರು ಅರ್ಧ ಗಂಟೆ ಕಾಲ ನಮ್ಮ ಕುಟುಂಬದದವರೊಂದಿಗೆ ಕುಳಿತು ಮಾತನಾಡಿದರು. ನನ್ನನ್ನು ಕೇಳಿ ಟೀ ಮಾಡಿಸಿಕೊಂಡು ಕುಡಿದರು ನಂತರ ನಾನು ಟೀ ಹೇಗಿದೆ ಎಂದು ಕೇಳಿದ್ದಕ್ಕೆ, ಚಹಾ ಚೆನ್ನಾಗಿದೆ. ಆದರೆ, ಸಕ್ಕರೆ ಸ್ವಲ್ಪ ಜಾಸ್ತಿಯಾಗಿದೆ ಎಂದರು ಎಂದು ಮೀರಾ ಮಾಂಝಿ ವಿವರಿಸಿದ್ದಾರೆ.
Breaking News
- ಮದನಪಲ್ಲಿ-ತಿರುಪತಿ ಘಾಟ್ ರಸ್ತೆಯಲ್ಲಿ ಅಪಘಾತ ಕರ್ನಾಟಕದ ನಾಲ್ವರ ಸಾವು!
- ಕಮ್ಯುನಿಸ್ಟ್ ಧ್ವನಿ ಸೀತಾರಾಂ ಯೆಚೂರಿ ಇನ್ನಿಲ್ಲ!
- ಚಿಂತಾಮಣಿ ನಗರಸಭೆ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ
- ಅಮೇರಿಕಾದಲ್ಲಿ ರಾಹುಲ್-ಶಿವಕುಮಾರ್ ಭೇಟಿ ರಾಜಕೀಯ ಸಂಚಲನ
- ಮೃತ ಪತ್ರಕರ್ತನ ಕುಟುಂಬಕ್ಕೆ ಪರಿಹಾರ ಮಂಜೂರು ಮಾಡಿದ ಸಿಎಂ
- ಚಿಂತಾಮಣಿ ಎಪಿಎಂಸಿ ಅಂಗಡಿಯಲ್ಲಿ ಲಕ್ಷಾಂತರ ಹಣ ಎಗರಿಸಿದ ಖದೀಮರು
- ಹಳೆ ವಸ್ತುಗಳ ಗುಜರಿ ವ್ಯಾಪಾರಿಗೆ ಲಾಟರಿಯಲ್ಲಿ ಕೋಟಿಗಟ್ಟಲೆ ದುಡ್ಡು!
- ಪತ್ರಕರ್ತರ ರೈಲ್ವೆ ಪಾಸ್ ಸೌಲಭ್ಯ ಆರಂಭಿಸಲು ಮನವಿ
- ದೇಶದ ಮೊದಲ MPAX ಪ್ರಕರಣ ಪತ್ತೆ!
- ನಂದಮೂರಿ ಬಾಲಕೃಷ್ಣ ಮಗ ಮೊಕ್ಷಜ್ಞ ಸಿನಿಮಾ ರಂಗಕ್ಕೆ ಎಂಟ್ರಿ
Friday, September 13