ಯಲ್ದೂರು: ಸ್ವಾತಂತ್ರ್ಯ ಸೇನಾನಿ ಭಗತ್ ಸಿಂಗ್ ಅವರ 119ನೇ ಜನ್ಮಜಯಂತಿ ಅಂಗವಾಗಿ ಯಲ್ದೂರಿನ ಯುವಕರು ಶ್ರೀನಿವಾಸಪುರ-ಮುಳಬಾಗಿಲು ದ ಕುರುಡುಮಲೆಯವರೆಗೆ 20 ಕಿ.ಮೀ. ದೇಶಭಕ್ತಿ ಓಟವನ್ನು ಭಾನುವಾರ ಆಯೋಜಿಸಲಾಯಿತು.
ಸೆಪ್ಟೆಂಬರ್ 28ರಂದು ಬರುವ ಭಗತ್ ಸಿಂಗ್ ಅವರ ಜನ್ಮಜಯಂತಿಯ ಅಂಗವಾಗಿ, ಒಂದು ದಿನ ಮುಂಚಿತವಾಗಿ ಸೆಪ್ಟೆಂಬರ್ 27ರಂದು ಭಾನುವಾರ ಆಯೋಜಿಸಿದ್ದ ಓಟದಲ್ಲಿ ಸುಮಾರು 30 ಮಂದಿ ಯುವಕರು ಭಾಗವಹಿಸಿದ್ದರು. ಯಲ್ದೂರಿನಿಂದ ಆರಂಭವಾದ ಓಟ ಕುರುಡುಮಲೆ ಗಣಪತಿ ದೇವಾಲಯದವರಿಗೂ ಸಾಗಿದ್ದು, ಭಾಗವಹಿಸಿದ್ದ ಓಟಗಾರರು 20 ಕಿ.ಮೀ. ದೂರವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದರು ಭಗತ್ ಸಿಂಗ್ ಅವರ ಆದರ್ಶಗಳಿಗೆ ಗೌರವ ಸಲ್ಲಿಸಿದರು,
ರಾಷ್ಟ್ರಧ್ವಜಗಳನ್ನು ಹಿಡಿದು ಭಗತ್ ಸಿಂಗ್ ಅವರನ್ನು ಸ್ಮರಿಸುತ್ತ ವಂದೇಮಾತರಂ ಘೋಷಣೆಗಳನ್ನು ಕೂಗುತ್ತ ಓಟಗಾರರು ಹೆಜ್ಜೆ ಹಾಕಿದರು.

ಕುರುಡುಮಲೆಯ ಶ್ರೀ ಗಣೇಶನ ದೇವಸ್ಥಾನ ತಲುಪಿದ ಬಳಿಕ, ಓಟಗಾರರು ಗಣಪತಿ ದೇಗುಲದಲ್ಲಿ ಭಗತ್ ಸಿಂಗ್ ಅವರ ಹೆಸರಿನಲ್ಲಿ ವಿಶೇಷ ಪೂಜೆಯನ್ನು ಮಾಡಿಸಿ, ಅವರ ತ್ಯಾಗ ಮತ್ತು ದೇಶಭಕ್ತಿಯನ್ನು ಸ್ಮರಿಸಿದರು. ಈ ಮೂಲಕ ಭಗತ್ ಸಿಂಗ್ ಅವರ ಆದರ್ಶಗಳನ್ನು ಗೌರವಿಸುವುದರ ಜೊತೆಗೆ, ಯುವಜನರಲ್ಲಿ ದೇಶಪ್ರೇಮ ಹಾಗೂ ಸಾಮಾಜಿಕ ಜವಾಬ್ದಾರಿಯ ಸಂದೇಶವನ್ನು ಸಾರುವ ಸಲುವಾಗಿ ಒಟ ಆಯೋಗಿಸಿದ್ದು ಸಮಾಜದಿಂದ ನಾವು ಏನು ಪಡೆಯಬಹುದು ಎಂಬುದಕ್ಕಿಂತ, ಸಮಾಜಕ್ಕೆ ನಾವು ಏನು ಕೊಡಬಹುದು ಎಂಬ ಚಿಂತನೆ ಪ್ರತಿಯೊಬ್ಬ ಯುವಕರಲ್ಲಿ ಮೂಡಬೇಕು ಯುವಜನತೆ ಆರೋಗ್ಯಕರ ಜೀವನಶೈಲಿಯೊಂದಿಗೆ ಸಮಾಜ ಹಾಗೂ ದೇಶದ ಒಳಿತಿಗಾಗಿ ತಮ್ಮದೇ ಆದ ಕೊಡುಗೆ ನೀಡಬೇಕು ಎಂಬ ಚಿಂತನೆ ಮೂಡಿಸುವ ಸಲುವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಯುವಕರು ಯುವತಿಯರು ಉತ್ಸಾಹದಿಂದ ಪಾಲ್ಗೋಂಡಿದ್ದರು.
ಕಾರ್ಯಕ್ರಮಕ್ಕೆ ಗ್ರಾಮದ ಹಿರಿಯರಾದ ವೇಮಣ್ಣ ಹಾಗು ಬ್ರಮ್ಹಯ್ಯ ಮತ್ತು ಗ್ರಾಮದ ಹಲವರು ಕಾರ್ಯಕ್ರಮಕ್ಕೆ ಬೆನ್ನಲುಬಾಗಿ ನಿಂತು ಸಹಕಾರ ನೀಡಿದರು ಎಂದು ಯುವಕರ ಬಳಗದ ಗಂಗಾಧರ್ ತಿಳಿಸಿದರು.



