ಶ್ರೀನಿವಾಸಪುರ:ಶ್ರೀನಿವಾಸಪುರ ತಾಲೂಕು ಯಲ್ದೂರಿನ ಹೊಸಹಳ್ಳಿಯ ಡಾ.ಹೆಚ್.ಎನ್. ಜಗನ್ನಾಥ ರೆಡ್ಡಿ ಅವರನ್ನು ರಾಷ್ಟ್ರೀಯ ಮಟ್ಟದ ಸೂರತ್ಕಲ್ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಆಡಳಿತ ಮಂಡಳಿಯ ಸದಸ್ಯರನ್ನಾಗಿ ಕರ್ನಾಟಕ ಸರ್ಕಾರ ನೇಮಕ ಮಾಡಿದೆ.
ಸೂರತ್ಕಲ್ ನ್ಯಾಷನಲ್ ಇನ್ಸ್ಟಿಟ್ಯೂಟ್ ಯಾವುದಿದು?
ಮಂಗಳೂರು ಬಳಿ ಇರುವ ಸೂರತ್ಕಲ್ ನಲ್ಲಿ ಇರುವ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ(NITK) ರಾಷ್ಟ್ರೀಯ ಮಟ್ಟದಲ್ಲಿ ಪ್ರತಿಷ್ಠಿತ ತಾಂತ್ರಿಕ ವಿದ್ಯಾಸಂಸ್ಥೆಯಾಗಿದ್ದು.ಮೊದಲಿಗೆ ಕರ್ನಾಟಕ ಪ್ರಾದೇಶಿಕ ಎಂಜಿನಿಯರಿಂಗ್ ಕಾಲೇಜು ಎನ್ನಲಾಗುತ್ತಿದ್ದ ಸಂಸ್ಥೆಯನ್ನು 1960 ರಲ್ಲಿ ಸುರತ್ಕಲ್ ನಲ್ಲಿ ಶ್ರೀನಿವಾಸ ಮಲ್ಯ, ಎಂಬ ವಿದ್ಯಾ ದಾರ್ಶನಿಕ ಪ್ರಮುಖ ಜವಾಬ್ದಾರಿ ಹೊತ್ತು ಸ್ಥಾಪಿಸಿದ್ದರು ಅಗ ಕೇವಲ ಸಿವಿಲ್,ಮೆಕ್ಯಾನಿಕಲ್ ಮತ್ತು ಎಲೆಕ್ಟ್ರಿಕಲ್ ಮೂರು ಇಂಜಿನಿಯರಿಂಗ್ ಕಾರ್ಯಕ್ರಮಗಳೊಂದಿಗೆ ಆರಂಭವಾದ ಕಾಲೇಜು ನಂತರದಲ್ಲಿ KREC ಸಹಯೋಗದೊಂದಿಗೆ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸಂಸ್ಥೆಯಾಗಿ ಬೃಹದಾಕಾರವಾಗಿ ಬೆಳೆದುನಿಂತಿದ್ದು ದೇಶದಲ್ಲಿಯೇ ತಾಂತ್ರಿಕ ಶಿಕ್ಷಣ ಕ್ಷೇತ್ರದಲ್ಲಿ ಅಭೂತಪೂರ್ವ ದಾಖಲೆಗಳನ್ನು ನಿರ್ಮಿಸಿರುವ ಸಂಸ್ಥೆ ಈಗ ಬಿ.ಟೆಕ್ ಹತ್ತು ಕಾರ್ಯಕ್ರಮಗಳು ಎಂ.ಬಿ.ಎ,ಎಂ.ಸಿ.ಎ,ಎಂ.ಎಸ್.ಸಿ ಹಾಗು ಎಂ.ಟೆಕ್ ಸೇರಿದಂತೆ ಸ್ನಾತಕೋತ್ತರ ಪದವಿಯ 31 ಕಾರ್ಯಕ್ರಮಗಳು.ಮತ್ತು ಹದಿನಾಲ್ಕು ವಿಭಾಗಗಳಲ್ಲಿ M. Tech(ಸಂಶೋಧನೆ) ಕಾರ್ಯಕ್ರಮಗಳನ್ನು ನಿರ್ವಹಿಸುತ್ತಿದೆ.ಇದಲ್ಲದೆ,ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸೂರತ್ಕಲ್ ಸಂಸ್ಥೆ ವಿದೇಶಗಳಲ್ಲಿನ ಖ್ಯಾತ ಸಂಸ್ಥೆಗಳ ಸಹಯೋಗದಿಂದ ರಿಸರ್ಚ್ ಆಂಡ್ ಡವಲಪ್ ಮೆಂಟ್ ಮತ್ತು ಔಟ್ರೀಚ್ ಚಟುವಟಿಕೆಗಳಲ್ಲಿ ಗಮನಾರ್ಹ ಸಾಧನೆ ಮಾಡುತ್ತಿದೆ.
ಜಗನ್ನಾಥ ರೆಡ್ಡಿ ಯಾರು?
ಡಾ.ಹೆಚ್.ಎನ್.ಜಗನ್ನಾಥ ರೆಡ್ಡಿ ಮೂಲತಃ ಶ್ರೀನಿವಾಸಪುರ ತಾಲೂಕಿನ ಹೊಸಹಳ್ಳಿ ಗ್ರಾಮದ ರೈತಾಪಿ ಕುಟುಂಬದವರಾಗಿದ್ದು ಯಲ್ದೂರು ನ್ಯಾಷನಲ್ ಹೈಸ್ಕೂಲ್ ವಿದ್ಯಾರ್ಥಿಯಾಗಿದ್ದ ಇವರು ಉನ್ನತ ವ್ಯಾಸಾಂಗ ಮಾಡಿ ಬೆಳಗಾವಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಕುಲಸಚಿವರಾಗಿ,ಬೆಂಗಳೂರು ತಾಂತ್ರಿಕ ಮಹಾ ವಿದ್ಯಾಲಯದ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿದಿದ್ದರು,ರಾಜ್ಯ ಒಕ್ಕಲಿಗರ ಸಂಘದ ಪ್ರಮುಖರಾಗಿ, ನ್ಯಾಷನಲ್ ಎಜುಕೇಷನಲ್ ಸೊಸೈಟಿ ಅಧ್ಯಕ್ಷರಾಗಿರುವ ಇವರಿಗೆ ಅರ್ಹತೆಗೆ ತಕ್ಕ ಗೌರವ ಸಿಕ್ಕಿದೆ ಎಂದು ತಾಲೂಕಿನ ಜನತೆ ಸಂತಸ ವ್ಯಕ್ತಪಡಿಸಿರುತ್ತಾರೆ.
Breaking News
- ನಾಗಮಂಗಲ ಗಲಭೆ ಸಂಬಂಧ ಕೇರಳದ ಇಬ್ಬರ ಬಂಧನ!
- J&Kಚುನಾವಣೆ ವೇಳೆ ಎನ್ಕೌಂಟರ್ ಮೂವರು ಉಗ್ರರ ಹತ್ಯೆ ಇಬ್ಬರು ಸೈನಿಕರ ವೀರ ಮರಣ!
- BIGSHOK ಏರಿಕೆಯಾದ ಅಡುಗೆ ಎಣ್ಣೆ ರೇಟು!
- ಶ್ರೀನಿವಾಸಪುರದ KSRTC ಗಣೇಶ ವಿಸರ್ಜನೆ
- ಶ್ರೀನಿವಾಸಪುರದ ಯುವಕ ಗೋಕರ್ಣದಲ್ಲಿ ಸಮುದ್ರದಪಾಲು
- ಮದನಪಲ್ಲಿ-ತಿರುಪತಿ ಘಾಟ್ ರಸ್ತೆಯಲ್ಲಿ ಅಪಘಾತ ಕರ್ನಾಟಕದ ನಾಲ್ವರ ಸಾವು!
- ಕಮ್ಯುನಿಸ್ಟ್ ಧ್ವನಿ ಸೀತಾರಾಂ ಯೆಚೂರಿ ಇನ್ನಿಲ್ಲ!
- ಚಿಂತಾಮಣಿ ನಗರಸಭೆ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ
- ಅಮೇರಿಕಾದಲ್ಲಿ ರಾಹುಲ್-ಶಿವಕುಮಾರ್ ಭೇಟಿ ರಾಜಕೀಯ ಸಂಚಲನ
- ಮೃತ ಪತ್ರಕರ್ತನ ಕುಟುಂಬಕ್ಕೆ ಪರಿಹಾರ ಮಂಜೂರು ಮಾಡಿದ ಸಿಎಂ
Monday, September 16