ಶ್ರೀನಿವಾಸಪುರ:ಶ್ರೀನಿವಾಸಪುರದಲ್ಲಿ ಅಭಿವೃದ್ದಿ ಅನ್ನುವುದು ಮರಿಚಿಕೆಯಾಗಿದೆ ಗದ್ದಲ ಗಲಾಟೆ ಇವುಗಳ ನಡುವೆ ಇಲ್ಲಿನ ರಾಜಕೀಯ ನಾಲ್ಕು ದಶಕಗಳನ್ನು ಕಳೆದು ಕೊಂಡಿದೆ ಎಂದು ಗುಂಜೂರು ಶ್ರೀನಿವಾಸರೆಡ್ಡಿ ವಿಷಾದ ವ್ಯಕ್ತಪಡಿಸಿದರು ಅವರು ಪಟ್ಟಣದ ಗಫಾರ್ ಖಾನ್ ಮೊಹಲ್ಲಾದಲ್ಲಿ ಕಾಂಗ್ರೆಸ್ ತೊರೆದ ಪಟೇಲ್ ಹೋಟೆಲ್ ಮಾಲಿಕ ಪಟೇಲ್ ಸೈಯದ್ ಷಫೀವುಲ್ಲಾ ಮತ್ತು ಸಂಗಡಿಗರನ್ನು ತಮ್ಮ ಬಣಕ್ಕೆ ಸೇರ್ಪಡೆಮಾಡಿಕೊಂಡು ಮಾತನಾಡಿದ ಅವರು ಕ್ಷೇತ್ರದಲ್ಲಿ ಯುವಕರು ನಿರುದ್ಯೋಗಿಗಳಾಗಿದ್ದಾರೆ ಅವರಿಗೆ ಬದುಕು ಕಲ್ಪಿಸುವ ಕನಿಷ್ಠ ಕಾರ್ಯಕ್ರಮ ರೂಪಿಸುವಲ್ಲಿ ಇಲ್ಲಿನ ರಾಜಕೀಯ ಮುಖಂಡರಿಗೆ ಇಚ್ಛಾಶಕ್ತಿ ಇಲ್ಲ ಈ ಜನರ ಪ್ರಿತಿ ವಿಶ್ವಾಸ ಗಳಿಸುವ ಕುರಿತಾಗಿ ಯೋಚಿಸದೆ ಹುಲಿ ಹುಲಿ ಎಂದು ಬೊಂಬೆ ಹುಲಿಯನ್ನು ತೊರಿಸಿ ಜನರನ್ನು ಯಾಮಾರಿಸಿ ಬೆದರಿಸಿ ರಾಜಕೀಯ ಮಾಡಿಕೊಂಡು ಬಂದಿದ್ದಾರೆ ಎಂದು ಆರೋಪಿಸಿದರು.
ಪುರಸಭೆ ಮಾಜಿ ಸದಸ್ಯ ಮೊಹ್ಮದ್ ಆಲಿ ಮಾತನಾಡಿ ನಾವು ಪ್ರಾಮಾಣಿಕವಾಗಿ ರಮೇಶ್ ಕುಮಾರ್ ಅವರನ್ನು ನಮ್ಮ ರಾಜಕೀಯ ಶಕ್ತಿ ಎಂದು ನಂಬಿ ಬೆಂಬಲಿಸುತ್ತ ಬಂದಿದ್ದೇವು ಅವರ ಚುನಾವಣೆ ಸಂದರ್ಭದಲ್ಲಿ ಕೋಮುಸೌರ್ಹಾದತೆ ಕುರಿತಾಗಿ ಮಾತನಾಡುವ ಅವರು ಲೋಕಸಭೆ ಚುನಾವಣೆಯಲ್ಲಿ ಅವರು ಸಿದ್ದಾಂತಗಳನ್ನು ಗಾಳಿಗೆ ತೂರಿ ನಮ್ಮ ಪ್ರಮಾಣಿಕತೆಯನ್ನು ಲೆಕ್ಕಿಸದೆ ಕೊಮುಶಕ್ತಿಗೆ ಬೆಂಬಲ ವ್ಯಕ್ತಪಡಿಸಿ ನಮಗೆ ಅನ್ಯಾಯಮಾಡಿದ್ದಾರೆ ಇವುಗಳಿಗೆಲ್ಲ ನಾವು ಸಮರ್ಪಕವಾಗಿ ಉತ್ತರ ನೀಡಬೇಕಾಗಿದೆ ಇದಕ್ಕೆ ನಾವು ಪರ್ಯಾಯ ರಾಜಕೀಯ ಶಕ್ತಿಯಾಗಿ ಗುಂಜೂರು ಶ್ರೀನಿವಾಸರೆಡ್ಡಿ ಅವರನ್ನು ಬೆಂಬಲಿಸುವ ಮೂಲಕ ನಮ್ಮ ರಾಜಕೀಯ ಶಕ್ತಿಯನ್ನು ಪ್ರದರ್ಶಿಸೋಣ ಎಂದರು.
ಈ ಸಂದರ್ಭದಲ್ಲಿ ಹಿರಿಯ ಮುಖಂಡ ವೆಲ್ಡಿಂಗ್ ಸಾದೀಕ್ ಅಹ್ಮದ್,ನದೀಮ್, ಪಟೇಲ್ ಬರ್ಕತ್, ಪಟೇಲ್ ಸೈಫ್, ಪಟೇಲ್ ಇಮ್ರಾನ್, ವೆಲ್ಡಿಂಗ್ ಅತೀಖ್, ಡ್ರೈವರ್ ಖಾದರ್ ಬಾಷ, ಮಜ್ಹಾರ್ ಪಾಷ, ಸಲ್ಮಾನ್ ಖಾನ್, ಪಟೇಲ್ ಅಜ್ಮತ್ತುಲ್ಲಾ, ವೆಜಿಟೆಬಲ್ ಅನ್ವರ್, ಟಿ. ಫಯಾಜ್, ತನ್ಸೀರ್, ಷಂಷೀರ್, ಸೇರಿದಂತೆ ಹಲವಾರು ಕಾರ್ಯಕರ್ತರು ಕಾಂಗ್ರೆಸ್ ತೊರೆದು ಗುಂಜೂರು ಆರ್. ಶ್ರೀನಿವಾಸರೆಡ್ಡಿ ಬಣಕ್ಕೆ ಸೇರ್ಪಡೆಯಾದರು. ಈ ಸಂದರ್ಭದಲ್ಲಿ ಗುಂಜೂರು ಶ್ರೀನಿವಾಸರೆಡ್ದಿ ಬಣದ ಮುಖಂಡರಾದ ಪೆಟ್ರೋಲ್ ಬಂಕ್ ಪೆದ್ದಿರೆಡ್ಡಿರಾಜೇಂದ್ರಪ್ರಸಾದ್,ಪಠಾನ್ ಶಫಿ,ಹೆಬ್ಬಟ ರಫೀಕ್,ರಾಜಶೇಖರರೆಡ್ಡಿ ಮುಂತಾದವರು ಹಾಜರಿದ್ದರು.
Breaking News
- ನಾಗಮಂಗಲ ಗಲಭೆ ಸಂಬಂಧ ಕೇರಳದ ಇಬ್ಬರ ಬಂಧನ!
- J&Kಚುನಾವಣೆ ವೇಳೆ ಎನ್ಕೌಂಟರ್ ಮೂವರು ಉಗ್ರರ ಹತ್ಯೆ ಇಬ್ಬರು ಸೈನಿಕರ ವೀರ ಮರಣ!
- BIGSHOK ಏರಿಕೆಯಾದ ಅಡುಗೆ ಎಣ್ಣೆ ರೇಟು!
- ಶ್ರೀನಿವಾಸಪುರದ KSRTC ಗಣೇಶ ವಿಸರ್ಜನೆ
- ಶ್ರೀನಿವಾಸಪುರದ ಯುವಕ ಗೋಕರ್ಣದಲ್ಲಿ ಸಮುದ್ರದಪಾಲು
- ಮದನಪಲ್ಲಿ-ತಿರುಪತಿ ಘಾಟ್ ರಸ್ತೆಯಲ್ಲಿ ಅಪಘಾತ ಕರ್ನಾಟಕದ ನಾಲ್ವರ ಸಾವು!
- ಕಮ್ಯುನಿಸ್ಟ್ ಧ್ವನಿ ಸೀತಾರಾಂ ಯೆಚೂರಿ ಇನ್ನಿಲ್ಲ!
- ಚಿಂತಾಮಣಿ ನಗರಸಭೆ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ
- ಅಮೇರಿಕಾದಲ್ಲಿ ರಾಹುಲ್-ಶಿವಕುಮಾರ್ ಭೇಟಿ ರಾಜಕೀಯ ಸಂಚಲನ
- ಮೃತ ಪತ್ರಕರ್ತನ ಕುಟುಂಬಕ್ಕೆ ಪರಿಹಾರ ಮಂಜೂರು ಮಾಡಿದ ಸಿಎಂ
Monday, September 16