ನ್ಯೂಜ್ ಡೆಸ್ಕ್:ಕರ್ನಾಟಕದ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿಗೆ ಹೊಂದಿಕೊಂಡು ಸುಮಾರು 25 ಕೀ.ಮಿ ದೂರದ ಆಂಧ್ರದ ಸತ್ಯಸಾಯಿ ಜಿಲ್ಲೆಯ ಪ್ರಖ್ಯಾತ ವಿಜಯ ನಗರದ ಅರಸರ ಶಿಲ್ಪಕಲಾ ವೈಭವದ ಹಾಗು ಯುನೆಸ್ಕೋ ಪಾರಂಪರಿಕ ಕಟ್ಟಡಗಳ ತಾತ್ಕಾಲಿಕ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಲೇಪಾಕ್ಷಿಗೆ ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಭೇಟಿ ನೀಡಿರುತ್ತಾರೆ ಲೇಪಾಕ್ಷಿಯ ಮಹಿಮಾನ್ವಿತ ಶ್ರೀ ವೀರಭದ್ರ ಹಾಗು ಭದ್ರಕಾಳಿಯಮ್ಮ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಸಲ್ಲಿಸಿದ ಅವರು ಶ್ರೀ ವೀರಭದ್ರ ದೇವರ ಮೂಲ ವಿಗ್ರಹಕ್ಕೆ ಸ್ವತಹಃ ಮಂಗಳಾರತಿ ಬೆಳಗಿದ್ದಾರೆ. ಪೂಜೆಯ ನಂತರ ದೇವಸ್ಥಾನದ ಅರ್ಚಕರು ಮೋದಿ ಅವರಿಗೆ ಶಾಲು ಹೊದೆಸಿ ವೇದಾಶಿರ್ವಾದ ಮಾಡಿದ್ದು,ದೇವರ ಪುತ್ಥಳಿಯನ್ನು ಪ್ರಧಾನಿಗೆ ನೀಡಿರುತ್ತಾರೆ. ದೇವರಿಗೆ ಪ್ರದಕ್ಷಿಣೆ ನಮಸ್ಕಾರ ಹಾಕಿದ ಮೋದಿ ದೇವಸ್ಥಾನದ ವೈಶಿಷ್ಟತೆ ಹಾಗೂ ಸ್ಥಳ ಪುರಾಣ ವಿಚಾರಿಸಿ ತಿಳಿದುಕೊಂಡಿದ್ದಾರೆ ದೇವಸ್ಥಾನದ ಆವರಣದಲ್ಲಿ ಸುಮಾರು 40 ನಿಮಿಷಗಳ ಕಾಲ ನೆಲದಲ್ಲಿ ಕುಳಿತಿದ್ದ ಮೋದಿ ದೇವಾಲಯದಲ್ಲಿ ಏರ್ಪಡಿಸಿದ್ದ ಶ್ರೀರಾಮ ಕೀರ್ತನೆಗಳ ಸಂಗೀತ ಕಛೇರಿಯನ್ನು ಮೋದಿ ಆಲಾಪಿಸಿದ್ದು ಅಲ್ಲದೆ ಸಂಗೀತಗಾರರೊಂದಿಗೆ ಕೈ ಚಪ್ಪಾಳೆ ತಟ್ಟಿದ್ದಾರೆ. ನಂತರ ಲೇಪಾಕ್ಷಿ ಶಿಲ್ಪ ಕಲೆಯ ಸಂಪತ್ತಿನ ಬಗ್ಗೆ ವಿಚಾರಿಸಿದ್ದು ದೇವಸ್ಥಾನದ ಅಧಿಕಾರಿಗಳು ಮೋದಿ ಅವರಿಗೆ ತೊರಿಸಿ ಲೇಪಾಕ್ಷಿ ದೇವಸ್ಥಾನದಲ್ಲಿನ ತೂಗು ಸ್ತಂಭದ ವೈಶಿಷ್ಟತೆ ಕುರಿತು ವಿವರಿಸಿದ್ದಾರೆ.
ತೊಗಲು ಬೊಂಬೆಯಾಟ ವೀಕ್ಷಿಸಿದ ಮೋದಿ
ಪ್ರಧಾನಮಂತ್ರಿಯವರ ಆಗಮನದ ಹಿನ್ನಲೆಯಲ್ಲಿ ದೇವಾಲಯದ ಅವರಣದಲ್ಲಿ ರಾಮಾಯಣದ ದೃಶ್ಯಗಳನ್ನು ತೊಗಲು ಬೊಂಬೆಯಾಟದ ಕಲೆಯ ಮೂಲಕ ಪ್ರಸ್ತುತಪಡಿಸಲಾಯಿತು. ಮೋದಿಯವರು ಈ ಕಾರ್ಯಕ್ರಮವನ್ನು ಆಸಕ್ತಿದಾಯಕವಾಗಿ ನೋಡುತ್ತ ಕುಳತಿದ್ದರು.
ಲೇಪಾಕ್ಷಿಯ ವೈಶಿಷ್ಠತೆ
ಐತಿಹಾಸಿಕ ಲೇಪಾಕ್ಷಿಯಲ್ಲಿ ಶ್ರೀವೀರಭದ್ರ ಸ್ವಾಮಿ ದೇವಾಲಯ ಜೊತೆಗೆ ವಿಜಯನಗರ ಸಾಮ್ರಾಜ್ಯದ ಗತ ವೈಭವವನ್ನು ಸಾರುವ
ವೈಶಿಷ್ಟವಾದ ವಿಶ್ವದ ಅತಿ ದೊಡ್ಡ ಏಕಶಿಲೆಯ ನಂದೀಶ್ವರ ವಿಗ್ರಹ,ಗಾಳಿಯಲ್ಲಿ ನೇತಾಡುವ ಕಲ್ಲಿನ ಕಂಬ,ಏಳು ಅಡಿ ಎತ್ತರದ ಬೃಹತ್ ನಾಗೇಂದ್ರ ಹೆಡೆ ಎತ್ತಿರುವುದು, ಪ್ರತಿ ವಿಷಯವು ಇಲ್ಲಿ ಭಾರತೀಯ ಸಂಸ್ಕೃತಿಯನ್ನು ಬಿಂಬಿಸುವ ಅಪರೂಪದ ಕಲಾ ವೈಭವವನ್ನು ಲೇಪಾಕ್ಷಿ ದೇವಾಲಯದಲ್ಲಿ ಕಾಣಬಹುದಾಗಿದೆ.ಜೊತೆಗೆ ವಿಜ್ಞಾನಕ್ಕೆ ಅರ್ಥವಾಗದ ವಿಚಿತ್ರ ಸಂಗತಿಗಳ ನೆಲೆಯಾಗಿದೆ.
ಜಟಾಯು ಪಕ್ಷಿ ರಾವಣನೊಂದಿಗೆ ಹೋರಾಡಿದ ಸ್ಥಳ
ಸ್ಥಳದ ಪುರಾಣ ಪ್ರಕಾರ ರಾಮಾಯಣದ ಕಾಲದಲ್ಲಿ ಸೀತಾಮಾತೆಯನ್ನು ಅಪಹರಿಸಿದ ರಾವಣನನ್ನು ಜಟಾಯು ಈ ಕೂರ್ಮ ಪರ್ವತದ ಮೇಲೆ ಅಡ್ಡಗಟ್ಟಿದಾಗ ರಾವಣಾಸುರನು ಜಟಾಯು ಪಕ್ಷಿಯ ರೆಕ್ಕೆಗಳನ್ನು ಕತ್ತರಿಸುತ್ತಾನೆ ಅದು ನರಳುತ್ತ ಈ ಸ್ಥಳದಲ್ಲಿ ಬಿದ್ದಾಗ ಅದೆ ಮಾರ್ಗದಲ್ಲಿ ಸೀತೆಯನ್ನು ಹುಡುಕುತ್ತಾ ಈ ಸ್ಥಳಕ್ಕೆ ಶ್ರೀರಾಮನು ಬಂದಾಗ ಜಟಾಯು ಪರಿಸ್ಥಿಯನ್ನು ನೋಡಿದ ರಾಮನಿಗೆ ನಡೆದ ವಿಷಯ ತಿಳಿದು,ಪಕ್ಷಿಯನ್ನು ಉಳಿಸಲು ಲೇ-ಪಕ್ಷಿ ಎಂದು ಉಚ್ಚರಿಸುತ್ತಾನೆ.ಲೇ-ಪಕ್ಷಿ ಪದ ಕ್ರಮೇಣ ಲೇಪಾಕ್ಷಿಯಾಯಿತು ಎಂದು ಸ್ಥಳಪುರಾಣದಿಂದ ತಿಳಿದುಬರುತ್ತದೆ.ಈಗ ರಾಮನ ಜನ್ಮಸ್ಥಳ ಅಯೋಧ್ಯೆಯಲ್ಲಿ ರಾಮಲಲ್ಲಾಮ ವಿಗ್ರಹ ಪ್ರತಿಷ್ಠಾಪನೆ ಆಗುವ ಸಮಯದಲ್ಲಿ ಲೇಪಾಕ್ಷಿಗೆ ಪ್ರಧಾನಿ ಮೋದಿ ಭೇಟಿ ವಿಶೇಷ ಅರ್ಥ ಕಲ್ಪಿಸಲಾಗಿದೆ.
Breaking News
- ಫೋಟೋಗೆ ಅಡ್ಡ ಬಂದಿದ್ದಕ್ಕೆ ಉತ್ತರ ಭಾರತೀಯನ ದೌರ್ಜನ್ಯ ರಕ್ತ ಬರುವಂತೆ ಹಲ್ಲೆ
- ವಿಶ್ವದ ಗಗನಚುಂಬಿ ಕಟ್ಟಡದ ಎತ್ತರ 1 ಕೀ.ಮಿ!
- ಚಾಮುಂಡೇಶ್ವರಿ ಆಶಿರ್ವಾದ ನನ್ನ ಮೇಲೆ ಇದೆ ಸಿದ್ದರಾಮಯ್ಯ
- ಮದನಪಲ್ಲಿ ಜಿಲ್ಲೆ ರಚನೆ ಸದ್ಯಕ್ಕಿಲ್ಲ ಚಂದ್ರಬಾಬು
- ಶ್ರೀನಿವಾಸಪುರ ನೌಕರರ ಸಂಘದ ಮತದಾರ ಪಟ್ಟಿಯಲ್ಲಿ ಅಕ್ರಮ ಅರೋಪ!
- lover Boy ಕಳ್ಳಾಟಕ್ಕೆ ಬೆಸೆತ್ತು ಕಳ್ಳಿ ಹಾಲು ಕುಡಿದ ಯುವತಿ ಆತ್ಮಹತ್ಯೆಗೆ ಯತ್ನ!
- ಶ್ರೀನಿವಾಸಪುರ ಅಪರಿಚಿತ ವಾಹನ ಬಡಿದು ಬೈಕನಲ್ಲಿದ್ದ ತಾಯಿ-ಮಗ ಸಾವು
- ಹರಿಯಾಣದಲ್ಲಿ 200 Days ಮುಖ್ಯಮಂತ್ರಿಯಿಂದ ಬಿಜೆಪಿಗೆ ಹ್ಯಾಟ್ರಿಕ್ ಗೆಲವು!
- ಶ್ರೀನಿವಾಸಪುರ ತಾಡಿಗೋಳ್ RTO ಚೆಕ್ ಪೋಸ್ಟ್ ಲೋಕಾಯುಕ್ತ ದಾಳಿ.
- ಮುತ್ತಕಪಲ್ಲಿ ಪಂಚಾಯಿತಿ ಅಕ್ರಮಗಳ ತನಿಖೆಗೆ ಆಗ್ರಹ
Saturday, October 12