ಚಿಂತಾಮಣಿ:ಲಜ್ಜೆಗೆಟ್ಟ ಟೀಚರಮ್ಮನ ಅಸಹ್ಯಕರ ಫೋಟೋ ಸೇಷನ್ ಗೆ ಶೈಕ್ಷಣಿಕ ವ್ಯವಸ್ಥೆಯ ಗುರು-ಶಿಷ್ಯರ ನಡುವಿನ ಗೌರಹ್ವಾನಿತ ಬಾಂಧವ್ಯಕ್ಕೆ ಕಳಂಕ ತಂದಿದ್ದರೆ,ಬಾಲಕನೊರ್ವನ ಭವಿಷ್ಯತ್ತಿಗೆ ಮಾರಕವಾಗುವ ಪರಿಸ್ಥಿತಿ ನಿರ್ಮಾಣವಾಗಿದೆ.ಇಂತಹ ಘಟನೆಗೆ ಕಾರಣವಾಗಿರುವುದು ಚಿಂತಾಮಣಿ ತಾಲೂಕಿನ ಮುರುಗಮಲೆ ಸರ್ಕಾರಿ ಶಾಲೆಯ ಪ್ರಭಾರೆ ಮುಖ್ಯ ಶಿಕ್ಷಕಿಯ ಲಜ್ಜಗೆಟ್ಟ ವರ್ತನೆ. ಶಾಲಾ ವಿದ್ಯಾರ್ಥಿಗಳನ್ನು ಶೈಕ್ಷಣಿಕ ಪ್ರವಾಸಕ್ಕೆ ಕರೆದೊಯಿಲಾಗಿತ್ತು ಈ ಸಮಯದಲ್ಲಿ ಶಾಲೆಯ ಪ್ರಭಾರೆ ಮುಖ್ಯ ಶಿಕ್ಷಕಿ ಲಜ್ಜೆಗೆಟ್ಟ ಟೀಚರಮ್ಮ ಪುಷ್ಪಲತ ಫೋಟೋ ತೆವಲಿಗೆ ಶಾಲೆಯ ಹತ್ತನೆ ತರಗತಿ ವಿದ್ಯಾರ್ಥಿ ಅಪ್ರಾಪ್ತ ಬಾಲಕನೊಂದಿಗೆ ಹಚ್ಚ ಹಸಿರಿನ ಗಿಡ ಮರಗಳ ನಡುವೆ ಸಿನಿಮಾ ಹಿರೋ-ಹಿರೋಯಿನ್ ಸ್ಟೈಲ್ ನಲ್ಲಿ ಅಸಭ್ಯಕರವಾದ ಭಂಗಿಗಳಲ್ಲಿ ನಿಂತು ಪೋಟೋ ಶೂಟ್ ಅನ್ನು ಇನ್ನೊಬ್ಬ ವಿದ್ಯಾರ್ಥಿ ಕೈಯಲ್ಲಿ ಮಾಡಿಸಿಕೊಂಡು ಅವುಗಳನ್ನು ತನ್ನ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುತ್ತಾರೆ.ಟೀಚರಮ್ಮ ಬಾಲಕನೊಂದಿಗೆ ನಿಂತಿರುವ ಅಸಹ್ಯಕರ ಪೋಟೋಗಳು ವಿವಿಧ ಸಾಮಾಜಿಕ ಜಾಲತಾಗಣಲ್ಲಿ ವೈರಲ್ ಆಗಿದೆ.
ಟೀಚರಮ್ಮನ ವರ್ತನೆಗೆ ಸಾರ್ವಜನಿಕರ ಆಕ್ರೋಶ
ವಿದ್ಯಾರ್ಥಿ ಮತ್ತು ಶಿಕ್ಷಕತನದ ನಡುವಿನ ಗೌರಹ್ವಾನಿತ ಬಾಂಧವ್ಯಕ್ಕೆ ಕಳಂಕ ತಂದಿರುವ ಶಿಕ್ಷಕಿಯ ವಿರುದ್ದ ಕ್ರಮ ಜರುಗಿಸುವಂತೆ ಸಾರ್ವಜನಿಕರು ಮತ್ತು ಶಾಲೆಯ ವಿದ್ಯಾರ್ಥಿಗಳ ಪೋಷಕರು ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನು ಒತ್ತಾಯಿಸಿದ ಹಿನ್ನಲೆಯಲ್ಲಿ ಎಚ್ಚೆತ್ತುಕೊಂಡ ಚಿಂತಾಮಣಿ ಕ್ಷೇತ್ರ ಶಿಕ್ಷಣಾಧಿಕಾರಿ ಉಮಾದೇವಿ ಸರಕಾರಿ ಫ್ರೌಡಶಾಲೆಗೆ ಖುದ್ದು ಭೇಟಿ ನೀಡಿ ಪ್ರವಾಸಕ್ಕೆ ತೆರಳಿದ್ದ ಮುಖ್ಯ ಶಿಕ್ಷಕಿ ಹಾಗು ಇತರೆ ಶಿಕ್ಷಕರು,ಸಿಬ್ಬಂದಿಯ ಮಾಹಿತಿ ಪಡೆದು ವಿಚಾರಣೆ ನಡೆಸಿ ಶಾಲಾಭಿವೃದ್ದಿ ಸಮಿತಿಯವರೊಂದಿಗೆ ಚರ್ಚಿಸಿ ಶಿಕ್ಷಕಿಯ ವರ್ತನೆ ಕುರಿತಾಗಿ ಉಪನಿರ್ದೇಶಕರಿಗೆ ವರದಿ ಸಲ್ಲಿಸಿದ್ದರು ಅದರಂತೆ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಬೈಲಾಂಜನೇಯಪ್ಪ ವಿವಾದತ್ಮಕ ಶಿಕ್ಷಕಿ ಪುಷ್ಪಲತಾರನ್ನು ಕರ್ನಾಟಕ ನಾಗರೀಕ ಸೇವಾ ವರ್ಗೀಕರಣ,ನಿಯಂತ್ರಣ ಮತ್ತು ಅಫೀಲು ನಿಯಮ 1957 ರ ನಿಯಮ 10 ರಂತೆ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಅಮಾನತ್ತು ಮಾಡಿ ಅದೇಶ ಹೊರಡಿಸಿದ್ದಾರೆ.
Breaking News
- ಮದನಪಲ್ಲಿ-ತಿರುಪತಿ ಘಾಟ್ ರಸ್ತೆಯಲ್ಲಿ ಅಪಘಾತ ಕರ್ನಾಟಕದ ನಾಲ್ವರ ಸಾವು!
- ಕಮ್ಯುನಿಸ್ಟ್ ಧ್ವನಿ ಸೀತಾರಾಂ ಯೆಚೂರಿ ಇನ್ನಿಲ್ಲ!
- ಚಿಂತಾಮಣಿ ನಗರಸಭೆ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ
- ಅಮೇರಿಕಾದಲ್ಲಿ ರಾಹುಲ್-ಶಿವಕುಮಾರ್ ಭೇಟಿ ರಾಜಕೀಯ ಸಂಚಲನ
- ಮೃತ ಪತ್ರಕರ್ತನ ಕುಟುಂಬಕ್ಕೆ ಪರಿಹಾರ ಮಂಜೂರು ಮಾಡಿದ ಸಿಎಂ
- ಚಿಂತಾಮಣಿ ಎಪಿಎಂಸಿ ಅಂಗಡಿಯಲ್ಲಿ ಲಕ್ಷಾಂತರ ಹಣ ಎಗರಿಸಿದ ಖದೀಮರು
- ಹಳೆ ವಸ್ತುಗಳ ಗುಜರಿ ವ್ಯಾಪಾರಿಗೆ ಲಾಟರಿಯಲ್ಲಿ ಕೋಟಿಗಟ್ಟಲೆ ದುಡ್ಡು!
- ಪತ್ರಕರ್ತರ ರೈಲ್ವೆ ಪಾಸ್ ಸೌಲಭ್ಯ ಆರಂಭಿಸಲು ಮನವಿ
- ದೇಶದ ಮೊದಲ MPAX ಪ್ರಕರಣ ಪತ್ತೆ!
- ನಂದಮೂರಿ ಬಾಲಕೃಷ್ಣ ಮಗ ಮೊಕ್ಷಜ್ಞ ಸಿನಿಮಾ ರಂಗಕ್ಕೆ ಎಂಟ್ರಿ
Friday, September 13