ನ್ಯೂಜ್ ಡೆಸ್ಕ್:ಪ್ರೀತಿಗೆ ಜಾತಿ, ಧರ್ಮ,ಭಾಷೆ,ಪ್ರಾದೇಶಿಕತೆ ಖಂಡಗಳು ಯಾವುದು ಅಡ್ಡಿಯಾಗುವುದಿಲ್ಲ, ಪ್ರೇಮಿಗಳು ಪ್ರೀತಿಯನ್ನು ಗೆಲ್ಲಲು ಎಂತಹ ಕಷ್ಟ ಕೋಟಲೆಗಳನ್ನು ಎದುರಿಸಲು ಸಿದ್ಧವಾಗುತ್ತಿದ್ದ ಕಾಲವೊಂದಿತ್ತು, ಈಗ ಹೈಟೆಕ್ ಯುಗ ತಮ್ಮ ಪ್ರೀತಿಯನ್ನು ಪೋಷಕರಿಗೆ ತಿಳಿಸಿ ಅವರನ್ನು ಒಪ್ಪಿಸಿ ಮದುವೆಯಾಗುವಂತ ಕಾಲ ನಡೆಯುತ್ತಿದೆ, ಇಂತಹ ಪ್ರಯತ್ನದಲ್ಲಿ ಆಂಧ್ರದ ಯುವತಿಯೊಬ್ಬಳು ತನ್ನ ಖಂಡಾಂತರದಾಚಗಿನ ಪ್ರೀತಿಯನ್ನು ಹಿರಿಯರಿಗೆ ತಿಳಿಸಿ ಅವರ ಮನವೊಲಿಸಿ.ಮದುವೆಯಾಗಿದ್ದಾಳೆ. ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಪಲಮನೇರು ಅಮ್ಮಾಯಿ ಅಮೇರಿಕಾದ ಅಬ್ಬಾಯಿ ಹಿಂದು ಸಂಪ್ರದಾತದಂತೆ ಮದುವೆಯಾದ ಅಪರೂಪದ ಘಟನೆ ನಡೆದಿದೆ.
ಪಲಮನೇರು ಪಟ್ಟಣದ ಸಾಯಿನಗರದ ಪಂಚಾಯಿತಿ ಅಧಿಕಾರಿ ಭಾಸ್ಕರ್ ಮತ್ತು ಶಿಕ್ಷಕಿ ಸುಮಲತಾ ರೆಡ್ಡಿ ದಂಪತಿಯ ಪುತ್ರಿ ರೇವೂರಿ ಮೀನಾ ನಾಲ್ಕು ವರ್ಷಗಳಿಂದ ಅಮೆರಿಕ ದೇಶದ ಮಿಚಿಗನ್ ರಾಜ್ಯದ ನಗರದಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಾಳೆ ಅದೇ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಅಮೇರಿಕಾ ದೇಶದ ವಾಟರ್ಪೋರ್ಟ್ ಟೌನ್ನ ಬ್ರಾಡ್ಲಿ ಟೆರ್ರಿ ಎಂಬ ಯುವಕನೊಂದಿಗೆ ಲವ್ ಆಗಿದೆ ನಂತರದಲ್ಲಿ ಪ್ರೀತಿ ಮ್ರೇಮಾಂಕುರವಾದಾಗಿ ಮೀನಾ ತನ್ನ ಹೆತ್ತವರಿಗೆ ವಿಷಯ ಮುಟ್ಟಿಸಿದ್ದಾಳೆ ಇದಾದ ಮೇಲೆ ಯುವಕ ಬ್ರಾಡ್ಲಿ ಟೆರ್ರಿ ತನ್ನ ಹೆತ್ತವರಿಗೆ ವಿಷಯ ತಿಳಿಸಿದ್ದಾನೆ ಇಬ್ಬರ ಕಡೆಯಿಂದಲೂ ಒಪ್ಪಿಗೆ ಬಂದ ನಂತರ ಅಮೆರಿಕದ ಹುಡುಗ ಹಾಗು ಅವರ ಹೆತ್ತವರು ಬಂಧುಗಳನ್ನು ಪಲಮನೇರಿಗೆ ಕರಸಿ ಹಿರಿಯರ ಹಾಗು ತಮ್ಮ ಆಪ್ತರು ಬಂಧುಗಳ ಸಮ್ಮುಖದಲ್ಲಿ ಪಟ್ಟಣದ ವಿಜಯಲಕ್ಷ್ಮಿ ಕಲ್ಯಾಣ ಮಂಟಪದಲ್ಲಿ ಹಿಂದೂ ಸಂಪ್ರದಾಯದಂತೆ ಧಾರೆ ಎರೆದು ಮದುವೆ ಮಾಡಿಕೊಟ್ಟಿದ್ದಾರೆ.ಇವರ ವಿವಾಹಕ್ಕೆ ಯುವತಿಯ ಬಂಧುಗಳೊಂದಿಗೆ ಯುವಕನ ಹೆತ್ತವರು ಏಪ್ರೊಲ್ ಟೆರ್ರಿ,ಡೆಲ್ ಟೆರ್ರಿ ಸೇರಿದಂತೆ ಕೆಲ ಬಂಧುಗಳು ಅಮೇರಿಕಾದಿಂದ ಪಲಮನೇರಿಗೆ ಬಂದು ಅಶಿರ್ವಾದ ಮಾಡಿದ್ದಾರೆ.
Breaking News
- ನಾಗಮಂಗಲ ಗಲಭೆ ಸಂಬಂಧ ಕೇರಳದ ಇಬ್ಬರ ಬಂಧನ!
- J&Kಚುನಾವಣೆ ವೇಳೆ ಎನ್ಕೌಂಟರ್ ಮೂವರು ಉಗ್ರರ ಹತ್ಯೆ ಇಬ್ಬರು ಸೈನಿಕರ ವೀರ ಮರಣ!
- BIGSHOK ಏರಿಕೆಯಾದ ಅಡುಗೆ ಎಣ್ಣೆ ರೇಟು!
- ಶ್ರೀನಿವಾಸಪುರದ KSRTC ಗಣೇಶ ವಿಸರ್ಜನೆ
- ಶ್ರೀನಿವಾಸಪುರದ ಯುವಕ ಗೋಕರ್ಣದಲ್ಲಿ ಸಮುದ್ರದಪಾಲು
- ಮದನಪಲ್ಲಿ-ತಿರುಪತಿ ಘಾಟ್ ರಸ್ತೆಯಲ್ಲಿ ಅಪಘಾತ ಕರ್ನಾಟಕದ ನಾಲ್ವರ ಸಾವು!
- ಕಮ್ಯುನಿಸ್ಟ್ ಧ್ವನಿ ಸೀತಾರಾಂ ಯೆಚೂರಿ ಇನ್ನಿಲ್ಲ!
- ಚಿಂತಾಮಣಿ ನಗರಸಭೆ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ
- ಅಮೇರಿಕಾದಲ್ಲಿ ರಾಹುಲ್-ಶಿವಕುಮಾರ್ ಭೇಟಿ ರಾಜಕೀಯ ಸಂಚಲನ
- ಮೃತ ಪತ್ರಕರ್ತನ ಕುಟುಂಬಕ್ಕೆ ಪರಿಹಾರ ಮಂಜೂರು ಮಾಡಿದ ಸಿಎಂ
Tuesday, September 17