ಶ್ರೀನಿವಾಸಪುರ: ಚುನಾವಣೆ ಪ್ರಕಟನೆಯಾಗುವ ಎಲ್ಲಾ ಸೂಚನೆಗಳು ಕಂಡುಬರುತ್ತಿದೆ ಚುನಾವಣೆ ಘೋಷಣೆಯಾಗುವುದಕ್ಕೂ ಮುಂಚಿತವಾಗಿ ಪಟ್ಟಣ ಸೇರಿದಂತೆ ತಾಲೂಕಿನ ಲಕ್ಷ್ಮೀಸಾಗರ,ಯಲ್ದೂರು,ಮುತ್ತಕಪಲ್ಲಿ,ಸೋಮಯಾಜಲಹಳ್ಳಿ, ಲಕ್ಷ್ಮೀಪುರ,ರಾಯಲ್ಪಾಡು,ಗೌವಪಲ್ಲಿಯ ಬೀದಿಗಳಲ್ಲಿ ಪ್ಯಾರ ಮೀಲಟರಿ ಪಡೆಗಳು(RAF) ರ್ಯಾಪಿಡ್ ಆಕ್ಷನ್ ಫೋರ್ಸ್ ತುಕಡಿಗಳ ಪರೇಡ್ ನಡೆಸಿದ್ದು ಸಾಮನ್ಯ ಮತದಾರ ತನ್ನ ಹಕ್ಕನ್ನು ಮುಕ್ತವಾಗಿ ಚಲಾಯಿಸಲು ಧೈರ್ಯ ತುಂಬಿದಂತಿತ್ತು.
ಏನಿದು ರ್ಯಾಪಿಡ್ ಆಕ್ಷನ್ ಫೋರ್ಸ್ ಎಂಬು ಜನಸಾಮಾನ್ಯರ ಪ್ರಶ್ನೆ, ಅಂದರೆ ಕ್ಷಿಪ್ರ ಕಾರ್ಯಪಡೆ ಗಲಭೆಗಳು ಕೋಮುಘರ್ಷಣೆಗಳು ಸೇರಿದಂತೆ ದೊಡ್ದಮಟ್ಟದ ದೊಂಬಿಯಂತ ತುರ್ತು ಪರಿಸ್ಥಿತಿಗಳನ್ನು ನಿಭಾಯಿಸಲು ವಿಶೇಷ ತರಬೇತಿ ಹೊಂದಿರುವಂತ ಅರೆಸೇನಾ ಘಟಕ ಇದಾಗಿರುತ್ತದೆ, ಇದರ ಕೇಂದ್ರ ಕಚೇರಿ ಹೊಸದೆಹಲಿಯಲ್ಲಿದ್ದು ಶ್ರೀನಿವಾಸಪುರಕ್ಕೆ ಬಂದಿದ್ದ ತುಕಡಿ ಹೈದರಾಬಾದ್ ನಿಂದ ಬಂದಿರುವುದಾಗಿದೆ ಎಂದು ಹೇಳಲಾಗಿದೆ.
2023ರ ವಿಧಾನಸಭಾ ಚುನಾವಣೆಯ ದಿನಾಂಕ ಪ್ರಕಟಣೆಗೆ ದಿನಗಳು ಹತ್ತಿರ ಇರುವುಗಾಲೆ ಶ್ರೀನಿವಾಸಪುರ ಪೋಲಿಸರು ಸಂಪೂರ್ಣವಾಗಿ ಸರ್ವ ರಿತಿಯಲ್ಲಿ ಸಜ್ಜುಗೊಳ್ಳುತ್ತಿದ್ದಾರೆ, ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಮತದಾನ ಕೇಂದ್ರಗಳ ಬಗ್ಗೆ ನೀಘಾ ವಹಿಸುವುದು ಅಂತರಾಜ್ಯ ಚಕ್ ಪೋಸ್ಟ್ ನಿರ್ಮಾಣ ಸಲುವಾಗಿ ರಾಯಲ್ಪಾಡು ವ್ಯಾಪ್ತಿಯಲ್ಲಿ ಕಡಪಾ-ಬೆಂಗಳೂರು ಹೆದ್ದಾರಿ,ಪುಲಗೂರುಕೋಟೆ ಬಳಿ ಚಂಬಕೂರು ರಸ್ತೆಯಲ್ಲಿ, ಗೌವಪಲ್ಲಿ ಪೋಲಿಸ್ ಠಾಣೆ ವ್ಯಾಪ್ತಿಯ ಬಿ.ಕೊತ್ತಕೋಟ ರಸ್ತೆಯಲ್ಲಿ ಹೊಸಹುಡೈ ಬಳಿ, ಶ್ರೀನಿವಾಸಪುರ ಠಾಣೆ ವ್ಯಾಪ್ತಿಯ ಸೋಮಯಾಜಲಹಳ್ಳಿ-ರಾಮಸಮುದ್ರ ರಸ್ತೆಯಲ್ಲಿ ಸ್ವತಃ ಕೋಲಾರ ಜಿಲ್ಲಾ ವರಿಷ್ಠಾಧಿಕಾರಿ ಖುದ್ದು ವಿಕ್ಷಣೆ ನಡೆಸಿದ್ದಾರೆ ಎನ್ನಲಾಗುತ್ತಿದೆ. ಕಟ್ಟುನಿಟ್ಟಿನ ಚುನಾವಣೆ ನಡೆಸಲು ಪೋಲಿಸ್ ಇಲಾಖೆ ಚುರುಕಾದ ತಯಾರಿ ನಡೆಸುತ್ತಿದ್ದಾರೆ.
Breaking News
- ನಾಗಮಂಗಲ ಗಲಭೆ ಸಂಬಂಧ ಕೇರಳದ ಇಬ್ಬರ ಬಂಧನ!
- J&Kಚುನಾವಣೆ ವೇಳೆ ಎನ್ಕೌಂಟರ್ ಮೂವರು ಉಗ್ರರ ಹತ್ಯೆ ಇಬ್ಬರು ಸೈನಿಕರ ವೀರ ಮರಣ!
- BIGSHOK ಏರಿಕೆಯಾದ ಅಡುಗೆ ಎಣ್ಣೆ ರೇಟು!
- ಶ್ರೀನಿವಾಸಪುರದ KSRTC ಗಣೇಶ ವಿಸರ್ಜನೆ
- ಶ್ರೀನಿವಾಸಪುರದ ಯುವಕ ಗೋಕರ್ಣದಲ್ಲಿ ಸಮುದ್ರದಪಾಲು
- ಮದನಪಲ್ಲಿ-ತಿರುಪತಿ ಘಾಟ್ ರಸ್ತೆಯಲ್ಲಿ ಅಪಘಾತ ಕರ್ನಾಟಕದ ನಾಲ್ವರ ಸಾವು!
- ಕಮ್ಯುನಿಸ್ಟ್ ಧ್ವನಿ ಸೀತಾರಾಂ ಯೆಚೂರಿ ಇನ್ನಿಲ್ಲ!
- ಚಿಂತಾಮಣಿ ನಗರಸಭೆ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ
- ಅಮೇರಿಕಾದಲ್ಲಿ ರಾಹುಲ್-ಶಿವಕುಮಾರ್ ಭೇಟಿ ರಾಜಕೀಯ ಸಂಚಲನ
- ಮೃತ ಪತ್ರಕರ್ತನ ಕುಟುಂಬಕ್ಕೆ ಪರಿಹಾರ ಮಂಜೂರು ಮಾಡಿದ ಸಿಎಂ
Monday, September 16