ನ್ಯೂಜ್ ಡೆಸ್ಕ್: ದುಷ್ಕರ್ಮಿಗಳ ಅಟ್ಟಹಾಸ ದಿನದಿಂದ ದಿನಕ್ಕೆ ಎಲ್ಲೆ ಮೀರುತ್ತ ಅರಾಜಕತೆ ಸೃಷ್ಟಿಸುತ್ತ ಸಮಾಜದ ಸ್ವಾಸ್ಥ್ಯ ಕದಡುತ್ತಿದ್ದಾರೆ ಹಾದಿ ತಪ್ಪಿದ ಯುವಕರು ಹಿಂಸಾತ್ಮಕವಾಗಿ ವರ್ತಿಸುತ್ತ ಸಣ್ಣ ಪುಟ್ಟ ಕಾರಣಗಳಿಗೆ ರೌಡಿಸಂ ಮಾಡುವಷ್ಟು ಮುಂದಾಗಿದ್ದು ಅಮಾಯಕರ ಮೇಲೆ ಹಲ್ಲೆ ನಡೆಸುತ್ತ ಸಮಾಜಕ್ಕೆ ಕಂಟಕರಾಗುತ್ತಿದ್ದಾರೆ, ಅಸಹಾಯಕರನ್ನು ಹೊಡೆಯುವುದೇ ಹೀರೋಯಿಸಂ ಅಂತ ಕೆಲವರು ಭಾವಿಸಿಕೊಂಡಿದ್ದಾರೆ.
ಮೊನ್ನೆ ಬೆಂಗಳೂರಿನ ಕುಂದಲಹಳ್ಳಿ ಘಟನೆಯಲ್ಲಿ ಯುವಕರು ನಡೆಸುತ್ತಿದ್ದ ಬೇಕರಿ ಮೇಲಿನ ದಾಳಿ ನಡೆಸಿದ ಪುಂಡರು ಬೇಕರಿಯಲ್ಲಿನ ಯುವಕರನ್ನು ಹೊಡೆದು ಅಂದರ್ ಆಗಿದ್ದಾರೆ ಅಂತಹುದೆ ಘಟನೆಯೊಂದು ಡಿಸೆಂಬರ್ 30 ರಂದು ಗುರುವಾರ ತೆಲಂಗಾಣದ ಹನ್ಮಕೊಂಡದ ನಯೀಮ್ ನಗರದಲ್ಲಿ ನಡೆದಿದೆ.
ತಡಸಂಜೆ ಬಾಗಿಲು ಹಾಕುವ ಸಮಯದಲ್ಲಿ ಇಬ್ಬರು ಯುವಕರು ರಿಯಾನ್ಸ್ ಪುರುಷರ ಬ್ಯೂಟಿ ಪಾರ್ಲರ್ ಗೆ ಬಂದಿದ್ದಾರೆ ಅಲ್ಲಿದ್ದ ಯುವಕನಿಗೆ ಕಟಿಂಗ್ ಮಾಡಲು ಹೇಳಿದ್ದಾರೆ ಅದಕ್ಕೆ ಬ್ಯೂಟಿ ಪಾರ್ಲರ್ ಯುವಕ ರಾತ್ರಿಯಾಗಿದೆ ಈಗ ಸಾಧ್ಯವಿಲ್ಲ ಬೆಳಗ್ಗೆ ಬನ್ನಿ ಎಂದು ವಿನಯದಿಂದ ಹೇಳಿದ್ದಾನೆ, ಅದಕ್ಕೆ ಬಂದಿದ್ದ ಇಬ್ಬರು ಯುವಕರು ಅದೆಲ್ಲ ಆಗುವುದಿಲ್ಲ ಈಗಲೆ ಕಟಿಂಗ್ ಮಾಡುವಂತೆ ಒತ್ತಾಯಿಸಿದ್ದಾರೆ ಯುವಕನೊಬ್ಬ ಕುರ್ಚಿಯಲ್ಲಿ ಕುಳಿತು ಬೆದರಿಸಿದ್ದಾನೆ ಪುಂಡ ಯುವಕರ ರೋಪಿಗೆ ಪಾರ್ಲರ್ ಯುವಕ ರಂಜಿತ್ “ಇಲ್ಲ ಇಲ್ಲ ಈಗಾಗಲೇ ತುಂಬಾ ತಡ ಆಗಿದೆ ಅಂಗಡಿ ಮುಚ್ಚಬೇಕು.ಬೇಕಾದರೆ ನಾಳೆ ಬೇಗ ಬನ್ನಿ ಎಂದಿರುತ್ತಾನೆ ಅದಕ್ಕೆ ಒಪ್ಪದ ಯುವಕರು ಈಗಲೇ ಮಾಡಬೇಕು ಎಂದು ರಂಪಾಟ ಮಾಡಿರುತ್ತಾರೆ ಅಂಗಡಿ ಯುವಕ ರಂಜಿತ್ ಮತ್ತು ಯುವಕರ ನಡುವೆ ಮಾತಿನ ಚಕಮುಖಿ ನಡೆದು ಪುಂಡ ಯುವಕರು ಪಾರ್ಲಾರ್ ಯುವಕ ರಂಜಿತ್ ನನ್ನು ಮುಷ್ಟಿಯಲ್ಲಿ ಗುದ್ದಿ ಗುದ್ದಿ ಮನಸೋ ಇಚ್ಚೆ ಥಳಿಸಿದ್ದಾರೆ ತಪ್ಪಿಸಿಕೊಳ್ಳಲು ಯತ್ನಿಸಿದರೂ ಬೀಡದ ಯುವಕರು ಹಿಡಿದು ದಾಳಿ ನಡೆಸಿದ್ದಾರೆ ಕೊನೆಗೂ ಹರಸಾಹಸ ಪಟ್ಟು ತಪ್ಪಿಸಿಕೊಂಡ ರಂಜಿತ್ ಅಂಗಡಿಯಿಂದ ಹೋರ ಓಡಿ ಹೋಗಿದ್ದಾನೆ ಈ ಸಂದರ್ಭದಲ್ಲಿ ರಂಜಿತ್ ಟೀ ಶರ್ಟ್ ಹರಿದಿದೆ ಆದರೂ ಪೋಕರಿಗಳಿಂದ ತಪ್ಪಿಸಿಕೊಳ್ಳಲು ಅರಬೆತ್ತಲೆಯಲ್ಲಿ ಓಡಿಹೋಗಿ ಅಕ್ಕಪಕ್ಕದವರನ್ನು ಕರೆದು ತರುವಷ್ಟರಲ್ಲಿ ಇಬ್ಬರು ಪುಂಡರು ಅಲ್ಲಿಂದ ಪರಾರಿಯಾಗಿದ್ದಾರೆ. ಈ ದಾಳಿಯ ದೃಶ್ಯಗಳು ಪಾರ್ಲರ್ ಅಂಗಡಿಯ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿದೆ ಪ್ರಕರಣ ಹನುಮಕೊಂಡ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ ಮೀತಿ ಮೀರಿ ವರ್ತಿಸಿದ ಯುವಕರ ಗೂಂಡಾಗಿರಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
Breaking News
- ಮದನಪಲ್ಲಿ-ತಿರುಪತಿ ಘಾಟ್ ರಸ್ತೆಯಲ್ಲಿ ಅಪಘಾತ ಕರ್ನಾಟಕದ ನಾಲ್ವರ ಸಾವು!
- ಕಮ್ಯುನಿಸ್ಟ್ ಧ್ವನಿ ಸೀತಾರಾಂ ಯೆಚೂರಿ ಇನ್ನಿಲ್ಲ!
- ಚಿಂತಾಮಣಿ ನಗರಸಭೆ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ
- ಅಮೇರಿಕಾದಲ್ಲಿ ರಾಹುಲ್-ಶಿವಕುಮಾರ್ ಭೇಟಿ ರಾಜಕೀಯ ಸಂಚಲನ
- ಮೃತ ಪತ್ರಕರ್ತನ ಕುಟುಂಬಕ್ಕೆ ಪರಿಹಾರ ಮಂಜೂರು ಮಾಡಿದ ಸಿಎಂ
- ಚಿಂತಾಮಣಿ ಎಪಿಎಂಸಿ ಅಂಗಡಿಯಲ್ಲಿ ಲಕ್ಷಾಂತರ ಹಣ ಎಗರಿಸಿದ ಖದೀಮರು
- ಹಳೆ ವಸ್ತುಗಳ ಗುಜರಿ ವ್ಯಾಪಾರಿಗೆ ಲಾಟರಿಯಲ್ಲಿ ಕೋಟಿಗಟ್ಟಲೆ ದುಡ್ಡು!
- ಪತ್ರಕರ್ತರ ರೈಲ್ವೆ ಪಾಸ್ ಸೌಲಭ್ಯ ಆರಂಭಿಸಲು ಮನವಿ
- ದೇಶದ ಮೊದಲ MPAX ಪ್ರಕರಣ ಪತ್ತೆ!
- ನಂದಮೂರಿ ಬಾಲಕೃಷ್ಣ ಮಗ ಮೊಕ್ಷಜ್ಞ ಸಿನಿಮಾ ರಂಗಕ್ಕೆ ಎಂಟ್ರಿ
Friday, September 13